Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರದ ಸಮಸ್ಯೆ ಈ ದೇಶದ ಉದ್ದಗಲಕ್ಕೆ ವ್ಯಾಪಿಸಿದ ಸಮಸ್ಯೆಯೇ..
” ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?”
ನಮ್ಮ ರಾಜಕೀಯ ನಾಯಕರು ಪರಿಹಾರ ಕ೦ಡುಗೊ೦ಬ ಆಸಕ್ತಿಲಿ ಇಲ್ಲದ್ರೆ ಬೇಡ,ಒಪ್ಪಣ್ಣನ ಬೈಲಿಲಿ ಹೊಸ ಹೊಸ ಪರಿಹಾರ೦ಗೊ ಖ೦ಡಿತಾ ಬಕ್ಕು,ಅಲ್ಲದೋ?
ಅದ್ಭುತವೆ ನೋಟೌಟು ಸೆಂಚುರಿಯ ಬಾರ್ಸಿದ್ದು
ಗೆಬ್ಬಾಯ್ಸಿ ನೋಡಿಪ್ಪ ಕಿರಿಕೆಟ್ಟಿಲಲ್ಲ
ಉಬ್ಬರಿಸಿ ರೂಪಾಯಿ ಬಲಿಯಂದ್ರ ಮುಕುಟಲ್ಲಿ
ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?
ರೈಸಿತ್ತು ಶೈಲಜಕ್ಕಾ.
ಕಾರ್ಯ ಜಾಣ ಮಗ ಹೀಂಗೆ ಹೇಳುಗೋ ….. ? ಶುದ್ದ ಬ್ರಾಹ್ಮಣ ಹೇಳಿಯೂ ಆತು, ನೀರುಳ್ಳಿ ತಪ್ಪ ಪೈಸೆಯೂ ಒಳುದತ್ತು…
ಕೊಬ್ಬಿಂದ ಮಾತಾಡುದಲ್ಲಬ್ಬೆಯಾನಿಲ್ಲಿ
”ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ”ಳಿ
ಆ ಬೈಲ ಕರೆ ಭಟ್ಟಮಾವ ಹೇಳಿದ್ದವಂ
ದೇ”ಬ್ರಾಹ್ಮರು ಪ್ರಾಕಿಲೇ ತಿನ್ನವು
ಅಬ್ಬೆ ಜೆ೦ಗಲ್ಲಿಪ್ಪ ಖಾಲಿ ಕುರ್ವೆಯ ನೋಡಿ
ಬೊಬ್ಬೆ ಹಾಕಿದವು ತಾ ಒಗ್ಗರುಸುಲೊ೦ದಿಷ್ಟು
ಕೊಬ್ಬಿದ್ದು ನೂರಕ್ಕೆ ಹಾರುಗೋ? ಈ ವರುಷ
ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ?
ನೂರಕ್ಕೆ ಹಾರುಗೋ ಗೊಂತಿಲ್ಲೆ, ಈ ಪೂರಣಕ್ಕೆ ನೂರು ಸಿಕ್ಕುಗು.(ಮಾರ್ಕು)
ಷಟ್ಪದಿ ತ್ರಿಪದಿ ಕಂದ ಪದ್ಯ ರಗಳೆ ವೃತ್ತಗಳ ಪಾಠ ಮಾಡುವ ಎನಗೆ ಛಂದಸಿನ್ಗೆ ಅನುಗುಣವಾಗಿ ಬಿಡಿ ,ಸ್ವಚ್ಚನ್ದವಾಗಿದೆ ಎರಡು ಗೆರೆ ಬರವಲೆ ಎದಿತ್ತಿಲ್ಲೇ !ಪ್ರತಿವಾರ ನೋಡಿ ಒಂದೆರಡು ಗೆರೆ ಬರವಲೆ ಹೆರಟು ಪೂರ್ತಿ ಮಾಡುಲೆ ಆಗದ್ದೆ ಈ ಸರ್ತಿಯಣ ಸಮಸ್ಯೆ ಭಾರೀ ಕಷ್ಟದ್ದು ಮುಂದಣ ಸರ್ತಿ ನೋಡುವ ಹೇಳಿ ಅರ್ಧಲ್ಲಿಯೇ ಬಿಡುತ್ತಾ ಇತ್ತಿದೆ !!
