Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ”ರಥೋದ್ಧತಾ” ಛ೦ದಸ್ಸಿಲಿ ಪ್ರಯತ್ನ ಮಾಡುವ.
ಪ್ರತಿ ಸಾಲಿಲಿ 11 ಅಕ್ಷರ೦ಗೊ ಬಪ್ಪ, ಅಕ್ಷರವೃತ್ತಲ್ಲಿಪ್ಪ ಛ೦ದಸ್ಸಿನ ಲಕ್ಷಣ ಹೀ೦ಗಿದ್ದು ಃ
– ೧ – ೧೧೧ – ೧ – ೧ – ( ನಾನನಾನನನನಾನನಾನನಾ).
ಶಾಲೆಲಿ ಕನ್ನಡ ಪ೦ಡಿತರು “ರ೦ನರ೦ಲೆಗಮಿರಲ್ ರಥೋದ್ಧತ೦” ಹೇಳಿ ಕಲುಶುತ್ತವಡ.
ಉದಾಹರಣೆಗೆ ”ಮಿತ್ರವಿ೦ದಾಗೋವಿ೦ದ”ದ ಈ ಚೌಪದಿಯ ನೋಡುವ°.
ದಾವು ನಿನ್ನ ಕೊರಲೇರಿತೆನ್ನಗ೦।
ಜೀವಮೆನ್ನ ಕೊರಲೇರಿತನ್ನೆಗ೦।
ಏವೆನೇವೆನಿನಿತೇಕೆ ಸಾಹಸ೦।
ಭಾವೆಯಿಲ್ಲಿ ಬರಿದಿ೦ತು ಪೂಣ್ದಪಯ್।।
ನಮ್ಮ ಸಮಸ್ಯೆ ಹೀ೦ಗಿದ್ದು ಃ
” ಸೋರುಗೀ ಒಡದ ಓಡು ನೋಡು ಬಾ”
ಹೇ೦ಗೂ ಮಳೆ ಅಟ್ಟಣೆ ಸುತ್ತಲೂ ಕಾಣುತ್ತು.ನಾವೂ ಒ೦ದರಿಯಾಣ ತಯಾರಿ ಶುರು ಮಾಡುವ° , ಅಲ್ಲದೋ?
ಸೇರಿತೋ ಮುಗಿಲು ಕಪ್ಪು ಕರ್ಗುಡೇ
ಜೋರು ಸೆಡ್ಲು ಮಳೆ ಬಪ್ಪ ಲಕ್ಷಣಾ
ಹಾರುಗಾ ಮಡಲ ತಟ್ಟಿ ಗಾಳಿಗೇ
ಸೋರುಗೀ ಒಡದ ಓಡು ನೋಡು ಬಾ
ಸೋರುಗೀ ಒಡದ ಓಡು ನೋಡು ಬಾ
ಭಾರಿ ಬಪ್ಪ ಮಳೆಲಲ್ಲಿ ಚೆಂಡಿಯಾ
ಸೀರೆಣಿಂದ ಜೆಗಿಲಿಲ್ಲಿ ಜಾಗ್ರತೇ
ನೀರು ಬಕ್ಕು ತಡೆ ಹಾಳೆ ಕಟ್ಟಿಯೇ
ಮೇಲೆ ಮಾತ್ರೆ ಹೆಚ್ಚಾದ್ದದರ ಸರಿ ಪಡಿಸಿ
ಜೋರು ಬಕ್ಕ ಮಳೆ ಆಟಿ ತಿಂಗಳೇ ?
ಊರಿಡೀ ಹುಡುಕೆ ಬಾರವಾಳುಗಾ
ಟೇರೆಸಾಗದೆಯೆ ಮಾಡು ಸೋತಿದೂ
ಸೋರುಗೀ ಒಡದ ಓಡು ನೋಡು ಬಾ ॥
ಈಗ ಸರೀ ಆತು ಶೈಲಜಕ್ಕಾ.
ಆದರೆ,ಟೇರೇಸು ಬೆಶಿಲಿ೦ಗೆ ಒಡದರೆ ಸೋರೊದೇ…
ಊರಿಡೀ ಹುಡುಕೆ ಆಳುಗೊಕ್ಕೆ ಬರಾ
ಟೇರೆಸಾಗದೆಯೆ ಮಾಡು ಸೋತಿದೂ
ಸೋರುಗೀ ಒಡದ ಓಡು ನೋಡು ಬಾ
ಜೋರು ಬಕ್ಕ ಮಳೆ ಆಟಿ ತಿಂಗಳೇ ?
ಸೇರು ಮೂರರದು ಓಡುಪಾಳೆಯಾ
ಭಾರಿ ಹುರ್ಪಿಲಿಯೆ ಮಾಡಲೋದರೆ
ಚೂರು ತಾಗಿತದ ಓಡು ಗೋಡೆಗೇ
ಸೋರುಗೀ ಒಡದ ಓಡು ನೋಡು ಬಾ ॥
ಕಾರ ತಿಂಗಳಿಲಿ ಮೋಡ ಕುಟ್ಟಿರೇ
ಭಾರಿ ಶಬ್ದವದು ಕೇಳಿ ಬಕ್ಕದಾ
ಜೋರಿಲೀ ಬಿರಿಗು ಬಾನ ಓಡುದೇ
ಸೋರುಗೀ ಒಡದ ಓಡು ನೋಡು ಬಾ
ಹು ಹು..ಓಡುಪಾಳೆಯ ಹಿಟ್ಟು ಸೋರಿರೆ ಕಾಯಿಹಾಲಿ೦ಗೆ ಗೆತಿ? ಭಾರೀ ಕಲ್ಪನೆ..
ದೂಳು ಮಳೆ ಬ೦ದರೆ ಗಡಿಬಿಡಿಯೇ..
ಲಾಯ್ಕ ಆಯಿದು ಮಾವ.
ಬೋರು ಗುಡ್ದೆಯ ಹೊಡೆಂಗೆ ಮೋಡ ಗಾ-
ವೇರಿಯಪ್ಪಗಳೆ ಗಾಳಿ ಬೀಸಿರೇ
ಜೋರು ದೂಳು ಮಳೆ ಒಟ್ಟು ಬಂದರೇ
ಸೋರುಗೀ ಒಡದ ಓಡು ನೋಡು ಬಾ
ಕಾರು ಕುಟ್ಟಿಕಿ ಪರಾರಿಯಾಯಿದೂ
ಟಾರುರೋಡಿಲಿ ಕವುಂಚಿ ಬಿದ್ದಿದಾ°
ದಾರಿಹೋಕ, ತಲೆಜೆಪ್ಪಿ ನೆತ್ತರೂ
ಸೋರುಗೀ ಒಡದ ಓಡು ನೋಡು ಬಾ ॥
ಓಡು= ತಲೆಬುರುಡೆ
ಲಾಯ್ಕಿದ್ದು ಕಲ್ಪನೆ ಅತ್ತೆ.ಪ್ರಥಮ ಚಿಕಿತ್ಸೆ ಬೇಗ ಆಯೇಕು..