Oppanna.com

ಸಮಸ್ಯೆ 89 : ಹೊಸಬಣ್ಣವ ಚೇಪಿದ° ಮೋರೆಗಿಡೀ

ಬರದೋರು :   ಸಂಪಾದಕ°    on   28/02/2015    28 ಒಪ್ಪಂಗೊ

ಈ ವಾರ ಒಪ್ಪಣ್ಣ ಬಣ್ಣ೦ಗಳ ಹಬ್ಬ ಹೋಳಿಯ ವಿಷಯ ಬರದ್ದ°. ಅದನ್ನೇ ಮು೦ದುವರುಸಿ ನಮ್ಮ ಸಮಸ್ಯೆ ತೋಟಕ ವೃತ್ತಲ್ಲಿ.

“ಹೊಸ ಬಣ್ಣವ ಚೇಪಿದ° ಮೋರೆಗಿಡೀ”

ಯೇವತ್ತಿನ ಹಾ೦ಗೆ ಹೊಸ ಹೊಸ ಕಲ್ಪನೆಗೊ ಬರಳಿ ನೋಡುವ°.

28 thoughts on “ಸಮಸ್ಯೆ 89 : ಹೊಸಬಣ್ಣವ ಚೇಪಿದ° ಮೋರೆಗಿಡೀ

  1. ರಜ್ಜ ತಡವಾತದ…
    ಈಗ ಇದು ಅಭಾಸವೊ ಏನೊ.. 🙂 ಎನ್ನ ಪ್ರಯತ್ನ
    ರಸ ನೆಂಪದು ಕೂಸಿನ ಜೀವನಲೀ
    ಹೆಸರೆಂತದು ಕೇಳಿರೆ ಬಂದ ವರಾ
    ನಸುನಾಚಿಕೆ ಮೈಪುಳಕಲ್ಲಿಯದಾ
    ಹೊಸಬಣ್ಣವ ಚೇಪಿದ ಮೋರೆಗಿಡೀ

    1. ತಡವಾದರೆಂತಾತು.. ಹೊಸ ರಂಗು ಇದ್ದು ಪೂರಣಲ್ಲಿ. ಅಭಿನಂದನೆ ಶೈಲಜಕ್ಕ .

  2. ಹೋಳಿ
    ವಸುಧೇಶನ ಭೂಮಿಲಿ ಹೋಳಿಯಡಾ
    ಕುಸುಮಾಸ್ತ್ರವ ಮನ್ಮಥ ಬಿಟ್ಟನಡಾ
    ಅಸಮಂಜಸ ಕಾಮವ ಹೊತ್ತುಸಿಯೇ
    ಹೊಸ ಬಣ್ಣವ ಚೇಪಿದ ಮೋರೆಗಿಡೀ

    1. ಮಾವಾ , ಅಸಮಂಜಸ – ಒಳ್ಳೆ ಶಬ್ದ ಪ್ರಯೋಗ . ಲಾಯ್ಕ ಆಯಿದು .

  3. ಟಷೆ ತಾಪದ ಕಾಪಿಟಿ ಮೋಡದಡೀ
    ಬೆಷಿ ಕೋಪದ ಲೋಟೆಗೆ ಬೇಡಕಿಡೀ
    ಹೊಸ ಮಾಡಿದ ಕೋಟೆಗೆ ಪಾಟ ಬಿಡೀ
    ಹೊಸ ಬಣ್ಣವ ಚೇಪಿದ° ಮೋರೆಗಿಡೀ ||

    ತೋಟಕ ವೃತ್ತಲ್ಲಿ ಒಂದು ನವ್ಯ ಕವನ ಬರೆಯಕ್ಕು ಹೇಳಿ ಸುಮಾರು ದಿನಂದ ಇದ್ದತ್ತು. ಹಾಂಗೆ ಇದರ ಬರದ್ದು. ನಿಂಗೊಗೆ ಎಂತಾರು ಅರ್ಥ ಅತೋ? ಇಲ್ಲೆಯಾ? ಮಂಡೆ ಬೆಷಿ ಮಾಡೆಡಿ. ಬರದ ಎನಗೇ ಅರ್ಥ ಆಯಿದಿಲ್ಲೇ… 🙁

    1. ಎನಗೆ ಅರ್ಥ ಆತು…. ಎಂತ್ಸರ …ಶಾಮಣ್ಣಂಗೆ ಅರ್ಥ ಆಯಿದಿಲ್ಲೇ ಹೇದು..ಹು ಹು ಹು..!!!

