Oppanna.com

ಸಮಸ್ಯೆ 96 : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ

ಬರದೋರು :   ಸಂಪಾದಕ°    on   16/05/2015    19 ಒಪ್ಪಂಗೊ

ಈ ವಾರದ ಸಮಸ್ಯೆ : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ

ಕೆಲವು ವಾರದ ಹಿ೦ದೆ ಭಾಗ್ಯಕ್ಕ ” ವನಮ೦ಜರಿ” ಹೇಳ್ತ ಒ೦ದು ಹೊಸ ಛ೦ದಸ್ಸಿನ ಬೈಲಿ೦ಗೆ ಪರಿಚಯ ಮಾಡಿದ್ದವು,ನೆ೦ಪಿದ್ದೊ ?
ಈ ಛ೦ದಸ್ಸಿನ ನಡೆ ಹೀ೦ಗಿದ್ದು – ನಾನನ ನಾನನ ನಾನನ ನಾನನ ನಾನನ ನಾನನನಾ
ಈ ವಾರ ಪ್ರಕೃತಿಯ ವರ್ಣನೆಯ ಒಟ್ಟಿ೦ಗೆ ಈ ಛ೦ದಸ್ಸಿನ ಪ್ರಯೋಗ ಮಾಡುವ°. ಸಮಸ್ಯೆಗೇ ಅ೦ಟಿ ಪ್ರಯತ್ನ ಮಾಡೆಕ್ಕು ಹೇಳ್ತ ನಿರ್ಬ೦ಧ ಇಲ್ಲೆ. ಹೊಸ ಹೊಸ ಪ್ರಯೋಗ೦ಗೊಕ್ಕೆ ಸ್ವಾಗತ.

 

19 thoughts on “ಸಮಸ್ಯೆ 96 : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ

  1. ಭಾಗ್ಯಕ್ಕ,ನಮಸ್ಕಾರಂಗೊ. ಖಂಡಿತಾ ಬೇಜಾರಿಲ್ಲೆ.ವಿಷಯ ತಿಳಿಶಿದ್ದಕ್ಕೆ ಧನ್ಯವಾದಂಗೊ.ಎನಗೆ ಅದು ಗೊಂತಿತ್ತಿಲ್ಲೆ.ಇನ್ನು ಮುಂದೆ ಹಾಂಗೆ ಪ್ರಯತ್ನ ಮಾಡ್ತೆ.

    1. ನಿಂಗಳ ಉತ್ತರ ಓದಿ ಖೊಶಿ ಆತು.

  2. ರಭಸಲಿ ಬೀಸುವ ಗಾಳಿಯು ಭರ ಭರ
    ಕಪ್ಪರ ಕಟ್ಟಿದ ಮೋಡವೇ ಚೆಪ್ಪರ
    ಗುಡು ಗುಡು ಗುಡು ಗುಡು ಗುಡುಗೇ ತಾಳ
    ಚಟ ಚಟ ಚಟ ಚಟ ಸೆಡಿಲೇ ಮೇಳ
    ಮಿ೦ಚಿನ ಬಳ್ಳಿಯ ಕೂಸಿನ ಮದುವಗೆ
    ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ
    ಹೇಳುವಿರಾ ಎನಗೆ ?
    /

      1. ಆಹಾ! ಪಾರ್ವತಿ ಅಕ್ಕ, ಪದಗಳ ಸೂರಿ ಮಳೆ ..

  3. ರೇವತಿಯವರಿಗೆ ನಮಸ್ಕಾರಗಳು . ನಿಮ್ಮ ಪದ್ಯದ ಭಾವ ನನಗೆ ತುಂಬಾ ಇಷ್ಟವಾಯಿತು . ಉತ್ತಮ
    ಪದ್ಯಕ್ಕಾಗಿ ಧನ್ಯವಾದಗಳು. ನಾನೂ ಇಲ್ಲಿ ಛಂದೋಬದ್ದವಾಗಿ ಪದ್ಯ ಬರೆಯಲು ಕಲಿಯುತ್ತಿರುವ ಹಲವರಲ್ಲಿ ಒಬ್ಬಳು .

