Oppanna.com

ಸಮಸ್ಯೆ 24 : “ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ”

ಬರದೋರು :   ಸಂಪಾದಕ°    on   23/03/2013    22 ಒಪ್ಪಂಗೊ

ಈ ವಾರ ಮಲ್ಲಿಗೆಯ ಮಾಲೆ ಕಟ್ಟಿದ ಹಾ೦ಗಿಪ್ಪ “ಮಲ್ಲಿಕಾಮಾಲೆ “ ಛ೦ದಸ್ಸಿಲಿ ಪ್ರಯತ್ನ ಮಾಡುವ° ಆಗದೋ?

ಛ೦ದಸ್ಸಿನ ಲಕ್ಷಣ ಹೀ೦ಗಿದ್ದು –

-೧- ೧೧- ೧-೧ ೧-೧ -೧೧-೧- ( ನಾನನಾನನ ನಾನನಾನನ ನಾನನಾನನ ನಾನನಾ)

ಚೌಪದಿಯ ನಾಲ್ಕು ಸಾಲುಗಳಲ್ಲಿ ದ್ವಿತೀಯಾಕ್ಷರ ಪ್ರಾಸ ( ಆದಿಪ್ರಾಸ) ನಿಯಮ ಪಾಲಿಸಿಗೊ೦ಡು ಮೇಗಾಣ  ಮಾತ್ರಾಗಣವ ಅನುಸರಿಸಿಗೊ೦ಡು ದನಗೊ ಗುಡ್ದೆಗೆ ಹೋಪ ಚೆ೦ದವ ನೋಡುವ°.

“ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ”

ಉದಾಹರಣೆಗೆ ” ಜಗನ್ನಾಥ ವಿಜಯ” ಕಾವ್ಯದ ಒ೦ದು ಚರಣ ಹೀ೦ಗಿದ್ದು,

ನೀರ/ಜೋತ್ಪಲ/ ವರ್ಣ/ನಾಡಿದ/ನಾಡಿ/ದ೦ ಕಮ/ಲೇಕ್ಷ/ಣ೦

ಚಾರುಹಾಸ ವಿಲಾಸನಾಡಿದನಾಡಿದ೦ ಸುಭಗ೦ ಶುಭಾ

ಕಾರನಾಡಿದನೆ೦ದು ಗೋಪಿಯರಾಡಿಸುತ್ತಮಿರಲ್ಕೆ ಸ೦

ಸಾರನಾಟಕಸೂತ್ರಧಾರಿ ಮುರಾರಿ ಕೈಪರೆಗಾಡಿದ೦

 

ಸೂಃ ಇದು ಅಕ್ಷರ ವೃತ್ತದ ಛ೦ದಸ್ಸು ಆದರೆ ಮಾತ್ರಾವೃತ್ತವೂ ಅಪ್ಪು.ಸುರುವಾಣ ಸಾಲಿಲಿ ಮಾಡಿದ ಗಣವಿ೦ಗಡಣೆ ನೋಡೊಗ ಮೂರು ನಾಲ್ಕರ ಮಾತ್ರಾಗಣ !

“ಮೂರು ನಾಲ್ಕರ ನಾಟ್ಯ ನೋಡೊಗ ಭಾರಿ ಸ೦ತಸವಾತದಾ” !

 

 

22 thoughts on “ಸಮಸ್ಯೆ 24 : “ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ”

  1. laaikaayidu, very nice, very impressive, vivid imagination, beautiful visualization, mrduvaada bhaava vannu sputisuva madhuravaada aksharagaLu.