  4. ತೆನ್ನಾಲಿ ಪುಚ್ಚೆ
    ಬೆಶಿ ಹಾಲಿನ ಪುಚ್ಚಗೆ ಹಾಕಿದವಾ°
    ಹಸಿ ಸತ್ಯವ ಹೇಳಿದ ರಾಮನವಾ°I
    ಮುಸುಡದ್ದದ ಪುಚ್ಚೆಯ ತೋರ್ಸುತಲೇ
    ಹೊಸ ಬಣ್ಣವ ಚೇಪಿದ° ಮೋರೆಗಿಡೀII

  5. ಕಸವಿದ್ದರೆ ಪೇಟೆಯು ನಾರುಗಿದಾ
    ನಸೆ ಕೊಟ್ಟರೆ ನಾಯಿಯು ನಕ್ಕುಗದಾ
    ಕುಶಿವಾಶಿಲಿ ಮಕ್ಕಳ ನೋಡಿದರೇ
    ಹೊಸ ( ಮಸಿ !) ಬಣ್ಣವ ಚೇಪುಗು ಮೋರೆಗಿಡೀ

  6. ಮೊಸರಿದ್ದರೆ ಮೋರೆಯ ತಿರ್ಗುಸಿರೂ
    ಪಸೆ ತುಪ್ಪವ ಕ೦ಡರೆ ಬಾಯ್ಬಿಡುವಾ
    ಹಸಿ ಮಾಣಿಯ ಕ೦ಡರೆ ಹೋಳಿ ದಿನಾ
    ಹೊಸ ಬಣ್ಣವ ಚೇಪುವೆ ಮೋರೆಗಿಡೀ

    1. ಮೊಸರು ಕಂಡು ಮೋರೆತಿರುಗುಸೊದು ಹುಳಿ ಮಾಣಿ ಆಗಿಕ್ಕು, ಪ್ರಾಸಕ್ಕೆ ಸರಿ ಅಪ್ಪಲೇ ಹಸಿ ಮಾಣಿ ಬರದ್ದದೋ….?

  7. ಸೆಸಿತೋಟವ ದಾ೦ಟಿರೆ ಗೆದ್ದೆಯೊಳಾ
    ಕೊಸರಾಟದ ಗೋಣನ ಮಾದುಸಲೇ
    ಕೆಸರಿ೦ದ ಕಲ೦ಕಿದ ನೀರಿಲಿಯೇ
    ಹೊಸ ಬಣ್ಣವ ಚೇಪಿದ° ಮೋರೆಗಿಡೀ

  8. ಬಿಸುಗಣ್ಣನು ಸುಟ್ಟರು ರೌದ್ರದೊಳಅ
    ಅಸಮಾಸ್ತ್ರನು ಬಿಟ್ಟಿಹ ಬಾಣವದೂ
    ಹೊಸ ಬಣ್ಣವ ಚೇಪಿತು ಮೋರೆಗಿಡೀ
    ಹಸನಾತದು ಪಾರ್ವತಿ ಜೀವನವೂ ||

    1. ಚೆಲ.. ಈಶ್ವರನ ಮೋರೆಗೇ ಚೇಪಿದವು ಇಂದಿರತ್ತೆ .
      “ಹೊಸ ಕಲ್ಪನೆ ರೈಸಿತು ಬೈಲಿಲಿಡೀ”

  9. ಹಸಿ ಪಚ್ಚೆಯ ಬಣ್ಣದ ವೃಕ್ಷದೆಡೇ
    ಹೊಸಕಂಪಿನ,ರಂಗಿನ ಹೂಗುಗಳಾI
    ಕುಸುರಿಂದಲೆ ಮನ್ಮಥ ಕೆತ್ತುಸಿಯೇ
    ಹೊಸ ಬಣ್ಣವ ಚೇಪಿದ° ಮೋರಗಿಡೀ II

    ಸುವಾಸನೆ ಇಪ್ಪ ಮತ್ತೆ ಇಲ್ಲದ್ದ ಬಣ್ಣ ಬಣ್ಣದ ಹೂಗು ಬಿಡ್ತಾ ಇಪ್ಪ ಮರ೦ಗಳ ‘ಮನ್ಮಥ’ (ಸಂವತ್ಸರ ಬಪ್ಪಗ ) ಕುಸುರಿ ಕೆಲಸ ಮಾಡಿ ಅಲ೦ಕರಿಸಿದನೋ ಹೇಳುವ ಅರ್ಥ

    1. ಒಳ್ಳೆ ಕಲ್ಪನೆ ಭಾಗ್ಯಕ್ಕ .

  10. ಖಾಲಿ ಪ್ರೀತಿ
    ಹೊಸಪೇಟೆಲಿ ಖರ್ಚುದೆ ಹೆಚ್ಚಿಗೆಯೇ
    ಕಿಸೆ ಖಾಲಿಯೆ ಆತ ಡ ಕಾಮನೆಲೀ
    ಮಸಿ ಮೆತ್ತಿದ ಹೆಂಡತಿ ಕೈಹಿಡುದೇ
    ಹೊಸ ಬಣ್ಣವ ಚೇಪಿದ ಮೋರೆಗಿಡೀ