    ದಯವಿಟ್ಟು ಬೇಸರಿಸದಿರಿ . ಈ ಜಾಲತಾಣವು ಹವ್ಯಕ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಹುಟ್ಟು ಹಾಕಿರುವುದಾಗಿದೆ. ಇಲ್ಲಿ ಹವ್ಯಕ ಭಾಷೆಗೆ ಮಾತ್ರ ಪ್ರಾಧಾನ್ಯ. ನೀವು ಹವ್ಯಕ ಭಾಷೆಯಲ್ಲಿ ಬರೆಯುವುದು ಸಾಧ್ಯವಾದರೆ ಇಲ್ಲಿ ಬರೆಯಬಹುದು .ಇಲ್ಲವಾದಲ್ಲಿ , ಇಲ್ಲಿ ಬರೆದಿರುವ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದಿ ಭಾಷೆಯನ್ನು ಕಲಿತುಕೊಂಡೂ ಬರೆಯಬಹುದು .
    ನಿಮಗೆ ಕನ್ನಡದಲ್ಲಿ ಕವಿತೆಯನ್ನು ಛ೦ದೋಬದ್ದವಾಗಿ ಬರೆಯುವ ಆಸಕ್ತಿ ಇದೆಯಾದರೆ padyapaana.com ಎಂಬ ಜಾಲ ತಾಣದಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.

  4. ಮಳೆಗಾಲದ ಆಗಮನದ ಸಂಕೇತವನಿದು ಹೇಳುವುದು
    ಸ್ವಾಗತ ಮಾಡಲು ತೋರಣ ಕಟ್ಟುದು ನಮ್ಮ ಪರಂಪರೆಯು.

    ಬೇಸಗೆ ಹೋಗಲು ವರ್ಷದ ಕಾಲವು ಧಾವಿಸಿ ಬರುತಿರಲು
    ಭಾಸ್ಕರ ತನ್ನಯ ಬಳಗದಿ ಮೋಡವ ಸೇರಿಸಿ ನಗುತಿರಲು
    ಆ ಸವಿ ಸ್ನೇಹವ ತೋರಿತು ಕಾಮನ ಬಿಲ್ಲಿನ ತೋರಣವು
    ಈ ಸಿಹಿ ನೆನಪಿಗೆ ಪ್ರಕೃತಿಯ ಕೊಡುಗೆಯು ಬಣ್ಣದ ಅಂಬರವು.

  5. ತಿಮ್ಮುರುಟು
    ದೂಮರ ಬಂದರೆ ಹಿನ್ನೆಲೆಯೆಂತರ ಕೇಳುಗು ಮಾಷ್ಟ್ರನೆ ಮಕ್ಕಳ ನೇ
    ಕಾಮನ ಬಿಲ್ಲಿನ ತೋರಣ ಕಟ್ಟಿದ ವೆಂತಕೆ ಹೇಳುವಿರಾ ಎನಗೇ
    ಯಾಮಿನಿ ಹತ್ತರೆ ಬಪ್ಪಲೆ ತೊಂದರೆ ಆಗೆಡ ಹೇದು ಬರೋಬರಿಲೇ
    ಸೋಮನೆ ಕಟ್ಟಿದ ಬಣ್ಣದ ತೋರಣ ಕಾಂಬದು ಹೇಳುಗು ತಿಮ್ಮುರುಟೂ
    ದೂಮರ =ತುಂತುರು ಮಳೆ ಯಾಮಿನಿ =ಇರುಳು ಸೋಮ =ಚಂದ್ರ
    ತಿಮ್ಮುರುಟು =ಪೆದಂಬು

