Oppanna.com

ಸಮಸ್ಯೆ113: ಕಾಲಕೊ೦ದು ಹೊಸತು ಕೋಲ ಕಟ್ಟುಗಲ್ಲದೊ ?

ಬರದೋರು :   ಸಂಪಾದಕ°    on   05/03/2016    19 ಒಪ್ಪಂಗೊ

ಕಾಲ ಬದಲಾದ ಹಾ೦ಗೆ ನಾವೂ ಹೊ೦ದಿಗೊ೦ಡು ಬದಲಾವುತ್ತು.ವಿಶ್ವದ ವೇಗ ಹೆಚ್ಚಿದ ಹಾ೦ಗೆಯೇ ಬದಲಾವಣೆಗಳೂ ಹೆಚ್ಚಾಗಿ ನವಗೆ ಇಷ್ಟು ಬೀಸಕೆ ಬದಲಪ್ಪಲೆ ಸಾಧ್ಯ ಅಕ್ಕೋ ಹೇಳ್ತ ಸ೦ಶಯವೂ ಬತ್ತು.ಇದೇ ಈ ವಾರದ ಸಮಸ್ಯೆ.ಭೋಗ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ಹುಡುಕ್ಕೊದು ಅನಿವಾರ್ಯ ಅಲ್ಲದೊ?

ಸಮಸ್ಯೆ : ಕಾಲಕೊ೦ದು ಹೊಸತು ಕೋಲ ಕಟ್ಟುಗಲ್ಲದೊ ?

19 thoughts on “ಸಮಸ್ಯೆ113: ಕಾಲಕೊ೦ದು ಹೊಸತು ಕೋಲ ಕಟ್ಟುಗಲ್ಲದೊ ?

  1. ಮಾಲು -ಗೀಲು ಎಲ್ಲ ಕಡೆಲಿ
    ಸ್ಕೂಲು ಮಕ್ಕೊ ಇಪ್ಪ ಜಾಗೆ
    ಹೇಳಿ ನಾವು ಕಾಂಬ ಹಾಂಗೆ ಆಯಿದಲ್ಲದೊ?
    ಜಾಲತಾಣ ಹುಡುಕಿ ಅವುದೆ
    ಎಲ್ಲಿ ಏನು ಹೇಂಗೆ ಹೇಳಿ
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದೊ?

  2. ಓಹ್, ಮುಳಿಯ ಭಾವಯ್ಯ ವಿಭಿನ್ನ ಪ್ರಯೋಗಂಗೊ. ಒಂದಕ್ಕೆ ಇನ್ನೊಂದು ಮಿಗಿಲು. ದಶಾವತಾರ ವರ್ಣನೆಯಂತೂ ಸೂಪರ್. ಎಲ್ಲೋರದ್ದುದೆ ಪದಂಗೊ ಲಾಯಕಾಗಿತ್ತು.

  3. ಆಲದೆಲೆಲಿ ಮನುಗಿ ಎದ್ದು
    ಬೀಲ ಕಟ್ಟಿ ಹ೦ದಿ ಸಿ೦ಹ
    ಬಾಲ ವಟುವಿನಾ೦ಗೆ ಬ೦ದು ಶಿಕ್ಷೆ ಕೊಟ್ಟವ° |
    ವಾಲಿಯನ್ನೆ ಕೊ೦ದ ಮೇಲೆ
    ಹಾಲುಬೆಣ್ಣೆ ಕದ್ದ ಹಾ೦ಗೆ
    ಕಾಲಕೊ೦ದು ಹೊಸತು ಕೋಲ ಕಟ್ಟುಗಲ್ಲದೊ ?||

  4. ಜಾಲ ಕೊಡಿಲಿ ಆರು? ರೇಶ್ಮೆ
    ಶಾಲು ಹೆಗಲಿಲಿದ್ದು , ಸಾಕೊ?
    ನೇಲುಸಿದ್ದ° ಒ೦ದು ಬುದ್ಧಿಜೀವಿ ಚೀಲವ |
    ಪಾಲು ನು೦ಗಿ ನೀರು ಕುಡುದ
    ಮೇಲೆ ತಿರುಗಿ ಬ೦ದ° ನೋಡು
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದಾ? ||

  5. “ಬೇಲೆ ಉ೦ಡೊ?” ಕೇಳಿಗೊ೦ಡು
    ಸೇಲೆ ಮಾಡಿಗೊ೦ಡು ಬ೦ತು
    ಸೋಲುಸಿಕ್ಕುಗಪ್ಪೊ ಜೆನವ ಪೂರ್ತಿ ನ೦ಬಿರೆ |
    ಹಾಲು ಕರವಲಪ್ಪ ಹೊತ್ತು
    “ದಾಲ ಬಲ್ಲಿ” ಹೇಳಿ ಗೈವ
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದೊ ?||