  2. ಹಾರಿ ಹಕ್ಕಿಗೊ ಗೂಡ ಬಿಟ್ಟವು ಕಾಳು ಹುಡ್ಕುಲೆ ಗೆದ್ದೆಲೀ
    ಹೀರಿ ಹೂಗಿನ ಜೇನ ತು೦ಬಿಗೊ ತು೦ಬು ರಾಗವ ಹಾಡೊಗಾ
    ಊರುಗೋಲಿನ ಊರುತಜ್ಜನು ನೋಡಿ ನಿ೦ದವು ಜಾಲಿಲೀ
    ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ದೆ ಹತ್ತುವ ಚೆ೦ದವಾ।।

  3. ಮಾರು ದೂರಕೆ ಹೋದ ಕೂಡಲೆ ನೊ೦ಪು ಹುಲ್ಲದು ಕಾಣೆಕೂ

    ಮೂರು ಸೇರಿರೆ ಸೊಕ್ಕಿ ತಾಡುಗು ಮೋಡಿ ಮಾಡಿಯೆ ಓಡುಗೂ

    ಸಾರಿ ಕೂಗುಗು ಅ೦ಬೆ ಹೇಳಿಯೆ ಅಮ್ಮ ಅಕ್ಕರೆ ತೋರುಲಾ

    ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ

  4. ಭಾರಿ ಚೆಂದದ ಹೋರಿಕಂಜಿಗೊ ಹಟ್ಟಿ ತುಂಬುಲೆ ಸಾಕವೂ
    ಹಾರಿ ಬೈಪಣೆ ಅಂಬಗಂಬಗ ಹೋಪ ಚೆಂದವ ನೋಡುವೋ
    ಕೂರಿ ನಾಯಿಯ ಭಾರಿ ಬೊಬ್ಬೆಯ ಕೇಳಿ ಹೋಕವು ಸುಮ್ಮನೇ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ।

    ಧೂಳು ಗಾಳಿಗೆ ಎದ್ದು ಹೋಪದು ಕಂಡು ಕಂಜಿಗೊ ಓಡುಗೂ
    ಬೀಲ ಕುತ್ತಕೆ ಬೀಸಿಯೊಂಡವು ನೋಡಿ ನಿಂಬಗ ಸುಮ್ಮನೇ
    ಕಲ್ಲು ತಾಗಿರೆ ಹುಲ್ಲು ತಿಂಬವು ಬೇರೆ ಜಾಗೆಗೆ ಹೋಕವೂ
    ಬಲ್ಲೆ,ಮುಳ್ಲಿನ ಕಲ್ಲು ಮಣ್ನಿನ ಗಣ್ಯ ಮಾಡವು ಕಂಜಿಗೋ।

    ಓಡಿ ಬಚ್ಹಿರೆ ಆಸರಪ್ಪಗ ಶುದ್ಧ ನೀರಿನ ಹುಡ್ಕುಗೂ
    ಆಡು ಕಂಡರೆ ಅಬ್ಬೆಯೊಟ್ತಿಗೆ ಪುಂಡುಪೋಕ್ರಿಯ ಮಾಡುಗೂ
    ನೋಡು ಕಸ್ತಲೆ ಆತು ಹೇಳಿರೆ ಹಿಂದೆ ನೋಡದೆ ಓಡುಗೂ
    ಕೂಡಿ ಬಕ್ಕವು ಕಸ್ತಲೆಪ್ಪಗ ದೊಡ್ಡ ಸಣ್ಣವು ಹಟ್ಟಿಗೇ

    1. ಒಳ್ಳೆ ವರ್ಣನೆ ಮಾವಾ..ಅ೦ತೂ ಗುಡ್ಡೆ ಹತ್ತಿದ ಕ೦ಜಿಗೊ ಕಸ್ತಲೆಪ್ಪಗ ಹಟ್ಟಿಗೆ ಬ೦ದೆತ್ತಿದವನ್ನೇ..

  5. ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ
    ಭಾರಿ ಮೋಜಿಲಿ ನೋಡ್ಲೆ ನಿಂದರೆ ಬಾಕಿಯಕ್ಕದು ಅಲ್ಲಿಯೇ
    ಕೇರುಲಿದ್ದಿದ ಸೇರುಗಟ್ಟಲೆ ಪೇರುಸಿರ್ಸಿದ ಅಕ್ಕಿಯಾ
    ಸಾರು ಇಲ್ಲದೆ ಮಕ್ಕ ಉಣ್ಣವು ಬೇಕು ಬೆಂದಿಯು ಒಟ್ಟಿಗೇ

