Latest posts by ಶ್ಯಾಮಣ್ಣ (see all)
- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
ಒಂದು ರಸಬಾಳೆ ಹಣ್ಣಿನ ಗೊನೆ ಇದ್ದು. ಭಾರೀ ರುಚಿಯಾದ ಬಾಳೆ ಹಣ್ಣುಗೋ… ನಾಲ್ಕೈದು ಹಣ್ಣು ತಿಂದರೆ ಹೊಟ್ಟೆ ಭರ್ತಿ ಅಕ್ಕು, ಹಾಂಗಿಪ್ಪ ಹಣ್ಣುಗೊ. ಗೊನೆಲಿ ಲೆಕ್ಕ ಮಾಡಿ ಮಡುಗಿದ ಹಾಂಗೆ ನೂರು ಹಣ್ಣು ಇದ್ದು. ಈಗ ನಿಂಗೊಗೆ ಒಂದು ಪ್ರಶ್ಣೆ… ಎಂತ ಹೇಳಿರೆ, ಈ ಬಾಳೆಗೊನೆಲಿ ಒಂದೇ ಒಂದು ಹಣ್ಣು ಇಲ್ಲದ್ದ ಹಾಂಗೆ, ಪೂರ್ತಿಯಾಗಿ, ಐದು ನಿಮಿಷದ ಒಳ, ತಿಂದು ಮುಗುಶೆಕ್ಕು. ಚೋಲಿ ಬಿಡ್ಳಕ್ಕು. ನಿಂಗೊಗೆ ಆರಿಂಗಾರೂ ಎಡಿಗೋ?
ತಿಂಬಲೆ ಎಡಿಗಾದವು ಉತ್ತರವ ಒಂದೇ ಸಲಕ್ಕೆ ಹೇಳಿಕ್ಕೆಡಿ…ಒಂದು ವಾರ ಕಳುದು ಹೇಳಿ. ರಜಾ ಸಸ್ಪೆನ್ಸು ಇರಳಿ, ಆತಾ.
ಒಂದು ಬಾಳೆಹಣ್ಣಿನ ಮುಗುಶುಲೆ, ಒಂದು ನಿಮಿಷ ಸಾಕು. ಐದು ನಿಮಿಷ ಜಾಸ್ತಿ ಆತು
ಆದರೆ ನಿಂಗೊಗೆ ಎರಡು ವರ್ಷಂದಲೂ ಜಾಸ್ತಿ ಬೇಕಾತನ್ನೆ? 🙂
ಇನ್ನೀಗ ಆ ಗೊನೆ ಬಾಳೆ ಹಣ್ಣಿನ ಎಂತ ಮಾಡ್ಳು ಎಡಿಯ ಭಾವಾ… ಅದರ, ನಮ್ಮ ಸತ್ಯಣ್ಣ ಅದ್ಯಾವದೋ ಬನ್ಸು ತಿಂಬ ಒಂದು ಹೋಟ್ಳು ಇದ್ದಲ್ಲದಾ… ಅವಕ್ಕೆ ಕೊಡೆಕ್ಕಷ್ಟೇ ಕಾಣ್ತು… 🙂
ಎಲ!! ದಿನ ಹದಿನೈದು ಆತು. ಬಾಳೆಣ್ಣ ಗೊನೆ ಶ್ಯಾಮಣ್ಣ ಎಂತ ಮಾಡಿದವು ಹೇಳ್ತದು ಇನ್ನೂ ಗೊಂತಾಯ್ದಿಲ್ಲೆನ್ನೆ !
ಭಾವಾ… ಉತ್ತರ ಸುರೇಖ ಚಿಕ್ಕಮ್ಮ ಕೊಟ್ಟವನ್ನೇ… ಸದ್ಯಕ್ಕೆ ಅದೇ ಹೇಳಿ ಮಡಿಕ್ಕೊಂಬ.
ನಿಂಗ ಐದು ಜೆನ ಸೇರಿ ತಿಂದದು ಹೇಂಗೆ ಹೇಳಿ ಹೇಳಿದ್ದೇ ಇಲ್ಲೆ ಅಲ್ಲದಾ?
