Oppanna.com

ಸಮಸ್ಯೆ 54 : ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು

ಬರದೋರು :   ಸಂಪಾದಕ°    on   09/11/2013    12 ಒಪ್ಪಂಗೊ

ಈ ವಾರದ ಸಮಸ್ಯೆ ಒ೦ದು ಭಾಮಿನಿಲಿ ಒ೦ದು ಉಪಮೆ ಃ

“ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು”

ಬೈಲಿನ ನೆ೦ಟ್ರ ಕಲ್ಪನಾವಿಹಾರವ ನೋಡುವ ಅಲ್ಲದೋ?

12 thoughts on “ಸಮಸ್ಯೆ 54 : ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು

  1. ಹೊರಳಿ ಗುಡ್ಡೆಲಿ ಹೋಪ ಮಾರ್ಗವು
    ಬರದು ಮಡಗಿರೆ ಹಾವಿನಾಂಗೆಯೆ
    ಹರದು ಹೋಯೆಕು ಗುಂಡಿಗಂಡಿಯ ಪೇಟೆ ವಾಹನಲಿ
    ಬರೆಕು ಹೇದವು ಹೇಳಿ ಹೋದರೆ
    ಇರುಳು ಕಾರಿಲಿ ಹೋದ ದಾರಿಯ
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||

  2. ಬರೆ ಕರೆಲಿ ನೆಡವಾಗ ಒಂದಿನ
    ಜೆರುದ ಮಣ್ಣಿನ ಮದಿಲಿನೆಡಕಿಲಿ
    ಸರಸರನೆ ಹರದಾಂಗೆ ಶಬುದವು ಕೆಮಿಗೆ ಕೇಳಿತ್ತು/
    ಮುರುದ ಮರ ಕುಂಬಾಗಿ ಬಿದ್ದದೊ!
    ಕುರುಡು ಕತ್ತಲೆಯಾತು ಕಾಣುಗೊ?
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು/

  3. ಹೆರಟೆ ಕೆಲಸವ ಮುಗುಶಿ ಬೇಗನೆ
    ಸರವ ಎಳವವರದ್ದೆ ಹೆದರಿಕೆ
    ಲಿರುಳ ಪರದೆಯು ಬೀಳುಲಾಯಿದು ಮನ್ನೆಯೊ೦ದು ದಿನ ||
    ಚರಳ ಮಾರ್ಗದ ಕರೆಲಿಯಾಲದ
    ಮರದ ಬೀಳುಗೊ ನೇಲಿ ನಿ೦ದದು
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||

  4. ಪುರದ ಹಾದಿಲಿ ಸಾಲು ಗಾಡಿಗೊ
    ಉರುಟು ದೀಪಂಗಳ ಬೆಣಚ್ಚಿಲಿ
    ಕುರುಕು ತಿಂಡಿಯ ತಿಂಬದರ ನೋಡುವದೆ ಗಮ್ಮತ್ತು
    ಕರೆಲಿ ಬರಿಮೈಲಿ ಚಳಿ ತಡೆಯದೆ
    ಮುರುಟಿ ಮನುಗಿದ ಹುಡುಗನ ನೆಳಲೆ
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು

    1. ಸೊ೦ಡಿಲು ನೆಡುಗಿಗೊ೦ಡು ಇತ್ತೋ ಮಾವ?ಪಾಪ..

  5. ಶರದ ಮೆಟ್ಳಿಲಿ ಕುಂತಿನಂದನ
    ಸುರರಲೋಕದ ಗಜವ ತರಿಸಿದ
    ಪರಮ ಕಥೆಯನೆ ಕೇಳಿ ಪುಟ್ಟನು ನೋಡಿದಾಗಸವ ।
    ನೆರೆದ ಮೋಡದ ರಾಶಿಲಾನೆಯ
    ಕೊರದು ಕಲ್ಪಿಸಿ ಮತ್ತೆ ಬಾನಿನ
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ॥