    ಹೊತ್ತು ಹೋಪಗ ಹೋರಿ ಕಂಜಿಗೊ ಬಾರದಿದ್ದರೆ ರಗಳೆಯೋ
    ಸುತ್ತು ಹುಡುಕಿಯೆ ಬಚ್ಚಿ ಸಾವಗ ಕೋಪ ಬಪ್ಪದು ಸಹಜವೋ
    ಹುತ್ತವಿದ್ದದ ಗುಡ್ಡೆ ಹತ್ತರೆ ನೆನ್ಸಿಕೊಂಡರೆ ಹಾವಿನಾ
    ಹೆತ್ತ ಕರುಳಿನ ಹಾಂಗೆ ಬೇನೆಯು ಆಗಿ ಕಣ್ಣುಗ ತುಂಬುಗೂ

    ಹೊಟ್ಟೆ ತುಂಬ್ಸಿಕಿ ಗುಡ್ಡೆ ಇಳ್ದವು ಹೋರಿಯೊಟ್ಟಿಗೆ ಕಂಜಿಗೋ
    ಮೆಟ್ಟಿಕೊಂಡರು ತಾಂಟಿಕೊಂಬದು ಆಡಿಯೋಡುದು ಕಾಂಬಗಾ
    ಸಿಟ್ಟು ಮಾಯಕವಾಗಿ ಸೋತೆನು ಮೂಕ ಪ್ರಾಣಿಯ ಪ್ರೀತಿಗೆ
    ಪುಟ್ಟು ಕಂಜಿಗೊ ಮೋಜು ಮಾಡಲಿ ನಿತ್ಯ ಹೋಗಲಿ ಗುಡ್ಡೆಗೇ

    ಹಾಲು ಗಿಣ್ಣಿನ ಕೊಡುವ ವಂಶವ ನಾಶ ಮಾಡಿರೆ ಮನುಜಗೇ
    ಸೋಲು ಖಂಡಿತ ಗೋವು ಹತ್ಯೆಯ ಪಾಪ ಸುತ್ತುಗು ಜನ್ಮಕೇ
    ಮೇಲೆ ಬೀಳಲಿ ಗೋವ ಸಂತತಿ ಗೋರಿ ಕಟ್ಟುದು ಬೇಡದೋ
    ಸಾಲು ಸಾಲಿಲಿ ಹುಲ್ಲು ಮೇವಲೆ ಗುಡ್ಡೆ ಹತ್ತುದು ನೋಡುವೋ

    1. ಗೋವಿನ ಮೇಗಾಣ ಅಭಿಮಾನ ಪ್ರೀತಿ ಚೆ೦ದಕೆ ಮೂಡಿ ಬಯಿ೦ದು ಅಕ್ಕ.

      {ಸುತ್ತು ಹುಡುಕಿಯೆ ಬಚ್ಚಿ ಸಾವಗ ಕೋಪ ಬಪ್ಪದು ಸಹಜವೋ} – ಹುಡುಕಿಯೆ
      ಈ ಶಬ್ದ ಬದಲಾವಣೆ ( ನಾನನ) ಆಯೆಕ್ಕು.

      {ಸಿಟ್ಟು ಮಾಯಕವಾಗಿ ಸೋತೆನು ಮೂಕ ಪ್ರಾಣಿಯ ಪ್ರೀತಿಗೆ} – ಇಲ್ಲಿ ಮೂಕ ಪ್ರಾಣಿಯ ಪ್ರೀತಿ –ಮಾತ್ರೆಗೊ ಹೆಚ್ಚಿದ್ದು.

      {ಹಾಲು ಗಿಣ್ಣಿನ ಕೊಡುವ ವಂಶವ ನಾಶ ಮಾಡಿರೆ ಮನುಜಗೇ} -ಕೊಡುವ,ಮನುಜಗೇ ಈ ಶಬ್ದ೦ಗೊ ಬದಲಾಯೆಕ್ಕು.

