Oppanna.com

ಸಮಸ್ಯೆ28 : ಚಿತ್ರಕ್ಕೆ ಪದ್ಯ (3)

ಬರದೋರು :   ಸಂಪಾದಕ°    on   20/04/2013    29 ಒಪ್ಪಂಗೊ

ಈ ಚಿತ್ರಕ್ಕೆ ನಿ೦ಗೊಗೆ ಇಷ್ಟ ಇಪ್ಪ ಛ೦ದಸ್ಸಿಲಿ/ ಧಾಟಿಲಿ ಪದ್ಯ ಬರೆಯಿ.460

ಚಿತ್ರಕೃಪೆ : ಪವನಜ ಮಾವ

29 thoughts on “ಸಮಸ್ಯೆ28 : ಚಿತ್ರಕ್ಕೆ ಪದ್ಯ (3)

  1. ಸೊಗದಿಂ ಬಾನೊಳಗಿಂತು ಕಂಡುದಕಟಾ ಹಂಸಂ ಸಿತಂ ಸುಂದರಂ
    ಪುಗುತಿರ್ಕುಂ ಪೊದೆಯಂತೆವೋಲೆಸವ ನೀಲಾಭ್ರಂಗಳೊಳ್ ಮತ್ತಮೀ
    ಜಗದೊಳ್ ತೋರುತುಮಿರ್ಪುದೈ ಛವಿಯಿನಪ್ಸುಕ್ಷೀರ ಬೇಧಂಗಳಂ
    ಬಗೆಯಲ್ ಹಂಸನೆನುತ್ತೆ ಪೇಳ್ವರಿದರಿಂ ಸೂರ್ಯಂಗಮೀ ಲೋಕದೊಳ್ //

  2. ಒಂದಕ್ಕೊಂದು ಲಾಯಕದ ಪದ್ಯಂಗೊ …..

  3. ತಣ್ಣನೆಯಿರುಳಿಲಿ ತಿಂಗಳ ಸೊರುಗುವ
    ಹುಣ್ಣಮೆ ಚಂದ್ರನ ಸೊಬಗಿನ ಮೋಡಿಯು
    ಕಣ್ಣದು ಸಾರ್ಥಕವಾಯಿದು ನೋಡಿಯೆ ಮನಸುದೆ ಹಿಗ್ಗಿತ್ತೂ ।
    ಮಣ್ಣಿನ ಸೆಳೆತವು ಬಿಡದದು ಚಂದ್ರನ
    ಬೆಣ್ಣೆಯ ಮುದ್ದೆಗೆ ಪಚ್ಚೆಯ ತೋರಣ
    ಚಿಣ್ಣರ ಮಾಮನು ಬಂದನೆ ಚಂದದಿ ನಗೆಯನು ಬೀರುತಲೀ ॥

  4. ಇ೦ದಿರೆ; ಕವನ ತು೦ಬ ಲಾಯಿಕ ಆಯಿದು.ಅಭಿನ೦ದನೆ.

  5. ಬಾಲ ಭಾಸ್ಕರ ಮೂಡಿ ಬಂದನೆ
    ನೀಲ ಬಾನಿನ ಮೋಡದೆಡಕಿಲಿ
    ಕಾಲು ಕಿತ್ತತು ರಜನಿ ದೂರಕೆ ಸೂರ್ಯ ಬಪ್ಪಾಗ ।
    ಸಾಲು ಮರಗಳ ಪಚ್ಚೆಯೆಲೆಗಳ
    ಬೇಲಿ ಕಟ್ಟಿದ ಚೆಂದ ನೋಡಿರಿ
    ಸೋಲು ಕಂಡನೆ ರವಿಯು ಭೂಮಿಯ ಹಸುರ ಕೋಟೆಯಲೀ ॥

