Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ದೊಡ್ಡ ರಜೆ ಮುಗುದು ಶಾಲೆ ಸುರುವಪ್ಪ ಸಮಯಲ್ಲಿ ಭೋಗಷಟ್ಪದಿಯ ಈ ಸಮಸ್ಯೆಗೆ ಪರಿಹಾರ ಹುಡುಕ್ಕುವ.
ಸಾಗು-ಪೂರಿ ಮಾಡಿ ಆಯ್ದು
ಬೇಗ ತಿಂದು ಹೊಟ್ಟೆ ತುಂಬ್ಸು
ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ
ಅಂಗಿ ಹಾಕಿ ತಲೆಯ ಬಾಚು
ಬ್ಯಾಗು ಬೆನ್ನ ಮೇಲೆ ಹಾಕು
ಬಾಗಿಲಿಂಗೆ ಬಂದು ಆನು ಟಾಟ ಮಾಡುವೆ.
ಲಾಯಿಕ ಆಯಿದು ರೇವತಿಯಕ್ಕ 🙂
ಮಕ್ಕಳ ಹೆರಡ್ಸಿ ಶಾಲೆಗೇ ಎಬ್ಬೊದೆ ಒಂದು ದೊಡ್ಡ ಸಾಹಸ , ಲಾಯಕ ಆಯಿದು ವರ್ಣನೆ .
ಬೀಗ ಹಾಕಿ ಪೇಟೆ ಮನೆಗೆ
ತಿಂಗಳೆರಡು ಮಗನ ರಜೆಲಿ
ಜಾಗೆ ತೋಟವಿಪ್ಪ ಊರ ಮನೆಗೆ ಹೋದೆಯ|
ತಾಗಿ ಕೂಗಿ ಬೀಗಿ ಮಾಗಿ
ಬೇಗ ಮುಗುದ ರಜೆಯ ಬೈಯೆ
ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ||
ಹ . ಹಾ .. ರಜೆ ಮುಗುದರೆ ಸಜೆ . ಲಾಯ್ಕಾಯಿದು ಶೈಲಜಕ್ಕ .
ಹಟ ಹಿಡುದ ಮಾಣಿಗೆ
ಕೂಗಿ ತರ್ಕ ಹಿಡುದು ಹೀಂಗೆ
ರಾಗವೆಳೆದ ಬೊಬ್ಬೆ ಕಂಡು
ಕಾಗೆ ಹಾರಿ ಹೋತು ನಿಲ್ಸು ನಿನ್ನ ಆರ್ಭಟೆ |
ಬೇಗಿನೊಳವೆ ಬುತ್ತಿಯಿದ್ದು
ಮೇಗೆ ಸ್ಲೇಟು ಕಡ್ಡಿಯಿದ್ದು
ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ ||
ಹ.ಹಾ . ಬೊಳುಂಬು ಮಾವಾ , ಆರ್ಭಟೆ ನಿ೦ದತ್ತೊ ? ಲಾಯ್ಕ ಆಯಿದು .
ಪಿಳ್ಳೆ ನೆಪ
ಈಗ ಬತ್ತೆ ಮತ್ತೆ ಬತ್ತೆ
ರಾಗ ಎಳೆ ಡ ಅಂತೆ ನೀನು
ಲಾಗ ಸಾಕು ಶಾಲೆಗಿನ್ನು ಹೆರಡು ಬೇಗನೆ
ಸಾಗಿ ಬಂದ ಹಾದಿ ನೋಡು
ಹೋಗಿ ಸೇರೊ ಗುರಿಯ ಕಾಣು
ಬೇಗ ಕಲ್ತು ಬುದ್ಧಿವಂತನಾಗು ಮಾಣಿ ನೀ
ಒಳ್ಳೆ ಉಪದೇಶ ಮಾವ . ರೈಸಿದ್ದು.