Oppanna.com

ಸಮಸ್ಯೆ 115 : “ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ”

ಬರದೋರು :   ಸಂಪಾದಕ°    on   26/03/2016    13 ಒಪ್ಪಂಗೊ

 ಈ ವಾರದ ಸಮಸ್ಯೆ ಚೌಪದಿಲಿ.
ಸಮಸ್ಯೆ :ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ”

ಪ್ರತಿ ಮನೆಲಿ ಕಾ೦ಬ ಈ ಸಮಸ್ಯೆಗೆ ಒ೦ದು ಪರಿಹಾರ ಹುಡುಕ್ಕುವ,ಬನ್ನಿ.

13 thoughts on “ಸಮಸ್ಯೆ 115 : “ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ”

  1. ಹಲ್ಲು ತಿಕ್ಕುವ ಮದಲೆ ಜೊಲ್ಲು ಹರುಶುತ ಹೆರಟು
    ಮೆಲ್ಲ ಪೀಂಕುಸಿ ಪೈಸೆ ಮಗಳ ಪರ್ಸಿಂದ
    ಕಳ್ಳಿನಂಗಡಿ ಕಡಗೆ ನೆಡದತ್ತು ಬಟ್ಯಪ್ಪ
    ಬೆಲ್ಲದಂಡಗೆ ಬಪ್ಪ ಎರುಗಿನಾಂಗೆ ||

  2. ಆಲ್ಲಲ್ಲಿ ಸಭೆ ಮಾಡೊ ರಾಜಕಾರಣಿಗೊಕ್ಕೆ
    ನಾಲಗೆಯ ಮಾತೇ ಸಾಕು, ಮಾತಿನ
    ಮಲ್ಲರಿಪ್ಪ ಕಡೆ ಸೇರುತ್ತವೊಂದಷ್ಟು ಜನ
    ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ.

    1. ಒಳ್ಳೆ ಪ್ರಯತ್ನ ಅಕ್ಕ , ಸಣ್ಣ ತಿದ್ದುಪಡಿ .

      ಅಲ್ಲಲ್ಲಿ ಸಭೆ ಮಾಡ್ತ ರಾಜಕಾರಣಿಗೊಕ್ಕೆ
      ಚೆಲ್ಲುಲಿಪ್ಪದು ಮಾತು ಬ೦ಡವಾಳ
      ಮಲ್ಲ೦ಗೊ ಇಪ್ಪ ಕಡೆ ಸೇರುತ್ತವಷ್ಟು ಜನ
      ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ.

  3. ಎಲ್ಲಿ ನೋಡಿದರಲ್ಲಿ ಕಾ೦ಚಾಣ ಝಣಝಣವು
    ಚೆಲ್ಲಿತ್ತು ಸರಕಾರ ತರತರದ ಭಾಗ್ಯ
    ಗುಲ್ಲು ಮಾಡುತ ಬಕ್ಕು ಸ೦ಚಿ ತು೦ಬುಸಲೆ ಜೆನ
    ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ ||

  4. ಕಲ್ಲಿಡ್ಕಿ ಓಡುಸಲೆ ಎಡಿಯದ್ದ ಮ೦ಗ೦ಗೊ
    ಹಲ್ಲು ಕಿಸಿವದು ನೋಡು ಗೊರಟು ಚೀಪಿ
    ಗೆಲ್ಲುಗಳ ಮೇಲೆಲ್ಲ ಹತ್ತಿ ಸುಳುದವು, ಮನೆಲಿ
    ಬೆಲ್ಲದ೦ಡೆಗೆ ಬಪ್ಪ ಎರುಗಿನಾಂಗೇ ||

  5. ಎರಡು ವಿಭಿನ್ನ ಪೂರಣ೦ಗಳೂ ಭಾರೀ ಲಾಯ್ಕಾಯಿದು ಶೈಲಜಕ್ಕಾ..

  6. ಗೆಲ್ಲ ಹತ್ತಿಯೆ ಕೊಯಿಗು ಜೊಂಕೆ ಜೊಂಕೆಲಿ ನೇಲ್ವ
    ಮೆಲ್ಲಿ ತಿಂಬಲೆ ಬೀಜ, ಮಾವಿನಣ್ಣೂ
    ಎಲ್ಲ ಸೇರುಗು ಬಚ್ಚಿಯಿರುಳು ಅಜ್ಜಿಯ ಬುಡಲಿ
    ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೇ || 🙂

    ಚೆಲ್ಲಿ ತೋಂಕುವ ಪೈಸೆ, ಲೊಟ್ಟೆ ಹೇಳುವ ಬುದ್ಧಿ
    ಕೊಲ್ಲುಗಿಂದಿನ ಜನರ ಬದುಕ ಭಾವ
    ಜೊಲ್ಲು ಅರುಶಿಯೆ ಕಿಸಿಗು ಲಾಭ ಹೊಡವಲೆ ಎಲ್ಲ
    ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೇ ||

  7. ಹಾಂಗೆ-ಹಾಂಗೆ
    ಮಲ್ಲಿಗೆಯ ಹೂಗಿಂಗೆ ಬಪ್ಪ ಹುಳುವಿನ ಹಾಂಗೆ
    ಗಲ್ಲಿ ಗಲ್ಲಿಲಿಯಿಪ್ಪ ಕುಡಿಮನೆಯ ಹಾಂಗೆ
    ಕೊಲ್ಲಿ ರಾಷ್ಟ್ರದ ಹಣವ ಊರಿಂಗೆ ತಂದಾಂಗೆ
    ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ

    1. ಹಾ೦ಗೆ -ಹಾ೦ಗೆ , ಉಪಮೆಗಳ ಚೌಪದಿ ಬಹು ಲಾಯ್ಕಾಯಿದು ಮಾವ .

  8. ಚೆಲ್ಲಿತ್ತು ಬಾನಸುಧೆ ಯಮುನೆನದಿ ತೀರಲ್ಲಿ…..
    ಗೊಲ್ಲ ಬಾಲನ ಕೊಳಲಗಾನಕ್ಕೆ ಕೊಣುದ
    ವೆಲ್ಲ ಗೋಪಿಕೆಗೊ ಕೃಷ್ಣನ ಸುತ್ತ ಮರುಳಾಗಿ
    ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ ||

    1. ಆಹಾ.. ಯಮುನಾತಟದ ನೃತ್ಯ ರೂಪಕ ಕಣ್ಣ ಮುಂದೆ ಕಟ್ಟಿತ್ತು , ಒಳ್ಳೆ ಕಲ್ಪನೆ ಇಂದಿರತ್ತೆ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×