Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಸ್ರಗ್ವಿಣೀ ಛ೦ದಸ್ಸಿಲಿ ಒ೦ದು ಪ್ರಯತ್ನ ಮಾಡುವ°.
ಈ ಅಕ್ಷರ ವೃತ್ತದ ಲಕ್ಷಣ ಹೀ೦ಗಿದ್ದು :
-೧- -೧- -೧- -೧- ( ನಾನನಾ ನಾನನಾ ನಾನನಾ ನಾನನಾ )
ಶತಾವಧಾನಲ್ಲಿ ಈ ಛ೦ದಸ್ಸಿಲಿ ಅವಧಾನಿಗೊಕ್ಕೆ ಕೊಟ್ಟ ಸಮಸ್ಯೆ “ಪದ್ಯಪಾನ”ಲ್ಲಿ ಈ ವಾರದ ಸಮಸ್ಯೆಯಾಗಿ ಬಯಿ೦ದು.
ನಮ್ಮ ಸಮಸ್ಯೆ ಹೀ೦ಗಿದ್ದು ಃ
“ನೀರು ಚೇಪದ್ದರೀ ತೋಟ ಕೆ೦ಪಕ್ಕು ಬಾ॥ “
ಆದಿಪ್ರಾಸದ ನಿಯಮ ಪಾಲಿಸಿಗೊ೦ಡು,ಪ್ರತಿ ಸಾಲಿಲಿ ಇದೇ ಮಾತ್ರಾವಿನ್ಯಾಸಲ್ಲಿ ಒಳುದ ಮೂರು ಸಾಲುಗಳ ಬರದು ಪೂರ್ಣ ಮಾಡುವ°.
ಚೇಪು=ತೋಕು,ಹಾಕು.
ಹ್ಮ್,ಈಗ ಸ್ಪ್ರಿ೦ಕ್ಲರ್ ,ಡ್ರಿಪ್ಪು ಬ೦ದು ನೀರು ಚೇಪುವ ದ೦ಬೆ,ಚಿಳ್ಳಿ ಎಲ್ಲಿದ್ದು ಹೇಳಿ ಹುಡುಕ್ಕೆಕ್ಕಷ್ಟೆ ಅಲ್ಲದೋ?
ಕಾರುಬಾರಿಂಗೆ ಹೇದಪ್ಪನೇ ಕೂರ್ಸಿದಾ
ಊರು ಸುತ್ತಿದ್ದರೂ ಆಳುಗೊಕ್ಕೇ ಬರಾ
ಆರು ಸಿಕ್ಕದ್ದರೂ ನಾವು ಮಾಡೆಕ್ಕದಾ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ
“ಮೂರು ಹೊತ್ತಿಲ್ಲಿಯೂ ಟೀವಿಲೇ ಹೊಗ್ಗೆಡಾ
ಜೋರು ಮಾಡದ್ದೆ ಕೇಳ್ತಿಲ್ಲೆಯಾ ಏ ಮಗಾ
ಬಾರ಼ ಹೋಪ಼ಾತ ವೈಶಾಖಲೀಗಲ್ಲಡೀ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ ||”
ನೀರು ಧಾರಾಳ ಹೇಳಿಕ್ಕಿ ಸುಬ್ಬಪ್ಪನೇ
ಕಾರು ಬಿಟ್ಟೊಂಡು ಸಮ್ಮೇಳನಂಗೊಕ್ಕುದೇ
ಊರಿಡೀ ಜೆಂಬ್ರದೂಟಕ್ಕುದೇ ಹೋದರೇ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ
ಕಾರುಬಾರೆಲ್ಲ ಸಾಕೊ೦ದರೀ ಹೋಪ° ಬೈ
ಸಾರಿ ನೀನೋದು ಒಪ್ಪಣ್ಣನೊಪ್ಪ೦ಗಳಾ
ಘೋರ ವೈಶಾಖವೆಲ್ಲಿದ್ದವೀ ಆಳುಗೋ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ ||
ಮುಳಿಯದಣ್ಣಾ,ಆಳುಗಳೋ?ಇದ್ದವಪ್ಪಾ ಇದ್ದವು .ಕೆಲಸಕ್ಕೆ ಮಾಂತ್ರ ಸಿಕ್ಕವು ಅಷ್ತೆ!ಲಾಯಕ್ಕಾಯಿದು.
ಏರಿಗೊಂಡೋಯಿದೂ ಸೂರ್ಯನಾ ತಾಪವೂ
ಬೋರು ತೋಡಿದ್ದವೂ ಮೆಟ್ಟು ಮೆಟ್ಟಿಂಗುದೇ
ಚೂರೆಚೂರಿಪ್ಪದೂ ಮೇಗಣಾ ಬಾಬಿಲೀ
ನೀರು ಚೇಪದ್ದರೀ ತೋಟ ಕೆಂಪಕ್ಕು ಛೇ ॥
ಛೆ..ವಿಷು ಸಮಯಲ್ಲೇ ಇಷ್ಟು ತತ್ವಾರ ಆತನ್ನೆ ಅತ್ತೆ.ಇನ್ನು ಮು೦ದೆ ಮಳೆ ಬಾರದ್ದರೆ ಹೇ೦ಗಕ್ಕೊ?
