Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಈ ಚಿತ್ರಕ್ಕೊ೦ದು ಸೂಕ್ತ ಪದ್ಯ ಬರವನೋ?
ಚಿತ್ರಕೃಪೆ : ಅ೦ತರ್ಜಾಲ
ಶೈಲಕ್ಕಂದೂ , ಮುಳಿಯದಣ್ಣ೦ದೂ ಪದ್ಯ ಲಾಯಿಕಾಯಿದು . ಶೈಲಕ್ಕ ಮಳಗೆ ಚಳಿ ಹಿಡುದು ಪೋಡಿ ಮಾಡಲೆ ಹೆರಟದಾದಿಕ್ಕು …:-)
🙂 🙂
ಶೈಲಜಕ್ಕಾ ,
ಒಳ್ಳೆ ಕಲ್ಪನೆ . ಬಾಣಲೆಗೆ ಕಡ್ಲೆ ಹಿಟ್ಟು ಬಿಟ್ಟ ಹಾಂಗೊ ಹೇಳಿ ಕಂಡತ್ತೊಂದರಿ !
ಕೆಂಪು ಸೂರ್ಯ ಬಿಕ್ಕಿ ಹೋಯ್ದ
ನೊಂಪು ಬಾನಿಲಿಡಿಯೆ ಬಣ್ಣ
ತಂಪು ಗಾಳಿ ಕಲಸಿ ಹಸುರ ಹೊಳಗೆ ಬಿಟ್ಟದೊ
ಜೊಂಪು ಬಂದ ಬೆಳಿಯ ಹಕ್ಕಿ
ನೆಂಪು ಮಾಡಿ ಬಿಟ್ಟ ಗೂಡ
ಮಂಪರಡರೊ ಸಮಯ ಹೇದು ಹಾರಿ ಸೇರುದೋ ?
ಎಲ್ಲೊರು ಬರದ ಪದ್ಯಂಗ ಲಾಯಿಕ್ಕಾಯಿದು
ಮಳೆ ಬ೦ದು ಬಿಟ್ಟು ಇಳುದತ್ತು ನೀರು ತು೦ಬಿತ್ತು ಹರಿವ ಹೊಳೆಲೀ I
ಸುಳಿ ಮೋಡ ಜಾರಿ ಮುಳುಗುತ್ತ ಹೊತ್ತು ಆ ಸೂರ್ಯ° ಪಡು ಕಡಲಿಲೀ I
ತಿಳಿ ನೀಲ ಬಾನ ನೆಗೆಮಾಡಿ ನಿ೦ದು ರಂಗಾದ ಹೊಸ ಗಳಿಗೆಲೀ I
ಸುಳುದತ್ತೊ ಹಕ್ಕಿ ಎಳೆ ಮೀನ ಹೊಟ್ಟೆಯೊಳ ತುಂಬುಸುತ್ತ ಹೆಳೆಲೀ II
ಇದು ಯಾವ ಛಂದಸ್ಸು ?
ಛಂದಸ್ಸಿನ ಹೆಸರು ಗೊಂತಿಲ್ಲೆ ಭಾಗ್ಯಕ್ಕ . ಪೂರ್ವಾರ್ಧ “ಕಲಹಂಸ”ದ ಗತಿಲಿ ಸುರುಮಾಡಿ ಉದ್ದ ಎಳದ್ದದು ಅಷ್ಟೇ ..