ನಮ್ಮ ಬಯಲಿಲ್ಲಿ ಸುಧರಿಕಗೆ ಕೊರತ್ತೆ ಇಲ್ಲೆನ್ನೆ? ಹತ್ತು ಜೆನರ ದೆನಿಗೇಳಿ ನೂರುಜೆನಕ್ಕೆ ಹಂಚಲೆ ಹೇಳುವದು. ಐದುನಿಮಿಷಲ್ಲಿ ಈ ಕೆಲಸ ಆವುತ್ತು. ಆಗದಾ?
ಒ0ದು ಗೊನೆ ಮಡಗಿ ವಾರಲ್ಲಿ ಅರ್ಧಶತಕ ಕಮೆ0ಟ್ ಲಿ ಬಾರಿಸಿದವಕ್ಕೆ , ಬೇಗ ನೂರು ಹಣ್ಣು ಕಬಳಿಸಿ ದಾಖಲೆ ಬರೆಯವ ಹಾ0ಗೆ ಆಗಲಿ.
ಛೆಲಾ…! ಎನಗೆ ನಿನ್ನೆ ಬೈಲಿಂಗೆ ಇಳಿವಲೆ ಪುರ್ಸೊತ್ತಾಯಿದಿಲ್ಲೆ. ಇಂದು ಬಂದರೆ, ಎಲ್ಲ ಹಣ್ಣು ಕಾಲಿ ಆದ ಹಾಂಗೆ ಕಾಣುತ್ತು.
ಎನಗೆ ಗೊಂತಾಯಿದು ಶಾಮಣ್ಣ, ಒಂದೇ ಒಂದು ಹಣ್ಣು ಒಳಿಯದ್ದ ಹಾಂಗೆ ಹೇಂಗೆ ತಿನ್ನೆಕ್ಕಪ್ಪದು ಹೇದು.
ಸುರೇಖ ಚಿಕ್ಕಮ್ಮ ಉತ್ತರ ನೋಡಿದೆ !
ಛೆ ಎನಗೆ ಇದು ತಲೆಗೆ ಹೊಇದಿಲ್ಲೆ !ಇರಲಿ ಈಗ ಶಾಮಣ್ಣನ ಉತ್ತರ ಎಂತ ಹೇಳಿ ಗೊಂತಾಯಿದಿಲ್ಲೆ !ಇದೆ ಉತ್ತರವ ಬೇರೆಯ ಹೇಳಿ !
ಮತ್ತೆ ಎಲ್ಲ ಹಣ್ಣು ತಿಂದು ಕಾಲಿ ಮಾಡಿ ಗೊನೆ ಮಾತ್ರ ಮಡುಗಡಿ.ಸತ್ಯಣ್ಣ ಹಲ್ವ ಮಾಡಿದ್ದರ ಎನಗೂ ರಜ್ಜ ಮಡುಗಿಕ್ಕಿ.
ಆನು ಆಳ್ವಾಸ್ ವಿಶ್ವ ನುಡಿಸಿರಿಗೆ ಹೋಗಿಕ್ಕಿ ಬತ್ತೆ ,ಪ್ರೀತಿಲಿ ಆತ್ಮೀಯವಾಗಿ ದೆನಿಗೇಳಿದ್ದವು
ಅಲ್ಲಿ ಲಾಯಕ ಊಟ ಉಂಡಿದಿಲ್ಲ್ಲೆಯ ಹೇಳಿ ಇಲ್ಲಿ ಹಲ್ವ ,ಮತ್ತೆ ಹಣ್ಣು ಕಾಲಿ ಮಾಡಿಕ್ಕಡಿ ಇನ್ನು ಆತಾ
ಕಾಂಬ ಮತ್ತೆ
ಬೆದ್ರಲ್ಲಿ ನಮ್ಮ ಬೈಲ ಜಾಣ ಹೆಗಲಿಂಗೆ ಶಾಲು ಹಾಕ್ಯೊಂಡು ಸುಧಾರಿಕೆ ಮಾಡ್ಯೊಂಡಿದ್ದನಡ.ಪವನಜ ಮಾವ ಉದಿಯಪ್ಪಗಳೇ ಸ್ಟಾಲು ಶುರು ಮಾಡ್ತ ಬೆಶಿಲಿದ್ದವಡ.
