Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಪವನಜ ಮಾವ ಮೈಸೂರಿಲಿ ತೆಗದ ಈ ಚೆ೦ದದ ಚಿತ್ರಕ್ಕೆ ಈ ವಾರ ಕವನ ಕಟ್ಟುವನೋ?
ಕೆ೦ಪು ಬಾನಿನ ಚೆ೦ದ ಮಲ್ಲಿಗೆ
ಕ೦ಪು ಸುತ್ತಲು ಹರಡುವಗ ಅನು
ಕ೦ಪ ಕರ್ನಾಟಕದ ಒಡೆಯರ ಮೂರ್ತಿ ಸುತ್ತಿತ್ತೊ? |
ನೆ೦ಪು ಒಳಿಯಲಿ ಮನಸಿನೊಳ ಕೆಮಿ
ಗಿ೦ಪು ಕ೦ಠದ ಗೀತೆ ಕೇಳಲಿ
ತ೦ಪದಾಗಲಿ ಆತ್ಮ ಪರಮಾತ್ಮನನೆ ಸೇರುವಗ ||
ಏತಡ್ಕ ನರಸಿ೦ಹ ಮಾವ ಬರದು ಕಳುಸಿದ ಪದ್ಯ –
ಕನ್ನಡದ ಸಂಸ್ಕೃತಿಯ ತವರುಮನೆ ಮೈಸೂರು
ಚೆನ್ನ ಕರುನಾಡ ಮದಲಾಣ ಚೆಂದದ ಹೆಸರು
ಕನ್ನೆ ಚಾಮುಂಡಿ, ಮಹಿಷಾಸುರ ನೆಲಸಿದೂರು
ಜೊನ್ನ ರೀತಿಯ ಬೆಣಚ್ಚಿಲ್ಲಿ ಮೈಮರದೂರು
(ಕನ್ನೆ=ಕನ್ಯೆ,ಜೊನ್ನ=ಬೆಳದಿಂಗಳು )
ನಂದಿತೋ ನಂದಿತ್ತು ಮೈಸೂರಿನಾ ದೀಪ
ಸಂದಿದೋ ಸಂದತ್ತು ಅಲಮೇಲಿನಾ ಶಾಪ
ಸಂದು ಹೋದ ಕಾಲಕ್ಕೆ ಯದುವಂಶದ ಭೂಪ
ಗೊಂದಲವೊಳುದ್ದುಯಿಲಿನ ವಿಷಯಲ್ಲಿಯು ಪಾಪ
(ಎನ್ನ ಸಹಾಧ್ಯಾಯಿ ಶ್ರೀಕಂಠದತ್ತನ ಆತ್ಮಕ್ಕೆ ಚಿರಶಾಂತಿ ಕೋರಿ ಅಕ್ಷರ ನಮನ)
🙂 🙂
ಶೈಲಕ್ಕನ ಪದ್ಯ ನೋಡಿ ಕೊಶಿ ಆತು . ಅರ್ಥ ಪೂರ್ಣವಾಗಿ ಲಾಯಿಕ ಆಯಿದು .
ಇಷ್ಟು ದಿನಂದ ಎನ್ನ ಪದ್ಯ ಮಾತ್ರ ನೋಡಿ ಬೊಡುದು ಪದ್ಯ ಬರವ ನೆ೦ಟ್ರುಗೊ ಎಲ್ಲಾ ಮಹಾರಾಜರ ಮರಣ೦ದ ಸೂತಕದ ಛಾಯೆಲೇ ಇದ್ದವಾ ಹೇಳಿ ಗ್ರೇಶಿ ಗೊಂಡುತ್ತಿದ್ದೆ ..
