Oppanna.com

ಸಮಸ್ಯೆ 92 : ” ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು”

ಬರದೋರು :   ಸಂಪಾದಕ°    on   21/03/2015    10 ಒಪ್ಪಂಗೊ

ಪರೀಕ್ಷೆಯ ತಲೆಬೆಶಿ ಹಗುರ ಆಗ್ಯೊ೦ಡು ಬ೦ದಪ್ಪಗ ಈ ವಾರದ ಸಮಸ್ಯೆಗೆ ಪರಿಹಾರವೂ ಸಿಕ್ಕುಗು..

ಸಮಸ್ಯೆ : ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು

ಪರಿವರ್ಧಿನಿ ಷಟ್ಪದಿಯ ಮಾತ್ರಾಗಣ ನೆ೦ಪಿದ್ದೊ?ಇದಾ, ಇಲ್ಲಿದ್ದು .  https://oppanna.com/?p=30081

 

10 thoughts on “ಸಮಸ್ಯೆ 92 : ” ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು”

  1. ನಿಜ ಹೇಳಿರೆ ನಂಬುವಿರೋ ಸಾಕೀ
    ಸಜೆ ಮುಗುದತ್ತೀ ವರುಷದ ಶಾಲೆಯ
    ರಜ ದಿನ ಮರದರೆ ಸುಖ ಹೇಳಿಯೆ ಹೆರಟದು ನಮ್ಮೂರಿಂಗೆ I
    ಅಜನೆಲಿ ನೋಡಿದರೂ ಗೊಂತಪ್ಪಲೆ
    ವಜಯವೆ ಬದಲಿದ್ದೀ ಜಾಗೆದು ದೇ
    ರಜೆ ಹತ್ತರೆ ಬಂತಿನ್ನಜ್ಜನ ಮನೆ ದಾರಿಯ ನೆಂಪಕ್ಕುII

  2. ಕೊಡೆಯಾಲಲ್ಲಿ ಅಷ್ಟು ಸೆಕೆ ಇದ್ದೋ ! ತುಪ್ಪದ ಹೆಜ್ಜೆಗೆ ಕುಜುವೆಯ ತಾಳು .. ಹಪ್ಪಳ ಸೆ೦ಡಗೆ ಬಗೆ ಬಗೆ ಸಾರು .. ಹು..ಶೈಲಜಕ್ಕ ಕೊದಿ ಬರುಸಿದ್ದೇ ..

  3. ಒಂದೆರಡು ಕಡೆ ತಪ್ಪಾದ ಮಾತ್ರೆ ಸರಿಪಡಿಸಿದ್ದೆಕಜೆ ಭಾವಂಗಿದ ಕೊಡೆಯಾಲದ ಸೆಖೆ
    ಗೆಜಳಿರೆ ಶಾಲೆಯ ಸಮಯದೆಡಕ್ಕಿಲೆ
     ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು
    ಕುಜುವೆಯ ತಾಳಿದ ತುಪ್ಪದ ಹೆಜ್ಜೆಗೆ
    ಬಜವಿಲಿ ಹಣ್ಣುಗೊ ಮಿಜುಳಿದ ಹಾಂಗೆಯೊ
    ಮಜಲಿನ ಕನಸುಗೊ ಸುಮ್ಮನೆ ಮಾಣಿಯ ಕೊದಿ ಕೊದಿ ಬರುಸಿತ್ತೊ ?

  4. ಕಜೆ ಭಾವಂಗಿದ ಕೊಡೆಯಾಲದ ಸೆಖೆ
    ಗೆಜಳಿರೆ ಓದುವ ಸಮಯದೆಡಕ್ಕಿಲಿ
     ರಜೆ ಹತ್ತರೆ ಬ೦ತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು
    ಕುಜುವೆಯ ತಾಳಿದ ತುಪ್ಪದ ಹೆಜ್ಜೆಗೆ
    ಬಜವಿಲಿ ಹಣ್ಣುಗೊ ಮಿಜುಳಿದ ಹಾಂಗೆಯೊ
    ಮಜಲಿನ ಕನಸದು ಕಲಿತ್ತ ಮಾಣಿಯ ಕೊದಿ ಕೊದಿ ಬರುಸಿತ್ತೊ ? 🙂 🙂