ಇಂದಿರತ್ತೆ ,ಭಾಗ್ಯಲಕ್ಶ್ಮಿ ,ರಘುಮುಳಿಯ ,ಕೆ.ನರಸಿಂಹ ಭಟ್ ಏತಡ್ಕ ,ಶೈಲಜಾ ಕೇಕಣಾಜೆ ನಿಂಗ ಎಲ್ಲ ಇಷ್ಟು ಸಲೀಸಾಗಿ ಚಂದಕ್ಕೆ ಬರದ್ದರ ನೋಡಿ ಅಪ್ಪಗ ಎನಗೆ ಗೊಂತಾತು ಸಮಸ್ಯೆ ಸಮಸ್ಯೆದಲ್ಲ,ಎನ್ನದೇ ಹೇಳಿ !ಎಲ್ಲೋರಿಂಗು ಅಭಿನಂದನೆಗ
ಬರವಲೆ ಅರಡಿಯದ್ದರೂ ಬರದ್ದರ ಓದಿ ಕೊಶಿ ಪಟ್ಟಿದೆ
ಗುಬ್ಬಿಗೆ ಬ್ರಹ್ಮಾಸ್ತ್ರ ಬಿಟ್ಟಾಂಗೆ ಬಡವಂಗೆ
ಉಬ್ಬರಿಸಿ ದಿನನಿತ್ಯ ಸಾಮಾಗ್ರಿ ಬೆಲೆಯು
ಬೆಬ್ಬಳಿಸಿ ಕಣ್ಣೀರು ತರಿಸಿತ್ತು ಅಡುಗೆಯೊಳ
ಹಬ್ಬಕ್ಕೆ ನೀರುಳ್ಲಿ ಬೆಡಿ ಹೊಟ್ಟುಗೋ?
ಅತ್ತೆ, ಇದು ಪ೦ಚಮಾತ್ರಾ ಚೌಪದಿ ಆಗಿದ್ದರೆ, ಮಾತ್ರೆ ಜಾಸ್ತಿ ಆತಲ್ಲದೊ? ೨೦,೧೮,೨೦ ಮತ್ತು ೪ ನೇ ಪಾದಲ್ಲಿ ೧೫ +ಒನ್ದು ಗುರು ಆಯೆಕ್ಕಲ್ಲದಾ?
ಓ, ಅಪ್ಪು ಭಾಗ್ಯಕ್ಕ, ಐದು ಮಾತ್ರೆಯ ನಾಲ್ಕು ಗಣ ಆಯೆಕ್ಕಾತು ತಪ್ಪಿ ಐದು ಬರದೆ, ಕ್ಷಮಿಸಿ, ಒಟ್ತಿಂಗೆ ತ್ಯಾಂಕ್ಸುದೆ ಕೂಡ್ಲೆ ತಿದ್ದಿದ್ದಕ್ಕೆ. ಅರ್ಜೆಂಟಿನ ಕೆಲಸ ಮುಗಿಶಿಕ್ಕಿ ಬಂದು ಸರಿಮಾಡ್ತೆ ಆತಾ?
