Oppanna.com

ಸಮಸ್ಯೆ 80 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   26/10/2014    18 ಒಪ್ಪಂಗೊ

ಪವನಜ ಮಾವನ ಕ್ಯಾಮರಾ ಕಣ್ಣು ಎಷ್ಟು ಸೂಕ್ಷ್ಮ ಹೇಳಿ ಒ೦ದರಿ ನೋಡಿ.

ಹೊಟ್ಟೆತು೦ಬುಸುವ ಪ್ರಯತ್ನದ ಈ ಪಟಕ್ಕೆ ಸೂಕ್ತ ಪದ್ಯ ಬರವನೋ?Cow-and-Calf

18 thoughts on “ಸಮಸ್ಯೆ 80 : ಚಿತ್ರಕ್ಕೆ ಪದ್ಯ

  1. ಮಾತ್ರೆ ಛಂದಸ್ಸುಗಳ ಹಂಗಿಲ್ಲದ್ದೆ ಗೀಚಿದ್ದು ಅಷ್ಟೆ.

    ಪೇಟೆ ಕೊಡಿಯಾ ಜಾಗೆ ಕೊಂಡು
    ಮಾಟವಾದ ಮನೆಯ ಕಟ್ಟಿ ಕೈ
    ತೋಟ ಮಾಡುಗು ಮಾರ್ಗ ಕರೆಲಿ ನಡವ ದಾರಿಯ ಕಬಳಿಸಿ

    ಕಾಲಿ ಸೈಟಿನ ಆಚಿಗೀಚಿಗೆ
    ಬೇಲಿಯಿರದಾ ಜಾಗೆ ನೋಡಿ
    ಚೀಲ ತುಂಬುಸಿ ತಂದು ಸೊರುಗುಗು ಎಲ್ಲ ಮನೆಗಳ ತ್ಯಾಜ್ಯವ

    ಬೊಬ್ಬೆ ಹಾಕುವ ನಾಯಿಗೊಕ್ಕೆ
    ಗಬ್ಬು ನಾರುವ ಕಸವು ರಾಶಿಯು
    ಹಬ್ಬವಕ್ಕು ದಿನವುದಿನವೂ ಕಚ್ಚಿ ಎಳದೂ ತಿಂಬಗ

    ಹಾಲು ಕುಡುಶುವ ಹಿತವು ಅಬ್ಬೆಗೆ
    ಮಲೆಯ ಚೀಪುವ ಸುಖವು ಕಂಜಿಗೆ
    ಬೆಲೆಯ ಕಟ್ಟುಲೆ ಎಡಿಯ ಇಲ್ಲಿಯ ಅಬ್ಬೆ- ಮಕ್ಕಳ ಒಲುಮೆಗೆ ||

    1. ಪೇಟೆಯ ಸಮಸ್ಯೆ, ಅಬ್ಬೆಗೆ ಹಸುಗೂಸುಗಳ ಮೇಲೆ ಇಪ್ಪ ವಾತ್ಸಲ್ಯ ; ಅಬ್ಬೆಗೆ ಹಾಲು ಕೊಡುವದರಿಂದ -ಮಕ್ಕೊಗೆ ಅಬ್ಬೆಯ ಮಮತೆಯ ಸೇವಿಸುವದರಿಂದ ಅಪ್ಪ ಆನಂದದ ಚಿತ್ರಣ ಗೀಚಿದ ಕವನ ಆದರೂ ಅರ್ಥಪೂರ್ಣವಾಗಿದ್ದು.

  2. ಮೇವ ನೋಟ ಸರ್ತ ಹಸಿರು
    ಭಾವ ದಿಟ್ಟ ಕುತ್ತ ಕೊಂಬು
    ಸೀವು ಉಣುಶಿ ನಿಂದದಾನು ಬೆನ್ನುತಿರುಗಿಸಿ
    ಸಾವ ತಪ್ಪ ನಾರಿ ಕೊಳವ
    ಜೀವದಾಶೆಗುಂಬ ಕಸವು
    ಕಾವ ನಾಯಿಪಾಡಿಗಿಲ್ಲಿ ನೀನು ತಾನೆ ಹೊಣೆ?