  5. ಅಜಯನ ತೋಟದ ಹೊಳೆಕರೆಲಿಪ್ಪಾ
    ಕೊಜರಿನ ಕಣಿಯೊಳ ಮೀನಿನ ಹಿಡಿವಲೆ
    ರಜೆ ಹತ್ತರೆ ಬಂತಿನ್ನಜ್ಜನ ಮನೆ ದಾರಿಯ ನೆ೦ಪಕ್ಕು I
    ಅಜಿತನು ಬಂದರೆಯಗಳಿನಕರೆ ಹುಳು
    ಮಿಜುಳುವ ಮರದಾ ಮಾವಿನ ಹಣ್ಣಿನ
    ಹಜೆ ಹಜೆ ಬೀಳೊಗ ಹೆರ್ಕಿಯೆ ಬೆತ್ತದ ಕುರ್ವೆಲಿ ಕೂಡೆಕ್ಕು II
    ಕೊಜರುಕಣಿ = ಮೊಲ೦ಪಿನ ಕಣಿ

    1. ರಜೆಲಿ ಅಜ್ಜನಮನೆಲಿ ಮಾಡಿದ ಲೂಟಿಗೊ,ಆಡಿದ ನೆನಪು ಮತ್ತೆ ಹಸುರಾತು..ಒಳ್ಳೆ ಪೂರಣ ಭಾಗ್ಯಕ್ಕ.

  6. ರಜೆಲಿ ಮಜಾ
    ಸಜೆಯ ದಿನಂಗಳ ದೂರಕೆ ಅಟ್ಟುಸಿ
    ಗಜಿಬಿಜಿ ಪರಿಸರ ಸದ್ಯಕ್ಕೆ ಮರದು
    ರಜೆ ಹತ್ತರೆ ಬಂತಿನ್ನಜ್ಜನ ಮನೆ ದಾರಿಯ ನೆಂಪ ಕ್ಕು
    ರಜರಜ ಲೂಟಿಯ ಮಾಡಿರೆ ಬಯ್ಯವು
    ಬಿಜಿಬಿಜಿ ನೆಲಲಿಯೆ ಜಾರಿಯೆ ಬೀಳುಗು
    ಭಜನೆಯ ಹಾಡಿನ ಕಲ್ತವು ಹೇಳುಗು ಮೂರ್ಸಂಧಿಯ ಹೊತ್ತು

    1. ರಜೆಲಿ ಮಾಡಿದ್ದೆಲ್ಲಾ ರಜ ರಜ ಲೂಟಿಯೆ,ಅಲ್ಲದೊ ಮಾವ ? ರೈಸಿದ್ದು.

  7. ಮಜಬೂತಿನ ಚಳಿಯೂರಿನ ತಂಪಿಲಿ
    ಮಜಮಾಡುಲೆ ಚಿಂತನ ಹೆರಟರುದೇ
    ರಜೆ ಹತ್ತರೆ ಬಂತಿನ್ನಜ್ಜನಮನೆ ದಾರಿಯ ನೆಂಪಕ್ಕು |
    ಕುಜುವೆಯ ಪೋಡಿಯ ಮಾಡಿದರಜ್ಜಿಯು
    ಬಜಕೂಡ್ಳಿನ ಜಾತ್ರೆಲಿಯಾ ಗೋಳಿಯ
    ಬಜೆಯದು ಸಿಕ್ಕಿರೆ ಚೇತನಜತೆ ತಿಂಬಗ ರುಚಿ ಲಾಯ್ಕ್ಕಿಕ್ಕು ||

    1. ಹ.ಹಾ.. ಲಾಯ್ಕಾಯಿದು ಇ೦ದಿರತ್ತೆ.
      ಚಳಿಯೂರಿ೦ಗೆ ಹೋಗಿ ಬ೦ದವಕ್ಕೆ ಅಜ್ಜನ ಮನೆಯ ಜಪ ಸುರು ಆಯಿದು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×