  6. ಹನಿಯ ಮುಸುಕು ಭದ್ರ ಕೋಟೆ
    ದಿನಕರಂಗೆ ದಾಂಟ್ಲೆ ಕಷ್ಟ
    ವನದ ಕರೆಲಿ ಮೊಡಿಬಂದ ಸೂರ್ಯ ಫಕ್ಕನೇ
    ಮನೆಯ ಜಾಲ್ಲಿ ನಿಂದು ನೋಡಿ
    ಮನಸು ತುಂಬ ದೃಶ್ಯ ಕಂಡು
    ಕನಸು ಕಾಂಬ ಕೂಸು ಮಾಣಿಯೊರ ತುಂಬವೇ
    ___

    ಹನಿಯ ಕೋಟೆಯ ದಾಂಟಿ ಬಂದ ದಿನಕರನ
    ತೋಷಂದೆದುರುಗೊಂಬವು ನಮ್ಮೊರ ಜೆನ
    ಹನಿಯ ನೀರಿಲ್ಲಿ ಭೂರಮೆ ಮಿಂದ ಹಾಂಗೆ
    ಚೆಂಡಿಯೊಣಗುಸುಗು ಸೂರ್ಯನ ಕಿರಣ ಹೀಂಗೆ

    1. ದಿನಕರನ ವರ್ಣನೆಯ ಚೌಪದಿಲಿ ದಿನಕರ ದೇಸಾಯಿಯ ಶೈಲಿ ಎದ್ದು ಕಾಣುತ್ತು ಮಾವಾ.
      ಷಟ್ಪದಿಯ ಮೂರನೆ ಗೆರೆ
      ”ವನದ ಕರೆಲಿ ಮೂಡಿಬಂದ ಸೂರ್ಯ ಫಕ್ಕನೇ”
      ಆರನೆ ಗೆರೆ
      “ಕನಸು ಕಾಂಬ ಕೂಸು ಮಾಣಿಯೂರ ತುಂಬವೇ” ಎರಡು ತಿದ್ದುಪಡಿ ( ಟೈಪಿ೦ಗ್ ಮಿಶ್ಟಿಕು)

  7. ಕಾಡ ದಾರಿಯ ನೆಡುಕೆ
    ಮೋಡಪರದೆಯ ಹಿ೦ದೆ
    ಮೂಡುದಿಕ್ಕಿಲಿ ರವಿಯ ಉದಯ ಕ೦ಡೆ।
    ಜೋಡುಗೆಲ್ಲಿನ ಕೊಡಿಲಿ
    ಜೋಡಿ ಹಕ್ಕಿಗೊ ಕೂದು
    ಮೋಡಿ ಮೋಹನರಾಗ ಹಾಡೊದರ ಕ೦ಡೆ।।

    ಮರದ ಎಲೆಗಳ ತಾಳ
    ಕೊರವ ಚಳಿಗಾಳಿಯಲೆ
    ಮೊರದತ್ತು ಕೆಮಿಗೆ೦ಡೆಗಿ೦ಪು ಸ೦ಗೀತಾ।
    ಇರುಳ ಕನಸುಗೊ ಮನಸಿ
    ಲರಳಿ ನಸುನೆಗೆ ಮೋರೆ
    ಲಿರಳಿ ಜೀವನದುದ್ದ ಕಸ್ತಲೆಯ ವರೆಗೇ।।

  8. ತಂಪಿನಯಿರುಳಿನ ಸಂಭ್ರಮ ಮುಗುದರು

    ನೊಂಪಿನ ಚಂದಿರ ಹೋಗದೆ ಕೂದಿದ

    ಕೆಂಪಿನ ಸೂರ್ಯನ ಬರವಿಗೆ ಕಾವದೊ

    ನೆಂಪಿಲಿ ಹೇಳುಲೆ ‘ತಗ್ಗುಸಿ ತಾಪವ ಬದ್ಕುಸು ಜೀವಿಗಳಾ’