ಲಕ್ಷ್ಮೀ… ಎಷ್ಟು ಪ್ರಾಮಾಣಿಕವಾಗಿ ಉತ್ತರಿಸಿದಿರಿ ! …. ಆನುದೆ ಪ್ರಾಮಾಣಿಕಳಾಗಿ ಹೇಳಿಬಿಡ್ತೆ. ಆನು ಹೇಳಿದ್ದು ಎನ್ನ ಯಜಮಾನರಿಂಗೆ ಹೊಳೆದ ಉತ್ತರ. ಪ್ರಶ್ನೆ ಓದುತ್ತಿದ್ದಂಗೆ ಉತ್ತರ ಹೇಳಿಬಿಟ್ಟವು. ಎನಗೆ ಪ್ರಯತ್ನ ಪಡುವ ಚಾನ್ಸ್ ಮಿಸ್ ಆತು !
ನಿಂಗಳ ಉತ್ತರ ಹೇಂಗಿದ್ದರೂ ಇಲ್ಲಿ ಹೇಳಿಕ್ಕಿ… ಕೇಳ್ಲೆ ಗಮ್ಮತ್ತು ಆವುತ್ತದಾ..
ಇದಾ.. ಸದ್ಯಕ್ಕೆ ಕನ್ನಡಲ್ಲಿ ಬರವಲೆ http://www.kannadaslate.com/ ಸೈಟಿಂಗೆ ಹೋಯೆಕ್ಕಡ… ನಮ್ಮ ಒಪ್ಪಣ್ಣ ಹೇಳಿದ್ದ.
ಬೇರೆ ಪರಿಹಾರ ಎ೦ತದು ಭಾವ? ಒಳುದ ೯೯ ಬಾಳೆಹಣ್ಣು ಹಲ್ವಕ್ಕೋ ಅಲ್ಲಾ ರಸಾಯನಕ್ಕೋ ಹೇಳಿ ನೋಡೊದು.. ಅ೦ತೂ ಶ್ಯಾಮಣ್ಣ ಒ೦ದರಿ ಅಡಿಮೇಲು ಮಾಡಿದವು..
ಹಲ್ವಕ್ಕೋ ರಸಾಯನಕ್ಕೋ… ಬೇರೆಯವು ಎಂತ ಆಲೋಚನೆ ಮಾಡಿದ್ದವೋ…? (ಶ್ಯಾಮಣ್ಣ ಒ೦ದರಿ ಅಡಿಮೇಲು) ಎಂತರ? ಹಲ್ವವನ್ನೋ ಭಾವಾ? 🙂
ಲಕೋಟೆ ಓಪನು ಮಾಡಿದ್ದೆ. “ಒಂದೇ ಒಂದು ಹಣ್ಣು” ಉಳಸಲಾಗೆ ಅಲ್ಲದಾ ? ಆನು ಆ ಒಂದು ಹಣ್ಣನ್ನ, ಪೂರ್ತಿಯಾಗಿ, ಎರಡು ನಿಮಿಷದ ಒಳ ತಿಂದು, ಸಿಪ್ಪೆ ಇಡ್ಕಿದ್ದೆ. ಉಳದ 99 ಹಣ್ಣನ್ನ ಬೈಲಿನ ಎಲ್ಲರಿಂಗು ಹಂಚಿ…..
enna thaleliyude banda parihaara iduve, bere entharu iddo?
ಆಹಾ… ನಿಂಗಳ ಉತ್ತರ ಬಂತು… ಬೇರೆ ಆರಿಂದು ಎಂತ ಉತ್ತರ ಇದ್ದು ನೋಡುವೋ.. ಅಲ್ಲದಾ?
ತಿಂಬಲೆ ಅಲ್ಲದ್ರೂ ಚೋದ್ಯಕ್ಕೆ ಉತ್ತರ ಹೇಳ್ಲಕ್ಕು ಭಾವ…
ತಿಂಬ ಸ್ಪರ್ಧೆಗೆ ಆನು ಇಲ್ಲೆಪ್ಪ
ಚೋದ್ಯ ಹೇಳಿರೆ ಚೋದ್ಯವೇ. ತಲೆ ಖರ್ಚು ಮಾಡೆಕೇ. ಎನ್ನ ಮಂಡಗುದೆ ಹೋತು ಭಾವಯ್ಯ.
