Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
“ಸಮಸ್ಯಾಪೂರಣ” ದ ಅ೦ಕಣ ಡ೦ಕಿಗೊ೦ಡು ಮೆಲ್ಲ೦ಗೆ ಮು೦ದ೦ಗೆ ನೆಡದು ನೂರು ಹೆಜ್ಜೆ ದಾ೦ಟುತ್ತಾ ಇದ್ದು.ಪೂರಣ೦ಗಳ ಬರದು ಬೆಳೆಶಿದ,ಓದಿ ಪ್ರೋತ್ಸಾಹಿಸಿದ ಎಲ್ಲಾ ಬೈಲಿನ ಬ೦ಧುಗೊಕ್ಕೂ ಧನ್ಯವಾದ.
ಭಾಮಿನಿ ಷಟ್ಪದಿಲಿ ಈ ವಾರದ ಸಮಸ್ಯೆ : “ಮಳೆಯ ಹನಿ ಹನಿ ಬಿದ್ದರೀ ಬೈಲಿನೊಳ ಬೆಳೆ ಬೆಳಗು”
ಅದಿತಿಯಕ್ಕಾ ,ಎ೦ಥಾ ಉಪಮೆಗೋ !!
ಹವ್ಯಕ ಪದಬೆಳೆಯ ಕೃಷಿಗೆ ಎಲ್ಲೋರೂ ಕೈಜೋಡುಸೆಕ್ಕು ಹೇಳ್ತ ಸಂದೇಶ ಕೊಶಿ ಕೊಟ್ಟತ್ತು.
ಹೊಳೆಗ ಸೇರಿರೆಯಬ್ಧಿಯಪ್ಪದ-
ಗಳುಗ ಕೂಡಿರೆಯಶನ ತುಂಬುಗು
ಬೆಳವ ಪದಬೆಳೆ ನಾವು ಕೂಡಿಯೆ ಕಣಜ ತುಂಬುಸುಲೆ
ಅಳಿಲು ಸೇವೆಯ ಬನ್ನಿ ಮಾಡುವ
ಚಳಿಯ ನೂಕಿರೆ ನಮ್ಮ ಸುಮತಿಯ
ಮಳೆಯ ಹನಿಹನಿ ಬಿದ್ದರೀ ಬೈಲಿನೊಳ ಬೆಳೆ ಬೆಳಗು
ಕಳುದ ವರ್ಷದ ನೆಟ್ಟಿ ಬಿತ್ತಿನ
ಕಳವ ಮಾಡಿಯೆ ಬಿತ್ತಿ ಬಿಡುವಗ
ಮಳೆಯ ಹನಿ ಹನಿ ಬಿದ್ದರೀ ಬೈಲಿನೊಳ ಬೆಳೆ ಬೆಳಗು I
ಮೊಳದ ಪಡುವಲ ಕೈಕ್ಕೆ ಹಾಗಲ
ಬೆಳದ ಬಳ್ಳಿಯ ಮುಳ್ಳು ಸೌತ್ತಗೆ
ಹಳದಿ ವಸ್ತ್ರವಯೆಳದು ಸುಂದಿರೆ ತೊಗಲ ಬೆಳ್ಚಪ್ಪ II
ಬೆಳ್ಚಪ್ಪ ಹೇಳಿರೆ ಹಕ್ಕಿ -ಪಿಕ್ಕಿ ಗಳ ಓಡುಸುಲೆ ಕಟ್ಟುವ /ಮಡುಗುವ ಬೆದರು ಬೊಂಬೆ
ಭಾಗ್ಯಕ್ಕಾ ,
ನಿಜ . ಕೃಷಿ ತಲೆಮಾರುಗಳ ನಡುಗಾಣ ಸಂಕಲೆಯ ಹಾಂಗೆ ನೆಡವದು ಹೇಳ್ತದಕ್ಕೆ ನಿಂಗೊ ಕೊಟ್ಟ ಉದಾಹರಣೆ ತುಂಬಾ ಅರ್ಥಪೂರ್ಣ. ಒಳ್ಳೆ ಪೂರಣ .
ಹಳದಿ ವಸ್ತ್ರದ ಬೆಳ್ಚಪ್ಪನ ಬದಲು ಬೆಳಿ ವಸ್ತ್ರದ ಬೆಳ್ಯಪ್ಪನ ಎದುರುಗೊಂಬೊ.
