Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ” ಭುಜ೦ಗ ಪ್ರಯಾತ “ ಹೇಳ್ತ ಛ೦ದಸ್ಸಿನ ನೋಡುವ°.
ಪ್ರತಿ ಸಾಲಿಲಿ 12 ಅಕ್ಷರ೦ಗೊ ಬಪ್ಪ ಈ ಅಕ್ಷರ ವೃತ್ತದ ಲಕ್ಷಣ ಹೀ೦ಗಿದ್ದು ಃ
೧ – –/ ೧ – –/೧ – -/ ೧ – – ( ನ ನಾ ನಾ ನ/ ನಾ ನಾ/ ನ ನಾ ನಾ ನ / ನಾ ನಾ )
” ಭುಜ೦ಗಪ್ರಯಾತ೦ ಬರಲ್ ನಾಲ್ಕು ಯ೦ಗಳ್ “ ಹೇಳಿ ಕನ್ನಡ ಪ೦ಡಿತರು ಕಲುಶುಗು.
ಉದಾಹರಣಗೆ ಉದ್ಭಟ ಕಾವ್ಯದ ಈ ಚರಣ ನೋಡುವ° ಃ
ಚಿದಾಕಾರಲಿ೦ಗಾ೦ಘ್ರಿಯೊಳ್ ಚೇತನಾಗ್ರ೦
ಸದಾನ೦ದದಿ೦ ಬೆಚ್ಚಿರಲ್ ಭಕ್ತಿಯಿ೦ದ೦
ಮದಾನೀಕಮ೦ ಮೆಟ್ಟಿ ಮಾ೦ಗಲ್ಯರೂಪ೦
ಮುದ೦ಬೆತ್ತು ಮೇಣುದ್ಭಟ೦ ಕಣ್ಗೊಳಿಪ್ಪ೦॥
ನಮ್ಮ ಸಮಸ್ಯೆ ಃ
” ನೆಡಕ್ಕೊ೦ಡು ಹೋಗೀಗಳೇ ಹೆರ್ಕಡಕ್ಕೇ “
ಈ ಸರ್ತಿಯೂ ಎಲ್ಲೋರ ಪೂರಣಂಗೊ ರೈಸಿದ್ದು. ಏತಡ್ಕ ಮಾವನ ತೋಟದ ಕೆಲಸ ಪಷ್ಟಾಯಿದು
ನೆಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ
ಇಡೀತೋಟ ಬಲ್ಲೆಂದ ಮುಚ್ಹಿದ್ದು ಸೊಕ್ಕೀ
ಹಿಡುಕ್ಕೊಂಡು ಹೋಗೊಂದು ಬಾಳಂಕಠಾರೀ
ಕಡುಕ್ಕೊಂಡು ಹೋಯೆಕ್ಕು ಸೊಕ್ಕಿದ್ದ ಬಲ್ಲೇ
ಮಾವಾ,ಸಪಾಯಿ ಆತೀಗ..ರೈಸಿದ್ದು.
ಜಡಿಕುಟ್ಟಿ ಸೊಯ್ಪುತ್ತು ಬೀಸುತ್ತ ಗಾಳೀ
ಗಡಕ್ಕೆಲ್ಲ ಉದ್ರಿತ್ತು ತೋಟಲ್ಲಿ ನೋಡೂ
ಬಡುಕ್ಕೊಂಡ್ರು ಬೈಂದಿಲ್ಲೆ ಆಳೀನ ದಂಡೂ
ನೆಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ॥
ಕಡೆಕ್ಕಂಜಿ ಹೇಳೀಯೆ ಕೊಂಡಾಟ ಹೆಚ್ಚೀ
ಗಡದ್ದಾಗಿ ಬಿದ್ದೊಂಡ° ಹೆಬ್ಬಾವಿನಾಂಗೇ
ತಡದ್ದಿಲ್ಲೆ ಅಜ್ಜಂಗೆ ಮಾಣೀಯ ನೋಡೀ
ನೆಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ ॥
ಲಾಯ್ಕ ಆಯಿದು ಅತ್ತೆ.ಒ೦ದೆರಡು ಸುಧಾರಣೆಗೊ.
– ಜಡಿಕ್ಕುಟ್ಟಿ ಹೇಳಿದರೆ ಮಾತ್ರೆ ಸರಿಯಕ್ಕು.
-ಹಾಳಾದ ಆಳೂ ( ಆಳೀನ ದ೦ಡೂ ಇಪ್ಪಲ್ಲಿ)
– ಹೇಳೀಗ ( ಹೇಳೀಯೆ ಇಪ್ಪಲ್ಲಿ)
ಭಾಗ್ಯಕ್ಕಾ.. ನಿಂಗಳ ಹಿನ್ನಲೆಯ ವಿವರಣೆ ಕೊಟ್ಟು ಬರವ ಶೈಲಿ ತುಂಬಾ ಲಾಯ್ಕಿದ್ದು….. ಸುಲಾಭಲ್ಲಿ ಅರ್ಥ ಆವುತ್ತು.