ಎನಗುದೆ ಮುಗುಶಲೆ ಎಡಿಗು. ಉತ್ತರ ಒಂದು ವಾರ ಬಿಟ್ಟು ಹೇಳ್ತೆ.
ನಾಳೆ ಬುಧವಾರ… ಹೇಗೆ ತಿಂಬದು ಹೇಳಿ ನಾಳೆ ಹೇಳಿ… ಆತಾ…
ಎಡಿತ್ತು ಎಡಿತ್ತು. ಓಯ್….
ನಿನ್ನೆ ಇರುಳು ಎಂಗೊ ಐದು ಜೆನ ಸೆರಿಯಂಡು ಈ ಕೆಲಸ ಮಾಡಿ ಯಶಸ್ವಿ ಆಯ್ದೆಯೊ. ಎಡಿಗಾರೆ ಹೇಳಿ ನೋಡ್ವೋ° ಹೇಂಗೆ ಆಯ್ಕು ಹೇದು
ಐದು ಜೆನ ಸೆರಿಯಂಡು ಒಂದು ಗೊನೆ ಮುಗಿಶಿದ್ದೋ… ಅಲ್ಲ ಐದು ಗೊನೆಯನ್ನೋ… ಸತ್ಯಣ್ಣಂಗೆ ಮಂಡೆ ಬೆಶಿ ಅಕ್ಕು… ಬನ್ಸ್ ಆದರೂ ಮಾಡ್ಳಾವುತಿತ್ತು ಹೇಳಿ…
harE raama ondu upaaya iddu IgalE hELaaganne?
ನಾಳೆ ಹೇಳಿ…
“ನಿಂಗೊಗೆ” ಎಡಿಗೋ ? ಕೇಳಿದ್ದಿ. ” ಎಂಗೊಗೆ” ಎಡಿಗು.
ಎಂಗೋ ಹೇಳಿರೆ ಆರೆಲ್ಲ? ನೂರು ಜೆನಂಗಳ ಗುಂಪು ಬಪ್ಪ ಅಂದಾಜಿ ಇದ್ದೋ? ತಿನ್ನೆಕ್ಕಾದ್ದು ಒಬ್ಬನೇ…
ಎಡಿಗು ಭಾವಾ ಎಡಿಗು. ಚೋಲಿ ಕೊ೦ಡೋಗಿ ದನಕ್ಕೆ ಹಾಕುಲೂ ಎಡಿಗು ಐದು ನಿಮಿಷಲ್ಲಿ ..
ದನಕ್ಕೆ ಐದು ನಿಮಿಷಲ್ಲಿ ಚೋಲಿ ತಿಂಬಲೆ ಎಡಿಗೋ?
ಹರೇರಾಮ, ನಾಲ್ಕೈದು ತಿಂದಪ್ಪಗ ಹೊಟ್ಟೆ ತುಂಬುತ್ತು ಹೇಳ್ತಿ! ಗೊನೆ ಪೂರ್ತಿ[ನೂರು ಹಣ್ಣು] ತಿನ್ನೆಕ್ಕು ಹೇಳ್ತಿ!! ಅದು ಹೇಂಗಪ್ಪ!?
ಪ್ರಯತ್ನ ಪಟ್ರೆ ಎಡಿಗೋ ಹೇಳಿ ಕಾಣ್ತು…
ಹರೇರಾಮ, ನಾಲ್ಕೈದು ತಿಂದಪ್ಪಗ ಹೊಟ್ತೆ ತುಂಬುತ್ತು ಹೇಳ್ತಿ! ಗೊನೆ ಪೂರ್ತಿ[ನೂರು ಹಣ್ಣು] ತಿನ್ನೆಕ್ಕು ಹೇಳ್ತಿ!! ಅದು ಹೇಂಗಪ್ಪ!?
