Oppanna.com

ಸಮಸ್ಯೆ 62: ಮೆಡಿಯುಪ್ಪಿನಕಾಯಿಗೆ ಭಾರಿ ಹದಾ

ಬರದೋರು :   ಸಂಪಾದಕ°    on   15/02/2014    32 ಒಪ್ಪಂಗೊ

ಈ ವಾರ ತೋಟಕ ವೃತ್ತಲ್ಲಿ ಒ೦ದು ಪ್ರಯತ್ನ ಮಾಡುವ. ಹೇ೦ಗಾರೂ ತೋಟ ತಿರುಗೊಗ ಮರಲ್ಲಿ ಮಾವಿನಮೆಡಿ ಕಣ್ಣಿ೦ಗೆ ಬೀಳದ್ದೆ ಇರ ಅಲ್ಲದೋ ?

ಸಮಸ್ಯೆ ಃ ಮೆಡಿಯುಪ್ಪಿನಕಾಯಿಗೆ ಭಾರಿ ಹದಾ

ತೋಟಕವೃತ್ತದ ಲಕ್ಷಣ ನೆ೦ಪಿದ್ದಲ್ಲದೋ? – ನನನಾನನನಾನನನಾನನನಾ

32 thoughts on “ಸಮಸ್ಯೆ 62: ಮೆಡಿಯುಪ್ಪಿನಕಾಯಿಗೆ ಭಾರಿ ಹದಾ

  1. ಎ೦ಗಳ ಮನಗೆ ಬತ್ತರೆ ಮಾವಿನ ಮೆಡಿ ತನ್ನಿ . ಉಪ್ಪಿನಕಾಯಿ ಹಾಕಿ ಕೊಡ್ಲಕ್ಕು .

  2. ಈ ಸರ್ತಿ ಬೇಸಗೆ ರಜೆಲಿ ಭಾಗ್ಯನ ಮನೆಗೂ ಶೈಲಕ್ಕನ ಮನೆಗೂ ಹೋಪದೇ, “ಮೆಡಿಯುಪ್ಪಿನಕಾಯಿ” ತಪ್ಪಲಿದ್ದು.

  3. ನೆಡುತೋಟದ ಮಾವಿನ ಕಾಯಿಯದಾ
    ಮೆಡಿಯುಪ್ಪಿನಕಾಯಿಗೆ ಭಾರಿ ಹದಾ
    ಪೊಡಿ ಮಮ್ಮದೆ ಹತ್ತಿರೆ ಬಗ್ಗುಸುಗೂ
    ಕೊಡಿಗೆಲ್ಲಿನ ಜೊಂಕೆಯ ಕೈಲಿಯೆ ಕೊಯ್ಗದುವೇ

    1. ಲಾಯಿಕಾಯಿದು ಮಾವ. ಪೊಡಿ ಮಮ್ಮದೆ , ಉಕ್ಕಿನಡ್ಕ ಅದ್ರಾಮ ಎಲ್ಲಾ ಹೀ೦ಗಿಪದಕ್ಕೆ ಭಾರೀ ಉಶಾರಿ.
      ”ಕೈಲಿಯೆ” ಹೇಳುವ ಪದ ಬಿಟ್ಟರೆ ಕಡೆಯಾಣ ಗೆರೆ ಸರಿ ಆವುತ್ತು ಮಾವ.

