- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಗಂಗಮ್ಮನ ಮಗಳು ಸರಸ್ವತಿಯ ಕಾವೇರಮ್ಮನ ಮಗಂಗೆ ಕೊಟ್ಟದು .ಆ ಮಗಳಿಂಗೆ ಒಂಬತ್ತು ಜನ ಮಕ್ಕೊ.[ಮಾಣಿ-ಕೂಸು ಸೇರಿ].ಅಲ್ಲದ್ದೆ ಇಬ್ಬರಿಂಗೂ ಬೇರೆ ಮಕ್ಕಳೂ ಪುಳ್ಯಕ್ಕಳೂ ಇದ್ದವು.ಅವು ಆರಾರು ಹೇಳಿ ನವಗೆ ಅಗತ್ಯ ಇಲ್ಲೆ.
ಒಂದಾರಿ ವಿಷುವಿಂಗೆ ಆ ಇಬ್ಬರೂ ಅಜ್ಜಿಯಕ್ಕಳ ಎಲ್ಲಾ ಪುಳ್ಯಕ್ಕಳೂ ಒಂದೇ ಮನೆಗೆ ಬಂದು ಸೇರಿದ್ದು ಒಂದು ವಿಶೇಷ ಆಗಿತ್ತು.
ಅಲ್ಲಿ ಒಬ್ಬ ಕೆಲಸ ಇಲ್ಲದ್ದವ ಲೆಕ್ಕ ಹಾಕಿಕೊಂಡಿತ್ತಿದ್ದ.
ಆ ಲೆಕ್ಕ ಹೀಂಗೆ-
೧]ಅಲ್ಲಿ ಸೇರಿದ ಪುಳ್ಯಕ್ಕಳ ಸಂಖ್ಯೆ-೫೦.
೨]ಗಂಗಮ್ಮಂಗೆ ಇಪ್ಪ ಪುಳ್ಳಿ ಮಾಣ್ಯಂಗಳ ಸಂಖ್ಯೆಂದ ಕಾವೇರಮ್ಮನ ಪುಳ್ಳಿಮಾಣ್ಯಂಗಳ ಸಂಖ್ಯೆ ೧೦ ಜಾಸ್ತಿ.
೩]ಕಾವೇರಮ್ಮಂಗೆ ಇಪ್ಪ ಪುಳ್ಳಿಕೂಸುಗಳ ಸಂಖ್ಯೆಂದ ಗಂಗಮ್ಮಂಗೆ ಇಪ್ಪ ಪುಳ್ಳಿಕೂಸುಗಳ ಸಂಖ್ಯೆ ೩ ಜಾಸ್ತಿ.
೪]ಗಂಗಮ್ಮಂಗೆ ಇಪ್ಪ ಪುಳ್ಳಿ ಯಕ್ಕಳ ಪೈಕಿ ಮಾಣ್ಯಂಗಳ ಸಂಖ್ಯೆಯ ಇಮ್ಮಡಿಂದ ಒಂದು ಕಮ್ಮಿ ಆಯಿದು-ಕೂಸುಗಳ ಸಂಖ್ಯೆ.
೫]ಕಾವೇರಮ್ಮಂಗೆ ಇಪ್ಪ ಪುಳ್ಳಿಯಕ್ಕಳ ಪೈಕಿ ಮಾಣ್ಯಂಗೊ ಹೆಚ್ಚು-ಎಷ್ಟು ಹೇಳಿದರೆ ಕೂಸುಗಳ ಸಂಖ್ಯೆಂದ ಐದು ಮಾತ್ರ ಹೆಚ್ಚು.
ಹಾಂಗಾರೆ,ಇಬ್ಬರೂ ಅಜ್ಜಿಯಕ್ಕೊಗೆ ಇಪ್ಪ ಪುಳ್ಯಕ್ಕಳಲ್ಲಿ ಮಾಣ್ಯಂಗೊ ಎಷ್ಟು? ಕೂಸುಗೊ ಎಷ್ಟು? ಅಲ್ಲಿ ಸೇರಿದ ಪುಳ್ಯಕ್ಕಳಲ್ಲಿ ಮಾಣ್ಯಂಗೊ ಎಷ್ಟು?ಕೂಸುಗೊ ಎಷ್ಟು?-ಈ ಪ್ರಶ್ನೆಯ ಅವ ಅಲ್ಲಿಗೆ ಹೋಗದ್ದ ಎನ್ನತ್ತರೆ ಕೇಳಿದರೆ ಹೇಂಗೆ?