ಆನು ಸೋತೆ !ಸುಬ್ರಮಣ್ಯನ ನವಿಲು ಏರಿ ಮೂರೂ ಲೋಕ ಸುತ್ತಿ ಬಂದ ಹಾಂಗೆ ನೇರ ಮಾರ್ಗಲ್ಲಿ ಹೋದರೆ ಎಡಿಯ .ಇನ್ನು ಗಣೇಶ ಪಾರ್ವತಿ ಪರಮೇಶ್ವರರಿನ್ಗೆ ಮೂರು ಸುತ್ತ್ತು ಹಾಕಿ ಮೂರೂ ಲೋಕವ ಮೂರು ಸತ್ತಿ ಸುತ್ತಿದ ಫಲ ಪಡದ ಹಾಂಗೆ ಇಲ್ಲಿದೆ ಎಂತ ಶಾರ್ಟ್ ಕಟ್ ಇದ್ದು ಹೇಳಿ ಎನ್ನ ಬಡ್ದು ಮಂಡೆಯ ಹೋವುತ್ತಾ ಇಲ್ಲೆ ..ಬುಧವಾರದ ವರೆಗೆ ಕಾಯಕ್ಕಷ್ಟೇ ಇನ್ನು !!ಆರಾರಿನ್ಗೆಲ್ಲ ತಿಮ್ಬಲೆ ಎದ್ತತ್ತು ಹೇಂಗೆ ತಿಂದವು ಹೇಳಿ ನೋಡುಲೆ !
ಇಲ್ಲಿಯಣ ಸಂವಾದ ಭಾರಿ ರೈಸಿದ್ದು ,ನೆಗೆ ಬಂತು ಓದಿ,
ಬಪ್ಪ ಬುಧವಾರ ಕಾಂಬ ಅಂಬಗ
ಲಕ್ಷ್ಮಿ ಅಕ್ಕೋ… ತಿಂಬಲೆ ಎಡಿಗಾದವು ಹೇಂಗೆ ತಿಂಬದು ಹೇಳಿ ನಾಳೆ ಹೇಳುಗು…
ನಿಂಗೊಗೆ ತಿಂಬಲೆ ಎಡಿಗಾಗದ್ರೆ ಚೆನ್ನೈ ಭಾವನ ಹತ್ತರೆ ಕೇಳಿ. ಅವು ಸತ್ಯಣ್ಣನ ಹತ್ತರೆ ಹಲ್ವ ಕಾಸುವ ಅಂದಾಜಿಲಿ ಇದ್ದವು…
ಎಡಿಗು ಹೇದು ಕಾಣ್ತು.ಎಷ್ಟು ನಿಮಿಷ ಬೇಕಾವುತ್ತು ಗೊಂತಿಲ್ಲೆ.
ಐದು ನಿಮಿಷ ಕೊಟ್ಟದು ಭಾವ. ಐದು ನಿಮಿಷಲ್ಲಿ ನಿಂಗೊಗೆ ಎಷ್ಟು ಬಾಳೆ ಹಣ್ಣು ತಿಂಬಲೆ ಎಡಿತ್ತು?
ಬಪ್ಪ ಬುಧವಾರ ಹೇಳುವೊ.
ಎಡಿಯೆದ್ದೆ ಎ೦ತಾ?
ಆದರೆ ಸಣ್ಣ ಕ೦ಡೀಷನ್ನು,
ನಿ೦ಗ ಹೆಗಲಿ೦ದ ಆ ಬಡಿಗೆ ಇಳಿಸೆಕ್ಕು.
ಇಲ್ಲದ್ದರೆ ,ಆರಾರು ಬ೦ದು ಅದರ ಎಳದು,
ಎಲ್ಲಾ ಬ೦ದು ,ಹಾಳು ಹಲಾಕು ಮಾಡಿದ್ದವು
ಹೇಳಿ,ಕೊದ೦ಟಿ ತೋರುಸುಲೆ ಆಗನ್ನೆ.
ಇದಾ ಲಕ್ಷ್ಮಿ ಅಕ್ಕೋ… ಇಲ್ಲಿ ನಿಂಗೊಗೆ ಬತ್ತಿ ಮಡುಗಿದ್ದವೂ….
