Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ “ತರಳ” ಛ೦ದಸ್ಸಿನ ಪ್ರಯತ್ನ ಮಾಡುವ.
ಪ್ರತಿ ಸಾಲಿಲಿ ಹತ್ತೊ೦ಬತ್ತು ಶಬ್ದ೦ಗೊ ಬಪ್ಪ ಈ ಅಕ್ಷರವೃತ್ತದ ಲಕ್ಷಣ ಹೀ೦ಗಿದ್ದು ಃ
೧೧೧ – ೧೧ – ೧ – ೧೧ – ೧ – ೧೧ – ೧ – ( ನನನನಾನನನಾನನಾನನನಾನನಾನನನಾನನಾ)
ನಮ್ಮ ಈ ವಾರದ ಸಮಸ್ಯೆ ಸದ್ಯ ನಮ್ಮ ದೇಶದ ಸಮಸ್ಯೆಯೇ ಆಯಿದು.ಉತ್ತರ ಭಾರತಲ್ಲಿ ಆದ ಜಲಪ್ರಳಯಕ್ಕೆ ಕಾರಣ ಹುಡುಕ್ಕುವ ಕೆಲಸ ಮಾಡುವ,ಆಗದೋ?
ಈ ಸರ್ತಿ ಎಲ್ಲರ ಪದ್ಯಗೊ ಭಾರೀ ಲಾಯ್ಕಲ್ಲಿ ಮೂಡಿ ಬೈ೦ದು.
ಎಲ್ಲೋರು ಹೀ೦ಗೆ ಹೆಚ್ಚು ಹೆಚ್ಚು ಬರಿರಿ.
ಅರರೆ ತತ್ತರುಸಿತ್ತು ಭಾರತ ದೇಶದೆತ್ತರ ಭಾಗವೂ
ಮರಣಶಾಸನವಾತು ಭಕ್ತರ ಜೀವಮಾನದ ಯಾತ್ರೆಯೂ
ಕರಗಿ ಮೋಡದ ನೀರು ಹಾರೊದು ಕ೦ಡು ಮೂಡಿತು ಕಲ್ಪನೇ
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ?
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ?
ವರುಣ ಮಾಡಿದ ರುದ್ರತಾಂಡವ ನೋಡಿ ಬಾಯಿಯ ಬಿಟ್ಟದೋ?
ಕರುಣೆ ತೋರದ ಕಾಲ ಮಾಡಿದ ಭಾರಿ ಮಾರಣ ಹೋಮವೋ?
ಧರಣಿ ಶೋಷಕ ದೇಹಿ ಜಾತಿಗೆ ಧಾರಿ ದೇವಿಯ ಶಾಪವೋ?
ಕಾಲ=ಯಮ,ದೇಹಿ=ಮನುಷ್ಯ,ಧಾರಿದೇವಿ=(ಉತ್ತರ ಖಂಡಲ್ಲಿ) ರಾಜ್ಯವ ರಕ್ಷಿಸುವ ದೇವತೆ
ಅರ್ಥಪೂರ್ಣ ಪೂರಣ ಮಾವಾ. ಭಾರೀ ಲಾಯ್ಕ ಆಯಿದು.ಅಭಿನ೦ದನೆ.
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ನರನ ಕೀಟಲೆ ಅಟ್ಟಹಾಸವ ನೋಡಿ ಭೂಮಿಯು ಕೂಗುದೋ
ಬರಡು ಮಾಡುವ ಬುದ್ಧಿ ಇಪ್ಪಮನುಷ್ಯ ವಂಶಕೆ ಶಿಕ್ಷೆಯೋ
ಧರೆಯ ಚೆಂದಕೆ ಮಾಡುಲೇ ನಿಸರ್ಗ ಹಾಡಿದ ನಾಂದಿಯೋ
ಲಾಯ್ಕ ಇದ್ದು ಅಕ್ಕ. “ನಿಸರ್ಗ” ಹೇಳುವಲ್ಲಿ ಮಾತ್ರೆಗಳ ಸರಿ ಮಾಡೆಕ್ಕು.
ಓಹ್ ! ಅಪ್ಪನ್ನೇ. ಪ್ರಯತ್ನ ಮಾಡ್ತೆ ಬದಲ್ಸುಲೆ.
ಮಾತ್ರೆ ಸರಿ ಅಪ್ಪಲೆ ಈ ಕೆಳಕ೦ಡ ಹಾ೦ಗೆ ಪದ್ಯ ತಿದ್ದಿದ್ದೆ.