ಇವಂಗೆ ಬೇರೆ ಉದ್ಯೋಗ ಇಲ್ಲೆ ಹೇಳಿ ಆನು ಸುಮ್ಮನೆ ಕೂಯಿದೆ.
ನಿಂಗೊ ಹೇಳುವಿರೊ?
ಗಂಗಮ್ಮನ ಪುಳ್ಳಿ ಮಾಣಿಯಂಗೊ – GM
ಗಂಗಮ್ಮನ ಪುಳ್ಳಿ ಕೂಸುಗೊ – GF
ಕಾವೇರಮ್ಮನ ಪುಳ್ಳಿ ಮಾಣಿಯಂಗೊ – KM
ಕಾವೇರಮ್ಮನ ಪುಳ್ಳಿ ಕೂಸುಗೊ – KF
ಹೇಳಿ ತೆಕ್ಕೊಂಡರೆ ಈ ಸಮೀಕರಣ ಸಿಕ್ಕುತ್ತು:
KM = GM + 10
GF = KF + 3
GF = 2GM – 1
KM = KF + 5
GM + GF + KM + KF = 50
ಇದರಲ್ಲಿ ಯಾವುದಾದರೂ ಒಂದರ ಬಿಡುಸಿ.
ಉದಾಹರಣೆ: ಆನು GM ನ ಹೀಂಗೆ ಬಿಡುಸಿದೆ.
GM + (2GM – 1) + (KF + 5) + KF = 50
GM + (2GM – 1) + ((GF – 3) + 5) + (GF – 3) = 50
GM + (2GM – 1) + (((2GM – 1) – 3) + 5) + ((2GM – 1) – 3) = 50
…..
GM = 9
ಸದ್ಯ,
ಇಲ್ಲಿ ಕೂಸುಗೊಕ್ಕೆ ಕೊರತೆ ಇಲ್ಲೆ..
ಏನೇ ಆದರೂ,ಸಿ೦ಧೂ ಅಕ್ಕನ ಲೆಕ್ಕ ನೋಡಿಯಪ್ಪಗ ತಲಗೆ ಹೊಕ್ಕತ್ತದಾ.
ಮೊದಲಾಣ ಕಾಲದ್ದಾಗಿಯೆಂಡಿಕ್ಕು ಈ ಲೆಕ್ಕ ! ಈಗ ಮಕ್ಕೊ ಬಿಟ್ಟು, ಮಗು ಬೇಕೋ ..ಇಲ್ಲದ್ದರೆ ಆಗದೋ ಹೇಳುವ ಕಾಲ !
ಊರಿಂಗೆ ಊರೇ ವೃದ್ಧಾಶ್ರಮ ಅಪ್ಪ ಕಾಲ ಇದು ! ಏವ ಊರಿಂಗೆ ಹೋದರೂ, ಮನೆಗಳಲ್ಲಿ ಪ್ರಾಯ ಆದ ಅಜ್ಜ, ಅಜ್ಜಿಯೂ ಹಳೇ ದೇವರ ಸಂಪುಟಂಗಳೂ ! !
ಭಾರತದ ಜನ ಸ೦ಕೆ ಮೊನ್ನೆ ಲೆಕ್ಕ ಹಾಕಿದವಡ.. ಅಪ್ಪೋ – ಹುಟ್ಟುವ ಮಕ್ಕಳ ಸಂಖ್ಯೆ ಕಮ್ಮಿ.. ! -ಮುಂದೆ ಯೂರೋಪಿನ ದೇಶಂಗಳ ಹಾಂಗೆ ನವಗೂ ಜನ ಇಲ್ಲೆಒಂದರಿ ಬಿದ್ದಪ್ಪಗ ಏಳುಸಲೂ.. ಹೇಳುಬವ ದಿನಂಗೊ ಬತ್ತಾ ಇದ್ದು ! !
ಮೊನ್ನೆ ಒಬ್ಬ ಮಾವನ ಮನೆಗೆ ಹೋದರೆ, ಮಾವ,ಅತ್ತೆ ಇಬ್ಬರೂ ಜ್ವರಲ್ಲಿ ಮನುಗಿದ್ದವು. ಡಾಕ್ತರರ್ ಕರವಲೆ ಜನ್ ಇಲ್ಲೆ, ಫೋನು ಸತ್ತಿದು ! ಧಾರಾಳ ಉತ್ಪತ್ತಿ ಇದ್ದು, ಬೇಶಿ ತಿಂಬಲೆ ಎಡಿತ್ತಿಲ್ಲೆ,! ಮಗಳಕ್ಕೊ ಮಾಂತ್ರ ಅವಕ್ಕೆ , ಮದುವೆ ಆಗಿ ಎಲ್ಲೋರೂ ಅವರವರ ಮನೆಗಳಲ್ಲಿ! ಮಗಳಕ್ಕಳ ಮನೆಲಿಪ್ಪಲೆ ಇವಕ್ಕೆ ಸ್ವಾಭಿಮಾನ ಬಿಡುತ್ತಿಲ್ಲೆ !