ಗುಬ್ಬಿಗೆ ಬ್ರಹ್ಮಾಸ್ತ್ರದಾಂಗಾತು ಮಾರುಕಟ್ಟೆಲಿ ಕಂಡ
ಹಬ್ಬುಗೆಯು ದಿನನಿತ್ಯ ಸಾಮಾನುಗಳ ಮೇಗೆ ಜನಕೆ
ಬೆಬ್ಬಳಿಸಿ ಕಣ್ಣೀರು ತರುಸಿಕ್ಕು ತರಕಾರಿ ಕೊಂಬಾಗ
ಹಬ್ಬಕ್ಕೆ ನೀರುಳ್ಲಿ ಬೆಡಿ ಹೊಟ್ತುಗೋ?।।
ಅಬ್ಬಬ್ಬ ದೇವರೇ
ಉಬ್ಬರದ ಪರಿಣಾಮ
ದಬ್ಬರಕೆ ಕಂಗಾಲು ಬಡಜನತೆಯು ।
ದಬ್ಬಣವ ತೆಕ್ಕೊಂಡು
ಬೊಬ್ಬಿಡುವ ಸದನದೊಳ
ಹಬ್ಬಕ್ಕೆ ನೀರುಳ್ಲಿ ಬೆಡಿ ಹೊಟ್ಟುಗೋ?
ಇದೂ ರೈಸಿದ್ದು.
ಒಬ್ಬನೇ ಮಗನಿಪ್ಪೊ
ದೆಬ್ಬಿದವು ಹೋಪಲ್ಲಿ
ಗಬ್ಬರಲ್ಲಿಯೆ ನಮ್ಮ ಸುಭಗ ಭಾವ°
ಗಬ್ಬಲಡ್ಕದ ಜಾಣ
ದಿಬ್ಬಣವ ತ೦ದರೀ
ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ ?
ಹು ಹು ಹು..! ಇದು ರೈಸಿದ್ದು…
ಉಬ್ಬರದ ಸಮಯಲ್ಲೆ ಸಾಲಾಗಿ ಹಬ್ಬಂಗೊ
ನಿಬ್ಬರದ ಮಾತುಗಳ ಹಿಡಿತಕ್ಕದು ಸಿಕ್ಕುಗೊ?
ಅಬ್ಬರದ ಬಾನಿಲ್ಲಿ ವರ್ಣ ಚಿತ್ತಾರಂಗೊ
ಹಬ್ಬಕ್ಕೆ ನೀರುೞಿ ಬೆಡಿ ಹೊಟ್ಟುಗೋ?
೨ನೆಯ ಗೆರೆ ಸ್ಟ್ರೋಂಗ್ ಆದ ಕಾರಣ ರಜ ಲೈಟ್ ಮಾಡುವೊ.(೨ಮಾತ್ರೆ ಕಮ್ಮಿ ಮಾಡಿ)
ನಿಬ್ಬರದ ಮಾತುಗೊಕ್ಕದುವೆ ತಗ್ಗುಗೋ?
“ನಿಬ್ಬರದ ಮಾತುಗಳ ಹಿಡಿತಕ್ಕೆ ಸಿಕ್ಕುಗೋ?” – ಹೇಳಿರೆ ಸರಿ ಆವ್ತಿತ್ತು ಮಾವ.
ಧನ್ಯವಾದ ರಘುಮುಳಿಯ.
ನೀರುಳ್ಳಿ ಬೆಡಿಯೋ ಮೋದಿ ಕಂಬೆಡಿಯೋ ಉಮ್ಮ… ಅಷ್ಟಾವದಾನಂದ ಸುರುವಾದ್ದು ವಾರವಾರ ಹೊಟ್ಟುತ್ತಲೇ ಇದ್ದು. ಹೀಂಗೇ…. ಹೊಟ್ಟ್ಯೊಂಡಿರಳಿ
ಸಬ್ಬ ಬೆಡಿಗಳ ಗೌಜಿ
ಅಬ್ಬರದ ಬಾನಿಲ್ಲಿ
ಉಬ್ಬೆ ತಡೆಯದ್ದೆ ಜಾಲಿಂದ ನೋಡಿ
ನಿಬ್ಬರದ ಕೌತುಕವ
ಹೆಬ್ಬಯಕೆ ತಗ್ಗಿತ್ತು
ಹಬ್ಬಕ್ಕೆ ನೀರುೞಿ ಬೆಡಿ ಹೊಟ್ಟುಗೋ?