  4. ಸೊನೆದೆ , ಹೊರಡಿದೆ ಕೂಡಿದರೆ ಅಪ್ಪ ”ಪರಿಮಳಕ್ಕೆ” ( ಪರಿಮ್ಮಳ ಒಳಿಶುಲೆ ) ‘ ಗಂಧ’ ಹೇಳುವ ಕನ್ನಡ ಪದ ಬಳಸಿ
    ಹೊಡಿಯಾದಪರೇಕಳದಾ ಮೆಣಸೂ
    ಕಡದಾಕಿದ ಸಾಸಮೆ ಕೂಡಿದರೇ I
    ಹೊಡವಾ ಸೊನೆಮಾವಿನ ಗಂಧವದೂ
    ಮೆಡಿಯುಪ್ಪಿನಕಾಯಿಗೆ ಭಾರಿ ಹದಾ II

  5. ತಡ ಮಾಡೆಡ ಬೇಗನೆ ಹೋಗು ಮಗಾ
    ಕೊಡೆಯಾಲದ ಪೈಗಳ ಅ೦ಗಡಿಗೇ
    ಮಡುಗಿಕ್ಕವು ಮುಚ್ಚೆಲಿನಾ ಭರಣೀ
    ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ II

  6. ಚಡವಿ೦ದಲೆ ಕಾ೦ಬದು ಕಾಟುಮರಾ
    ಪಡುಗೆಲ್ಲಿಲಿ ಜೊ೦ಕುಳಿ ನೇತಿದದಾ
    ಕಡೆ ನೋಡಿರೆ ಧಾರೆಲಿ ಬತ್ತು ಸೊನೇ
    ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ II

    1. ಬಟ್ಯ ಮುಳಿಯದಣ್ಣನತ್ತರೆ ತಲೆ ತೊರುಸಿಗೊ೦ಡು, (ಹತ್ತುಲೆ ಉದಾಸೀನ ಆಗಿ) ಚೆಪ್ಡಿ ಮಾಡುವ ಅಂದಾಜಿಲಿದ್ದು –
      ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ
      ಕೊಡಿಯೇರಿದರೂ ಕೊ ೈವಲೆ ಬ೦ಙವಿದೂ I
      ನಡು ಗೆಲ್ಲಿಲಿಯೇ ಉರಿ ಪು೦ಡೆಲದಾ
      ಬಡುದಾಕಿದರೇ ಮೆಡಿ ಹಾಕುವಿರೋ ?

      1. ಮೇಲೆ ತಪ್ಪಿದ್ದು—
        ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ
        ಕೊಡಿಯೇರಿದರೂ ಬಲುಕಷ್ಟವಿದೂ
        ನಡು ಗೆಲ್ಲಿಲಿಯೇ ಉರಿ ಪು೦ಡೆಲದಾ
        ಬಡುದಾಕಿದರೇ ಮೆಡಿ ಹಾಕುವಿರೋ ?

        1. ಮುಳಿದಣ್ಣನ ಉತ್ತರ ಆನು ಬರೆತ್ತೆ ಅಕ್ಕಾ ಅಕ್ಕ…. 🙂
          ಕೆಡದಿಪ್ಪ, ಪರಿಂಮಳವೊಳ್ಸುಲೆ ನೀ
          ಕೊಡುಕಿಚ್ಚುರಿ ಕೊಲ್ಲು ಹೊಗೆಂದಲೆ ಸೈ
          ಗಡಿಯಾಗದ ಹಾಂಗಿಳುಶಿಕ್ಕು ಮಡೀ
          ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ ||

        2. ಭಾಗ್ಯಕ್ಕ,ಶೈಲಜಕ್ಕನ ಜುಗಲ್ಬ೦ದಿ ರೈಸಿದ್ದೋ ರೈಸಿದ್ದು.

        3. ಇಳಿಶಿ ಕೊಯೆ ಕ್ಕಾದರೆ ಬಟ್ಯಂಗುದೆ ಇಳಿ ಶೆಕ್ಕಡ ಶೈಲಕ್ಕಾ — ಎರಡು ದಿನ ಕಳುದರೆ ಮಾತ್ರ ಮೆಡಿಗೆ ಹದಾ ಹೇಳುದು ಬಟ್ಯನ ಅಂದಾಜಿ
          ಕೊಡಿಯಂಬಗ ಸಾಲ ರಜಾ ದಿನಕೇ
          ಮೆಡಿ ಕೊ ೈದ್ದದಿನಕ್ಕದ ಮಾಡಿ ವಜಾ
          ತಡೆರೊ೦ದರಡೇ ದಿನಲೀ ಮರದಾ
          ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ II