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ನರನ ಕೀಟಲೆ ಅಟ್ಟಹಾಸವ ನೋಡಿ ಭೂಮಿಯು ಕೂಗುದೋ
ಬರಡು ಮಾಡುವ ಬುದ್ಧಿ ಇಪ್ಪಮನುಷ್ಯ ವಂಶಕೆ ಶಿಕ್ಷೆಯೋ
ಧರೆಯ ಚೆಂದಕೆ ಮಾಡುಲೋಸುಗ ಕಾಲ ಹಾಡಿದ ನಾಂದಿಯೋ
ಹರನ ಕೋಪಕೆ ಗಂಗೆಯೇ ಜೆಡೆ ಬಿಟ್ಟು ಭೂಮಿಗೆ ಬಂದದೋ!
ವರಮಹಾನದಿ ಉಕ್ಕಿತೋ! ಕಡಲೆದ್ದು ಊರಿಡಿ ತುಂಬಿತೋ!/
‘ಕುರುಡು ಮಾನವ ! ದೇವರಾ ಬಲ ಗೊಂತಿದ್ದೊ ನಿನಗೆಂ’ದದೋ!
ಅರಡಿಯಾ ಎನಗೆಂತಕೇ ಇದು! ಒಟ್ಟು ಕೆಟ್ಟದೆ ಅಲ್ಲದೋ? //
ಕವಿತೆಯೋ? ರಸಗ೦ಗೆ ಬೈಲಿಲಿ ನಾಟ್ಯವಾಡುವ ಚೆ೦ದವೋ?
ಎಲ್ಲವೂ ರಸಮಯ.
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ಧರೆಯ ಮಾರಣಹೋಮ ಮಾಡುಲೆ ವೀರಭದ್ರನೆ ಬಂದದೋ
ವರುಣದೇವನು ಶಾಂತನಾದರೆ ಜೀವಕೋಟಿಗೆ ನೆಮ್ಮದೀ
ಶರಣು ಹೋಯೆಕು ದೇವಶಂಭುವ ಲೋಕದೆಲ್ಲೆಡೆ ಶಾಂತಿಗೇ ॥
ಮೊದಲ ಎರಡು ಗೆರೆ ಭಾರೀ ಲಾಯಕ್ಕಾಯಿದು ಅಕ್ಕಾ..
ನರರು ಮಾಡುಗು ದೇವಸಿಂಧುವ ಪಾಪಕೂಪವನಾಗಿಯೇ
ಭರದಿ ಪಾತಕ ನಾಶಮಾಡುವ ಗಂಗೆ ಹೊತ್ತಳು ಭಾರವಾ
ಹೊರುವ ತೂಕಕೆ ಕಾಲಭೈರವನಾದ ಶಂಕರ ಉಗ್ರದೇ
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ಶಿರದ ಮೇಗಣ ಸೌಮ್ಯರೂಪದ ಗಂಗೆ ಮಾಡಿದ ಆರ್ಭಟಾ
ಸೊರುಗಿ ಬೀಳುವ ಅಗ್ನಿಧಾರೆಯ ಅಟ್ಟಹಾಸವ ನೋಡಿರೀ
ಕೊರದು ಕೊಚ್ಚಿಯೆ ಹೋತು ಉತ್ತರ ರುದ್ರನರ್ತನ ಲಾಸ್ಯಕೇ
ಕೆರಳಿ ತಾಂಡವನಾಡಿದಾ ಶಿವ ಮಾಂತ್ರ ಕೂದನು ನಿಶ್ಚಲಾ ॥
ಮರಗಿಡಂಗಳ ಗೋರಿ ಮೇಲೆಯೆ ಅಟ್ಟಿ ಕಟ್ಟಡ ನೆಟ್ಟಿಕೀ
ಒರತೆ ನೀರಿನ ಹೀರಿ ಭೂಮಿಲಿ ತೊಟ್ಟೆ ಬಿತ್ತೆ ವಿಕಾರಕೇ
ಭರತ ಸೂಚಿಸಿ (ತ್ಸುನಾಮಿ)ದರ್ಸಿದಾ(ಭೂಕಂಪ) ಶಿವ ಗಣ್ಯ ಮಾಡದ ಶಾಪವೋ
ಹರನ ಕೋಪಕೆ ಗಂಗೆಯೇ ಜಡೆ ಬಿಟ್ಟು ಭೂಮಿಗೆ ಬಂದದೋ
ಹರನ ಕೋಪಕೆ ಗಂಗೆಯೇ ಜಡೆ ಬಿಟ್ಟು ಭೂಮಿಗೆ ಬಂದದೋ
ಸರಸಿಜಾಕ್ಷನ ಸೃಷ್ಟಿಲೆಲ್ಲವು ಕಾಲ ನೇಮದ ಕೋಲವೂ
ದುರುಳರಬ್ಬೆಯ ಮೆಟ್ಟಿ ಹಾರಿರೆ ಸುಟ್ಟು ತಾಳ್ಮೆಯು ಹೊಟ್ಟೆಲೇ
ಧರೆ ಹೆಣಂಗಳ ರಾಶಿಯಾತದ ಕೊಚ್ಚಿ ಯೆಲ್ಲವು ಧಾರೆಗೇ
ಲಾಯಿಕಿದ್ದು
ಸುರರ ನಾಡಿಲಿ ಮೊನ್ನೆದೊಡ್ಡ ಲಡಾಯಿ ಆಯಿದು ಎಂತಕೋ
ಗರಳ ಕಂಠದ ಈಶಗೂ ಸತಿ ಗಂಗೆಗೂ ಜಗಳಾತಡೋ
ಗಿರಿಜೆ ಮಾತಿನ ಗಣ್ಯಮಾಡದೆ ಮೋರೆ ಊದಿಸಿ ನೆಡ್ತಡೋ
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ಕಲ್ಪನೆ ಚೆಂದ ಇದ್ದು.