ಬಚ್ಚಿ ಬೊಡಿವಗ ಮೋರೆ ಕೆಂಪಿಲಿ
ಮುಚ್ಚಿ ಕಾರ್ಯವ ಸೂರ್ಯ ಕಂತಿದ
ಸುಚ್ಚು ಬಲ್ಬುಗೊ ಹೊತ್ತಿ ಜಗಮಗ ದಸರೆ ಮೈಸೂರು
ಕಿಚ್ಚು ಹಾರುವ ಬೆಳ್ಳಿ ರೇಖೆಗೊ
ಬೆಚ್ಚಿ ಬೇಳ್ಸುಗು ಮಾರ್ಗಮಾರ್ಗಲಿ
ಪುಚ್ಚೆ ಕಣ್ಣಿನ ಹೊಳಪು ಬಕ್ಕದ ಸುತ್ತಲರಮನೆಲಿ ||
ಕೇರಿ ಕೇರಿಯ ಸುಪ್ತ ಕಲೆಗಿದು
ನೇರ ವೇದಿಕೆ ಬಿಚ್ಚಿ ಬೆಳಗುಲೆ
ಸೇರಿ ಲಕ್ಷಲಿ ರಸಿಕ ಮನಸುಗೊ ಸೂರೆಯಾಯ್ಕ್ಕೊಂಡು
ಹೇರಿ ಬೆಣ್ಚಿಯ ದೇಶ ದೇಶಕು
ಸಾರಿ ತೋರ್ಸುವ ರಾಜ ವೈಭವ
ಕೋರಿ ಕೊಟ್ಟಿದು ರಾಶಿ ಪೈಸವ ದೇಶ ಬೊಕ್ಕಸಕೆ ||
ಸೂಡಿ ಹಿರಿಯರ ದರ್ಪದಾಳ್ವಿಕೆ
ಮೂಡಿ ಬಂದವು ಕಡೆಯ ಯಾದವ
ಮೋಡಿ ಮಾಡಿದ ಸಿರಿಯ ಕಂಠದ ದತ್ತ ಒಡೆಯರುಗೊ
ನಾಡ ಸಂಸ್ಕೃತಿಯೊಳುಶಿ ಬೆಳಶುವ
ಬೀಡಿನಾಳ್ವಿಕೆ ದರ್ಪ ತೋರ್ಸುಲೆ
ದಾಡೆಯಾನೆಯ ಪಟ್ಟವೇರಿದ ಕಲಶ ಪುತ್ಥಳಿಯು ||
ಸೀರೆ ರೇಶ್ಮೆಯ ಹೆಸರ ಹಬ್ಸಿದ
ಕಾರುಬಾರಿನ ಮಾಜಿ ಸಂಸದ
ತೋರದೊಡೆಯರು ಪ್ರಾಣ ಬಿಟ್ಟವು ಹೃದಯ ಬೇನೆಂದ
ಹಾರಿ ಜೀವವು ಲೀನವಾದರು
ದಾರಿದೀಪವ ಹೊಸ್ಸಿ ಕೊಟ್ಟವು
ಮೇರು ಪಕ್ವತೆ ಸಮ್ಮಿಳುಶೊ ಸದ್ಗುಣ ಪರಂಪರೆಲಿ ||
ಕಣ್ ಸೂರೆ ಮಾಡ್ವ ಬಲ್ಬುಗೊ
ಮೈಸೂರಿನ ಸುತ್ತು ಮುತ್ತು ಹೊತ್ತುವ ಮೊದ್ಲೇ
ಮೈಸೂರೊಡೆಯರರಮನೆಲಿ
ಮೈಸೂರಿನ ದೀಪ ನಂದಿ ಕರಿ ಕಟ್ಟಿತ್ತೂ ||
ಅಕ್ಕಾ,
ಕ೦ದಪದ್ಯದ ಪ್ರಯತ್ನ ಭಾರೀ ಲಾಯ್ಕ ಆಯಿದು. ಅಭಿನ೦ದನೆ. ಆದರೆ ಮೈಸೂರು ಶಬ್ದದ ಪುನರಾವರ್ತನೆ ತಪ್ಪುಸಿರೆ ಒಳ್ಳೆದು.
ಅಪ್ಪು, ತುಂಬ ಲಾಯ್ಕದ ಕಂದ ರಚನೆ.
ಮುಳಿಯದಣ್ಣಂಗೂ , ಟಿಕೆ ಮಾವಂಗೂ ಧನ್ಯವಾದಂಗೊ .
ಈಗ ಒಂದೇ ಮೈಸೂರು . ಹೀಂಗೆ ಅಕ್ಕಲ್ಲದೊ ?
