Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಈ ಚಿತ್ರಕ್ಕೆ ಒ೦ದು ಪದ್ಯ ಕಟ್ಟುವ, ಬನ್ನಿ.
ಬರದೋರು : ಸಂಪಾದಕ° on 26/12/2015 12 ಒಪ್ಪಂಗೊ
ಈ ವಾರ ಈ ಚಿತ್ರಕ್ಕೆ ಒ೦ದು ಪದ್ಯ ಕಟ್ಟುವ, ಬನ್ನಿ.
Comments are closed.
ಶೈಲಜಕ್ಕಾ ,
ದುಷ್ಟ ಯೋಚನೆಗಳಿಂದಲೇ ಕೆರೆ ಬತ್ತಿ ಹೋತೋ ? ಛೆ .. ಕಷ್ಟ ಕಷ್ಟ ..
ಒಳ್ಳೆ ಪೂರಣ .
ಸುತ್ತ ದಾರಿಗೊ ಹತ್ತಿ ಇಳಿವಲೆ
ಹತ್ತು ಮೆಟ್ಳುಗೊ ನೀರ ಮಟ್ಟವೆ
ಬತ್ತಿ ಹೋಯಿದೊ ಮೆಟ್ಟಿ ನೂಕುವ ದುಷ್ಟ ಯೋಚನೆಗೆ
ಸತ್ತೆ ಹೋಕದ ಬಂದು ಬಿದ್ದರೆ
ಕೆತ್ತಿ ಒಸರಿನ ಭಾವಸೆಲೆಯೆಡೆ
ತುತ್ತು ನೀರುದೆ ಪಾಚಿಗಟ್ಟಿರೆ ಎಲ್ಲಿ ಚಿಗುರಿಕ್ಕು?
ಗು೦ಡಿ ತೋಡಿದ ಮೇಲೆ ಗುಡ್ಡೆಯ
ಬ೦ಡೆ ಕಲ್ಲಿನ ಕೆತ್ತಿ ಸುತ್ತಲು
ದ೦ಡೆ ಮೆಟ್ಲಿನ ಕಟ್ಟಿ ನೀರಿನ ನಿಲ್ಲುಸಿದ ಕೆಣಿಯೇ |
ಕ೦ಡರೀ ಕೆರೆ ನ೦ದಿ ಬೆಟ್ಟದ
ಮ೦ಡೆಲಿಪ್ಪದು ಮಕ್ಕೊ ನೋಡಲಿ
ತೊ೦ಡರಿ೦ಗೆಡಿಗಾಗ ಇಳಿವಲೆ ಕೂಪೊದೊಳ್ಳೆಯದೋ ? ||
ಬೆಟ್ಟದ ನಡುಗಣ
ಮೆಟ್ಟಿಲ ಕೆರೆಯಲಿ
ಕಟ್ಟಿದೆ ಕುರೆಜಲ ಪಾಚಿಯಲಿ |
ದುಷ್ಟಜನಗಳ
ಕೆಟ್ಟಮನಸಿಗೆ
ಕಟ್ಟು ಹಾಕಿದ ರೀತಿಯಲಿ ||
ಬೊಳುಂಬು ಮಾವಾ , ಲಾಯಕ ಆಯಿದು . ಸಣ್ಣ ತಿದ್ದುಪಡಿ ಮಾಡಿರೆ ಇನ್ನೂ ಉತ್ತಮ .
ಬೆಟ್ಟದ ನಡುಗಣ
ಮೆಟ್ಟಿಲ ಕೆರೆಯೊಳ
ಕಟ್ಟಿದ ಕುರೆ ಹಾಮಸು ನೀರು |
ದುಷ್ಟಜನ೦ಗಳ
ಕೆಟ್ಟಮನಸ್ಸಿನ
ಕಟ್ಟಿದ ಹಾಂಗೆ ಕಲಂಕುಗಿಡೀ ||
ಊರಿಲೆಲ್ಲೆಡೆ ಕೊರದು ಬಿಟ್ಟವು
ಬೋರುಹಾಕಿಸಿ ಪೂರ ಎಳದವು
ನೀರ ಸೆಲೆಯದು ಭೂಮಿಯಾಳದೆ ಕಮ್ಮಿಯಾತನ್ನೆ |
ನೂರು ಮೆಟ್ಳುಗೊ ನಾಕು ಸುತ್ತಲು
ಬೇರು ಒಣಗಿರೆ ಚೆಟ್ಟಿ ಸೆಸಿಗಳ
ಚೂರು ನೀರದು ಸಾಕೊ ಗೆಡುಗಳ ದಾಹ ಇಂಗುಶುಲೆ ||
ಭಾವಪೂರ್ಣ ಪೂರಣ ಇಂದಿರತ್ತೆ .
ಕಲ್ಯಾಣಿ
ನೀರಿನ ಮಟ್ಟವೆ ತಗ್ಗಿದ
ಕಾರಣ ಕಲ್ಯಾಣಿ ಪಚ್ಚೆ ಯಾಯಿದು ನೋಡೀ
ಊರಿನ ಜೆನಕ್ಕೆ ಕಷ್ಟವೆ
ಕೋರಿ ಕೆಸರಿನ ಹೆರ ಹಾಕಿ ಚೆಂದಕೆ ಮಾಡೀ
ಕ೦ದ ಸಂದೇಶ ಲಾಯಕ ಆಯಿದು ಮಾವ .
ಮೆಟ್ಟಿಲ ಹತ್ತಿದರೆ ಸಿಗುವುದು ವಿಸ್ತಾರ ಪ್ರಪಂಚ
ಇಳಿದರೆ ಸಿಗುವುದು ಜೀವ ಧಾರೆ ನೀರು
ಹತ್ತಲೋ ಇಳಿಯಲೋ ಯೋಚನೆ ಮಾಡುತ್ತಿರೆ
ಕೂಪ ಮಂಡೂಕ ಆಗುವುದು ಕಂಡಿತವೆಂದ !
|| ವಿಚಾರಮಳೆ ||
ಪ್ರಶಾಂತಣ್ಣ ,
ನಿಂಗಳ ಪೂರಣ ಆಸಕ್ತಿದಾಯಕವಾಗಿದ್ದು . ಹವ್ಯಕ ಭಾಷೆಲಿ ಬರವಲೆ ಒಂದು ಪ್ರಯತ್ನ ಮಾಡುವಿರೋ ?
ಬಗ್ಗಿಸಿ ಬೆನ್ನ್ಣ ಸುರಿಸಿ ಹನಿ ಬೆವರು,
ತುಂಬಿದರು ಎಚ್ಚರದಿ ತುಳುಕದಂತೆ ನೀರು,
ಬಂತುಕೊಳವೆ ಬಾವಿ ಹೀರುವ ಯಂತ್ರ,
ಬಳಸಿ ಧಾರಾಳ ಇಳಿಯಿತಿದರ ಆಳ,
ಬೊಬ್ಬೆ ಹೊಡೆವರೀಗ ಮುಟ್ಟಿತಿದುಕೆರೆಯತಳ
ಬಳಿಸಿರಿ ಎಚ್ಚರದಿ ನೀರಿದು ಬಹಳ ವಿರಳ
– ವಿಚಾರಮಳೆ