    ಸೊಂಪಿನ ಮರಗಿಡದೊಟ್ಟಿಗೆ ಹಕ್ಕಿಗ

    ಯಿಂಪಿನ ಗಾನದ ಯೆಡಲಿಯೆ ಕೋಳಿಗ

    ಕೊಂಪೆಲಿ ಪಶುವಿನ ಶಬ್ದವು ಕೇಳಿದೆ

    ಮಂಪರ ಬಿಟ್ಟಿಕಿ ಯೇಳುಲೆ ಕಷ್ಟವೊ ಚಂದಿರ ಹೋಗೆಡದೋ

    1. ವಾರ್ಧಕಲ್ಲಿ ಚ೦ದ್ರನ ಬೀಳ್ಕೊಡುಗೆಯೋ ಅಲ್ಲ ಬಾಲರವಿಯ ಸ್ವಾಗತವೋ?ಚೆ೦ದದ ವರ್ಣನೆ ಅಕ್ಕಾ.

  9. ಹಗಲಿನ ಬೇಗಗೆ
    ಹೆಗಲಿನ ಭಾರಕೆ
    ಲಗಾಮು ಹಾಕುಲೆ ಬಂದವನೇ
    ತೊಗಲಿನ ಜೀವಿಗೆ
    ಸೊಗಸಿನ ಸಾಕ್ಷಿಯು
    ಚಿಗುರಿರು ಮುರುಟಿರು ಸಮಚಿತ್ತನೆ

    ಮೇಲೆ ಮಾತ್ರೆ ಒನ್ದು ಹೆಚ್ಹಾತು. ಇಲ್ಲಿ ಸರಿ ಮಾಡಿದೆ.

    1. ಮಾತ್ರೆ ಹೆಚ್ಚುಕಮ್ಮಿ ಆದರೆ೦ತ ಭಾವ ನವನವೀನ..ಎರಡು ಕಲ್ಪನೆಗಳೂ ಲಾಯ್ಕಿದ್ದು ಅಕ್ಕ.

  10. ಹಗಲಿನ ಬೇಗಗೆ

    ಹೆಗಲಿನ ಭಾರಕೆ

    ಲಗಾಮು ಹಾಕುಲೆ ಬಂದವನೇ

    ತೊಗಲಿನ ಜೀವಿಗೆ

    ಸೊಗಸಿನ ಸಾಕ್ಷಿಯು

    ಚಿಗುರಿರು ಮುರುಟಿರು ಸಮಚಿತ್ತನೇ

    ಚಿಗುರಿರು = ವೃದ್ದಿಲಿ

    ಮುರುಟು= ಕ್ಷಯಲ್ಲಿ

    ಜೀವನಲ್ಲಿ ವೃದ್ದಿ ಮತ್ತು ಕ್ಷಯ ಚಂದ್ರನ ಹಾಂಗೆ . ಅವನ ಹಾಂಗೆ ನಿರ್ಲಿಪ್ತ ರಾಗಿರೆಕು ಹೇಳುವ ರಾಮಕೃಷ್ಣ ಪರಮ ಹಂಸರ ತತ್ವ .

  11. ಮಣ್ಣಿ೦ದ ಬೀಸಿದಾ

    ತಣ್ಣ೦ಗೆ ಗಾಳಿಗೇ

    ಹಣ್ಣಿಪ್ಪ ಮಾಮರವು ತೊನೆಯುತ್ತಲಾ

    ಹಣ್ಣಿನಾ ಹೆರ್ ಕೂಲೆ

    ಮಣ್ಣಿನಾ ಮಕ್ಕೊಗೇ

    ಹುಣ್ಣಿಮೇ ದಿನಲ್ಲೀ ಕಸ್ತಲಾಗ

    ಮಣ್ಣಿ೦ದ ಬೀಸಿದಾ ತಣ್ಣ೦ಗೆ ಗಾಳಿ= ಕರೆ ಗಾಳಿ (ಇರುಳು ಬೀಸುದು )