  7. ಶೈಲಕ್ಕನ ಆಲೋಚನೆ ಎನ್ನ ಪಾಕ 🙂 ಪರಿಮ್ಮಳ ಇಲ್ಲೆ. ಖಾರ ಮಾತ್ರ..
    ಹೆಡಗೇರುಸಿದಾ ಮಡಿ ಮಾವಿನ ತಾ
    ಕಡು ಕೆಂಪಿನ ಖಾರವ ಹಾಕುತಲೇI
    ಹೊಡಿ ಮಾಡಿದ ಸಾಸಮೆ ಬೆರ್ಸಿದರೇ
    ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ II
    ಹೆಡಗೇರುಸಿದಾ = ಉಪ್ಪು ನೀರು ಬಳಿವಲೆ ಹೆಡಗೆಲಿ ಹಾಕಿದ, ಮಡಿ = ಬೆಳಿಯಾದ , ಖಾರ ಪುಡಿ =ಕನ್ನಡ ಪದ ,ಮೆಣಸಿನ ಹೊಡಿ .

  8. ಸುಡು ಬೇಸಗೆ ಬಪ್ಪದರಾ ಮದಲೇ
    ಕಡು ಖಾರದ ಪಾಕಕಿದಾ ಮೆಣಸೂ
    ನಡು ತೋಟದ ಮೂಲೆಗೆ ಕೊಕ್ಕೆಯ ತಾ
    ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ I|

  9. ಇದೂ ತಪ್ಪಿದ್ದನ್ನೆ ಶೈಲಜಕ್ಕ. ಎರಡ್ನೆ ಮತ್ತೆ ಮೂರ್ನೆ ಸಾಲಿಲಿ ತಪ್ಪಾಯಿದು

  10. ಮಡಿಯಾಗೊಣಗಿಪ್ಪದರನ್ನೆ ಸರೀ
    ಹೊಡಿ ಮಾಡಿಕಿ ಸಾಮಾನು ಬೆರ್ಸಿದರಾ
    ರೆಡಿ ಮಾಡಿದ ಪರಿಂಮಳದಾ ಹೊರಡೀ
    ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ I|

    1. ಶೈಲಕ್ಕಾ , ಇದರ ಸರಿ ಮಾಡ್ಲೆ ಎದಿತ್ತೊ ನೋಡಿದೆ .ಬೇರೆಯವು ಬರದ್ದರ ಅದೇ ಭಾವಲ್ಲಿ ಸರಿ ಮಾಡುದು ಕಷ್ಟವೆ .
      ಸಾಮಾನು ಇಪ್ಪಲ್ಲಿ ”ಸಾಸಮೆ ” ಹಾಕಿದರೆ ಸರಿಯಕ್ಕೊ?
      ಹಾಂಗೆ ”ಪರಿಮ್ಮಳ ” ಒಳಿಶಿಗೊ೦ಮಬಲೆ ”ಘಂಮ್ಮಿಸುವಾ ” ಹೇಳಿ ಮಾಡಿದರಕ್ಕೊ? ಬೇರೆ ರಜ್ಜ ಬದಲಾವಣೆ ತಂದರೆ ಹೊರಡಿ ಪರಿಮ್ಮಳ ಅಕ್ಕು ಶೈಲಕ್ಕಾ