    1. ಶೈಲಜಕ್ಕಾ ,
      ಒಳ್ಳೆ ಪ್ರಯತ್ನ .ಆದರೂ , ಕಡೇ ಸಾಲು ಪೂರ್ತಿ ಅರ್ಥ ಕೊಡ್ತಾ ಇಲ್ಲೆ.ಮಾತ್ರೆ ಲೆಕ್ಕ ಸರಿ ಇದ್ದರೂ ಕಡೇ೦ಗೆ ಒಂದು ಅಕ್ಷರ ಹೆಚ್ಚು ಅನುಸುತ್ತು .

      1. ಅಪ್ಪಲ್ಲದಾ…. ಹಿಂಗೆ ಬದಲ್ಸುತ್ತೆ
        ಮೇವ ನೋಟ ಸರ್ತ ಹಸಿರು
        ಭಾವ ದಿಟ್ಟ ಕುತ್ತ ಕೊಂಬು
        ಸೀವು ಉಣುಶಿ ನಿಂದದಾನು ಬೆನ್ನುತಿರುಗಿಸಿ
        ಸಾವ ತಪ್ಪ ನಾರಿ ಕೊಳವ
        ಜೀವದಾಶೆಗುಂಬ ಕಸವು
        ಕಾವ ನಾಯಿಪಾಡು ನೋಡ ದೂರ ನಿಂದವ|

  3. ಹೊಟ್ಟು ತಿಂದರು ಹಾಲು ಕುಡುಸುಗು
    ಹೊಟ್ಟೆ ತುಂಬುಲೆ ತನ್ನ ಕಂಜಿಗೆ
    ಹಟ್ಟಿ ಬಿಟ್ಟರು ಮಮತೆ ಬಿಡದದ ಅಬ್ಬೆ ಮಕ್ಕಳನೂ |
    ಕೆಟ್ಟ ನಾತದ ಕಸವು ತೊಟ್ಟಿಲಿ
    ಬಿಟ್ಟ ಅಗುಳಿನ ಹುಡುಕಿ ತಿಂಬಲೆ
    ಪಟ್ಟ ಪಾಡದು ನಾಯಿಬಾಳಿನ ದೊಡ್ಡ ದುರವಸ್ಥೆ ||

  4. ನಾಯಿಯ ಅಭಿಯಾನ

    ಮೋರಿಯಾಚಿಕೆಯೊ ಮಾರ್ಗದೀಚಿಕೆಯೊ ಸೊಕ್ಕಿ
    ಆರು ತಿಂದೊಳುದು ಇಡ್ಕಿದರು ಎಂಗೊಗಕ್ಕು I
    ಕೇರಿ ದಾರಿಲಿದೆ ಹಾದಿ ಬೀದಿಲಿದೆ ಬಂದು
    ಸಾರಿ ಹೇಳುವೆಯೊ° ನಕ್ಕಿಯೆ ಸ್ವಚ್ಹವಂದು II

    1. ಭಾಗ್ಯಕ್ಕ ಸಣ್ಣ ತಿದ್ದುಪಡಿ .. ಎರಡು ಪೂರಣ0ಗಳೂ ಲಾಯ್ಕಿದ್ದು .