ಬಯಲಿನ ಸುತ್ತೂ ಈ ರೀತಿಯ ಅವಸ್ಥೆ ಇಕ್ಕು !
ಇದರ ಬಗ್ಗೆ ಒಂದರಿ ಆಲೋಚನೆ ಮಾಡಿ ನೋಡಿ !
ಪುಳ್ಯಕ್ಕಳ ಲೆಕ್ಕ ಹಾಕಿದಷ್ಟು ಮುಗಿಯಾ..!! 😉
ಲೆಕ್ಕ ಎಲ್ಲಾ ನಿ೦ಗು ಎನ್ನತ್ರೆ ಕೇಳಿರೆ ಆಗೆ.. 🙁
ಭಾರತದ ಜನ ಸ೦ಕೆ ಮೊನ್ನೆ ಲೆಕ್ಕ ಹಾಕಿದವಡ.. ಅಪ್ಪೋ? 😀
ಅವಕ್ಕೆ ಮಣ್ಣೊ ಗೊ೦ತಿಕ್ಕು ಲೆಕ್ಕ ಸರೀ ಮಾಡಿ.. 😉
ಆನು ಪೆ೦ಗಣ್ಣ೦ಗೆ ಹೇಳ್ತೆ ಅವರತ್ರೆ ಲೆಕ್ಕ ಹಾಕ್ಸುಲೆ.. ಏ.. 😛
ಆಗದ ಮಾವ??
ಚೆಲ,ಗಣೇಶ ಭಾವನ ತಲಗೆ ಒ೦ದು ಕೊಡೆಕ್ಕಾತನ್ನೆ..
ಬಪ್ಪ ವರುಷ ವಿಶುವಿ೦ಗೆ ಲೆಕ್ಕ ತಿರೂಗಿ ನೋಡುವ°,ಪುಳ್ಳ್ಯಕ್ಕಳ ಲೆಕ್ಕ ಹೆಚ್ಚಪ್ಪ ಸಾಧ್ಯತೆ ಇಕ್ಕು,ಅಲ್ಲದೊ?
ಪುರುಸೋತ್ತಿಪ್ಪಗ ಗುರುಟಲೆ ಇದು ಚಂದ ಇದ್ದು ಲೆಕ್ಕ. ಜೊತೆಲಿ, ಕೂದೊಂಡು ಒಂದರಿ ನಮ್ಮ ಹಿರಿಯರ ನೆಂಪು ಮಾಡ್ಳೆ ಸಂಬಂಧದ ಒಂದು ಭಾವನಾತ್ಮಕ ನೆನಪು ಕೂಡ. ಒಳ್ಳೆದಾಯ್ದು ಹೇಳಿ ಒಪ್ಪ.
{ಅಲ್ಲಿ ಒಬ್ಬ ಕೆಲಸ ಇಲ್ಲದ್ದವ ಲೆಕ್ಕ ಹಾಕಿಕೊಂಡಿತ್ತಿದ್ದ.} ..
ಅದಾರು ಹೇಳಿ ಎನಗೆ ಈಗ ಗೊಂತಾತು ಗೋಪಾಲಣ್ಣ….
ಗಣೇಶಣ್ಣ,
ಅಂತೆ,ಕುಶಾಲಿಂಗೆ ಹೇಳಿದ್ದು ಆತೊ, ನಿಂಗ ಲೆಕ್ಕಲ್ಲಿ ಹುಷಾರಿದ್ದಿ..
ಆ ಅಜ್ಜಿಯಕ್ಕೊಗೆ ಪುಳ್ಯಕ್ಕೊ ಬಂದರೆ ಭಾರೀ ಕುಶಿ.ಯಾವ ತಲೆಬೆಶಿಯೂ ಇಲ್ಲೆ.ಮಾವಿನಹಣ್ಣು,ಹೂಗು,ಗುಜ್ಜೆ ಎಲ್ಲಾ ಕೊಯಿದು ಉಪಚಾರ ಸುರು ಮಾಡುಗು!
ಸರಿಯಾದ ಉತ್ತರ!