(ಸಬ್ಬ=ಸರ್ವ,ಉಬ್ಬೆ=ಸೆಕೆ,ನಿಬ್ಬರ=ಅತಿಶಯ)
ಲಾಯಕ ಷಡ್ಪದಿ ಮಾವ. ಒಂದು ಚೌಪದಿಯೂ ಬರಲಿ.
ಗೊಬ್ಬರಲಿ ನೆಟ್ಟ ಸೆಸಿ
ಕೊಬ್ಬಿ ಬೇರು ಗೆಂಡೆಯ
ದುಬ್ಬಿದ್ದ ಕೊರದು ಕಣ್ತುಂಬ ನೀರೇ
ಯಬ್ಬೊ ಕ್ರಯ ನೂರಡ
ಬೊಬ್ಬೆಯಾಗಿ ಹೊಟ್ಟೆಲೀ
ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ ?
ಎರಡು,ನಾಕು, ಐದನೆ ಸಾಲಿಲಿ ‘ಲಗಂ’ ಬಯಿಂದನ್ನೆ ಶೈಲಕ್ಕ. ಸರಿ ಮಾಡಿ.
ಹೋ… ಅಪ್ಪಲ್ಲದಾ… ಧನ್ಯವಾದ ಮಾವ…. ಹೀಂಗೆ ಬದಲ್ಸುತ್ತೆ ಆಗದಾ…
ಗೊಬ್ಬರಲಿ ನೆಟ್ಟ ಸೆಸಿ
ಕೊಬ್ಬಿ ಬೇರ ಕೊಡೀಲ
ದುಬ್ಬಿದ್ದ ಕೊರದು ಕಣ್ತುಂಬ ನೀರೇ
ಯಬ್ಬೊ ಕ್ರಯವದೇರಿ
ಬೊಬ್ಬೆಯಕ್ಕು ಬಸರಿಲಿ
ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ ?
ನೀರುಳ್ಳಿ ಬೆಲೆಯೇರಿದ ಬಗ್ಗೆ —
ಗೆಬ್ಬಳ್ಸಿ ನೋಡುಲೂ ಪುರುಸೊತ್ತು ಸಾಲಪ್ಪ
ದೌರ್ಭಾಗ್ಯ ನಮ್ಮದಿದು ಹೇಳಿ ಸುಖವಿಲ್ಲೆ
ಉಬ್ಬರ್ಸಿ ಬೆಲೆಯೇರಿ ತರಕಾರಿ ಸಂತೆಲಿದೆ
ಹಬ್ಬಕ್ಕೆ ನೀರುಳ್ಳಿ ಬೆಡಿ ಹೊಟ್ಟುಗೋ ?
ಆನು ಈ ರೀತಿ ಎರಡೆರಡು ಛಂದಸ್ಸಿಲಿ ಪೂರಣ ಬರೆಕ್ಕು ಹೇಳಿ ಗ್ರೇಶಿಯೊಂಡಿತ್ತಿದ್ದೆ. ಭಾಗ್ಯಕ್ಕ ಖಂಡಿತಾ ಕೊಡುಗು ಹೇಳಿಯೂ ಅಂದಾಜಿಸಿತ್ತಿದ್ದೆ. ಸರಿ ಆತು.
ಈ ಪೂರಣ ತುಂಬ ಲಾಯಿಕಾಯಿದು.