ಪೂರಣ ಮಾ೦ತ್ರ ಲಾಯ್ಕ ಆಯಿದು.
ಬಾಬಿಲಿ = ಪಾಲಿಲಿ ಹೇಳಿಯೊ?
ಎನ್ನ ಅಜ್ಜಿ ಅತ್ತೆ ಎಲ್ಲಾ ಬಾವಿಗೆ `ಬಾಬಿ ‘ ಹೇಳಿಗೊಂಡಿದ್ದಾಂಗೆ ನೆನಪು. ಆನು ಸಣ್ಣಾದಿಪ್ಪಾಗ ಕೇಳಿದ ನೆನಪು ಮಾಂತ್ರ -[ಪುತ್ತೂರು ಸೀಮೆಲಿ ] ಆನು ಮಾತಾಡಿಗೊಂಡಿದ್ದದು ಪಂಜ ಸೀಮೆಯ ಕನ್ನಡ! ಹಾಂಗಾಗಿ ಎನ್ನ ನೆನಪಿನ ಚೀಲಂದ ತೆಗದ ಶಬ್ದ ‘ಬಾಬಿ’ – ಎಷ್ಟು ಸರಿಯೋ ಗೊಂತಿಲ್ಲೆ.
ಹಾಂಗಾರೆ ಅದು “ಬಾಮಿ” ಹೇಳಿ ಆಯೆಕ್ಕಾತ ಹೇಳಿ. ಯಾಕೆ ಹೇಳಿರೆ ಪಂಜಸೀಮೆಲಿ “ಬಾಮಿ” ಹೇಳುದು.
“ಬಾವಿ” ಗೆ “ಬಾಬಿ” ಹೇಳಿ ಆನು ಕೇಳಿದ್ದಿಲ್ಲೆ. ಅಥವ “ಬಾಮಿ” ಮತ್ತು “ಬಾಬಿ” ಹೇಳಿ ಎರಡೂ ರೀತಿಯ ಪ್ರಯೋಗವೂ ಇಕ್ಕು. ಎನಗೆ ಹೆಚ್ಚು ಮಾಹಿತಿ ಇಲ್ಲೆ.
ಪಂಜಸೀಮೆಲಿ ‘ಬಾಮಿ’ ಹೇಳಿಯೇ ಹೇಳುದು. ಪುತ್ತೂರುಸೀಮೆಲಿ ‘ಬಾಬಿ’ ಹೇಳಿ ಕೇಳಿದ ನೆನಪು ಅಷ್ಟೆ. ನೆನಪು ಪೂರ ಸರಿಯೋ ಗೊಂತಿಲ್ಲೆ- ಅಂಥಾ ಪ್ರಯೋಗ ಇದ್ದತ್ತಿಲ್ಲೆ ಹೇಳಿ ಆದರೆ ‘ಬಾವಿ’ ಹೇಳಿಯೇ ತಿದ್ದಿಗೊಳ್ತೆ.
ಎನ್ನ ಮನೆ ಅಜ್ಜಿಯೂ , ಇನ್ನೊ ಕೆಲವು ಜನ೦ಗೊ ‘ಬಾಬಿ’ ಹೇಳೂದರ ಆನೂ ಕೆಳೀದ್ದೆ ಅತ್ತೆ.
ಅತ್ತೆದು ಪಷ್ಟಾಯಿದು….
ಆರಿ ಬೇರೆಲ್ಲ ಬೆಂದಿಕ್ಕಡಕ್ಕೇ ಕೊಬೇ
ಬೋರುವೆಲ್ ಖಾಲಿಯಾಗಿಲ್ಲಿ ಪೋಕಿದ್ದಿದಾ
ಮಾರಿ ಚೋಮಯ್ಯ ಬೈಂದಿಲ್ಲೆ ಇನ್ನೀಗಳೇ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ ||
ವಾರಕೊಂಸರ್ತಿಯೇ ಬಪ್ಪ ಕುಂಞಜ್ಜನಾ
ಚಾರೆ ತೋಟಕ್ಕೆ ಮೇಗಾಣ ಕಟ್ಟಂದ ಧೋ
ಧಾರೆ ಬೀಳುತ್ತು ಏ ಮಾಣಿ ದಂಡೆಂದಲೇ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ ||
ರೈಸಿದ್ದು ಶೈಲಜಕ್ಕಾ.