      ಮೋರಿಯಾಚಿಕೆ ಮಾರ್ಗದೀಚಿಕೆಯೊ ಸೊಕ್ಕಿ
      ಆರು ತಿಂದೊಳುದು ಇಡ್ಕಿರು ಎಂಗೊ ಮುಕ್ಕಿ I
      ಕೇರಿ ದಾರಿಯೊ ಹಾದಿ ಬೀದಿಲಿದೆ ಬಂದು
      ಸಾರಿ ಹೇಳುವೆಯೊ° ನಕ್ಕಿಯೆ ಸ್ವಚ್ಹವಂದು

      1. ಅಣ್ಣ ,ನಿಂಗೊ ಅಂತ್ಯ ಪ್ರಾಸ ಸರಿ ಮಾಡಿದ್ದು ಒಳ್ಳೆದಾಯಿದು . ಧನ್ಯವಾದ . ಆದರೆ ಅದರ ಬೇರೆ ದಿಕ್ಕೆ ಬದಲಿಸಿದ್ದು ಯಾವ ರೀತಿಲಿ ಹೇಳಿ ಎನಗೆ ಅರ್ಥ ಆಯಿದಿಲ್ಲೆ . ಉದಾ : ದಾರಿಯೊ ಹಾದಿ ಬೀದಿಲಿದೆ ,

        ನಮ್ಮ ಭಾಷೆಲಿ ಅಂಶ ಗಣ ಛಂದಸ್ಸಿಲಿ ಬೈಲಿಲಿ ಪದ್ಯ ಬಂದದು ಎನಗೆ ನೆ೦ಪಿಲ್ಲೆ . ಹಾಂಗೆ ಅಂಶ ಗಣ+ಮಾತ್ರಗಣ (೩+೫+೫+೩+೩) ವಿನ್ಯಾಸವಿಪ್ಪ ತೆಟಗೀತಿಲಿ ಬರವಲೆ ಹೆರಟದು . ಅದು ಸುರುವಾಣ ವಿಷ್ಣು ಗಣದ ವಿನ್ಯಾಸ ಬದಲಿ ಎಲ್ಲಾ ಪಾದಲ್ಲಿಯೂ ರುದ್ರ ಗಣ ಆಯಿದು .ಅದು ಇಲ್ಲಿ ಹಾಕಿದ ಮತ್ತೆ ಗೊಂತಾತು . ಎನ್ನ ಪುಣ್ಯಕ್ಕೆ ನಿನ್ನೆ ಇಲ್ಲಿ ”ತೇಟಗೀತಿ” ಹೇಳಿ ಬರವಲೂ ಮರದೇ ಹೋಯಿದು :-).ಈ ರೀತಿಯ ಛಂದಸ್ಸು ಇದ್ದೋ ಇಲ್ಲೆಯೋ ಹೇಳಿ ಎನಗೆ ಗೊಂತಿಲ್ಲೆ . ಆನು ಬರದ ೪ ಪಾದಸರಿ ಅಪ್ಪಲೆ ನಿಂಗೊ ತಿದ್ದಿದ ಅಂತ್ಯ ಪ್ರಾಸ ವನ್ನೂ ಸೇರುಸಿ ಸಣ್ಣ ವ್ಯತ್ಯಾಸ ಮಾಡಿ ಈ ರೀತಿ ಬರೆತ್ತೆ —.

        ಬ್ರಹ್ಮ್ಹI ರುದ್ರ I ವಿಷ್ಣು I ಬ್ರಹ್ಮ I ಬ್ರಹ್ಮ
        ೩ I ೫ I ೫ I ೩ I ೩

        ನಾಯಿಯ ಅಭಿಯಾನ

        ಮೋರಿಯಾಚಿಕೆಯೊ ಮಾರ್ಗದೀಚಿಕೆಯೊ ಸೊಕ್ಕಿ
        ಆರು ತಿಂದೊಳುದು ಇಡ್ಕಿರೂ ಎಂಗೊ ಮುಕ್ಕಿI
        ಕೇರಿ ದಾರಿಲಿದೆ ಹಾದಿ ಬೀದಿಲಿದೆ ಬಂದು
        ಸಾರಿ ಹೇಳುವೆಯೊ° ನಕ್ಕಿಯೆ ಸ್ವಚ್ಹವಂದು II