      1. ಬರಿವ ಭರಲ್ಲಿ ಮಾತ್ರೆ ಲೆಕ್ಕ ಮರತ್ತೇ ಹೋಯ್ದುಃ)..
        ಈಗ ಸರಿಯಾತ..ಧನ್ಯವಾದ..

        ಹೋರಿ ಕ೦ಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆ೦ದವಾ
        ಭಾರಿ ಮೋಜಿಲಿ ನೋಡ್ಲೆ ನಿಂದರೆ ಬಾಕಿಯಕ್ಕದು ಅಲ್ಲಿಯೇ
        ಕೇರುಲಿದ್ದಿದ ಸೇರುಗಟ್ಟಲೆ ಪೇರುಸಿರ್ಸಿದ ಅಕ್ಕಿಯಾ
        ಸಾರು ಇಲ್ಲದೆ ಮಕ್ಕ ಉಣ್ಣವು ಬೇಕು ಬೆಂದಿಯು ಒಟ್ಟಿಗೇ

        ಹೊತ್ತು ಹೋಪಗ ಹೋರಿ ಕಂಜಿಗೊ ಬಾರದಿದ್ದರೆ ರಗ್ಳೆಯೋ
        ಸುತ್ತು ಹುಡ್ಕಿಯೆ ಬಚ್ಚಿ ಸಾವಗ ಕೋಪ ಬಪ್ಪದು ನೈಜವೋ
        ಹುತ್ತವಿದ್ದದ ಗುಡ್ಡೆ ಹತ್ತರೆ ನೆನ್ಸಿಕೊಂಡರೆ ಹಾವಿನಾ
        ಹೆತ್ತ ಕರುಳಿನ ಹಾಂಗೆ ಬೇನೆಯು ಆಗಿ ಕಣ್ಣುಗ ತುಂಬುಗೂ

        ಹೊಟ್ಟೆ ತುಂಬ್ಸಿಕಿ ಗುಡ್ಡೆ ಇಳ್ದವು ಹೋರಿಯೊಟ್ಟಿಗೆ ಕಂಜಿಗೋ
        ಮೆಟ್ಟಿಕೊಂಡರು ತಾಂಟಿಕೊಂಬದು ಆಡಿಯೋಡುದು ಕಾಂಬಗಾ
        ಸಿಟ್ಟು ಮಾಯಕವಾಗಿ ಸೋತೆನು ಮೂಕ ಜೀವಿಯ ಲೋಕಕೇ
        ಪುಟ್ಟು ಕಂಜಿಗೊ ಮೋಜು ಮಾಡಲಿ ನಿತ್ಯ ಹೋಗಲಿ ಗುಡ್ಡೆಗೇ

        ಹಾಲು ಗಿಣ್ಣಿನ ಕೊಡ್ವ ವಂಶವ ನಾಶ ಮಾಡಿರೆ ಮಾನವಾ
        ಸೋಲು ಖಂಡಿತ ಗೋವು ಹತ್ಯೆಯ ಪಾಪ ಸುತ್ತುಗು ಜನ್ಮಕೇ
        ಮೇಲೆ ಬೀಳಲಿ ಗೋವ ಸಂತತಿ ಗೋರಿ ಕಟ್ಟುದು ಬೇಡದೋ
        ಸಾಲು ಸಾಲಿಲಿ ಹುಲ್ಲು ಮೇವಲೆ ಗುಡ್ಡೆ ಹತ್ತುದು ನೋಡುವೋ

  6. ಲಾಯ್ಕ ಆಯಿದು ಎಲ್ಲರ ರಚನೆಗೊ.
    ಮಲ್ಲಿಕಾಯುತ ಮಾಲೆಯಪ್ಪುದು ರಂಸಜಂ ಜಭರಂ ಬರಲ್-ಹೇಳುತ್ತವು.ಇದು ಅಕ್ಷರವೃತ್ತ.
    ಇದಕ್ಕೆ ವಿಬುಧಪ್ರಿಯ ವೃತ್ತ ಹೇಳಿ ಹೆಸರೂ ಇದ್ದಡ.
    ಹತ್ತರೊಳ್ ಯತಿ ರಂಸಜಮ್ ಜಭರಂ ಬರಲ್ ವಿಬುಧಪ್ರಿಯಂ-ಹೇಳಿಯೂ ಹೇಳುತ್ತವು.

