Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಅಕ್ಷರ ಛ೦ದಸ್ಸಿಲಿ “ಸ್ರಗ್ವಿಣೀವೃತ್ತ” ದ ಪರಿಚಯ ಮಾಡುವ°.
ಪ್ರತಿ ಸಾಲಿಲಿ ಹನ್ನೆರಡು ಅಕ್ಷರ೦ಗೊ ಬಪ್ಪ ಈ ಛ೦ದಸ್ಸಿನ ಲಕ್ಷಣ – ನಾನನಾ/ನಾನನಾ/ನಾನನಾ/ನಾನನಾ.
ಸ್ರಗ್ವಿಣೀವೃತ್ತದೊಳ್ಸರ್ವದಾರಂಗಳೇ – ಹೇಳಿ ನೆನಪ್ಪು ಮಡಿಕ್ಕೊ೦ಬಲಕ್ಕು.ಆದಿಪ್ರಾಸದ ನಿಯಮ ಪಾಲಿಸೆಕ್ಕು.
ಈ ವಾರದ ಸಮಸ್ಯೆ ದೂರದ ಅಮೇರಿಕಲ್ಲಿ ನೆಡೆತ್ತಾ ಇಪ್ಪ ಪ್ರಕರಣ೦ದ ಹುಟ್ಟಿಗೊ೦ಡತ್ತು.ಸಮಸ್ಯೆಗೆ ಪರಿಹಾರ ನಮ್ಮ ಬೈಲಿಲಿ ಎ೦ತ ಸಿಕ್ಕುತ್ತು ಹೇಳಿ ನೋಡುವ°.
ಜಾಲು ದಾ೦ಟದ್ದ ಸ೦ಗೀತ ಪುರ್ಬೆತ್ತಿಯಾ
ಜಾಲವೋ ಕೋಲವೋ ದೇವರೇ ಬಲ್ಲನೋ
ಸೋಲು ನೋಡಿದ್ದಿರೋ ದೇವಯಾನ್ಯಕ್ಕನೂ
ಕೂಲಿಯಾಳಿಂದಲೇ ಜೈಲು ಸೇರಿತ್ತದಾ ||
ಬೇಲಿ ದಾ೦ಟಿಕ್ಕಿ ದೇಶಂದ ದೂರಾದರೂ,
ಬಾಳ ಗೋಳಿಂಗೆ ಮುಕ್ತಾಯ ಹಾಡ್ಲಾತೊಳೀ
ಮೂಲ ದೇಶ೦ದಲೇ ಸೇರ್ಸಿದಾ ಹಂಗಿನಾ
ಕೂಲಿಯಾಳಿಂದಲೇ ಜೈಲು ಸೇರಿತ್ತದಾ ||
ಕಾಲವೋ ಕೋಲವೋ ಆರು ಹೇಳಿದ್ದದಾ
ಮಾಲಿಕಂಗಡ್ಡಿ ಮಾಡ್ಯೊಂಡೆ ಕೂದೊಂಡಿದಾ
ಗೋಲಕಕ್ಕೇ ಹುಷಾರಾಗಿ ಕಣ್ಣೋಡ್ಸಿದಾ
ಕೂಲಿಯಾಳಿಂದಲೇ ಜೈಲು ಸೇರಿತ್ತದಾ
(ಗೋಲಕ=ಹಣದ ಡಬ್ಬಿ,ಹುಂಡಿ)
ನೀಲದಮ್ಬೋಧಿಯಾಚಿಕ್ಕೆಯಾ ದೇಶದಾ
ಓಲಗಲ್ಲಿದ್ದು ಗಂಭೀರವಾಗಿಲ್ಲದೇ
ಕಾಲದೇಶಂಗೊ ಗೊಂತಿಲ್ಲದಂಗಿತ್ತದಾ
ಕೂಲಿಯಾಳಿಂದಲೇ ಜೈಲು ಸೇರಿತ್ತದಾ