  6. ಪುರದ ಪಟ್ಟವ ಕಟ್ಟಿದಾನೆಯ
    ನಿರುತ ಜಾನ್ಸುತ ಮನಸ ಮೂಲೆಲಿ
    ತಿರುಕ ಮನುಗಿದನಾಲಮರದಡಿ ಮೂರುಸಂಧಿಯೊಳ ।
    ಒರಕಿನಮಲಿಲಿ ಕಣ್ಣು ಬಿಟ್ಟರೆ
    ಮರದ ಬಿಳಲುಗಳಿಳುದು ಬಂದದು
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ।।

  7. 1) ತರುಣರೆಲ್ಲಾ ಪಂತಕಟ್ಟುತ
    ತರಣಿಗೆರಗೊಗ ಮೂಡದಿಕ್ಕಿಲಿ
    ತರಹೆವಾರಿಯ ದೇಹ ಭಂಗಿಯ ಮಾಡಿ ತಾನಲ್ಲಿ |
    ಕರಗಳೆರಡರ ಕರೆಲಿ ಬೀಸೊಗ
    ಕರಿಯ ನೆರಳದು ಕುಂಞಿ ಮಾಣಿಗೆ
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||
    ತರಣಿಗೆರಗೊಗ =ಸೂರ್ಯ ನಮಸ್ಕಾರ ಮಾಡ್ವಗ
    ಕರಿಯ ನೆರಳು =ಕಪ್ಪು ಬಣ್ಣದ ನೆರಳು
    2) ಬರದು ಚಿತ್ರವ ಬೆಳಿಯ ಹಾಳೆಲಿ
    ಬೆರಗುಗಣ್ಣಿನ ತಿಕ್ಕಿ ಬೆರಳಿಲಿ
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು |
    ಹರುದು ಹಾಕುವ ಮೊದಲೆ ಹೇಳಿದೆ
    ಬಿರಿವ ಹೊಟ್ಟೆಯ ದೊಡ್ಡ ಗಜಕಾ-
    ನುರುಡಿ ಬಿಡುಸಿದ ಕಾಲುಗೆರಡುದೆ ರೂಪ ಕಳದಿತ್ತು ! ||
    ಹಾಳೆ =ಕಾಗತ ,ಕಾಗದ
    ತಿರುಗಿ ನೋಡಿರೆ =ಪುನ: ನೋಡಿದರೂ ,
    ಗಜಕೆ +ಆನು +ಉರುಡಿ =ಗಜಕಾನುರುಡಿ ,
    3)ಬರದ ಲೇಖನವೋದಿ ತಿಳುದರೆ
    ನೆರವ ನೀಡುವ ಹಳೆಯ ಸಾಧನ
    ತೆರೆದ ಬಾವಿಗೆ ಬಿದ್ದ ಪಾತ್ರವ ಹುಡುಕಿ ತೆಗವಲದು |
    ಕರೆಲಿ ಹಾಕಿದ ಚಿತ್ರ ಪಟಲಾ
    ಕರಿಯ ಕಬ್ಬಿಣ ಕುಣಿಕೆಯೆಲ್ಲವು
    ತಿರುಗಿ ನೋಡಿರೆ ಕರಿಯ ಸೊಂಡಿಲಿನಾಂಗೆ ಕಂಡತ್ತು ||
    ( ಇದು ಪಾತಾಳ ಗರಡಿಯ ಬಗ್ಗೆ )

  8. ದೀಪಾವಳಿ ಗುಂಗಿಲ್ಲೇ….
    ಕುರುವೆ ತುಂಬುಸಿ ಕೊಯಿದ ಹೂಗಿಲಿ
    ಬರದು ಮಂಡಲ ತೊಳಶಿ ದೇವಿಗೆ
    ಕೊರದು ಸೌತೆಯ ಮಾಡೆ ಕೊಟ್ಟಿಗೆ ಗೋವ ಪೂಜುಸುಲೆ
    ವರುಷ ಮದಲಿನ ಜೆಂಗ ಸೇರಿದ
    ದುರುಸ ಹಾರ್ಸಿರೆ ಸುರುಳಿ ಹೊಗೆಯದು
    ತಿರುಗಿ ನೋಡಿರೆ ಕರಿಯ ಸೊ೦ಡಿಲಿನಾ೦ಗೆ ಕ೦ಡತ್ತು ||

    1. ಟುಸ್ ಪಟಾಕಿಯೋ ಶೈಲಜಕ್ಕಾ?ಲಾಯ್ಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×