  7. ಅದಿತಿ, ಶೈಲಜ, ಇಂದಿರಾ ಅಕ್ಕಂದ್ರು ತುಂಬಾ ಚೆಂದಕೆ ಮಲ್ಲಿಗೆಯ ಮಾಲೆ ಕಟ್ಟಿದವು. ಎಲ್ಲ ಪದ್ಯಂಗಳೂ ಲಾಯಕಿದ್ದು. ಹಳ್ಳಿಯ ವರ್ಣನೆ ಸೊಗಸಾಯಿದು.
    ನವಗೆ ಪೇಟೆಲಿ ಹೋರಿ ಕಂಜಿಗೊ ಎಲ್ಲಿ ಕಾಂಬಲೆ ಸಿಕ್ಕುತ್ತು. ಇದು ಇಲ್ಲಿಯ ನೋಟ.

    ಭಾರ ಬೇಗಿನ ಬೆನ್ನಿಗೇರುಸಿ ಭಾರಿ ಪುಸ್ತಕ ತುಂಬುಸೀ
    ನೀರ ಕುಪ್ಪಿಯ ಕೈಲಿ ಹಿಡುದೂ ಮಕ್ಕೊ ಹೆರಟವು ಶಾಲಗೇ
    ಏರಿ ರಿಕ್ಷವ ಟಾಟ ಮಾಡಲು ನೆಂಪು ಬಂತದ ಮನಸಲೀ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ |

    ಸೀರೆ ಸುತ್ತಿದ ಕೊಶಿಲಿ ಕೂಸುಗೊ ಕಾಲೆಜಿಂಗೆಳಿ ಹೆರಟವೂ
    ಚೌರಿ ಹಾಕಿದ ತುಂಡುಕೂದಲ ಉದ್ದ ಜೆಡೆಯಾ ಮಾಟವು
    ಹಾರಿ ಚಂಗನೆ ಬೀಲ ಕುತ್ತಕೆ ಹಿಡುದು ಓಡಿದ ನೋಟವೂ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವೂ |

    1. ಒಳ್ಳೆ ಕಲ್ಪನೆ ಬೊಳು೦ಬು ಮಾವ.ಚೌರಿ ಹಾಕಿದ ಉದ್ದ ಜೆಡೆ ಬೀಲದ ಹಾ೦ಗೆ ಕ೦ಡತ್ತೋ?
      ಅಕ್ಷರವೃತ್ತಲ್ಲಿ ಗುರುಲಘು ಅಕ್ಷರ೦ಗೊ ಅದೇ ಸ್ಥಾನಲ್ಲಿ ಬರೇಕು.ಎರಡು ಲಘುಗಳ ಒ೦ದು ಗುರು ಹೇಳಿ ತೆಕ್ಕೊ೦ಬಲೆ ಎಡಿಯ.ಹಾ೦ಗಾಗಿ,
      {ನೀರ ಕುಪ್ಪಿಯ ಕೈಲಿ ಹಿಡುದೂ ಮಕ್ಕೊ ಹೆರಟವು ಶಾಲಗೇ}- ಹಿಡುದೂ , ಹೆರಟವು
      {ಏರಿ ರಿಕ್ಷವ ಟಾಟ ಮಾಡಲು ನೆಂಪು ಬಂತದ ಮನಸಲೀ} – ಮನಸಲೀ
      {ಸೀರೆ ಸುತ್ತಿದ ಕೊಶಿಲಿ ಕೂಸುಗೊ ಕಾಲೆಜಿಂಗೆಳಿ ಹೆರಟವೂ} – ಕೊಶಿಲಿ,ಹೆರಟ
      {ಚೌರಿ ಹಾಕಿದ ತುಂಡುಕೂದಲ ಉದ್ದ ಜೆಡೆಯಾ ಮಾಟವು} – ಜೆಡೆಯಾ
      {ಹಾರಿ ಚಂಗನೆ ಬೀಲ ಕುತ್ತಕೆ ಹಿಡುದು ಓಡಿದ ನೋಟವೂ} – ಹಿಡುದು

      ಈ ಶಬ್ದ೦ಗೊ ಬದಲಾವಣೆ ಆಯೆಕ್ಕು.