@ Asha Balakrishna
ನಿಂಗಳ ಪದ್ಯ ಒಳ್ಳೆದಾಯಿದಕ್ಕ . ಮಾತ್ರ ಅಲ್ಲ D. V.G ಯವರ ಕಗ್ಗದ ಚೌಪದಿಗೆ ತುಂಬಾ ಹತ್ತರೆ ಇದ್ದು . ಛಂದಸ್ಸು ಮರದ್ದಕ್ಕೆ http://www.padyapaana . com ಈ ಲಿಂಕ್ ನೋಡಿದರೆ ನಿಂಗೊಗೆ ನೆನಪಕ್ಕು . ಪದ್ಯ-ವಿದ್ಯೆ ಹೇಳುವ ವಿಭಾಗಲ್ಲಿ ಬೇರೆ ಬೇರೆ ಛಂದಸ್ಸುಗಳ ವಿವರಂಗೊ ಇದ್ದು . ಎನಗೆ ಏನೂ ಗೊಂತಿತ್ತಿಲ್ಲೆ . ಅಲ್ಲಿ ನೋಡಿ ಇಲ್ಲಿ ಬರವಲೆ ಸುರು ಮಾಡಿದ್ದು .ಇಲ್ಲಿ ಬರವಗ ತಪ್ಪಿದ್ದರ ಮುಳಿಯದಣ್ಣ ತಿದ್ದಿ ಸರಿ ಮಾಡಿ ತೋರ್ಸಿಗೊಂಡಿದ್ದ ಕಾರಣ ಎನಗೆ ಇಷ್ಟಾದರೂ ಕಲಿವಲೆ ಸಾಧ್ಯ ಆತು .ನಿಂಗಳೂ ಸೇರಿಗೊಳ್ಳಿ .
ನಿಂಗೊ ಎಲ್ಲ ಬರದ್ದು ತುಂಬ ಲಾಯಿಕಾಯಿದು. ಓದಿ ಖುಷಿ ಆಗಿ ಎನಗೂ ಎರಡು ಗೀಟು ಬರವ ಮನಸ್ಸಾತು. ಆದರೆ ಛಂದಸ್ಸು ಅಷ್ಟೆಲ್ಲ ಗೊಂತಿಲ್ಲೇ. ಸಣ್ಣಾದಿಪ್ಪಗ ಕಲ್ತದು ನೆಂಪಿಲ್ಲೆ ಈಗ. ಒಂದು ಪ್ರಯತ್ನ ಅಷ್ಟೆ.
ಮೂಡ ಬಾನಲ್ಲಿ ಮೂಡಿ ಹಗಲಿಡೀ ಆಡಿ
ಪಡುವ ದಿಕ್ಕಿಲಿ ಗಡುವ ಮುಗಿಶಿಯಪ್ಪಗ
ಅಡಿಗಡಿಗೆ ಬದಲುವ ಬಾನ ಬಣ್ಣವ ನೋಡಿ
ಎಡಿಗಷ್ಟು ಒಡಲು ತುಮ್ಸಿದ ಬಕ ಪಕ್ಷಿ
ಬಡಿದು ರೆಂಕೆಯ ನೀರ ಬಿಟ್ಟಿಕ್ಕಿ ಹಾರಿತ್ತು
ಗೂಡಿಂಗೆ ಸೆಡವಿಲಿ.
ಭಾವಯಾನಕ್ಕೆ ಛಂದಸ್ಸಿನ ಗಡಿ ಇದ್ದೋ ಅಕ್ಕ ? ಕಲ್ಪನೆಗಳ ಹಕ್ಕಿ ರೆಕ್ಕೆ ಬಿಚ್ಚಿ ಹಾರುಲೆ ಬೈಲಿಲಿ ಇದೊಂದು ಜಾಗೆ . ನಿಂಗಳ ಬರಹ ನೋಡಿ ಕೊಶಿಯಾತು . ಬೈಲಿಂಗೆ ಬತ್ತಾ ಇರಿ, ಬರೆತ್ತಾ ಇರಿ .
ವಾವ್!ವಾರ್ಧಕ ಷಟ್ಪದಿಲಿ ರಚಿಸಿದ ಪದ್ಯ ಭಾರಿ ಲಾಯ್ಕ ಆಯಿದು ಭಾಗ್ಯಕ್ಕ ,ಅಭಿನಂದನೆಗ
ಲಕ್ಷ್ಮಿಯಕ್ಕ & ಮುಳಿಯದಣ್ಣ ಧನ್ಯವಾದಂಗೊ .