ಕಣ್ ಸೂರೆ ಮಾಡ್ವ ಬಲ್ಬುಗೊ
ಆ ಸೂರ್ಯಾಸ್ತಕ್ಕೆ ರಂಗು ಹಚ್ಚುವ ಮೊದ್ಲೇ
ಶ್ರೀ ಶಕ್ತಿಯ ಕೈಂಕರ್ಯದ
ಮೈಸೂರಿನ ದೀಪ ನಂದಿ ಕರಿ ಕಟ್ಟಿತ್ತೂ ||
ಭಾಗ್ಯಕ್ಕನ ಕ೦ದ ಪದ್ಯದ ಸ್ಪೂರ್ತಿಲಿ,
ರೈಸಿ೦ಡಿತ್ತರಮನೆ ಜೆನ
ರೈಸಿರಿ ಕಾ೦ಬಲೆ ಜಗತ್ತು ಕಣ್ಣೊಡದಿತ್ತು
ಕೈಸಾಲೆಲಿ ಕಾರ್ಗಸ್ತಲೆ
ಮೈಸೂರೊಡೆಯ೦ದೆ ದೀಪ ನ೦ದಿತ್ತಯ್ಯೋ!
ಮುಳಿಯದಣ್ಣನ ಪದ್ಯ ಲಾಯಿಕಾಯಿದು. ಕ೦ದ ಪದ್ಯಲ್ಲಿ ೨ನೇ ಮತ್ತು ೪ ನೇ ಪಾದದ ಕೊನೆಯ ಅಕ್ಷರ ಯಾವಾಗಲೂ ‘ಗುರು’ ವೇ ಆಗಿರೆಕಲ್ಲದಾ? ೨ ನೇ ಪಾದಲ್ಲಿ ಟಯಿಪ್ ಮಾಡೋಗ ತಪ್ಪ್ಪು ಬ೦ದ ಹಾ೦ಗಿದ್ದು.
ವಿಜಯನಗರದ ಭವ್ಯ ಪಾರಂಪರಿಕ ಹಬ್ಬ
ವಿಜಯದಶಮಿಗೆ ದಿವ್ಯ ಕಳೆ ಕೊಟ್ಟು ಒಳಿಶಿ
ಸೃಜಿಸಿ ಹೊಸತನವ ತಂದರಸು ಮನೆತನದ ಕುಡಿ
ಭಜಿಸಿ ಭುವನೇಶ್ವರಿಯರಸಿಹೆರಟದೋ?
ವಿಜಯ ನಗರ ಸಾಮ್ರಾಜ್ಯ ಪತನ ಅಪ್ಪಗ ಅವು ಆಚರಿಸಿ ಗೊಂಡಿದ್ದ ವಿಜಯ ದಶಮಿ ಉತ್ಸವವ ಅವರ ಸಾಮಂತ ಅರಸರಾಗಿದ್ದ ವಡೆಯರ್ ವಂಶದ ಅರಸರು ಅದರ ಮುoದುವರಿಸುತ್ತ ಬಂದವು ಹೇಳ್ತ ಹಿನ್ನೆಲೆಲಿ ಈ ಪದ್ಯ ಬರದ್ದು
ಲಾಯ್ಕಾಯಿದು ಭಾಗ್ಯಕ್ಕಾ. ಆದರೆ ಕಡೇ ಸಾಲಿಲಿ ಮಾತ್ರೆ ಹೆಚ್ಚಾದ ಹಾ೦ಗಿದ್ದನ್ನೇ.
ಅಪ್ಪನ್ನೆ … ಮಾತ್ರೆ ತುಂಡು ಮಾಡ್ವಗ ರಜಾ ಓರೆ ಆತದ ….
ವಿಜಯನಗರದ ಭವ್ಯ ಪಾರಂಪರಿಕ ಹಬ್ಬ
ವಿಜಯದಶಮಿಗೆ ದಿವ್ಯ ಕಳೆ ಕೊಟ್ಟು ಒಳಿಶಿ
ಸೃಜಿಸಿ ಹೊಸತನವ ತಂದರಸು ಮನೆತನದ ಕುಡಿ
ಭಜಿಸಿ ಭುವನೇಶ್ವರಿಯರಸಿಹೆರಟದೊ