ಜರೆದನೋ ? ಗಿರಿ ಗೌರಿಗಾಗಿಯೆ ನೀರ ನೀರೆಯ ಬಿಟ್ಟನೋ ?
ಮರದನೋ ? ಮತಿಗೆಟ್ಟನೋ ? ಮುಡಿಕಟ್ಟುಲಡ್ಡಿಯನೊಡ್ಡಿಯೋ?
ಮುರಹರೇ ಶಿವ ರುದ್ರ ತಾಂಡವ ನೃತ್ಯ ಮಾಡುಲೆಯೆದ್ದನೋ ?
ಹರನ ಕೋಪಕೆ ಗ೦ಗೆಯೇ ಜೆಡೆ ಬಿಟ್ಟು ಭೂಮಿಗೆ ಬಂದದೋ ?
ಪರಿಪೂರ್ಣ ಪೂರಣ. ರೌದ್ರರಸ ಸರಿಯಾಗೊ ಹೊಮ್ಮಿದ್ದು.
ಅಭಿನ೦ದನೆ ಭಾಗ್ಯಕ್ಕ.
ಮುಳಿಯದಣ್ಣ೦ಗೆ ಧನ್ಯವಾದ.
ಭಾಗ್ಯಕ್ಕಾ…ಆಹಾ..ಚೆಂದಕ್ಕೆ ಬರದ್ದಿ.
ಧನ್ಯವಾದ ಬಾಲಣ್ಣ
ತುಂಬಾ ಒಳ್ಳೆ ಪೂರಣ. ಅಭಿನಂದನೆಗೊ ಭಾಗ್ಯಕ್ಕ.
ಧನ್ಯವಾದ ಮಾವ.
ನರರು ಮಾಡುವ ಲೂಟಿಕೋಟಲೆಯಿಂದ ಬೆಂದನೊ ರುದ್ರನೂ
ಮರಣದ ಪ್ರಳಯಾಗ್ನಿ ಚಿಮ್ಮಿದ° ಕೆಂಡಗಣ್ಣಿನ ಶೂಲಿಯೂ
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ಹರಿಯು ಜಹ್ನುವು ಬೈಂದವಿಲ್ಲೆ ತಡದ್ದು ನಿಲ್ಸುಲೆ ಗಂಗೆಯಾ ॥
ಹರನ ಕೋಪಕೆ ಗಂಗೆಯೇ ಜೆಡೆಬಿಟ್ಟು ಭೂಮಿಗೆ ಬಂದದೋ
ಬಿರುದೆ ಹೋತದ ಬಂಡೆಕಲ್ಲುಗೊ ಕೊಚ್ಚಿಹೋಯಿದು ಗಂಗೆಲೀ
ಹರಣ ಹಾರಿತು ಜೀವಸಂಕುಲ ಬಿದ್ದೆ ಹೋತದ ಕಟ್ಟಡಾ
ಕೆರಳಿ ಸೊಕ್ಕಿತು ದೇವಗಂಗೆಯು ನುಂಗಿಹಾಕಿತು ಎಲ್ಲವಾ ॥
ರುದ್ರ ತಾಂಡವದ ಪದ್ಯ ಒಳ್ಳೆ ರೈಸಿದ್ದು ಅಕ್ಕಾ. ಓದುವಗ ಡಮರುಗದ ಶಬ್ದದ ಹಾಂಗೇ ಕೇಳುತ್ತು.
ಎ ರಡು ಪೂರಣಂಗಳೂ ಲಾಯ್ಕ ಆಯಿದು ಅತ್ತೆ.