  6. ನೂಲ ವಸ್ತ್ರದ೦ಗಿ ಹಾಕಿ
    ಸಾಲು ಸಾಲು ಕೈಯ ಮುಗುದು
    ಕಾಲು ಹಿಡುದು ಗೆಲ್ಲುಸಿಕ್ಕಿ ಹೇಳಿ ಬ೦ದವು |
    ಮಾಲಿಗೊ೦ಡು ಹೋಕು ಗೆದ್ದ
    ಮೇಲೆ ಕಿಸೆಯ ತು೦ಬುಸಿಕ್ಕಿ
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದೊ ?||

  7. ಸಾಲ ಮಾಡಿ ಸ್ಟೈಲು ಮಾಡಿ
    ಚೇಲದೊಡನೆ ಜಾಲಿ ಮಾಡಿ
    ಸೇಲೆ ಕೂಸ ಜೆತೆಲಿ ಪೇಟೆ ಸುತ್ತುಗಲ್ಲದೊ ?
    ಮಾಲೆ ಹಾಕಿ ಶಬರಿಮಲೆಯ,
    ಹೇಳಲಾಗ ಇವರ ವಿಷಯ,
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದೊ ?||

  8. ಜಾಲ ಸುತ್ತ ಬೆಶಿಲ ಕಟ್ಟೆ
    ಮೇಲೆ ಒಗದ ವಸ್ತ್ರ ಹಾಕಿ
    ಕಾಲು ಘಂಟೆಲೊಣಗಿ ಸಿಕ್ಕೆ ನಾವು ಜಯಿಸುಗೂ |
    ಕೋಲು ಒಲೆಯ ಮೇಗೆ ಒಳವೆ
    ನೇಲುಸಿ ಮಸಿ ತುಂಬ, ಮಳೆಯ
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದಾ ||

  9. ಮೂಲ ಮಂತ್ರ
    ಜಾಲ ತಾಣ ಬೆರಳ ಕೊಡಿಲಿ
    ಮೂಲದಲ್ಲೆ ವಿಶ್ವ ಬಯಲು
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲ ದೊ?
    ಮೇಲೆ ಮೇಲೆ ಹೋದರೂದೆ
    ಕಾಲ ಅಡಿಲಿ ಇಪ್ಪ ಭೂಮಿ
    ಮೂಲ ಮಾಂತ್ರ(ಮಂತ್ರ)ಮರವಲಾಗ ಅಲ್ಲದೊ?

    1. ಮಾವ.. ವಿಷಯ ಲಾಯಿಕಿದ್ದು

      ಕಡೆಯ ಸಾಲಿಲ್ಲಿ ಮಾಂತ್ರ ಅಥವಾ ಮಾತ್ರ ಮಾಡಿರೆ ಮೂರು ಮಾತ್ರೆಯ ಒಂದು ಗಣ ಕಮ್ಮಿ ಬತ್ತನ್ನೆ…

    2. “ಮೂಲಮಂತ್ರ ಮಾಂತ್ರ ಮರವಲಾಗ ಅಲ್ಲದೊ” – ಸರಿ ಆವುತ್ತು .
      ಮಾವಾ , ಒಪ್ಪ ಕಲ್ಪನೆ . ಅರ್ಥವತ್ತಾಗಿದ್ದು .

      1. ಸರಿ ಮಾಡಿದ್ದಕ್ಕೆ ಶೈಲಜಕ್ಕಂಗೂ ಮುಳಿಯ ದಣ್ಣ೦ ಗೂ ಧನ್ಯವಾದ.

  10. ಹಾಲು ಕರದು ಬಪ್ಪ ಹೊತ್ತು
    ಜಾಲ ಕರೆಲಿ ಡಂಕಿಬಿದ್ದು
    ಸೀಳುಬಿಟ್ಟುಹೋತು ರವಿಯ ಕೋಲುಕಾಲದ |
    ನೂಲುಹಾಕಿ ಹೊಲಿವ ವೈದ್ಯ
    ನೇಲಿಗೊಂಡು ಬೀಗಿಹೋದ
    ಕಾಲಿಗೊಂದು ಹೊಸತು ಕೋಲು ಕಟ್ಟುಗಲ್ಲದೊ?

    1. “ಆಲಿಬಚ್ಚಿ ಹೋತು” – ಅಪರೂಪದ ಶಬ್ದಪ್ರಯೋಗ ಲಾಯಕ ಆಯಿದು ಅತ್ತೆ . ಎರಡು ವಿಭಿನ್ನ ಪೂರಣ೦ಗೊ ಕೊಶಿ ಕೊಟ್ಟತ್ತು .

  11. ಕಾಲು ಏಜು ಹುಡುಗಿ ಬಂದು
    ಕೂಲು ಇಪ್ಪ ಚಷ್ಮತೊಟ್ಟು
    ಕಾಲಕೊಂದು ಹೊಸತು ಕೋಲ ಕಟ್ಟುಗಲ್ಲದೊ
    ಚೋಲಿ ಪೂರ ಕಪ್ಪು ತಿರುಗಿ
    ಆಲಿಬಚ್ಚಿಹೋದ ಮೇಲೆ
    ಸೇಲೆಮಾಡುತಿದ್ದರಂಬಗಾರು ನೋಡವು ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×