Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಅದಿತಿ ಅಕ್ಕ ಕಳುಸಿದ ಈ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ ?
ವಿರಾಮ
———-
ಅರುಣೋದಯವೋ
ವರುಣನ ಮರವೋ
ಹೆರದಿಕೆ ಭಾರೀ ಕೊಶಿಯನ್ನೇ
ಮರಿಗೆಯ ಹೆಜ್ಜೆಯ
ಅರೆಬರೆ ನಕ್ಕಿಯೆ
ಒರಗುಲೆ ಸುರು ಮಾಡಿದವನ್ನೆ
ಅದಿತಿ ದೇವಿಯ ಮಗನ ಉದೆಕಾ
ಲದ ಕಿರಣ ಬೀಳೊಗ ಚಳಿ ಬಿಡುಸಿ
ಯೆದುರು ನೋಡುದು ದೋಸೆ ತಪ್ಪಾ ಮನೆಯೊಡತಿಯನ್ನೊ?I
ಕೆದರಿ ಕೋಪಲಿ ಮನೆಯೊಡೆಯ ಬೈ
ದು ದುರುಗುಟ್ಟಿಯೆ ಕಡೆಗಣಿಸಿದರು
ಸದನ ಪಾಲಕ ನಿನ್ನ ನಿಷ್ಠಗೆ ಸಾಟಿಯಾರಿಕ್ಕು ?
ಎನ್ನ ಕಲ್ಪನೆಲಿ ಮುಗಿಲು ಸೂರ್ಯಂಗೆ ಅಡ್ಡ ಬಂದು ಉದೆಕಾಲದ ಬೆಶಿಲು ಹೋಯಿದು , ಕೆಳಾಣ ಮೂರು ಸಾಲು ಎಲ್ಲಾ ನಾಯಿಗೊಕ್ಕೂ ಅನ್ವಯಿಸುವ ಹಾಂಗೆ .
ಅದಿತಿ ದೇವಿಯ ಮಗನ ಉದೆಕಾ
ಲದ ಕಿರಣ ಬೀಳೊಗ ಚಳಿ ಬಿಡುಸಿ
ಯೆದುರು ನೋಡುದು ದೋಸೆ ತಪ್ಪಾ ಮನೆಯೊಡತಿಯನ್ನೊ?I
ಕೆದರಿ ಕೋಪಲಿ ಮನೆಯೊಡೆಯ ಬೈ
ದು ದುರುಗುಟ್ಟಿಯೆ ಕಡೆಗಣಿಸಿದರು
ಸದನ ಪಾಲಕ ನಿನ್ನ ನಿಷ್ಠಗೆ ಸಾಟಿಯಾರಿಕ್ಕು ?
ಎನ್ನ ಕಲ್ಪನೆಲಿ ಮುಗಿಲು ಸೂರ್ಯಂಗೆ ಅಡ್ಡ ಬಂದು ಉದೆಕಾಲದ ಬೆಶಿಲು ಹೋಯಿದು , ಕೆಳಾಣ ಮೂರು ಸಾಲು ಎಲ್ಲಾ ನಾಯಿಗೊಕ್ಕೂ ಅನ್ವಯಿಸುವ ಹಾಂಗೆ .
ಕಳಕಳಿಯ ಕುನ್ನಿಗೊ
——————-
ಬೆಶಿಯಡಿಲಿ,ಮೇಗೆ ತಂಪಿನ
ಕೊಶಿಯ ಹವೆಲಿ ಮಂಪರಿಲ್ಲಿ ಮನುಗಿದ್ದವು ನಾ-
ಯಿ ಶಿಶುಗೊ ಗತ್ತಿಲಿ ಸಂಕವ-
ನೆ ಶಯನ ಮಾಡಿ ಕಳಕಳದ ಕವಚವ ಹೊದ್ದೂ
(ಶಯನ=ಮಂಚ)