ಬಡುದ್ದಾಳಿ ತಮ್ಮಣ್ಣ ದೂರ್ಯೊಂಡೆ ಸಾರೀ
ಕೊಡಿಕ್ಕಾಲ್ಲಿ ಶಾಲೆಂದ ಬಂದಪ್ಪದೇ ಹೇ
ಳೆಡೊಪ್ಪಣ್ಣ ನೀನಲ್ಲದಾ ಬಿಟ್ಟುಕೋಪಾ
ನಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ
ಲಾಯ್ಕ ಆಯಿದು ಅಕ್ಕ.
ಕ್ರಯ ಹೆಚ್ಚಕ್ಕೂ ಹೇಳಿ ಹೇಮರ್ಸಿ ಮಡುಗಿದ ಸೊಲ್ದ ಹೆರ್ಕಡಕ್ಕೆ ಸುರಿ ಬೀಳಲೆ ಸುರುವಾಯಿದು . ಅದರ .ಚಿಲ್ಲರೆ ವ್ಯಾಪಾರಿ ಅಂದುಮ್ಮಂಗೆ ಕೊಡ್ಲೆ ; ಅಂದುಮ್ಮನ ಒಂದರಿ ಇತ್ಲಾಗಿ ಬಪ್ಪಲೆ ಹೇಳು ಹೇಳಿ ಅಪ್ಪ ಮಗನ ಹತ್ತರೆ ಹೇಳುವ ಕಲ್ಪನೆ. ”ಹೆರ್ಕಡಕ್ಕೆ” ಹೇಳಿ ಹೇಳುವಾಗ ಕೊಯಿಲಿಂದು ಅಲ್ಲ ಹೇಳುವ ಅರ್ಥ.
ಮಡಿಕ್ಕೊಂಬ ಹಾಂಗಿಲ್ಲೆ ಹಾಳಾದ್ದು ನೋಡೂ
ತಡಕ್ಕೊಂಬಲೆಡ್ತಿಲ್ಲೆ ಕಸ್ಟಲ್ಲಿ ಸೊಲ್ದೂ
ಕೊಡೆಕ್ಕೀಗ ನಾವಿನ್ನು ಕೇಳಿಕ್ಕಿ ಬಾರೋ°
ನಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ
************************
ಹೆರ ಕೆಲಸ ಮಾಡುವ ಮಗ ಮನಗೆ ಬಂದ ಮತ್ತೆ , ಹೆರ್ಕಿದ ಅಡಕ್ಕೆಯ ಹೊತ್ತು ತಪ್ಪಲೆಡಿಯದ್ದ ಅಪ್ಪ ಮಗನತ್ತರೆ ಹೀಂಗೆ ಹೇಳುಗು ಹೇಳುವ ಕಲ್ಪನೆ–
ನಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ
ಹೆಡಗ್ಗಾಕಿ ತುಂಬಾಯ್ದು ತಾರದ್ರೆಯಾಗಾ
ತಡಮ್ಮೆಂದ ಮೇಲಾಣ ತಟ್ಟೀಲೆ ನೋಡೂ
ಕಡ೦ದೇಲು ಗೂಡೀನ ಹತ್ರಾಣ ಜಾಗೇ
ತಟ್ಟು= ತೋಟ
ಕಡ೦ದೆಲು =ಕೂಡೋಲು ಹುಳು (ಇಪ್ಪ ಮರದ ಹತ್ತರೆ)
ವಾಹ್.ವಾಹ್.. ಎರಡೂ ಸ್ಪಷ್ಟವಾಗಿದ್ದು. ಸುರುವಾಣ ಪೂರಣದ ಎರಡ್ನೆ ಸಾಲು “ಕಷ್ಟ” ಆಯೇಕ್ಕು.
ಭಾಗ್ಯಕ್ಕ,
ಎರಡೂ ಪದ್ಯಗಳ ವಸ್ತು ಮತ್ತು ಬರದ ರೀತಿ ಲಾಯ್ಕಿದ್ದು.
“ತಾರದ್ರೆಯಾಗಾ” – ಇದರ “ತಾರದ್ದರಾಗಾ” ಹೇಳಿ ಮಾಡುಲಕ್ಕು (ವ್ಯಾಕರಣ ದೃಷ್ಟಿಯಿಂದ).
ಇಬ್ರಿ೦ಗೂ ಸರಿ ಮಾಡಿ ತೋರ್ಸಿದ್ದಕ್ಕೆ ಧನ್ಯವಾದ. ಮೇಲಾಣದ್ದು ಟಯಿಪ್ ಮಾಡೊಗ ತಪ್ಪಿದ್ದು.
ಅದಿತಿ ಅಕ್ಕ ಹೇಳಿ ಅಪ್ಪಗ ತು೦ಬಾ ಸುಲಭ ಇತ್ತನ್ನೆ ಹೇಳಿ ಅನ್ನುಸುತ್ತು. ಬರವಗ ಮಾತ್ರ ಹೇ೦ಗೆ ಸರಿಮಾಡ್ಲಕ್ಕು ಹೇಳಿ ಗೊ೦ತಾಯಿದಿಲ್ಲೆ.
ನಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ
ಹೆಡಗ್ಗಾಕಿ ತುಂಬಾಯ್ದು ತಾರದ್ದರಾಗಾ
ತಡಮ್ಮೆಂದ ಮೇಲಾಣ ತಟ್ಟೀಲೆ ನೋಡೂ
ಕಡ೦ದೇಲು ಗೂಡೀನ ಹತ್ರಾಣ ಜಾಗೇ
ಮಡಿಕ್ಕೊಂಬ ಹಾಂಗಿಲ್ಲೆ ಹಾಳಾದ್ದು ನೋಡೂ
ತಡಕ್ಕೊಂಬಲೆಡ್ತಿಲ್ಲೆ ಕಷ್ಟಲ್ಲಿ ಸೊಲ್ದೂ
ಕೊಡೆಕ್ಕೀಗ ನಾವಿನ್ನು ಕೇಳಿಕ್ಕಿ ಬಾರೋ°
ನಡಕ್ಕೊಂಡು ಹೋಗೀಗಳೇ ಹೆರ್ಕಡಕ್ಕೇ
ಭಾಗ್ಯಕ್ಕ, ಎರಡೂ ಕವನಂಗಳೂ ತುಂಬಾ…ತುಂಬಾ… ಲಾಯ್ಕಾಯಿದು. ಸ್ಪಷ್ಟವೂ ಉಚಿತವೂ ಆದ ಪೂರಣಂಗೊ- ಧನ್ಯವಾದಂಗೊ.
ಅದಿತಿ ಅಕ್ಕ ಹೇಳಿದ್ದು ಸರಿ ಆತು. ಭಾಗ್ಯಕ್ಕನ ಎರಡೂ ಪೂರಣದ ವಸ್ತು ಲಾಯ್ಕ ಇದ್ದು.
ನೆಡೂ ತೋಡು ದಾ೦ಟ್ಳೇ ಹಳೇ ಸ೦ಕ ಕು೦ಬೂ
ಎಡತ್ತೂ ಬಲತ್ತೂ ಸರೀ ನೋಡು ಮಾಣೀ
ಒಡಕ್ಕೊ೦ಡು ಕಣ್ಣೂ ಹಳೇ ಚೆರ್ಪು ಹಾಕೀ
ನೆಡಕ್ಕೊ೦ಡು ಹೋಗೀಗಳೇ ಹೆರ್ಕಡಕ್ಕೇ॥
ಕೊಡಕ್ಕಲ್ಲಿನತ್ರೇ ಹಳೇ ತೋಟವಿದ್ದೂ
ಮಡಿಕ್ಕೊ೦ಡೆ ಮಾರಾಟ ಮಾಡದ್ದೆ ಕೂದೇ
ತಡೆತ್ತಿಲ್ಲೆ ಮಾಣೀ ಬೊಡುತ್ತಿ೦ದು ಪೇಟೇ
ನೆಡಕ್ಕೊ೦ಡು ಹೋಗೀಗಳೇ ಹೆರ್ಕಡಕ್ಕೇ॥
ಕೊಡಕ್ಕಲ್ಲಿನತ್ರೆ ಹಳೆ ತೋಟ ಹೇಳಿರೆ, ಓ ಆಚಿಕೆ ಪಿದಮಲೆಲಿಯೋ..?
ಕುಡುಕ್ಕೊಂಡು ತಿಂದೊಂಡು ಬಿದ್ದೊಂಡರಕ್ಕೋ
ಪಡಕ್ಕೊಂಡು ಬಾರದ್ರೆ ಬಂದಾದ್ರು ಕಷ್ಟಾ
ದುಡುಕ್ಕೊಂಡು ತಿನ್ನೆಕ್ಕು ಸೋಮಾರಿ ಏಳೂ
ನೆಡಕ್ಕೊ೦ಡು ಹೋಗೀಗಳೇ ಹೆರ್ಕಡಕ್ಕೇ
ಭಾರೀ ಲಾಯ್ಕ ಆಯಿದು ಅಕ್ಕ.ಅಭಿನ೦ದನೆಗೊ.
ಅದಿತಿ ಅಕ್ಕಾ,
ಒೞೆ ಸ೦ದೇಶ ಇಪ್ಪ ಪದ್ಯ, ಲಾಯಿಕಾಯಿದು.
ಆಹಾ ಅದಿತಿ, ಎಷ್ಟು ಸರಿಯಾದ ಪೂರಣ- ಭಾರೀ ಲಾಯ್ಕಾಯಿದಾತಾ.
ಅಪ್ಪು, ಭಾರಿ ಒಳ್ಳೆ ಪೂರಣ. ಅಭಿನಂದನೆ ಅದಿತಿ ಅಕ್ಕ.