  6. ಬೇಸಗೆ ತಿಂಗಳು ಓಡುತ ಬಂತದ ಮೋಡವು ಮುತ್ತಿತು ಬಾನಿನೊಳ
    ಕಾಸುವ ಬೇಗೆಯ ಸೂರ್ಯನ ಬಿಂಬವ ಮುಚ್ಚಿಯೆ ಕಸ್ತಲೆ ಜಾಲಿನೊಳ
    ಒಳ್ಳೆಯ ಕಾಲವು ಜಂಬರ ಮಾಡಲೆ ಖಂಡಿತ ಆಲ್ಲವೆ ಅಲ್ಲವಿದು
    ಕಾಮನ ಬಿಲ್ಲಿನ ತೋರಣ ಕಟ್ಟಿದ ವೆಂತಕೆ ಹೇಳುವಿರಾ ಎನಗೆ
    –ಹೀಂಗೆ ಇರಲಿ.

    1. ಲಾಯ್ಕ ಆಯಿದು ಗೋಪಾಲಣ್ಣ. ಆದಿಪ್ರಾಸ ಇಲ್ಲದ್ದ ಸಣ್ಣ ಕೊರತೆಯ ಕವಿತೆಯ ಭಾವ,ಅರ್ಥ ಮುಚ್ಚಿದ್ದು .

  7. ಆನು ಬರದ ಪೂರಣಲ್ಲಿ ಒಂದು ಶಬ್ದವ ಬದಲಾವಣೆ ಮಾಡೆಕ್ಕಾತು…..

    ಕಾಮನಬಿಲ್ಲಿನ ತೋರಣ ಕಟ್ಟಿದವೆಂತಕೆ ಹೇಳುವಿರಾ ಎನಗೇ
    ಸೋಮನ ಊರಿಲಿ ಮಾಡುವ ಗೌಜಿಗೆ ಬಪ್ಪಲೆ ಹೇಳುದು ಎಲ್ಲರನೂ
    ಭೂಮಿಯ ಸೇರುವ ಸೂರ್ಯನ ಮೋರೆಗೆ ಮೋಡದ ನೀರಿನ ಸಿಂಚನವೇ
    ಚಾಮಿಯು ಚೆಲ್ಲಿದ ಏಳರ ವರ್ಣದ ಮಂಜರಿ ಕಾಣುಗು ಚೆಂದದಲೇ ||

    ವರ್ಣ ಹೇಳಿದರೆ ಅಕ್ಷರ ಹೇಳುವ ಅರ್ಥವೂ ಇದ್ದಲ್ಲದ, ಮಂಜರಿ ಹೇಳಿದರೆ ಗೊಂಚಲಿನ – ಇಲ್ಲಿ ಗಣ ಹೇಳುವ ಅರ್ಥಲ್ಲಿ ತೆಕ್ಕೊಂಡಿದೆ.

  8. ಚಾಮಿಯು ಬಾನಲಿ ಪಶ್ಚಿಮ ದಿಕ್ಕಿಲಿ ಮೀವಲೆ ಹೋಪದು ಕಾ೦ಬಗದಾ
    ಮಾಮನ ಜಾಲಿಲಿ ಹೂಗಿನ ತೋಟದ ಪೈಪಿಲಿ ನೀರಿನ ಹಾಕುವಗಾ I
    ಚೋಮನ ಮೇಲದು ಬಿದ್ದವ° ಕೇಳಿದ ”ಹಾರ್ಸುವ ನೀರಿನ ಬಣ್ಣಲಿದೋ
    ಕಾಮನ ಬಿಲ್ಲಿನ ತೋರಣ ಕಟ್ಟಿದವೆಂತಕೆ ಹೇಳುವಿರಾ ಎನಗೇ ?” II
    ಅಜ್ಜನ( ಮಾಮ) ಮನೆಲಿ ಸಣ್ಣ ಕೂಸು /ಮಾಣಿ (ಹೊತ್ತೊಪಗ ) ಬೆಶಿಲಿಪ್ಪ ಹೊತ್ತಿಲಿ ಹೂಗಿನ ಸೆಸಿಗೊಕ್ಕೆ ನೀರು ಬಿಡ್ಲೆ ಹೆರಟು ಅಲ್ಲಿ ನೀರು ಹಾರ್ಸಿಗೊಂಡು ಆಟ ಆಡುವ ಚಿತ್ರಣ . ಚೋಮ ಹೇಳುವ ಕೆಲಸದವ° ತನ್ನ ಮೇಲಂಗೆ ನೀರು ರಟ್ಟುವಾಗ ಅದರಲ್ಲಿ ಕಂಡ ಕಾಮನ ಬಿಲ್ಲನ ಮಗುವಿಂಗೆ ತೋರುಸುತ್ತಾ ”ಎನಗೆ ನೀರು ಎಂತಕೆ ಕಾಮನ ಬಿಲ್ಲಿನ ತೋರಣ ಕಟ್ಟಿತ್ತು?” ಹೇಳಿ ಕೇಳುದು