ಈ ರೀತಿಯ ರಗಳೆ ಲೆಕ್ಕವನ್ನೂ ಹೂಗಿನ ಎಸಳಿನ ಹಾಂಗೆ ಬಿಡಿಸುವವು ಇದ್ದವಲ್ಲದೊ?ನಮ್ಮ ಯಾವ ಮಕ್ಕಳೂ ಲೆಕ್ಕ ಕಷ್ಟ,ಕಷ್ಟ ಹೇಳಿ ಪರಂಚಲೆ ಆಗ!ಇದು ಎನ್ನ ಹಾರೈಕೆ.
ಪ್ರತಿಕ್ರಿಯೆಗೆ ಧನ್ಯವಾದ.
ಬೋಣಿಗೆ ಹೀಂಗೆ ಉತ್ತರ ಸಿಕ್ಕಿರೆ ಮತ್ತಿದ್ದವು ಎಂತದೂ ಆಲೋಚನೆ ಮಾಡವಲ್ಲದೊ ಗಣೇಶಣ್ಣ?ಮತ್ತಿದ್ದವೂ ರಜಾ ತಲೆ ಕರ್ಚು ಮಾಡಲಿ.[ತಮಾಶೆಗೆ ಬರದ್ದು-ಕೋಪಿಸಿಕ್ಕೆಡಿ].
ನಿ೦ಗೊ ಹೇಳಿದ್ದು ನೂರಕ್ಕೆ ನೂರು ನಿಜ ಗೋಪಾಲಣ್ಣಾ.. ಎ೦ತ ಮಾಡುವದು, ಹೀ೦ಗಿಪ್ಪದರ ಕ೦ಡಪ್ಪಗ ಒಳ್ಳೆ ಎಳಕ್ಕ ಇದಾ.. ಇದರ ಉತ್ತರ ಕ೦ಡುಹಿಡುದು ಒಪ್ಪ ಕೊಟ್ಟು ಚೂರು ಹೊತ್ತು ಕಳುದಪ್ಪಗ ಎನಗುದೆ ತೋರಿತ್ತು, ಛೆ ಛೆ ಸುಮ್ಮನೆ ಈಗಳೇ ಉತ್ತರ ಕೊಟ್ಟದು, ಸುಮ್ಮನೆ ಕಾದು ಕೂದಿಕ್ಕಿ ಆರುದೆ ಕೊಡದ್ರೆ ಮತ್ತೆ ಕೊಟ್ಟರೆ ಸಾಕಿದ್ದತ್ತು, ಎನ್ನ ಉತ್ನಾಹ ಚೂರು ಮಿತಿಮೀರಿತ್ತೋ ಹೇಳಿ.
ನಿ೦ಗಳ ಲೆಕ್ಕವ ಮೆಚ್ಚೆಕೇ.. ಅಷ್ಟು ಸುಲಾಭಲ್ಲಿ ಉತ್ತರ ಕ೦ಡು ಹಿಡಿವಲೆ ಎಡಿಯದ್ದ ರಗಳೆಯೇ ಇದು. ಇನ್ನುದೆ ಹೀ೦ಗಿಪ್ಪ ಒಳ್ಳೊಳ್ಳೆ ರಗಳೆಗಳ ಕೊಡಿ. ಎನ್ನ ಉತ್ಝಾಹವ ಖ೦ಡಿತವಾಗಿ ನಿಯ೦ತ್ರಿಸಿಯೊ೦ಬೆ..
ಅ೦ದರುದೆ ಕುಮಾರಣ್ಣ ಎನ್ನ ಕೆಲಸ ಇಲ್ಲದ್ದವ ಹೇಳಿದ್ದು ಸಾಕನ್ನೆ… 🙂 ಹ್ಹಹ್ಹಹ್ಹಾ.. ಲೆಕ್ಕಾಚಾರ ಇಲ್ಲದ್ದೆ ಎ೦ಗಳ ಹಾ೦ಗಿಪ್ಪವರ ಕೆಲಸವೇ ನೆಡೆಯ ಕುಮಾರಣ್ಣಾ..
ಯಬ್ಬಾ… ಇಷ್ಟೆಲ್ಲ ಮಕ್ಕೊ, ಪುಳ್ಯಕ್ಕೊ ಇದ್ದರೆ ಎಷ್ಟು ತಲೆ ಬೆಶಿ ನೋಡಿ!!!