  8. ಅಕ್ಕಾ ವರ್ಣನೆ ಪಸ್ಟಾಯಿದು….. ೩ನೇದಂತೂ ಸೂಪರೂ……..

    ಈ ಕೆಲವು ಕಡೆ ಮಾತ್ರೆಗೊ ಹೆಚ್ಚಾಯಿದಾ ಹೇಳಿ….
    ಕಪ್ಪು ರೋಮವು ನೊಂಪು ಮುಟ್ಟುಲೆ ಎಷ್ಟು ಕೋಮಲ ಸ್ಪರ್ಶವೂ
    ಹಾಲು ಹೀರೊಗ ಎಂಥ ಹರ್ಷವು ಎಂಥ ತೃಪ್ತಿಯು ಮೋರೆಲೀ
    ತೇಲಿ ಹೋವ್ತದು ಅಬ್ಬೆ ನೆಕ್ಕೊಗ ತುಂಬು ಪ್ರೇಮದ ತೋಡಿಲೀ

    1. ಓ ಅಪ್ಪನ್ನೇ. ಮಾತ್ರೆ ಹೆಚ್ಚಾಯ್ದು.
      “ಹಾಲು ಹೀರೊಗ ಎಂಥ ಹರ್ಷವು ಎಂಥ ತೃಪ್ತಿಯು ಮೋರೆಲೀ” ಇಲ್ಲಿ ಸರಿ ಇದ್ದು. “ತೃ” ಹೇಳುದು ಲಘು. ಹಾಂಗಾಗಿ.

  9. ಕಪ್ಪು ರೋಮವು ನೊಂಪು ಮುಟ್ಟುಲೆ ಎಷ್ಟು ಕೋಮಲ ಸ್ಪರ್ಶವೂ
    ತುಪ್ಪ ಕಿಟ್ಟಿದ ಬಾಬೆ ಬೆನ್ನಿಲಿ ಕೈಯು ಜಾರುವ ಹಾಂಗೆಯೇ
    ಚಪ್ಪೆ ಮೋರೆಯ ಮಾಡಿ ನಿಲ್ತದು ದೂರ ಮಾಡಿರೆ ಅಬ್ಬೆಯಾ
    ಸೊಪ್ಪು ಕಂಡರೆ ಭಾರಿ ಗೌಜಿಲಿ ಹಾರಿ ಬತ್ತದು ಮೇಗೆಯೇ

    ಜಾಲು ಪೂರವೆ ಘಂಟೆ ಶಬ್ದವ ಮಾಡಿ ಸುತ್ತುಗು ಬಿಟ್ಟರೇ
    ಬೇಲಿ ಹಾರುಲು ಹಿಂದೆ ನೋಡದು ಮುಳ್ಳು ಕಂಟಿಯು ತಾಗಿರೂ
    ಹಾಲು ಹೀರೊಗ ಎಂಥ ಹರ್ಷವು ಎಂಥ ತೃಪ್ತಿಯು ಮೋರೆಲೀ
    ತೇಲಿ ಹೋವ್ತದು ಅಬ್ಬೆ ನೆಕ್ಕೊಗ ತುಂಬು ಪ್ರೇಮದ ತೋಡಿಲೀ

    ಕೊಂಬು ಬಪ್ಪಲೆ ಕಾಲ ದೂರವೆ ಇದ್ದು ಕಂಜಿಗೆ ಆದರೂ
    ಜಂಬಕೇನುದೆ ಕಮ್ಮಿ ಕಾಣದು ಬತ್ತು ತಾಡುಲೆ ಓಡಿಯೇ
    ಕಂಬ ಹತ್ತರೆ ಕಾಲು ಹಾಕುಲೆ ಕಂಡು ಕಟ್ಟುದು ಭಾರಿಯೇ
    ತುಂಬ ಹೊತ್ತಿಗೆ ಬಳ್ಳಿ ಕಟ್ಟಿರೆ ಬೊಬ್ಬೆ ಹಾಕುದು ಕೇಳುಗೂ