ಛೇ…ಶ್ಯಾಮಣ್ಣಾ, ಒಂದು ವಾರಲ್ಲಿ ಕಡೇ ಪಕ್ಷ ಮಂಗಗಳ ಉಪವಾಸದಾಂಗೆ ತೆರುದು,ಸೊಲುದು,ಅಗುದು ಮಡುಗುಲೆ ಅಕ್ಕೋ…. 🙂
ಒಂದು ವಾರ ಟೈಮು ಇಪ್ಪದು ಉತ್ತರ ಗೊಂತಾದೋರು ಹೇಳ್ಲೆ ಶೈಲಜಕ್ಕಾ… ಬಾಳೆ ಹಣ್ಣು ತಿಂಬಲೆ ಟೈಮು ಕೊಟ್ಟದು ಕಾಲಿ ಐದು ನಿಮಿಷ….
ಏಯ್… ಎನ ಸಂಶಯವೇ ಇಲ್ಲೆ. ಎಡಿಗು ಹೇಳಿಯೇ ತೋರ್ತು. ಗೊನೆ ಇತ್ತೆ ಕಳ್ಸಿ. ಕಾಲಿಮಾಡಿ ಕೀಲು ಅತ್ತೆ ಕಳ್ಸುತ್ತೆ.
ಗೊನೆ ತೆಕ್ಕೊಳ್ಳಿ, ಬಿಟ್ಟಿಕ್ಕೆಡಿ ಹೇದು ಅಡಿಗೆ ಸತ್ಯಣ್ಣನೂ ಹೇದ°.
ಅಡಿಗೆ ಸತ್ಯಣ್ಣ ಹಲ್ವ ಕಾಸುತ್ತರೆ, ಮತ್ತೆ ಇತ್ತ ಕಳುಗಿ ಭಾವ.
“ಎಡಿಗು” ಹೇಳಿ ಗೊನೆಯ ಒಳ ಹಾಕುವ ಕೆಣಿಯೋ? ಆದೆಲ್ಲೆ ಆತಿಲ್ಲೆ… ತಿಂಬದು ಹೇಂಗೆ ಹೇಳ್ತದರ ಒಂದು ವಾರಲ್ಲಿ ವಿವರ್ಸೆಕ್ಕು ಭಾವಾ…
…… ತಿ೦ಬಲೆ ಎಡಿಗೋಳಿ ಕಾಣ್ತು.
ಉತ್ತರ ನೋಡುವಗ ಇನ್ನೂ ಸಂಶಯ ಇದ್ದಾಂಗೆ ಕಾಣ್ತನ್ನೇ ಭಾಗ್ಯಕ್ಕೋ? ಆ ಗೊನೆಲಿ ನೂರು ಬಾಳೆ ಹಣ್ಣು ಇದ್ದು. ನಾಲ್ಕೈದು ತಿಂದರೇ ಹೊಟ್ಟೆ ಭರ್ತಿ ಆವುತ್ತಡಾ…
ಸಂಶಯ ಅದೇ ಶ್ಯಾಮಣ್ಣ … ”ಒಂದೇ ಒಂದು” ಬಾಳೆ ಹಣ್ಣಿನ ತಿ೦ಬಗ ೫ ನಿಮಿಷ ವರೆಗೆ ಬರುಸುಲೇ ಎಡಿಗೋ ?ಅಷ್ಟು ರುಚಿ ಇದ್ದು ಹೇಳಿ ಹೇಳಿದ ಮತ್ತೆ ಬಾಳೆ ಹಣ್ಣು ಕೈಲಿ ಹಿಡುಕ್ಕೊಂಡರೆ ಉಪವಾಸ ಮಾಡಿದ ಮಂಗಗಳ ಕಥೆಯಾಂಗೆ ಅಕ್ಕೋಳಿ ….ರಸಾಯನಕ್ಕೆ ಕೊಚ್ಚಿದ ಹಾಂಗೆ ೩ ನಿಮಿಷ ಕೊಚ್ಚಿ ಮತ್ತೆರಡು ನಿಮಿಷಲ್ಲಿ ಒಂದೊಂದೇ ತುಂಡಿನ ತಿಂಬ ಯೋಚನೆ ಎನ್ನದು . ೫ ನಿಮಿಷದ ಲೆಕ್ಕ ಚುಕ್ತಾ ಆತಲ್ಲದೋ ?