ಗ೦ಗಮ್ಮ೦ಗೆ ಸರಸ್ವತಿಯಕ್ಕನ ಮಕ್ಕೊ ಅಲ್ಲದ್ದೆ ಬೇರೆ ಇಪ್ಪ ಪುಳ್ಳಿ ಮಾಣ್ಯ೦ಗೊ – ೫
ಗ೦ಗಮ್ಮ೦ಗೆ ಸರಸ್ವತಿಯಕ್ಕನ ಮಕ್ಕೊ ಅಲ್ಲದ್ದೆ ಬೇರೆ ಇಪ್ಪ ಪುಳ್ಳಿ ಕೂಸುಗೊ – ೧೨
ಕಾವೇರಿಯಮ್ಮ೦ಗೆ ಸರಸ್ವತಿಯಕ್ಕನ ಮಕ್ಕೊ ಅಲ್ಲದ್ದೆ ಬೇರೆ ಇಪ್ಪ ಪುಳ್ಳಿ ಮಾಣ್ಯ೦ಗೊ – ೧೫
ಕಾವೇರಿಯಮ್ಮ೦ಗೆ ಸರಸ್ವತಿಯಕ್ಕನ ಮಕ್ಕೊ ಅಲ್ಲದ್ದೆ ಬೇರೆ ಇಪ್ಪ ಪುಳ್ಳಿ ಕೂಸುಗೊ – ೯
ಸರಸ್ವತಿಯಕ್ಕನ ಮಕ್ಕೊ ಮಾಣ್ಯ೦ಗೊ – ೪
ಸರಸ್ವತಿಯಕ್ಕನ ಮಕ್ಕೊ ಕೂಸುಗೊ – ೫
ಅ೦ಬಗ ಅಲ್ಲಿ ಸೇರಿದ ಒಟ್ಟು ಮಕ್ಕೊ – ೫+೧೨+೧೫+೯+೪+೫=೫೦
ಗ೦ಗಮ್ಮ೦ಗೆ ಇಪ್ಪ ಪುಳ್ಳಿ ಮಾಣ್ಯ೦ಗೊ – ೫+೪ = ೯
ಕಾವೇರಿಯಮ್ಮ೦ಗೆ ಇಪ್ಪ ಪುಳ್ಳಿ ಮಾಣ್ಯ೦ಗೊ – ೧೫+೪=೧೯
ಗ೦ಗಮ್ಮ೦ಗೆ ಇಪ್ಪ ಪುಳ್ಳಿ ಕೂಸುಗೊ – ೧೨+೫ = ೧೭
ಕಾವೇರಿಯಮ್ಮ೦ಗೆ ಇಪ್ಪ ಪುಳ್ಳಿ ಕೂಸುಗೊ – ೯+೫=೧೪
ಉತ್ತರ ಸರಿಯೋ ಗೋಪಾಲಣ್ಣಾ?
ಆನು ತಲೆ ಕೆರಕ್ಕೊಂಡು ಆಲೋಚನೆ ಮಾಡಿಂಡು ಇಪ್ಪಗ ನಿಂಗಳ ಉತ್ತರ ಕಂಡತ್ತು. ಮತ್ತೆ ಎನಗೆ ನಿಂಗೊ ೫೦ ಸಂಖ್ಯೆಯ ಬಿಡಿಸಿದ್ದು ಇನ್ನೂದೆ ರಜ ಒಗಟಾಗಿಯೇ ಇದ್ದು. ೫೯ರ ಸುಲಾಬಲ್ಲಿ ಬಿಡುಸಿದೆ. ಇದ್ರ ಕೆಣಿ ಅರ್ಥ ಆಯಿದಿಲ್ಲೆನ್ನೆ
ಸರಸ್ವತಿಯಕ್ಕನ ಮಕ್ಕೊ ಇಬ್ರಿ೦ಗುದೆ ಪುಳ್ಳ್ಯಕ್ಕೊ ಅಲ್ಲದಾ.. ಹಾ೦ಗಾಗಿ ಅವು ೯ ಜನರ ೧೮ ಹೇಳಿ ತೆಕ್ಕೊ೦ಡ್ರೆ ಆತು.. ಅಷ್ಟಪ್ಪಗ ೫೯ ಅವ್ತಲ್ಲದಾ..
ಇಷ್ಟು ಕಷ್ಟ ಬಪ್ಪ ಬದಲು ಎಲ್ಲ ಪುಳ್ಯಕ್ಕಳ ಒಟ್ಟಿಂಗೆ ಕೂರ್ಸಿ ತಲೆ ಲೆಕ್ಕ ಹಾಕಿರೆ ಸಾಕಿತ್ತಲ್ಲ…
ಇಷ್ಟು ಪುಳ್ಯಕ್ಕಳ ಒಂದೇದಿನ ಒಟ್ತಿಂಗೆ ಕೂರುಸುಲೆ ಇಡಿಗೋ………