    ಹಾರಿ ಚಂಗನೆ ಓಡಿ ಹೋವ್ತದ ಥೇಟು ಜಿಂಕೆಯ ಹಾಂಗೆಯೇ
    ಮೇರೆ ಮೀರಿದ ತುಂಬು ಸಂತಸ ಬಂಧ ಬಿಡ್ಸಿದು ಹೇಳಿಯೋ
    ತಾರೆ ಕಣ್ಣುಗೊ ಉದ್ರಿ ಬೀಲವು ಎಷ್ಟು ಚೆಂದವು ನೋಡಿರೋ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ

  10. ಮಲ್ಲಿಕಾಯುತ ಮಾಲೆಯಪ್ಪುದು ರಂಸಜಂಜಬರಂ ಬರಲ್
    (ಮಲ್ಲಿಗೆ ಮಾಲೆ ಜಂಬಾರ ಬಪ್ಪಗ ) ::)
    ಹೇಳುದರ ಕನ್ನಡ ಮಾಸ್ಟ್ರ ಪೆರ್ಲ ಶಾಲೆಲಿ ಹೇಳಿ ಕೊಟ್ಟದು ಈಗಳೂ ನೆಂಪಿದ್ದು…..
    ರ,ಸ,ಜ,ಜ,ಭ,ರ ಗಣಂಗೊ ಬರಕ್ಕು ಹೇಳಿ… ಆದರೆ ಈ ೩- ೪ ರ ವಿಂಗಡನೆ ಗೊಂತಿತ್ತಿಲ್ಲೆ…

    1. ಧನ್ಯವಾದಂಗೊ ಶೈಲಜಾ . ನಿಂಗಳ ರಚನೆಯೂ ಲಾಯ್ಕಿದ್ದು . ಜಂಬರಕ್ಕಪ್ಪಾಗ ಮಲ್ಲಿಗೆಮಾಲೆ ಕಟ್ಟುಲೆ ಹೊಸ ಸೂತ್ರ ಒಂದು ಗೊಂತಾತು.ನೆನಪಿಲಿ ಮಡಿಕ್ಕೊಂಬಲೆ ಸುಲಾ..ಭ ಅಪ್ಪಾಂಗೆ ಎಷ್ಟು ಟ್ರಿಕ್ಕುಗೊ ಇತ್ತು ಮೊದಲಾಣವಕ್ಕೆ. ಅವಕ್ಕೆಲ್ಲಾ ನಾವು ಋಣಿಗಳಾಗಿರೆಕ್ಕು.

  11. ಅತ್ತೆದು ರೈಸಿದ್ದು……
    ಜಾರಿ ಚಂದಿರ ಮೂಡ ಬಾನಿಲಿ ಸೂರ್ಯ ಬಪ್ಪದ ಕಂಡೆಯಾ
    ಭಾರಿ ಚೆಂದಕೆ ಹಿಂಡಿ ಮಡ್ಡಿಯ ಕೂಡಿ ಬಾಲ್ದಿಲಿ ಉರ್ಪಿಕೀ
    ಓರೆ ಕಣ್ಣಿಲೆ ಗಡ್ಸು ಕಂಜಿಗೆ ಮಾಡಿ ಟಾಟವ ಹಟ್ಟಿಲೀ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ ||

    ಸೋರೆ ಕುಂಬಳ ತೊಂಡೆ ಸಾಲಿನ ಪಡ್ಚ ಮಾಡುವ ತೀಟೆಲೇ
    ಹಾರಿ ಬೇಲಿಯ ಬಿಂಗಿ ಬುದ್ಧಿಲಿ ಲೂಟಿ ಧಾಳಿಯ ಯೋಜನೇ
    ಜೋರು ಮಾಡುಲೆ ಬಂದ ಕೂಸಿನ ತಾಡಿಯೋಡಿಸಿ ನೋಡದಾ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ ||

    1. ಪದ್ಯ ಲಾಯ್ಕು ಆಯ್ದು. ಎರಡನೇ ಪದ್ಯಲ್ಲಿ ಅಂತೂ ಜಾನುವಾರುಗೊ ಎಲ್ಲದರ ಧೂಳಿಪಟ ಮಾಡಿ ಓದುವ ದೃಶ್ಯ ಕಣ್ಣೆದುರು ಬಂತು.