    1. ಅಪ್ಪಕ್ಕೊ ಮಾಮರದ
      ಸೊಪ್ಪು ಬೀಸಣಿಕೆಗಳ
      ರಪ್ಪನೇ ಬೀಸೊಗಳೆ ತಾಳಕೂಟಾ|
      ಕಪ್ಪುಕಸ್ತಲೆಯೋಡಿ
      ಹೆಪ್ಪುಕಟ್ಟುವ ಬೆಶಿಯ
      ಮುಪ್ಪು ಮರೆಶುಗು ಸೂರ್ಯಚ೦ದ್ರನಾಟಾ||

  12. ತಣ್ಣನೆಯಿರುಳು
    ಬಣ್ಣನೆಗೆಟುಕ
    ಹುಣ್ಣಮೆ ಬೆಣಚ್ಚಿಯ ಗಡದ್ದೂಟ
    ಬಣ್ಣದ ಹೊರತು
    ಸುಣ್ಣ ಹಪ್ಪಳ
    ಎಣ್ಣೆಯೆರದಾಂಗಾತು ಕಣ್ಣಿಂಗೆ ||

    1. ನುಣ್ಣನೆ ಅರಳಿದ
      ಕಣ್ಣಿಲಿ ನೋಡಿದ
      ರಣ್ಣನ ಕಾ೦ಬದು ಬಗೆಬಗೆಲೀ|
      ಚಿಣ್ಣರ ಚ೦ದ್ರನೊ
      ಬಣ್ಣದ ಸೂರ್ಯನೊ
      ಹಣ್ಣೋ ಹಾರಿದ ಹನುಮ೦ಗೇ||

      ಲಾಯ್ಕ ಆಯಿದು ಕಲ್ಪನೆ ಶೈಲಜಕ್ಕಾ.

  13. ನಮ್ಮ ಕಾಡಿನ ಮರ೦ಗಳೆಡೆಲಿ
    ಮೂದಿ ಬ೦ದ ಆ ಸೂರ್ಯನೋ?॥

    ಅಲ್ಲ ಕಪ್ಪು ಕಸ್ತಲೆ ಅಪ್ಪ ಹೊತ್ತಿ೦ಗೆ
    ಉದಿಸಿ ಬ೦ದ ಚ೦ದ್ರನೋ?॥

    ಸೂರ್ಯ,ಚ೦ದ್ರರು ಆರೇ ಇರಲಿ
    ಜಗದ ಸರ್ವವು ಅವರ ಕೈಲಿ॥

    ಬಡವ ಬಲ್ಲಿದ ಮೇಲು ಕೀಳು
    ಬೇಧ ಇಲ್ಲೆ ಅವಕ್ಕೆ ಕೇಳು॥

    ಇಲ್ಲೇ ಕಲಿಯೆಕು ನೀತಿ ಪಾಠ
    ಅರಿತು ಬಾಳೆಕು ಇದು ದೇವರಾಟ॥

    1. ಅತ್ತೇ..
      ಸೂರ್ಯೋದಯ ಚ೦ದ್ರೋದಯ ದೇವರ ಕೃಪೆ ಕಾಣೋ..
      ಕುವೆ೦ಪು ಪಕ್ಷಿಕಾಶಿಲಿ ಹೇಳಿದ ಸಾಲುಗೊ ನೆ೦ಪಾತು.ಲಾಯ್ಕ ಆಯಿದು.

      1. ಅಭಿಪ್ರಾಯ ತಿಳಿಶಿದ್ದಕ್ಕೆ ಧನ್ಯವಾಧ ರಘು

    2. ಪಾರ್ವತಿ ಅಕ್ಕಾ,ಲಾಯಕ್ಕಾಯಿದು.

      * ಮೂಡಿ –

      * ಭೇದ – ಹೀಂಗಾಯೆಕು typing mistake ಆದಿಕ್ಕು ಕಾಣುತ್ತು .

      1. ನಿ೦ಗೊ ಹೇಳಿದ್ದು ನಿಜ ಬಾಲಣ್ಣ . ಅದು ತಪ್ಪಾದ್ದು . ಎನಗೆ ಇದರಲ್ಲಿ ಬರವಲೆ ಆಶೆ ಇದ್ದು .
        ಆದರೆ ಬೇಗ ಬೇಗ ಆವುತ್ತಿಲ್ಲೆ .ಧನ್ಯವಾದ೦ಗೊ.

