Oppanna.com

ಸಮಸ್ಯೆ 94 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   25/04/2015    7 ಒಪ್ಪಂಗೊ

ಈ ವಾರ ಒ೦ದು ಹೊಸ ಚಿತ್ರ , ಆಮೆ-ಮೊಲದ ಸ್ಪರ್ಧೆಯ ಹಾ೦ಗೆ ಆನೆ-ಬೈಕು ಹೆರಟದೊ?
ಪದ್ಯ ಬರವಲೆ ಸುರು ಮಾಡುವ° ..

gaja vaahana

7 thoughts on “ಸಮಸ್ಯೆ 94 : ಚಿತ್ರಕ್ಕೆ ಪದ್ಯ

  1. ಕಾಲಕೆ ತಕ್ಕಿತ ಕೋಲವ ಮಾಡುಲೆ
    ಮಾಲಿಲಿ ಸುತ್ತುವ ಹುಡುಗರ ನೋಡಿತು
    ಬೀಲವ ಆಡ್ಸುಲೆ ಪಾರ್ಕಿಲಿ ಸೊಂಡಿಲ ನೆಗ್ಗಿತು ಗಜರಾಜ |
    ಕಾಲಿನ ಬುಡದೊಳ ನಿಲ್ಸಿದ ಬೈಕಿನ
    ಮೇಲೆಯೆ ಆನೆಯು ಹತ್ತುಲೆ ಹೆರಟಿಕಿ
    ಕಾಲಿನ ನೆಗ್ಗಿಯೆ ಮಡುಗಿರೆ ಬೈಕದು ಅಕ್ಕದ ಅಪ್ಪಚ್ಚೀ ||

    1. ಖಂಡಿತಾ, ಬೈಕು ಅಪ್ಪಚ್ಚಿ ಅಪ್ಪದೆ.

  2. ಆನೆ ಪದತಲಕ್ಕೆ ಬೈಕು ಬಾಗಿ ನಿಂದುದೋ?
    ಗಜ ಶಕ್ತಿ ಎನಗೆ ನೀಡು ಎಂಬೊ ಭಾವವೋ?
    ಪ್ರಕೃತಿ- ಮನುಜ ಸೃಷ್ಟಿಯೊಳಗೆ ಸ್ಪರ್ಧೆ ಎಂತಕೆ?
    ಹೊಂದಿಗೊಂಬ ಭಾವ ಸಾಕು ಸಾಮರಸ್ಯಕೆ.

    1. ತುಂಬ ಒಳ್ಳೆ ಕಲ್ಪನೆ. ಅಕೇರಿಯಾಣ ಎರಡು ಸಾಲಿಲಿಪ್ಪ ಸಂದೇಶ ಒಳ್ಳೆದಾಯಿದು.

    2. ರೇವತಿ ಅಕ್ಕಂಗೆ ಸ್ವಾಗತ . ಗಜನಮನ ಒಳ್ಳೆ ಕಲ್ಪನೆ .
      ಹೀ೦ಗೆಯೇ ಬೈಲಿಲಿ ಇಪ್ಪ ಎಲ್ಲಾ ಸಮಸ್ಯೆಗೊಕ್ಕೂ ಒಂದೊಂದು ಕವನ ಬರೆಯಿ ಹೇಳಿ ವಿನಂತಿ .

  3. ಹೋಲಿಕೆ
    ಆನೆ ನೆಡ ದ್ದದು ಪಥವೇ
    ನೀನೆನಗೆ ಸರಿಸಮವಲ್ಲ ತಿಳಿ ಓ ರಥವೇ
    ಮಾನಕೆ ಹೋಲಿಕೆ ಆನೆಯೆ
    ಗಾನಕೆ ಕೋಗಿಲೆಯ ಹೋಲಿಕೆಯ ಹಾಂಗೆಯಿದೂ

    1. ಹೋಲಿಕೆ ಅರ್ಥಗರ್ಭಿತ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×