ಒಳುದ್ದರನ್ನು ಸತ್ಯಣ್ಣನೆ ಆಯೆಕ್ಕು ಹೇಳುವ ಮಕ್ಕೊಗೆ ಕೊಟ್ಟು ಒಂದೂ ಇಲ್ಲದ್ದ ಹಾಂಗೆ ಮಾಡುವ ಯೋಜನೆದೆ ಇದ್ದತ್ತು …
ಖಂಡಿತ ಎಡಿಗು. ಕಷ್ಟದ ಪ್ರಶ್ನೆ.. ಸುಲಭದ ಉತ್ತರ…!!!! ಉತ್ತರ ಲಕೋಟೆಲಿ ಹಾಕಿ ಮಡಗಿದ್ದೆ…..
ಬಪ್ಪ ಬುಧವಾರ ಸರೀ ಹತ್ತೂವರೆಗೆ ನಿಂಗಳ ಲಕೋಟೆ ಓಪನು ಮಾಡಿಕ್ಕಿ… ಎಂತ ಉತ್ತರ ನೋಡುವೋ… 🙂
ಆನು ಅರ್ಥ ಮಾಡಿಯೊ೦ಡದು ಸರಿ ಆದರೆ “ಎಡಿಗು – ದೊಡ್ಡ ವಿಷಯವೇ ಅಲ್ಲ” ಹೇಳಿ ಆವ್ತು ಎನ್ನ ಉತ್ತರ, ಆದರೆ ಪೃಚ್ಛಕನ ಮ೦ಡೆಲಿ ಇಪ್ಪದೂ, ಎನ್ನ ಮ೦ಡೆಲಿ ಇಪ್ಪದೂ ಒ೦ದೇ ಹಾ೦ಗೆಯೊ ಹೇಳುವದು ಸ೦ಶಯ
ಬಪ್ಪ ಬುಧವಾರ (ಒಂದುವಾರ ಕಳುದು) ಸರೀ ಹತ್ತೂವರೆಗೆ ನಿಂಗಳ ಉತ್ತರ ಹೇಳಿಕ್ಕಿ… ಸರಿ ಇಪ್ಪಲೂ ಸಾಕು ನಿಂಗಳ ಉತ್ತರ…
ಬಪ್ಪ ಬುಧವಾರಕ್ಕಪ್ಪಗ, ಎಲ್ಲ ಹಣ್ಣುಗೊ ಕಪ್ಪಾಗಿ ಕೊಳದು ಒಂದೊಂದೇ ಉದುರುಲೆ ಶುರುವಕ್ಕೋದು, ಓಯಿ.
ಹಾಂಗೆ ಉದುರುತ್ತರೆ ಹಲ್ವ ಮಾಡಿರೆ ಆತನ್ನೆ ಮಾವ° 🙂
ಎಡಿಗೋ ಹೇದು ಆಲೋಚನೆ ಮಾಡ್ಯೊಂಡು ಕೂದರೆ ಎಡಿಗಾಗ. ಪ್ರಯತ್ನ ಮಾಡುವೋ.
ಈ ಗೊನೆಲಿಪ್ಪ ಹಣ್ಣುಗಳ ಸರಾಸರಿ ತೂಕ ಎಷ್ಟಕ್ಕು, ಒಂದು ಹಣ್ಣು ಎಷ್ಟು ದೊಡ್ಡ ಇದ್ದು. ಎಂತ್ಸಕೆ ಕೇಟದು ಹೇದರೆ – ಒಂದು ಹಣ್ಣು ತಿಂಬಲೆ ಎಷ್ಟು ಸಮಯ ಬೇಕಕ್ಕು ನೋಡಿಕ್ಕಿ ಮತ್ತೆ ೫ ನಿಮಿಷಲ್ಲಿ ಎಲ್ಲ ತಿಂದು ಮುಗುಶುಲೆ ಎಡಿಗಕ್ಕೋ ಹೇದು ಕೂದೊಂಡು ಆಲೋಚನೆ ಮಾಡ್ಲಕ್ಕಿದ.
ಆಲೋಚನೆ ಮಾಡ್ಳೆ ಎಂತರ ಇದ್ದು ಭಾವ? ತಿಂಬಲೆ ಎಡಿಗಾರೆ ತಿಂಬದು… ಬೋಸ ಭಾವನ ಎದುರು ಬಿಟ್ಟು ನೋಡಿ…