      1. ಅಪ್ಪಲ್ಲದಾ.. ಗಡಿಬಿಡಿ ಆತದಾ ಭಾಗ್ಯಕ್ಕನ್ಗೆ ಧನ್ಯವಾದ

  11. ಸತ್ಯಣ್ಣನ ಜೋಕಿನ ಆಸ್ವಾದಿಸುವ ಬೈಲ ಭಾಂದವರಿಗೆ, ಅದನ್ನೇ ಪದ್ಯ ರೂಪಲ್ಲಿ
    ಗಡಿನಾಡಿನ ಕಾಡಿನ ಮಾವಿದುವೇ
    ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾ I
    ಗಡಿನಾಡಿನ ಸತ್ಯನು ಕೂಡಿದರೇ
    ನಡು ಹ೦ತಿಲಿಯೇ ಹುಳಿ ತೋರ್ಸುಗದಾ II
    ಕೂಡಿದರೆ =ಹೊರಡಿ ಕೂಡಿದರೆ ಹೇಳುವ ಅರ್ಥಲ್ಲಿ

    1. ಸತ್ಯಣ್ಣನ ಉಪ್ಪಿನಕಾಯಿಯೂ ರುಚಿಕಟ್ಟಾಯಿದು ಭಾಗ್ಯಕ್ಕ.

    2. ಅಡಿಗೆ ಸತ್ಯಣ್ಣಂಗೆ ಈ ಸುದ್ದಿ ಮುಟ್ಟಿಸಿ ಆಯ್ದು ಭಾಗ್ಯಕ್ಕೋ

  12. ಮೆಡಿಗೆ ಇಡಿಯುಪ್ಪು… ಮಾವ ಪಷ್ಟಾಯಿದು
    ಕೊಡಿಮುಟ್ಟ ಮರಲ್ಲಿಡಿ ಹತ್ತಿ ಹುಡು
    ಕ್ಕೆಡೆಲಿಪ್ಪದರನ್ನು ಬಿಡದ್ದೆಯೆ ಕೊಯ್
    ಹೆಡಗೆ ತುಂಬಿರೊಂದು ಸರೀ ಭರಣೀ
    ಮೆಡಿಯುಪ್ಪಿನಕಾಯಿಗೆ ಭಾರಿ ಹದಾ ||

    1. ಮೂರನೆ ಸಾಲಿಲಿ ಹೆಡಗೆ ತು೦ಬುಸಿದ್ದು ತಟಪಟ ಆಯಿದು ಶೈಲಜಕ್ಕಾ.

      1. ಹೋ…. ಅಪ್ಪಲ್ಲದಾ…
        ಕೊಡಿಮುಟ್ಟ ಮರಲ್ಲಿಡಿ ಹತ್ತಿ ಹುಡು
        ಕ್ಕೆಡೆಲಿಪ್ಪದರನ್ನು ಬಿಡದ್ದೆಯೆ ಕೊಯ್
        ಹೆಡಗೆಂದ ಸಮಲ್ಸೆ ಸರೀ ಭರಣೀ
        ಮೆಡಿಯುಪ್ಪಿನಕಾಯಿಗೆ ಭಾರಿ ಹದಾ ||

  13. ಮೆಡಿಯುಪ್ಪಿನಕಾಯಿಗೆ ಭಾರಿ ಹದಾ
    ಕಡಿಬಾಗವುದೇ ರಜ ಹಾಕೆಕದಾ
    ಇಡಿಯುಪ್ಪಿನ ಹಾಕಿ ಚಿರುಂಟಿಸಿರೇ
    ಒಡನಾಡಿಯ ಹಾಂಗೆ ಸದಾ ರುಚಿಯೇ

    1. ಮೆಡಿ ಮಾವಿನ ಕೊ ೈದ್ದರ ತಪ್ಪಗಳೇ
      ತಡ ಮಾಡದೆ ಮಾವನು ಹಾಕಿದವೂ I
      ಎಡೆ ಮಾಡಿಯೆ ಬೈಲಿಲಿ ಹೇಳಿದವೂ
      ಮೆಡಿಯುಪ್ಪಿನ ಕಾಯಿಗೆ ಭಾರಿ ಹದಾII

    2. ರೈಸಿದ್ದು ಮಾವ,ಉಪ್ಪಿನಕಾಯಿ ಹಾಕಾಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×