        ಬೀದಿ ನಾಯಿಗಳ ದಯನೀಯ ಸ್ಥಿತಿಯ ಅದರ ಹೊಡೆಂದ ಧನಾತ್ಮಕವಾಗಿ ತೆಕ್ಕೊಂಡು ಅದರ ಮನುಷ್ಯರಿ೦ಗೆ ನಾಟುಲೆ ಹೇಳಿದ್ದು – ಮನುಷ್ಯರಿ೦ಗೆ ಪರಿಸರವ ಸ್ಚ್ವಚ್ಚ ಮಡುಗುವ ಬುದ್ಧಿ ನಾಯಿಯಷ್ಟೂ ಇಲ್ಲೆ ಹೇಳಿ ಅದರ ಅರ್ಥ

        1. ಒಂದು ಕಥೆ :—
          ಒಂದು ಸರ್ತಿ ಬ್ರಹ್ಮ ದೇವರು ಒಂದು ಪ್ರಾಣಿಯ ಸೃಷ್ಟಿ ಮಾಡಿ ಈ ಪ್ರಾಣಿಗೆ ಎಂತ ಹೆಸರು ಮಡುಗುದು ಹೇಳಿ ಚಿಂತೆ ಮಾಡಿಗೊಂದಿರುತ್ತ . ಚಿಂತೆಯ ಎಡೆಲಿ ನಾರಾಯಣ ದೇವರತ್ತರೂ , ಈಶ್ವರ ದೇವರತ್ತರೂ ಸಮಾಲೋಚನೆ ಮಾಡಿಯೇ ಹೆಸರು ಮಡುಗುಲಕ್ಕು ಹೇಳಿ ಆಲೋಚನೆ ಬತ್ತು . ಅವಿಬ್ರುದೆ ಇದೆಂತ ದೊಡ್ದ ಚಿಂತೆ ಮಾಡುವ ವಿಷಯವೇ ಅಲ್ಲ . ಎಂಗಳ ಇಬ್ರ ಹೆಸರಿನ ಸುರುವಾಣ ಅಕ್ಷರ ಸೇರುಸಿ ಮಡುಗು ಹೇಳಿ ಸಲಹೆ ಕೊಟ್ಟವು . ಹಾಂಗೆ ಚಿತ್ರಲ್ಲಿ ಕಾಂಬ ೩ ಪ್ರಾಣಿಗಳ ಜಾತಿಗೆ ”ನಾಯಿ ” ಹೇಳಿ ಹೆಸರು ಬಂತಡ .

          ಆನು ಬರದ ಪದ್ಯದ ಸ್ಥಿತಿದೆ ಹಾಂಗೆ ಹೆಸರಿಲ್ಲದ ಜಾತಿಯೋ ಹೇಳಿ ಎನಗೊಂದು ಚಿಂತೆ . ಪರಿಹಾರ ಇದ್ದೋ?

        2. ಭಾಗ್ಯಕ್ಕ ,
          ಈ ಲೆಕ್ಕಾಚಾರ ನೋಡದ್ದೆ ಚೌಪದಿ೦ದ ಮಾತ್ರೆ ಹೆಚ್ಚು ಕಂಡು ಸರಿ ಮಾಡಿದ್ದು . ಅಂಶ ಛಂದಸ್ಸು ಎನಗೆ ಸರಿ ಹಿಡಿತ ಸಿಕ್ಕಿದ್ದಿಲ್ಲೆ . ಒಂದರಿ ಪುಸ್ತಕ ನೋಡಿ ಹೇಳುತ್ತೆ .