ಹಳೆಯ ಬೇರುಗೊ ಹೊಸತು ಚಿಗುರುಗೊ
ಮಿಳಿತವಾದರೆ ಮರವು ಸೊಬಗಡ
ಬಳಲಿ ಒಣಗುಗು ನೀರಪಸೆ ಬೀಳದ್ದೆ ಬುಡಬುಡಕೆ |
ಇಳುದು ಬಾ ನಮ್ಮಬ್ಬೆಭಾಷೆಯ
ಬೆಳೆಶು ರಸಮಯ ಶುದ್ದಿಗಳ ಸುರಿ
ಮಳೆಯ ಹನಿ ಹನಿ ಬಿದ್ದರೀ ಬೈಲಿನೊಳ ಬೆಳೆ ಬೆಳಗು ||
ಶುದ್ಧಿ ಗಳ ಸುರಿಮಳೆ ಮತ್ತೆ ಶುರುವಾಗಲಿ.
ಬರಳಿ ಹೊಸ ಹುರುಪು
ಬೆಳೆ ಗೊ ಕಳೆಗುಂದಿದ್ದು ಬೈಲಿಲಿ
ಕಳುದ ಸರ್ತಿಗೆ ತುಲನೆ ಮಾಡಿರೆ
ಒಳುಶಿ ಯೊಂಡು ಬರೆಕು ನೆರೆಕರೆಯವೆಲ್ಲ ಕೈ ಸೇರಿ
ಎಳೆಯ ರೈತರು ಮುಂದೆ ಬಂದರೆ
ನಳನಳಿಸುಗು ಹೊಸ ಬೆಳೆ ಒಪ್ಪಕೆ
ಮಳೆಯ ಹನಿ ಹನಿ ಬಿದ್ದರೀ ಬೈಲಿನೊ ಳ ಬೆಳೆ ಬೆಳಗು
ಕಳೆ ತುಂಬೊದರ ಮದಲೇ ಬುಡ ಬಿಡುಸೆಕ್ಕು , ಅಲ್ಲದೋ ಮಾವಾ . ಲಾಯ್ಕ ಆಯಿದು .
ಎಳೆಯ ರೈತರು ಮುಂದೆ ಬರೆಕ್ಕು ಹೇಳ್ತದು ಸರ್ವರ ಹಾರೈಕೆ .
ಎಳೆಯ ರೈತರುದೇ ಸೇರಿಗೊಳ್ಳೆಕ್ಕು ಹೇಳ್ತದೆ ನಮ್ಮೆಲ್ಲೋರ ಆಶಯ, ಅಲ್ಲದೋ ಮಾವ.
ಮಳೆ ಕಮ್ಮಿ ಆಗಿ ಕೆಲವು ಸಮಯ ಆತು… ಬೈಲಿನ ನೋಡಿರೆ ಗೊಂತಾವುತ್ತು…
ಗೆಳತಿ ಗೆಳೆಯರನೆಲ್ಲರನ್ನುದೆ
ಎಳದು ತೈಂದಿದು ; ಹೊಸತು ಬರಹದ
ಮಳೆಯ ಹನಿಹನಿ ಬಿದ್ದರೀ ಬೈಲಿನೊಳ ಬೆಳೆ ಬೆಳಗು |
ಇಳೆಯ ಮಣ್ಣಿನ ಸತ್ವ ಹೀರುತ
ಕಳಸೆಯಿಂದಲೆ ಕಣಜ ತುಂಬುಸೊ
ಬಳಗ ಬೆಳೆಯಲಿ, ಕಂಪು ಬೀರಲಿ ದೇಶದುದ್ದಕ್ಕೂ ||
ಇಳೆಯ ಮಣ್ಣಿನ ಸತ್ವ ..ತೂಕದ ಮಾತುಗೋ ಅತ್ತೆ .
ಬೈಲಿನೊಳ ಬೆಳೆ ಬೆಳೆದು ಕಣಜ ತುಂಬಿಗೊಂಡಿರಲಿ,
🙂 ಮತ್ತೆ ಭೇಟಿ ಆತದಾ..
ಹಳೆ ಹೊಸ ತಲೆಗೊ ಸೇರಿ ಚರ್ಚಿತ
ಕಳೆಯ ಕಟ್ಟಿದ ನಿತ್ಯ ಶುದ್ದಿಯ
ಮಳೆಯ ಹನಿ ಹನಿ ಬಿದ್ದರೀ ಬೈಲಿನೊಳ ಬೆಳೆ ಬೆಳಗು
ದಳಿಯ ಮನಸಿಲಿ ಹೊಳವ ಬಗೆಬಗೆ
ತಿಳುದ ಮಾತಿನ ನೆಂಟ್ರು ಹಂಚಿರೆ
ಹೊಳೆಯೆ ಹರಿಗದ ಒಪ್ಪ ಕೊಟ್ಟದು ಬೈಲು ಹಸನಾಗಿ ||
ಒಳ್ಳೆಯ ಸ೦ದೇಶ , ಶೈಲಜಕ್ಕಾ . ಬೈಲಿನ ನೆಂಟರ ಭೇಟಿ ಸದಾ ಆಗಲಿ ಅಲ್ಲದೋ ?
ಸತ್ಯವಾದ ಮಾತುಗೋ.