Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಶರಷಟ್ಪದಿಲಿ ಸಮಸ್ಯೆ : “ಮನ ನೆ೦ಪಿಲಿ ಕೊರಗಿತು ಇರುಳು”
ಯಾವ ಕಾರಣಕ್ಕೆ ಮನ ಮರುಗಿತ್ತು ನೋಡುವ,ಬನ್ನಿ..
” ಮನ ನೆ೦ಪಿಲಿ ಕೊರಗಿತ್ತಿರುಳು” ಹೇಳಿ ಮಾಡಿರೆ ಸರಿ ಆವುತ್ತು ,ಅಣ್ಣ . ತಿದ್ದುಪಡಿಗೆ ಧನ್ಯವಾದ .
ಮಂಜುನಾಥ ಅಣ್ಣನ ಸಂಶಯ ಸರಿ ಇದ್ದು . ಆದರೆ ಹವಿಗನ್ನಡಲ್ಲಿ ಬರವಗ ಭಾಷಾ ಶುದ್ಧಿಯ ಉಳಿಸಿಗೊ೦ಬಲೆ ಅನಿವಾರ್ಯವಾಗಿ ವಿಸಂಧಿಯ ದೋಷ ಹೇಳಿ ಪರಿಗಣಿಸೊದು ಬೇಡ ಹೇಳಿ ಒಪ್ಪಣ್ಣನ ಬೈಲಿಲಿ ತೀರ್ಮಾನ ಮಾಡಿದ್ದು .
‘ಕೊರಗಿತು ಇರುಳು’ ವಿಸಂಧಿ ದೋಷ ಆಗ್ತಿಲ್ಯ? ಅದು ಕೊರಗಿತಿರುಳು ಆಗಡ್ದ ?
ತನುಜೆಯ ಮೇಲೆಯೆ
ಅನುಪಮ ಮಮತೆಯ
ಅನುದಿನ ತೋರ್ಸಿದೆ ಓ ಪಿತನೆ
ಜನಕನು ಅಗಲಿದ
ದಿನದಿಂದಲೆ ಈ
ಮನ ನೆಂಪಿಲಿ ಕೊರಗಿತು ಇರುಳು.
ಭಾರೀ ಲಾಯಕ ಪೂರಣ . ತಪ್ಪಿಲ್ಲೆ.. ಅಭಿನಂದನೆ .
ಒಳ್ಳೆ ಪ್ರಯತ್ನ ರೇವತಿ ಅಕ್ಕಾ.ಬೈಲಿನ ಹಳೆ ಸಮಸ್ಯೆಗೊಕ್ಕೂ ಪೂರಣ ಬರೆಯಿ.
ಜನಕನ ಮುದ್ದಿನ
ತನುಜೆಯು ಆನೀ
ತನಕವು ಬದುಕಿದೆ ನೆಮ್ಮದಿಲಿ
ದಿನ ಕಳುದತ್ತು ಮ
ಸಣ ಮಾಡಿದವೀ
ಮನ ನೆಂಪಿಲಿ ಕೊರಗಿತು ಇರುಳು
ಹೇಳಿ ಮಾಡುಲಕ್ಕು.ಜನಕ, ಮನ ಹೇಳ್ತ ಶಬ್ದಂಗೊ ಪುನರಾವರ್ತನೆ ಆಗಿ ಕವನದ ತೂಕ ರಜ ಕಮ್ಮಿ ಅಪ್ಪಲೆ ಸಾಧ್ಯ ಇದ್ದು.ನಮ್ಮ ಶಬ್ಧ ಭಂಡಾರವನ್ನು ಹೆಚ್ಚು ಮಾಡುಲೆ ಈ ಆದಿಪ್ರಾಸದ ನಿಯಮ ಸಹಕಾರಿ.
ತನಕವು ಕ
ರಘು ಅಣ್ಣ,ಎನ್ನ ಸಣ್ಣ ಪ್ರಯತ್ನಕ್ಕೆ ನಿಂಗ ಎಲ್ಲೊರು ನೀಡಿದ ಪ್ರೋತ್ಸಾಹಕ್ಕೆ ಬಹಳಷ್ಟು ಧನ್ಯವಾದಂಗೊ.
ಇನ್ನೊಂದು ಪ್ರಯತ್ನ, ತಪ್ಪಿದ್ದರೆ ತಿಳಿಶಿಕ್ಕಿ.
ಜನಕನ ಪ್ರೀತಿಯ
ತನುಜೆಯು ಆನೂ.
ಮನ ಅಪ್ಪನ ಮರವಲೆ ಇಲ್ಲೆ
ಜನಕನು ಅಗಲಿದ
ದಿನದಿಂದಲೆ ಈ
ಮನ ನೆಂಪಿಲಿ ಕೊರಗಿತು ಇರುಳು.
ಲಾಯ್ಕ ಆಯಿದು ರೇವತಿ …
ಧನ್ಯವಾದಂಗೊ ಇಂದಿರಕ್ಕ.
ಆರಂಭದ ಸಾಲಿಲಿ ಪ್ರೀತಿಯ ಹೇಳಿ ಬರದರೆ ಸರಿ ಆವ್ತೋ ಅಲ್ಲಾ ನೆಚ್ಚಿನ ಹೇಳಿದರೆ ಸರಿಯೋ?