  5. ಬ೦ಧನವಿಲ್ಲದ ಅಬ್ಬಗೆ ನಂದನ
    ಕಂದನ ಪರುಷವೆ ಹರುಷದ ಬಂಧನ I
    ನಿಂದರೆ ಚಿಂತನ ಬಾಯಿಲಿ ಮಂಥನ
    ಹೊಂದಿದ ಕಂದನ ಬೆಳೆಶುಲೆ ಇಂಧನ II

    ಬಂಧನವಿಲ್ಲದ =ಬಳ್ಳಿಲಿ ಕಟ್ಟಿ ಹಾಕದ್ದ , ನಂದನ =ಮಗ°
    ಬಂಧನ(ಎರಡನೇದು) =ತಡೆ
    ಪರುಷ =ಸ್ಪರ್ಷ
    ಮಂಥನ =ಕಾಯಿ ಕಡೆತ್ತಾ /ಮೆಲುಕು ಹಾಕುತ್ತಾ ಇಪ್ಪದಕ್ಕೆ

    ರಗಳೆ ಮಾಡುವ ಕವಿ(ಯತ್ರಿ)ಯ ರಗಳೆ ಪದ್ಯ 🙂

  6. ಪಾಕಶಾಲೆಯ ಸ೦ಚಿ ರಾಶಿಲಿ ಸ್ವಾಗತಕ್ಕಿದ ನಿ೦ದಿದೆ I
    ನಾಕು ಮಾರ್ಗವು ಸೇರುವಲ್ಲಿಗೆ ಬನ್ನಿ ಆತಿದ ವಾಯಿದೆ I
    ನಾಕಲೋಕವ ಸೇರಿಗೊ೦ಡಿದವನ್ನೆ ನಮ್ಮಯ ಬ೦ಧುಗೊ I
    ಕಾಕ ಸೈನ್ಯವ ಕೂಡಿ ಹಾರಿಯೆ ಬ೦ದರೇ ಕತೆ ಸೋಲುಗೊ ? II

    ಇಲ್ಲಿ ಈ ನೆಡು ದಾರಿಗೆ೦ತಗೆ ಬ೦ದವೋ ದನ ಕ೦ಜಿಗೊ I
    ಚೆಲ್ಲಿ ಬಿದ್ದಿದು ಹೆಜ್ಜೆ ಗೊಜ್ಜಿಗೊ ಓಡಿ ಬ೦ದಿವು ನು೦ಗುಗೊ? I
    ಹುಲ್ಲು ಕ೦ಡಿದು ಸದ್ಯ ಹಾ೦ಗೆಯೆ ರಜ್ಜ ಹೊತ್ತದು ನಿಲ್ಲಲಿ I
    ಮೆಲ್ಲ ಮೆಲ್ಲನೆ ಹಾಲ ಕ೦ಜಿಗೆ ಕೊಟ್ಟು ನೆಮ್ಮದಿ ಹೊ೦ದಲಿ II

  7. ಅಬ್ಬೆಯೊಲವು
    ಅಬ್ಬೆಯೊಲವಿಂಗೆ ಮಾದರಿ
    ತಬ್ಬಲಿ ನೀನಲ್ಲ ಹೇಳಿ ಕುಡುಶುಗು ಹಾಲೂ
    ನಿಬ್ಬೆರಗಾಗಿಯೆ ನಿಲ್ಲೆಡಿ
    ಬೊಬ್ಬೆ ಹೊಡವ ನಾಯಿಗೊಕ್ಕೆ ಬುದ್ಧಿಯೆ ಇಲ್ಲೇ

  8. ಚತುಷ್ಪಥದ ಮಧ್ಯೆ
    ಅಮೃತವನ್ನೀವ ಗೋವು!
    ದಾರಿ ಕರೆಲ್ಲಿ ಸಿಕ್ಕಸಿಕ್ಕಲ್ಲಿ
    ಕಸವನ್ನೆಸೆವ ನಾವು!!

    1. ನಾಲ್ಕು ಮಾರ್ಗ ಸೇರುವಲ್ಲಿ ಚೌಪದಿ .. ಲಾಯಕ ಆಯಿದು ಮಹೇಶಣ್ಣ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×