Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಈ ರುದ್ರ ರಮಣೀಯ ದೃಶ್ಯಕ್ಕೆ ಒ೦ದು ಕಲ್ಪನೆ ಬರಳಿ.
ಬರದೋರು : ಸಂಪಾದಕ° on 11/04/2015 21 ಒಪ್ಪಂಗೊ
ಈ ವಾರ ಈ ರುದ್ರ ರಮಣೀಯ ದೃಶ್ಯಕ್ಕೆ ಒ೦ದು ಕಲ್ಪನೆ ಬರಳಿ.
Comments are closed.
ಪದ್ಯಲ್ಲಿ ಅಂಬರನ ದಿಗಂಬರ ಮಾಡಿ ಜಲಚಕ್ರದ ಗತಿ ತೋರ್ಸಿ, ಕೊಟ್ಟ ಸಂದೇಶ ಒಳ್ಳೆದಾಯಿದು ಬಾಲಣ್ಣ .
ಕಡಲಿಂದೆದ್ದೆದ್ದೋಡಿದ್ದೆಲ್ಲಿಗೆ ?
ದೂರದ ಪರ್ವತದಾ ಕೊಡಿಗೆ/
ಒಡಲಿನ ಭಾರವ ತಡವಲೆ ಎಡಿಯದೊ ?/
ಸೊರಿಯದರೀಗಳೆ ನೆಲದೆಡೆಗೆ//೧//
ತುಂಬಲಿ ಕೆರೆ ಕೊಳ ಹರಿಯಲಿ ಜಳ ಜಳ /
ಮೇಗಂದಿಳಿ ಇಳಿ ಹಾ! ಚೆಂದ ! /
ಅಂಬರಕೇರಿದರಾರಾದರು ಸರಿ /
ಬೇಗನೆ ಇಳಿಗದ ತಿಳಿ ಕಂದ ! //೨//
ಕಲಾವಿದನ ಸೃಜನಶೀಲತೆ ಕವಿತೆಲ್ಲಿಯೂ ತುಂಬಿದ್ದು. ಅರ್ಥ ಗರ್ಭಿತ ಒಟ್ಟಿಂಗೆ ಮಧುರ ಮಾಧುರ್ಯ.
ಅನುಪಮಾ ಪ್ರಸಾದ್
ಮಾವಾ ,
ಇದನ್ನೇ ಒಂದು ಪೂರ್ಣ ಪ್ರಮಾಣದ ಕವಿತೆಯ ಹೊಳೆಯಾಗಿ ಹರುಸುತ್ತಿರೋ ? ಅಷ್ಟು ಲಾಯ್ಕಿದ್ದು .
ಅಪ್ಪೋ ! ಅಂಬಗ ವಾಪಾಸು ಪೆನ್ನು ಕಾಕತ ಹಿಡಿಯೆಕಾವುತ್ತನ್ನೇ !
ಗೌರಿಯೂರಿನ ಗುಡ್ಡೆಲೆಲ್ಲಾ
ಶೌರಿ ಕರವಗ ಹಾಲು ಚೆಲ್ಲೀ
ಧಾರೆಯಾಗಿಯೆ ಹರುದ ಹಾಲದು ಕೆರೆಯ ತುಂಬಿತ್ತೋ ?
ಏರಿ ಗಾಳಿಲಿ ತೇಲಿ ಹೋಪಗ
ಸೋರಿ ಬೀಳುವ ಬೆಳ್ಳಿ ಮೋಡವ-
ದೂರಿನಾಚಿಕೆ ಭಾನುಮಿತ್ರನ ಸಭೆಲಿ ಹೇಳಿತ್ತೋ?
ಗೌರಿಯೂರು =ಹಿಮದ ಪ್ರದೇಶ
ಒಳ್ಳೆ ರೂಪಕ . ಭಾಮಿನಿ ರೈಸಿತ್ತು ಭಾಗ್ಯಕ್ಕ .
ಭಾಮಿನಿ ರೈಸಿದರೆ ಅದರ ಕ್ರೆಡಿಟ್ , ತಪ್ಪು ಬರವಗ ತಿದ್ದಿ ಸರಿ ಮಾಡಿ ತೋರ್ಸಿದೋರಿಂಗೇ
ಇರಲಿ .
ಭಾಗ್ಯಕ್ಕ . ಭಾನುಮಿತ್ರ ಆರು ?
ಮೇಲೆ ಹೋದ ಮೋಡಕ್ಕೆ ಭಾನು/ ಸೂರ್ಯ, ಮಿತ್ರ ಹೇಳುವ ಅರ್ಥ. (ಮಿತ್ರ =,ಭಾನು ) . ಸೂರ್ಯ ಆಕಾಶಲ್ಲಿ ಇಪ್ಪೋರ ಸಭೆ ದಿನುಗೇಳಿ ಅವರವರ ಊರ ವರದಿ ಹೇಳಿ ಹೇಳಿದರೆ ಮೋಡ .. “‘ಆನು ಇಂದು ಭೂಲೋಕಂದ ಬಂದದು . ಭೂಲೋಕಲ್ಲಿ ಆ ಕಳ್ಳ ಕೃಷ್ಣ ಹಾಲು ಕರದು ಗುಡ್ಡೆ ಗುಡ್ಡೆ ಪೂರ ಚೆಲ್ಲಿ ಹಾಕಿದ್ದ” ಹೇಳಿ ಮೋಡ ವರದಿ ಮಾಡುಗು ಹೇಳುದು ಎನ್ನ ಕಲ್ಪನೆ .