ಎನಗೂ ಇದುವೆ ಕೊಶಿಯಾದ್ದು.ನಿ೦ಗಳ ನೀರೀಕ್ಶೆ ಹುಸಿ ಮಾಡಿದ್ದಿಲ್ಲೆನ್ನೆ ಹೇಳಿ ಎನಗುದೆ ತ್ರುಪ್ತಿ ಇದ್ದು. ಃ-)
ಅಬ್ಬೆಯಡಿಗೆಯೆ ಸಾಕು
ಡಬ್ಬಿ ತಿಂಡಿಯೆ ಬೇಡ
ಮಬ್ಬಿಲ್ಲಿ ಅಭ್ಯಂಗ ಮಾಡೆಕ್ಕು ಬಾ
ಉಬ್ಬರವು ತಗ್ಗಿದ್ದು
ಅಬ್ಬರಂದ ಕೇಳೆಡ
ಹಬ್ಬಕ್ಕೆ ನೀರುೞಿಬೆಡಿ ಹೊಟ್ಟುಗೋ?
೫ನೆಯ ಗೆರೆಯ ಈ ರೀತಿ ಬದಲ್ಸಿದ್ದೆ.
ಅಬ್ಬರದ ಚೋದ್ಯವದು
ಬದಲ್ಸಿ ಬರದ ಮತ್ತೆ ಸರಿ ಆತು ಮಾವ.
ಕ್ಶಮಿಸಿ. ಮೇಲೆ ೨ ಸಾಲು ಆದಿ ಪ್ರಾಸ ತಪ್ಪಿದ್ದು. ಈ ರೀತಿ ಸರಿ ಮಾಡ್ತೆ.
ಹುಬ್ಬಿಂದ ಮೇಲಿಪ್ಪ
ವುಬ್ಬಾದ ಕಲೆಯ ನೋ-
ಡ್ಯಬ್ಬೆಲ್ಲಿಯಬ್ಬರಿಸುಗೋಳಿ ಪೋಕ್ರಿ
ಸುಬ್ಬತ್ತೆಯಿಪ್ಪಗಾ
ಹ೦ಬಲ್ಸಿ ಕೇಳಿದನೊ?
ಹಬ್ಬಕ್ಕೆ ನೀರುಳ್ಳಿ ಬೆಡಿಹೊಟ್ಟುಗೋ ?
ಉಬ್ಬು =ಗಾಯ , ಬೇನೆ (ಹವ್ಯಕ ಬಾಲ ಭಾಷೆಲಿ ) ಅಬ್ಬರಿಸು=ಜೋರು ಮಾಡು
ಮದಲಾಣ ವರ್ಷ ಪಟಾಕಿ ಹೊಟ್ಟುಸಿದ್ದು ಕಣ್ಣಕರೆಂಗೆ ರಟ್ಟಿ ಗಾಯ ಆಯಿದು . ಹಾಂಗಾಗಿ ಅದು ನೆನಪ್ಪಾಗಿ , ಈ ವರ್ಷ ಪಟಾಕಿ ತಂದರೆ ಅಮ್ಮ ಜೋರು ಮಾಡುಗು ಹೇಳಿ ಸುಬ್ಬಲಕ್ಶ್ಮಿ ಹೇಳುವ ಅತ್ತೆ ಬ೦ದಿಪ್ಪಗ ಕುಶಾಲು ಮಾಡ್ತಾ , ಅಮ್ಮನತ್ತರೆ ಈ ರೀತಿ ಕೇಳಿದನೊ ? ಹೇಳಿ ಅರ್ಥ .
ಈಗ ನೀರುಳ್ಳಿ ಬೆಡಿ ಸಿಕ್ಕುತ್ತಾ…. ?ಸಿಕ್ಕದ್ದರೆ ಇದು ನಮ್ಮ ಬೈಲ ಒಪ್ಪಣ್ಣ೦ದ್ರ ಹಳೆ ಕತೆ ಹೇಳಿ ಮಡಿಕ್ಕ್ಕೊಂಬ .
ಮೇಲೆ ಬರದ ರೀತಿಲಿ (ಹ೦ಬಲ್ಸಿ) ಅನುಸ್ವಾರದ ಆದಿ ಪ್ರಾಸ ಬಪ್ಪಲಕ್ಕೊ?