    1. ಆಹಾ! ಮಾವ ಅದಕ್ಕೆ ಈಗಾಣವು ‘ಲಿವಿಂಗ್ ಟುಗೆದರ್’ ಹೇಳಿ ಮಾಡಿ ಗ್ಯಾಸ್ ತಂದುಕೊಡುದಡ 🙂

  11. ಹೊಸ ಯಂತ್ರಲಿ ಹವ್ಯಕ ಭಾಷೆಗಿದೇ
    ಹೊಸ ತಂತ್ರವ ಶಂಕರ ಹೂಡಿದನೋ?I
    ಹೊಸ ಮಂತ್ರಲಿ ನಾದವ ಆಲಿಸೋಗಾ
    ಹೊಸ ಬಣ್ಣವ ಚೇಪಿದ ಮೋರಗಿಡೀ? II
    ಗಣಕ ಯಂತ್ರಲ್ಲಿ ಹವ್ಯಕ ಭಾಷೆ ಬೆಳತ್ತಾ ಇಪ್ಪಗ ಮ೦ತ್ರದ ನಾದಕ್ಕೆ ಶಂಕರ೦ಗೆ ಕೊಶಿಯಾತೋ? ಹೇಳುವ ಅರ್ಥ

  12. ನಸುಕಸ್ತಲೆ ಸುತ್ತಲು ಹಬ್ಬುವಗಾ
    ಹಸುರ೦ಗಿಯ ಹಾಕಿದ ಭೂರಮೆಗೇ
    ರಸ ರ೦ಗಿನ ಸೂರ್ಯನು ಮೂಡೊಗಳೇ
    ಹೊಸ ಬಣ್ಣವ ಚೇಪಿದ ಮೋರೆಗಿಡೀ

    1. ಆಹಾ…ಮುಳಿಯದಣ್ಣಾ…..

  13. ಬಣ್ಣದ ಚೆಂದ
    ಹಸಿ ಮಣ್ಣಿನ ಗೋಡಗೆ ಕಲ್ಲಿನ ಅಂ-
    ಟುಸಿ ಚೆಂದವ ನೋಡುವ ಹಾಂಗೆ ಬಡೀ
    ಪಸೆ ಕಣ್ಣಿನ ಪಾಪದ ಮಾಣಿ ಕುಶಾ
    ಹೊಸ ಬಣ್ಣವ ಚೇಪಿದ ಮೋರೆಗಿಡೀ

    1. ಏತಡ್ಕ ಮಾವಾ , ಕುಶನ ಲೂಟಿಲಿ ಎಡಿಯಪ್ಪಾ .. ರೈಸಿತ್ತು .

  14. ಒಳ್ಳೊಳ್ಳೆ ತೋಟಕಂಗೊ .

  15. ಬಿಸಿಬೇಳೆಯ ಬಾತಿನ ಮಾಡುವಗಾ
    ಖೊಶಿಯಾಗಿಯೆಬಂದವನೇ ಹರಿ ತಾ I
    ನುಸಿ ಚಿತ್ರವ ಗೀಚುಲೆ ಮಾಡಿದ ಆ
    ಹೊಸ ಬಣ್ಣವ ಚೇಪಿದ° ಮೋರಗಿಡೀ II

    1. ರಾಧಾಕೃಷ್ಣರ ರ೦ಗಿನಾಟವೂ ಬಿಸಿಬೇಳೆಯ ಬಾತಿನ ಘಮಘಮವೂ ತೋಟಕಕ್ಕೆ ಹೊಸ ಮೆರುಗು ಕೊಟ್ಟಿದು. ಲಾಯ್ಕ ಆಯಿದು ಭಾಗ್ಯಕ್ಕ .

  16. ಮಸಿಕಪ್ಪಿನ ಚರ್ಮದ ವರ್ಣದವಾ°
    ಹುಸಿಕೋಪವ ತೋರ್ಸಿದ ಮಾಧವನೇI
    ನಸುಕೆಂಪಿನ ಮೋರೆಯ ರಾಧಗದೋ
    ಹೊಸ ಬಣ್ಣವ ಚೇಪಿದ° ಮೋರಗಿಡೀ II

  17. ಅಸಮಾನ ತಪಸ್ಸಿಲಿ ಈಶ್ವರ° ತಾ
    ಮುಸುಕಿಪ್ಪಗ ಕಾಮನು ಬಿಲ್ಲೆಳದಾ°
    ನೊಸಲಿ೦ದ ಛಟೀರನೆ ಮಿ೦ಚುವಗಾ
    ಹೊಸ ಬಣ್ಣವ ಚೇಪಿದ° ಮೋರೆಗಿಡೀ

    1. ಮುಳಿಯದಣ್ಣನ ಪದ್ಯ ತು೦ಬಾ ಲಾಯಿಕಾಯಿದು. ”ಕಾಮನ ಬಿಲ್ಲೆಳದಾ … ” ಹೇಳಿ ಓದುವಾಗ ಬಿಲ್ಲಿನ ಹೆದೆ ಎಳವ ರೀತಿಲಿ ಇದ್ದೋ ಹೇಳಿ ಅನ್ಸುತ್ತು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×