  14. ಶ್ಯಾಮಣ್ಣಂದೇ ಬಾಲಣ್ಣಂದೇ ಬರದ ಪದ್ಯಂಗೊ ಭಾರೀ ಲಾಯಿಕಾಯಿದು…

  15. ಒಂಟಿ ಮಾವಿನ ಮರಲ್ಲಿ

    ಹಾಡು ಕೊರಳಿನ ಹಕ್ಕಿ

    ಕೋಗಿಲೆಯ ದನಿ ಎಲ್ಲಿ ಹೋತು ?

    ಮಬ್ಬು ತೆರೆ ಮುಸುಕಿದರು

    ದಿನಮಣಿಯ ಪ್ರಭೆ ಕುಂದ

    ಏಳು ಮಗ ನೋಡು ಉದಿಯಾತು/

    ಚಳಿಗಾಲವೋ ಅಲ್ಲ

    ಅದು ಮಂಜು ಹನಿಯಾಟ

    ಹಾ! ಎಂತ ಕಲೆಗಾರ ನೋಡು /

    ಕವಿಮನಸು ಕೊಣಿಗದಾ!

    ಒಳವೊಳವೆ ಬೆಳಗದಾ!

    ಬೈಲಿಂಗೆ ಬಕ್ಕಿಳಿದು ಹಾಡು/

    1. ಬಾಲಣ್ಣ,
      ಇಳುದಿಳುದು ಬ೦ತದಾ ಹಕ್ಕಿ ಹಾಡೂ..ನಿ೦ಗಳ ಪ್ರತಿ ರಚನೆಯೂ ಅದ್ಭುತ.

  16. ಕಪ್ಪಾತು…ಬೆಳಿಯಾತು
    ಹೆಪ್ಪುಗಟ್ಟಿದ್ದು ಪ್ರಕೃತಿ..॥

    ಸೂರ್ಯನೋ ಚಂದ್ರನೋ ಗೊಂತಾಗಲಾರದ್ದೆ
    ಬಿದ್ದರೂ ಭ್ರಮೆಗೆ ಉದಿಯೋ ಕಸ್ತಲೆಯೋ?
    ಮಳೆ ಮಂಜು ಕಾವಳವೋ?
    ಇಳೆ ಮಂಜು ಕಾನನವೋ?
    ಇಳೆಯಲ್ಲೆ ಎಳವ ಜೀವಕ್ಕೆ ಸಂಜೆಕಸ್ತಲೆಯೋ?।

    ಜಾಂಬವನೆದೆಯ ಹೃದಯದಲ್ಲಿಪ್ಪದೋ
    ಹೊಳವ ಸ್ಯಮಂತಕ ಮಣಿಯ
    ಧರಿಸಿ ನಿಂದಾಂಗೆ
    ಕೃಷ್ಣಾಗಮನಕ್ಕೆ ಕಾದು
    ಕೃಷ್ಣಾಯ, ಕೃಷ್ಣ ಭದ್ರಾಯ, ಕೃಷ್ಣಚಂದ್ರಾಯ ವೇಧಸೇ..॥

    ಕಾದು ನಿಂದಿದು
    ಕರಗುವಿಕೆಗಿದೋ ವೃಕ್ಷರಾಜಿ
    ಬೆಳಗಲಿ, ಬೆಳಕು ಹಬ್ಬಲಿ ಬೇಗ
    ಹಸುರು ಚೆಲ್ಲಲಿ, ಬಣ್ಣ ಬಣ್ಣದ ಕನಸು
    ನನಸಾಗಲಿ।

    1. ಶ್ಯಾಮಣ್ಣ,
      ಕವಿಮನಸ್ಸು ಗರಿ ಬಿಚ್ಚಿ ಹಾಡಿದ್ದು,ಹಾರಿದ್ದು..ಒಳ್ಳೆ ಕಲ್ಪನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×