{ಮೇಲೆ ಬರದ ರೀತಿಲಿ (ಹ೦ಬಲ್ಸಿ) ಅನುಸ್ವಾರದ ಆದಿ ಪ್ರಾಸ ಬಪ್ಪಲಕ್ಕೊ?} – ಇದಕ್ಕೆ ಉತ್ತರ ‘ಆಗ’.
ಇನ್ನೊಂದರಿ ಸರಿ ಮಾಡಿ ಬರೆರಿ.
ಹಬ್ಬದ ಶುಭಾಶಯಂಗೊ ಭಾಗ್ಯಕ್ಕ. ಪದ್ಯ ಪಟಾಕಿ ಹೆಚ್ಚೆಚ್ಚು ಹೊಟ್ಟಲಿ.
ಎಲ್ಲೊರಿ೦ಗೂ ಹಬ್ಬದ ಶುಭಾಶಯ೦ಗೊ.
ಧನ್ಯವಾದ ಮಾವ. ಸರಿ ಮಾಡ್ತೆ..
ಹುಬ್ಬಿಂದ ಮೇಲಿಪ್ಪ
ವುಬ್ಬಾದ ಕಲೆಯ ನೋ-
ಡ್ಯಬ್ಬೆಲ್ಲಿಯಬ್ಬರಿಸುಗೋಳಿ ಪೋಕ್ರಿ
ಸೌಭಾಗ್ಯವಾತೆನಗೆ
ಸುಬ್ಬತ್ತೆಯಿಪ್ಪದೂ
ಹಬ್ಬಕ್ಕೆ ನೀರುಳ್ಳಿ ಬೆಡಿಹೊಟ್ಟುಗೋ ?
ಹುಬ್ಬಿಂದ ಮೇಲಿಪ್ಪ
ವುಬ್ಬಾದ ಕಲೆಯ ನೋ-
ಡ್ಯಬ್ಬೆಲ್ಲಿಯಬ್ಬರಿಸುಗೋಳಿ ಪೋಕ್ರಿ
ಕಾಡುತ್ತ ಕೇಳಿದನೊ ?
ಕೂಡ್ಯೂ೦ಡು ಗೆಳೆಯರನು
ಹಬ್ಬಕ್ಕೆ ನೀರುಳ್ಳಿ ಬೆಡಿಹೊಟ್ಟುಗೋ ?
ಉಬ್ಬು =ಗಾಯ , ಬೇನೆ (ಹವ್ಯಕ ಬಾಲ ಭಾಷೆಲಿ ) ಅಬ್ಬರಿಸು=ಜೋರು ಮಾಡು
ಮದಲಾಣ ವರ್ಷ ಪಟಾಕಿ ಹೊಟ್ಟುಸಿದ್ದು ಕಣ್ಣಕರೆಂಗೆ ರಟ್ಟಿ ಗಾಯ ಆಯಿದು . ಹಾಂಗಾಗಿ ಅದು ನೆನಪ್ಪಾಗಿ , ಈ ವರ್ಷ ಪಟಾಕಿ ತಂದರೆ ಅಮ್ಮ ಜೋರು ಮಾಡುಗು ಹೇಳಿ ಗೆಳೆಯರ ಎಲ್ಲಾ ಸೇರುಸಿ ಕುಶಾಲು ಮಾಡ್ತಾ , ಅಮ್ಮನತ್ತರೆ ಈ ರೀತಿ ಕೇಳಿದನೊ ? ಹೇಳಿ ಆನು ಬರದ್ದರ ಅರ್ಥ .
೧) ಈಗ ನೀರುಳ್ಳಿ ಬೆಡಿ ಸಿಕ್ಕುತ್ತಾ…. ?ಸಿಕ್ಕದ್ದರೆ ಇದು ನಮ್ಮ ಬೈಲ ಒಪ್ಪಣ್ಣ೦ದ್ರ ಹಳೆ ಕತೆ ಹೇಳಿ ಮಡಿಕ್ಕ್ಕೊಂಬ .