ಮೂರ್ಸಂಧ್ಯ ಹೊತ್ತು ಹೇಳ್ವ ಕಲ್ಪನೆ . ಆಕಾಶದ ಬಣ್ಣ ಹರಡಿದ ಜಾಗೆ ಬೆಸ್ತ ಬಲೆಯ ನೀರಿಂಗೆ ಇಡ್ಕುವ ಹಾಂಗೆ ಕ೦ಡದು ಈ ರಚನೆಗೆ ಕಾರಣ –
ಬಾನ ಬೆಸ್ತನು ರಂಗು ರಂಗಾದ ಬಲೆ ಬೀಸಿ
ಮೀನಿನಾ೦ಗಿಪ್ಪ ಹಗಲಿನ ತೋಳಿಲೆಳವಗಳೆ
ತಾನಾತು ಹಿನ್ನೀರು ನೇಸರನ ಬಿಂಬಿಸುವ ಪರಿಸರದ ಮಡಿಗನ್ನಟಿ I
ಕಾನನದ ಕಲೆಯಬಲೆಯೊಳ ಕೂದು ಬೋ೦ಟಗಾ
ಬಾನಾಡಿ ಕಾದು ಬಚ್ಚಿದರು ರೆ೦ಕೆಯ ಬಿಚ್ಚಿ
ತಾನಾಗಿ ಹಾರಿತ್ತು ಹೊಸದಿನವ ನಾಳೆ ಕಾಂಬೇಳ್ವ ಹೊಸಯೋಜನೆ೦ದ II
ಮಡಿ +ಕನ್ನಟಿ = ಮಡಿಗನ್ನಟಿ =ಶುದ್ಧ ಕನ್ನಟಿ; ಬೋಂಟೆ = ಬೇಟೆ ”ಬಾನಾಡಿ” ಹೇಳಿ ಪ್ರಾಸಕ್ಕಾಗಿ ಹಾಕಿದ್ದು ; .
ಸೂರ್ಯ ಹೇಳ್ವ ಬಾನಿಲಿಪ್ಪ ಬೆಸ್ತ ಬಣ್ಣದ ಬಲೆ ಬೀಸಿ ಮೀನಿನ ಹಾ೦ಗೆ ಚಟುವಟಿಕೆಲಿಪ್ಪ ಹಗಲಿನ ತನ್ನ ಬಲೆಯೊಳ೦ಗೆ ಎಳೆತ್ತಾ ಇದ್ದ . ಆ ಸಮಯಲ್ಲಿ ಬೇಟೆ ಮಾಡ್ಲೆ ಕಾದು ಕೂದ ಕೊಕ್ಕರೆ ಆ ದಿನ ಮೀನು ಸಿಕ್ಕದ್ದರೂ ಮರದಿನಕ್ಕೆ ಹೊಸ ಯೋಜನೆ ಹಾಕಿಯೊ೦ಡು ಬತ್ತೆ ಹೇಳಿ ಬೇಜಾರು ಮಾಡದ್ದೆ ಅಲ್ಲಿಂದ ಹೆರಟತ್ತು.
ವಾರ್ಧಕ ಷಟ್ಪದಿ ಅಪ್ರೂಪಲ್ಲಿ ಬೈಲಿಲಿ ರೈಸಿತ್ತು . ಭಾಗ್ಯಕ್ಕಾ .. ಕಲ್ಪನೆ ,ರಚನೆ ಭಾರೀ ಲಾಯಕ ಆಯಿದು .
ಅದ್ಭುತ ಕಲ್ಪನೆ +ರಚನೆ.ಅಭಿನಂದನೆ .
ವಿಹಾರ ತಾಣ
ನೆಡುಗೆದ್ದೆಯ ಸುತ್ತು ಸುಜಲ
ಬಿಡಿ ಬೇರುಗಳ ಕೆಳಬಿಟ್ಟ ವನವೇ ಕಾಂಡ್ಲಾ
ಗಡಿಯಿದ್ದೋ ಬೆಳ್ವಕ್ಕಿಗೆ ?
ಕೊಡುಗು ನಿಸರ್ಗ ಸುಖವನ್ನೆ ಬೇಕಾದಷ್ಟೂ
ಲಾಯಕ ಅಯಿದು ಪದ್ಯ
ಧನ್ಯವಾದಂಗೊ.
ಕಾಂಡ್ಲಾ ಗಡಿಯಿದ್ದೋ ? — ಇದೊಂದು ಬಗೆ ಅರ್ಥ ಆಗದ್ದರೂ ಕಂದ ಕೊಶಿ ಕೊಟ್ಟತ್ತು ಮಾವಾ .
