Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ನೇಪಾಳ ಭೂಕ೦ಪದ ದಾರುಣಚಿತ್ರ ನಮ್ಮ ಕಣ್ಣ ಮು೦ದೆ ಇದ್ದು.ನೆರೆಕರೆಯ ಸಮಸ್ಯೆ ನಮ್ಮ ಸಮಸ್ಯೆಯೇ ಅಲ್ಲದೋ?
ಈ ಸಮಸ್ಯೆಗೆ ಬೇಗ ಪರಿಹಾರ ಸಿಕ್ಕಲಿ,ಜೆನ ನೆಮ್ಮದಿಲಿ ಬದುಕು ಕಟ್ಟಿಗೊಳ್ಳಲಿ ಹೇಳಿ ಪ್ರಾರ್ಥಿಸುವ°.
ಸಮಸ್ಯೆ :ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ?
ಭಾಮಿನಿ ಷಟ್ಪದಿಲಿ ಬೈಲಿನ ಬ೦ಧುಗೊ ಖ೦ಡಿತಾ ಪರಿಹಾರ ಹುಡ್ಕುಗು,ಅಲ್ಲದೊ?
ಮೂಲ ತತ್ತ್ವವ ಮರದ ನಾಟಕ
ಕಾಲಚಕ್ರವದುರುಳಿ ಬಪ್ಪಗ
‘ಕಾಲಡಿ’ಯ ಕಸವಿಂಗೆ ಮೌಲ್ಯವ ತಂದು ಕೊಟ್ಟತ್ತೊ ?I
ಕಾಲ ಬೀಸಿದ ಜಾಲದಾಟಕೆ
ಮೂಲೆಗುಂಪಾದಬ್ಬೆ ಪಾಠವೆ
ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ ?
ಅಬ್ಬೆ ಪಾಠ =ಭಾವಾರ್ಥ ( ಭಾಷೆಯೊಟ್ಟಿ೦ಗೆ ಬರೆಕ್ಕಾದ ಭಾವ )
ಇಂದಿರತ್ತೆ ಮತ್ತೆ ನರಸಿಂಹಣ್ಣನ ಪೂರಣಂಗ ರೈಸಿದ್ದು…
ಎನ್ನ ಪ್ರಯತ್ನ
ಸಾಲು ಮಾಲೆಲಿ ಜೇಡ ಕಟ್ಟಿದ
ಮೂಲೆ ಮಾಡಿನ ಬಲೆಯ ಉಡುಗುಲೆ
ಕೋಲಕೊಡಿಗೊಂದು ಹಿಡಿ ಸೂಡಿಯ ಬಿಗಿದು ತಂದದಿದಾ
ಮೇಲೆ ಹತ್ತಿದೆ ಬಾದಿ ಭಾರಕೆ
ಕೀಲು ಪೀಂಕಿರೆ ತಪ್ಪಿ ಕುರ್ಶಿಯ
ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೊ?
ದೀನ ರಕ್ಷಕ
ಬೇಲಿ ಯೆ ಹೊಲವ ಮೇವ ಹಾಂಗೆಯೆ
ಕಾಲವೇ ಬದಲಪ್ಪ ಸಾಧ್ಯತೆ
ಮೇಲೆ ಮೇಲೆ ನೆಡುಗಿತ್ತು ಬುವಿಯು ಬೇನೆ ತಡೆಯದ್ದೆ
ಆಲಿ ಮುಚ್ಚಿ ಯವಲೋಕಿಸುವವ
ಹಾಲು ಕೊಟ್ಟು ವಿಷವನೆ ಕುಡಿವವ
ಕಾಲಿನಡಿ ನಡುಗಿರೆ ಪಶುಪತಿನಾಥ ಕೈ ಬಿಡುಗೊ?
ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡ,… ಭಾಮಿನಿ ಸಿಕ್ಕಿರೆ ಇಂದಿರತ್ತೆ ಪದ್ಯ ಬರೆಯದ್ದೆ ಕೂರುಗೋ..?
ಪಷ್ಟಾಯಿದು ಅತ್ತೆ.
ಕಾಲಪುರುಷನ ರೌದ್ರದಾಟಕೆ
ಜೋಲುಮೋರೆಯ ಹಾಕಿ ನಿಂದವು
ಕಾಲುಹಿಡುದೇ ಬೇಡಿಗೊಳ್ಳುಗು ಲಯದ ಮೂರುತಿಯ |
ಸಾಲುಸಾಲಿಲಿ ಸೇರಿ ಜನ ನೇ
ಪಾಲ ಜಾಲಿಲಿ ಬಂದು ಕೂಪಗ
ಕಾಲಿನಡಿ ನಡುಗಿದರೆ ಪಶುಪತಿನಾಥ ಕೈಬಿಡುಗೋ?