ಮೇಲಾಣ ೩ ಗೆರೆ ಬರವಲೆ ಭಗವದ್ ಗೀತೆಯ ಈ ಧ್ಯಾನ ಶ್ಲೋಕವೇ ಪ್ರೇರಣೆ ”ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ ।” (ಭಗವದ್ಗೀತೆ ರಾಷ್ಟ್ರ ಮಟ್ಟಲ್ಲಿ ಚರ್ಚೆ ಆವುತ್ತ ಇಪ್ಪದರ ಗಮನಲ್ಲಿ ಮಡುಗಿ ಬರದ್ದು )
ವಾವ್ …. ಈ ಕಲ್ಪನೆ ಬಾರೀ ಚಂದ ಇದ್ದು…..
ಧನ್ಯವಾದ ಶ್ಯಾಮಣ್ಣ .
ಬಣ್ಣ ಬೆಳಿಯ ಬಳುದ ಶುನಕ
ಸಣ್ಣ ತೊರೆಯ ದಾಂಟುವಾಗ ಕರಿಯೆ ನೆಗವದೂI
ಸುಣ್ಣ ಬೆಳಿಯ ಮಂಜು ಕರಗಿ
ಕಣ್ಣೆದುರಿಲಿ ಗುಡ್ಡೆಯದರ ಬಣ್ಣವು ಬಯಲೋ? II
ಕಪ್ಪು ನಾಯಿಯ ಬಣ್ಣ ಬಳುದು ಬೆಳಿ ಮಾಡ್ಲೆಡಿಗೋ ?ಬೆಳಿ ಮಾಡಿದರೂ ನೀರಿಲಿ ಇಳುದಪ್ಪಗ ನಿಜ ಬಣ್ಣ ಬಯಲಾವುತ್ತು . ಹಾಂಗೆ ಕಪ್ಪು ಗುಡ್ಡೆ ಎಷ್ಟು ಹೊತ್ತು ಬೆಳಿ ಒಳಿಗು ? ಮಂಜು ಕರಗುವನ್ನಾರ … . ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗ ಹೇಳುವ ಅರ್ಥಲ್ಲಿ ಬರದ್ದು .
ಮೂರು ಮೂರು ಮಾತ್ರೆಗಳನೆ
ಸೇರುಸಿದ್ದ ನಾಲ್ಕು ಸಾಲು ಯಾವ ಬಂಧವೋ ?
ಭಾಗ್ಯಕ್ಕ – ಇದು ಹೊಸ ನಮೂನೆ ಕಾಣುತ್ತು. ಛಂದಸ್ಸಿನ ಹೆಸರಿದ್ದೋ ?
ಅರ್ಥಪೂರ್ಣ ಪೂರಣ .
ಹೋ! ಇದು ೩ ಮಾತ್ರ್ಗಳಲ್ಲಿ ಇಪ್ಪದು ಆನು ಗಮನಿಸಿದ್ದಿಲ್ಲೆ. ಬರದ್ದು ಕಂದದ ಛಂದಸ್ಸಿಲಿ .
ಮುಗಿಲ ಕೊಳಗವ ತಂದು ಪರ್ವತ
ದಗಲ ಚೆಲ್ಲಿದ ಸರಭರ
ಬಗೆದು ಹೊಟ್ಟೆಯ, ಭೀಮ ಕರುಳಿನ
ತೆಗೆದ ಹಾಂಗೆ ಭಯಂಕರ
ಗೋಪಾಲಣ್ಣ,
ಒಳ್ಳೆ ಉಪಮೆ , ಚೌಪದಿ ಚಿತ್ರಕ್ಕೆ ಭಾರೀ ಹೊಂದಿಕೆ ಆವುತ್ತು .
ಮಜಲು ಮಟ್ಟಸ ಕಾಂಬಲಿಲ್ಲೆದ, ಏರುತಗ್ಗಿನ ಉತ್ತರಾ
ವಿಜಯದುಂದುಭಿ ಬಾರ್ಸುಲೇಳಿಯೆ ಬಾನ ಮುಟ್ಟುಗು ಪರ್ವತಾ
ರಜತಬೆಟ್ಟವ ನೀರು ಮಾಡುಲೆ ಮೋಡರಾಜನ ಆಗ್ರಹಾ
ಅಜನ ಸೃಷ್ಟಿಯು ರೌದ್ರವಾದರು ಕಣ್ಣುತುಂಬುಗು ಚಂದಕೇ ||
ತರಳ ಛಂದವು ಇಂದಿರತ್ತೆಗೆ ಭಾರಿ ಹತ್ತರೆ ಆಯಿದೋ ?
ರೈಸಿದ್ದು .
ಆಪತ್ತಿನ ಹೊತ್ತು
ಮುಂಗಾರಿನಬ್ಬರ ಕ್ಕೇ
ಕಂಗಾಲಾಗಿ ಜೆನ ತತ್ತರಿಸಿದವು ಹೆದರೀ
ಬಂಗಾರಿನಾಂಗೆ ಬೆಳಶಿದ
ಸಿಂಗಾರದ ನಾಡು ಜೆರುದು ಬಿದ್ದತ್ತಮರೀ
ಮು೦ಗಾರಿನ ಅಬ್ಬರಕ್ಕೋ ಅಲ್ಲ ಚಳಿಗೋ ಅಂತೂ ಜೆನ ತತ್ತರಿಸಿದವು ಮಾವಾ . ಕಂದ ಲಾಯ್ಕ ಆಯಿದು .