ಕಾಂಡ್ಲಾ = mangrove vegetation ಬಗ್ಗೆ ಯೆತಡ್ಕ ಮಾವ ಹೇಳಿದ್ದು ಹೇಳಿ ಆನು ಗ್ರಹಿಸಿದ್ದು . ಕೊಕ್ಕರೆಗೆ ಹಾರ್ಲೆ ಗಡಿ ಸಮಸ್ಯೆ ಇದ್ದೋ ? ವೀಸಾ , ಪಾಸ್ಪೋರ್ಟ್ ಒಂದೂ ಬೇಡನ್ನೇ .. ಎಲ್ಲಿ ಹಾರಿದರೂ ಅದಕ್ಕೊಂದು ನಿಸರ್ಗ ರಮಣೀಯತೆ ಇದ್ದು ಹೇಳಿ ಆದಿಕ್ಕು .
ನಿಂಗಳ ಗ್ರಹಿಕೆಗೆ ನೂರು ಮಾರ್ಕು ಭಾಗ್ಯಕ್ಕ.ಧನ್ಯವಾದಂಗೊ.
ಹಾ೦.. ಸರೀ ಅರ್ಥ ಆತು .ರೈಸಿತ್ತು .
ಪರೀಕ್ಷಗೆ ಬರದಷ್ಟು ವರ್ಷವೂ ಎಲ್ಲಿಯೂ ೧oo ಕ್ಕೆ ೧೦೦ ಮಾರ್ಕು ಸಿಕ್ಕಿದ್ದಿಲ್ಲೆ ಮಾವ .ಇಲ್ಲಿ ಪರೀಕ್ಷೆ ಬರೆಯದ್ದೆ ಮಾರ್ಕು ಸಿಕ್ಕಿದ್ದು ಕೊಶಿ ಆತು :-). ಪದ್ಯವ ಮೆಚ್ಚಿದ್ದಕ್ಕೆ ಧನ್ಯವಾದಂಗೊ .
ಸಂಪಾದಕರ ಕೊಶಿಯೇ ನವಗೆ ಸ್ಫೂರ್ತಿ.ಧನ್ಯವಾದಂಗೊ.
ಕಾಂಡ್ಲಾ ಸುತ್ತಮುತ್ತ ಸುಮಾರು ಸಮಯ ಇದ್ದ ಕಾರಣ ಸಂಶಯ ಬಂದದು . ಕಡಲ ಕರೆಯ ಬಂಜರು ಭೂಮಿಲಿ mangrove ,ಒಳುದ ಪ್ರದೇಶಲ್ಲಿ ”ಬಾವಡ್” ಹೇಳ್ತ ಮುಳ್ಳುಗೋ ತುಂಬಿದ ಕುರುಚಲು ಸಸ್ಯ ,ಇಂದಿರಾ ಗಾಂಧಿಯ ಕಾಲಲ್ಲಿ ರಶ್ಯಾಂದ ತಂದು ನೆಟ್ಟದು..
ದಾರಿಯೆಲ್ಲ ಬಣ್ಣ ಚೆಲ್ಲಿ
ಹಾರಿಹೋತು ಬೆಳಿಯ ಹಕ್ಕಿ
ಭಾರಿ ಚೆಂದ ನೀಲಬಾನ ರಮ್ಯ ನೋಟವು |
ಬೇರಿನೂರಿ ನಿಂದ ಪಚ್ಚೆ
ಜಾರಿ ಬಿದ್ದ ಕೆಂಪು ಹಳದಿ
ನೀರಿನಲೆಗೆ ನೂರು ರೂಪ ಕೊಟ್ಟು ನಿಂದಿದು ||
ಭೋಗ ಷಟ್ಪದಿಯ ಪದ್ಯ ಲಾಯ್ಕ ಆಯಿದು ಇಂದಿರತ್ತೆ
ಹೊ .. ಇಂದಿರತ್ತೆ ಬಂದವದಾ .. ಲಾಯಕ ಆಯಿದು ಪದ್ಯ .