ಒಳ್ಳೆ ಕಲ್ಪನೆ ರೇವತಿಯಕ್ಕಾ. ಲಾಯಕಾಯಿದು.
ಕನಸಿನ ಲೋಕ
ಮನದನ್ನೆಯ ಮುನಿ-
ಸಿನ ಮಾತುಗಳೇ
ಸಿನೆಮಾ ಧಾರಾವಾಹಿಲಿಯೆ
ಕನಸಿನ ಲೋಕದ
ಮನೆಯುಪ್ಪರಿಗೆಲಿ
ಮನ ನೆಂಪಿಲಿ ಕೊರಗಿತು ಇರುಳು
ಆ ದಿನ ಓದಿರೆ
ಮಿನಿ ಕಾದಂಬರಿ
ಖನಿ ಕಾರಂತರ ಮುಡಿಯ ಗರಿ
ಹನಿ ಕಣ್ಣೀರಿಲಿ
ಚನಿಯನೊ ಆ ಚೋ
ಮನ ನೆಂಪಿಲಿ ಕೊರಗಿತು ಇರುಳು ||
ಸುರುವಾಣ ಶಬ್ದ ಆನಿದ
ಹ. ಹ್ಹಾ.. ಛೋಟಾ ಭೀಮನ ಕಾರ್ಟೂನು ನೋಡದ್ದೆ ಕೊರಗಿದನೋ !
ಮಗನ ಅವಸ್ಥೆ 🙂
ದೆನಿಗೇಳಿರು ಬಾ
ರನು ಹಗಲಿಲಿ ರಜೆ
ದಿನವಿಡೀ ನೋಡುವ ಕಾರ್ಟೂನು
ಮನುಗಿದ ಬೈದರೆ
ಕನಸಿಲು ಆ ಭೀ
ಮನ ನೆಂಪಿಲಿ ಕೊರಗಿತು ಇರುಳು 🙂
*ದಿನವಿಡಿ
ಇನ ಜಾರಿದ ಮೇ
ಲ್ದಿನವೂ ಬಪ್ಪ ಸು
ಜನ ಮಾಯಮವಾಸ್ಯೆಯೊ ಇ೦ದು ?
ಹುಣಿಹುಲ್ಲಿಲಿ ಕ೦
ಬನಿ ಹನಿಗಳೊ ! ಸೋ
ಮನ ನೆ೦ಪಿಲಿ ಕೊರಗಿತೊ ಇರುಳು ?
ಘನ ಉದ್ಯೋಗವು
ಜೆನರಿಂಗಿಲ್ಲದೆ
ಹಣ ಮಾಡಲೆ ಕಟ್ಟುಗು ಮರುಳು |
ಹೆಣ ಬೀಳುಸಿಯೇ
ಮನೆ ದೋಚುತ್ತವು
ಮನ ನೆಂಪಲಿ ಕೊರಗಿತು ಇರುಳು ||
ಅಪ್ಪು ಮಾವಾ , ಎಲ್ಲಾ ಸುಲಾಭಲ್ಲಿ ಪೈಸೆ ಸಂಪಾದನೆ ಆಯೆಕ್ಕು ಹೇಳಿ ಹೊಣೆತ್ತವ್ವೇ ತುಂಬಿಪ್ಪಗ ಮನಸ್ಸು ಕೊರಗದ್ದೆ ಇಕ್ಕೋ ! ಲಾಯ್ಕ ಆಯಿದು .
ಅನುಮಾನಲ್ಲಿಯೆ
ಹನುಮನ ನೋಡಿತು
ದನುಜ ಸ್ತ್ರೀಯರ ಮಧ್ಯ೦ದ
ಮನಸಿನ ಬೇನೆಲಿ
ಜನಕನ ಸುತೆ ರಾ
ಮನ ನೆ೦ಪಿಲಿ ಕೊರಗಿತು ಇರುಳು
ಆಹಾ , ಇಂದಿರತ್ತೆ .. ಎರಡೂ ಭರ್ಜರಿ ಆಯಿದನ್ನೇ ..
ನನೆಗಣೆಯನ ಕ
ಣ್ಣಿನ ಕಿಚ್ಸಿಲಿ ಸು
ಟ್ಟನೆ ರೌದ್ರದಿ ಶಶಿಶೇಖರನೂ |
ಕೊನೆಯಾಗಲು ಪತಿ
ಹನಿಗೂಡಿಯೆ ಕಾ
ಮನ ನೆಂಪಿಲಿ ಕೊರಗಿತು ಇರುಳು ||
ಜನಕನ ಮಗಳಿನ
ಅನುಜನು ಲಕ್ಷ್ಮಣ
ವನದೊಳ ಬಿಟ್ಟಿದ ಚಿಂತೆಯೊಳ |
ಇನಿಯನ ಝಾನ್ಸುತ
ಬನದೊಳ್ ಶ್ರೀರಾ
ಮನ ನೆಂಪಿಲಿ ಕೊರಗಿತು ಇರುಳು ||