  12. ಪಾರತತ್ತಿಗೆ ಸಣ್ಣಬೆಣ್ಚಿಲಿ ಎದ್ದು ಹೋಕದ ಹಟ್ಟಿಗೇ
    ದಾರಿನೋಡುಗು ಕಂಜಿಯಬ್ಬೆಗೊ ಹುಲ್ಲು ಹಿಂಡಿಯ ತಿಂಬಲೇ
    ನೀರತೋಕಿಸಿ ಮೈಯ ತಿಕ್ಕುಗು ನಾಣಿಭಾವನು ಗೋವಿನಾ
    ಮೂರು ಚೆಂಬಿಲಿ ಹಾಲ ತುಂಬಿಸಿ ತಂದು ಕಾಸುಲೆ ಹೇಳುಗೂ
    ಚಾರು ಕಂಜಿಯ ಬೞಿ ಬಿಚ್ಚುಗು ಒಳ್ದ ಹಾಲಿನ ಹೀರುಲೇ
    ಹೀರಿ ಹಾಲಿನ ಕಾಲುಕಿತ್ತವು ಒಂದೇ ಓಟವು ಕಂಜಿಗೋ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ
    ನೂರು ಕಣ್ಣುಗೊ ಬೇಕು ಹೇಳಿಯೆ ಕಾಣ್ತು ನೋಡುಲೆ ಅಂಬಗಾ ॥

    ಊರಹೆಂಚಿನ ನಾಕು ಅಂಕಣ ಕೂಡಿಗೊಂಡಿಹ ಸೌಧವೂ
    ಸೇರಿಗೊಂಡಿದು ಗುಡ್ಡೆ ತೋಟವು ಗೆದ್ದೆ ಬೈಲಿನ ಹಿತ್ತಿಲೂ
    ಭಾರಿ ಚೆಂದಲಿ ಹಟ್ಟಿ ತುಂಬುಗು ಹಾಲು ಹಿಂಡುವ ಹೈನುಗೋ
    ಮೂರುಮೂರ್ತಿಗೊ ಬೀಡುಬಿಟ್ಟಿಹ ಕಾಮಧೇನಿನ ವಂಶವೂ
    ಮಾರಿಹೋದವು ಎಲ್ಲವನ್ನುದೆ ಪೇಟೆ ಸೇರುಲೆ ಮುಪ್ಪಿಲೀ
    ಸೂರೆಗೊಂಡವು ಚೇಟಕುಟ್ಟಿಗೊ ಹುಲ್ಲು ಹುಟ್ಟುವ ಗುಡ್ಡೆಯಾ
    ಜಾರಿಹೋಯಿದು ಎಲ್ಲಚಿತ್ರಣ ಎಲ್ಲಿ ಸಿಕ್ಕುಗು ಕಾಂಬಲೇ
    ಹೋರಿ ಕಂಜಿಗೊ ಹುಲ್ಲು ಮೇವಲೆ ಗುಡ್ಡೆ ಹತ್ತುವ ಚೆಂದವಾ ॥

    1. ಅತ್ತೆ, ನಿಂಗಳ ಪದ್ಯ ನೋಡಿ ಕುಶಿ ಆತು. ಊರಿನ ಚಿತ್ರಣ ಬಂತು ಕಣ್ಣೆದುರು.

    2. ಅತ್ತೇ,
      ಆನು ರಾಗ ಹಾಕಿದೆ. ನಿಂಗಳ ಪದ್ಯ ತುಂಬ ಲಾಯ್ಕಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×