ಧನ್ಯವಾದಂಗೊ ಅಣ್ಣಾ
ಶೈಲಕ್ಕಾ, ಲಾಯಕ್ಕಾಯಿದು.
ಧನ್ಯವಾದಂಗೊ…. ಎನ್ನ ೨೦೦೦ನೇ ಇಸವಿಲಿ ನಿಂಗಳ ಅಣ್ಣ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಕಟೀಲಿಂಗೆ ಕರಕ್ಕೊಂಡು ಹೋಯ್ದವು…. ಪೆರ್ಲ ಶಾಲೆಂದ….. ತುಂಬಾ ಅವಿಸ್ಮರಣೀಯ… ನಿಂಗಳೂ ಒಂದರಿ ಬದಿಯಡ್ಕಲ್ಲಿ ಎನಗೆ ನಿಂಗಳ ಕವನ ಸಂಕಲನ ಕೊಟ್ಟಿದೀ…. 🙂 🙂
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ
ಯಾರಿದಾ ಭೂಮಿಯಾ ತಂಪು ಮಾಡೆಕ್ಕದಾ
ಸೋರಿದಾ ವೃಷ್ಟಿಯಾ ಭೂಮಿಲೇ ಇಂಗುಸೀ
ನೀರಿನಾ ಮಟ್ಟವಾ ಹೆಚ್ಚಿಗೇ ಮಾಡುವಾ° ॥
ಬೇರು ಮೇಗೆದ್ದಿದೂ ದಂಡೆ ಬಾಯ್ಬಿಟ್ಟಿದೂ
ಕೋರು ತೊಯ್ದಂಬೆಲೀ ಇಪ್ಪ ನೀರೆಲ್ಲವಾ
ಆರು ನೋಡದ್ದರೂ ನಮ್ಮದೇ ಅಲ್ಲದಾ
ನೀರು ಚೇಪದ್ದರೀ ತೋಟ ಕೆಂಪಕ್ಕು ಬಾ
(ಅಂಗನಾಂ ಅಂಗನಾಂ ಅಂತರೇ ಮಾಧವಂ
ಮಾಧವಂ ಮಾಧವಂ ಚಾಂತರೇಣಾಂಗನಾ
ಇತ್ಥಮಾ ಕಲ್ಪಿತೇ ಮಂಡಲೇ ಮಧ್ಯಗೌ
ಸಂಜಗೌ ವೇಣುನಾ ದೇವಕೀ ನಂದನಾ )
ಇದು ಲೀಲಾಶುಕ ಹೇಳ್ತ ಕವಿ ಬರದ್ದು ಹೇಳಿ ನೆಂಪು .ತಪ್ಪಿಪ್ಪಲೂ ಸಾಕು ,ಮೇಗೆ ಹೇಳಿದ ವೃತ್ತದ ಹಾಂಗೆ ಕಾಣುತ್ತು.ತಿಳಿದವು ಹೇಳೆಕ್ಕು .
ಭಾರೀ ಲಾಯ್ಕಾಯ್ದು ಬಾಲಣ್ಣ.
ಮೇಲೆ ಉದಾಹರಿಸಿದ ಕಾವ್ಯಭಾಗ ಸ್ರಗ್ವಿಣೀ ಛ೦ದಸ್ಸಿಲಿ ಕಾಣುತ್ತು.ಅದರಿ೦ದ ಹೆಚ್ಚು ಗೊ೦ತಿಲ್ಲೆ.
ಪಾರು ಬೇಗಪ್ಪಲೇ ಹೆಜ್ಜೆದೇ ಸೇರ್ಸಲಾ
ನೀರು ಸಾರೊಂದು ಸಾಕಿ೦ದು ಪಾಲಿಂದಿದಾ
ನೀರಿನಾ ತೋಕಿಯೇ ಬಂದು ಮತ್ತು೦ಬನೋ
ನೀರು ಚೇಪದ್ದರೀ ತೋಟ ಕೆ೦ಪಕ್ಕು ಬಾ
ಗ೦ಡ ಹೆ೦ಡತಿ ಪಾರ್ವತಿ (ಪಾರು) ಯತ್ತರೆ ಹೇಳೂದು
ಪಶ್ಟಾಯಿದು.
ಯೇ ಅಕ್ಕಾ, ನಿಂಗೊಗೆ ಈ ಪಾರು ಅತ್ತೆಯ ಯೇವಾಗಂದ ಗುರ್ತ ..?
ಧನ್ಯವಾದ೦ಗೊ ಮಾವ. ಪಾರು ಅತ್ತೆ ಎನ್ನ ಇಲ್ಲಿ ಪಾರು ಮಾಡಿದ್ದಕ್ಕಾಗಿ ನಿ೦ಗೊ ಗುರ್ತ ಕೇಳ್ತಾ ಇದ್ದಿರಾ?
Sampadakare.. Idu navagaradiya..:-(