    1. ಭಾಗ್ಯಕ್ಕ , ಈ ಛಂದಸ್ಸಿನ ಪರಿಚಯ ಮಾಡಿದ್ದೇ ನಿಂಗೊ. ಈಗ ಜಾಲಿಲಿ ಹೂಗಿನ ಸೇಸಿಗೆ ನೀರು ಹಾರ್ಸೋಗ ಬಪ್ಪ ಸಣ್ಣ ಕಾಮನ ಬಿಲ್ಲಿನ ಕಲ್ಪನೆ ವಿನೂತನ .

  9. ಕಾಮನಬಿಲ್ಲಿನ ತೋರಣ ಕಟ್ಟಿದವೆಂತಕೆ ಹೇಳುವಿರಾ ಎನಗೇ
    ಸೋಮನ ಊರಿಲಿ ಮಾಡುವ ಗೌಜಿಗೆ ಬಪ್ಪಲೆ ಹೇಳುದು ಎಲ್ಲರನೂ
    ಭೂಮಿಯ ಸೇರುವ ಸೂರ್ಯನ ಮೋರೆಗೆ ಮೋಡದ ನೀರಿನ ಸಿಂಚನವೇ
    ಚಾಮಿಯು ಚೆಲ್ಲಿದ ಏಳರ ಬಣ್ಣದ ಮಂಜರಿ ಕಾಣುಗು ಚೆಂದದಲೇ ||

    1. ಅತ್ತೆ , ಪ್ರಶ್ನೋತ್ತರ ಕಾರ್ಯಕ್ರಮದ ಹಾಂಗೆ ಕಾಣುತ್ತು. ಒಳ್ಳೆ ಪೂರಣ .

  10. ಒಂದು ಗಣ ಕಮ್ಮಿ ಆಯಿದು. ಮತ್ತೆ ಪುರುಸೋತ್ತಪ್ಪಗ ಸಮ ಮಾಡ್ತೆ.

    1. ಗೋಪಾಲಣ್ಣ , ನಿ೦ಗೊ ಹೇಳಿದ್ದು ಸರಿ . ಒ೦ದರಿ ಪುರುಸೋತ್ತಿಲಿ ತಿದ್ದಿಕ್ಕಿ .

  11. ಎನಗೆ ಗೊಂತಿಲ್ಲದ ಛಂದಸ್ಸು. .ಪ್ರಾಸ ತಪ್ಪಾಗಿದ್ದರೆ ಕ್ಷಮಿಸಿ.

  12. ಬೇಸಗೆ ತಿಂಗಳು ಓಡುತ ಬಂತದ ಮೋಡವು ಬಾನಿನೊಳ
    ಕಾಸುವ ಸೂರ್ಯನ ಬಿಂಬವ ಮುಚ್ಚಿಯೆ ಕಸ್ತಲೆ ಜಾಲಿನೊಳ
    ಒಳ್ಳೆಯ ಕಾಲವು ಜಂಬರ ಮಾಡಲೆ ಖಂಡಿತ ಅಲ್ಲವಿದು
    ಕಾಮನ ಬಿಲ್ಲಿನ ತೋರಣ ಕಟ್ಟಿದ ವೆಂತಕೆ ಹೇಳುವಿರಾ ಎನಗೆ ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×