Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಪವನಜ ಮಾವ ಕಳುಸಿದ ಚಿತ್ರಕ್ಕೆ ಈ ವಾರ ಒ೦ದು ಪದ್ಯ ಬರವನೋ?
ಬರದೋರು : ಸಂಪಾದಕ° on 05/04/2014 17 ಒಪ್ಪಂಗೊ
ಪವನಜ ಮಾವ ಕಳುಸಿದ ಚಿತ್ರಕ್ಕೆ ಈ ವಾರ ಒ೦ದು ಪದ್ಯ ಬರವನೋ?
Comments are closed.
ಲಾಗ ಹಾಕುವ ಮಕ್ಕೊ ದಾರಿಲಿ
ಹೋಗಿ ಬಪ್ಪಗ ಕೈಯ ಬೆರಳಿನ
ತಾಗುಸದ್ದೇ ಬಿಡವು ನಾಚಿಗೆ ಮುಳ್ಳುಗಳ ಸೆಸಿಗೇ।
ಬೀಗ ಹಾಕೆಕ್ಕಷ್ಟೆ ನಿನಗೀ
ರೋಗವೆ೦ತಗೆ ಹೇಳಿ ಕೊಣುದೀ
ಹೂಗು ನೆಗೆಮಾಡಿತ್ತೊ ನಾಚಿಗೆ ಮಾಡುವೆಲೆ ಕ೦ಡು?।।
ಹಸುರೆಲೆ ಚಿಗುರಿಲಿಯರಳಿದ ಮುಕುಟಾ
ಬಿಸಿಲಿಲಿ ಬೆಳಿಕೊಡೆ ಹರಡಿ ಕೊಶಿಕೊಶಿಲೇ
ಸೆಸಿಯಿದು ಕುರುಚಲು ಬೆಳದರೆ ಪೊದೆಯೂ
ಎಸರಿಲಿ ಹಲಗುಣ ಕುಡುದರೆ ಶಮನಾ ।
ಲಜ್ಜಾವತೀ ಓ ಲಜ್ಜಾವತೀ |
ಆನು ಬಪ್ಪಾಗ ನಿಂಗೆ ನಾಚ್ಗೆ ಎಂತಕ್ಕೇ ?
– ಡಾ. ವಿಶ್ವಾಸ್ ಅವರ ಸಂಸ್ಕೃತ ಗೀತೆಯ ಮೊದ್ಲನ್ ಸಾಲಿನ ಅನುವಾದ ಹಾಂಗೆ ಸುಮ್ನೆ.
ಮುಟ್ಟಿದ್ರೆ ಮುನಿ
ಪಟ್ಟು ಬಿಡ್ದೆ ನಾಚಿಕೆ
ಹೆಣ್ಣಿನಂತೆ ಮೆತ್ತಗೆ
ನಗುವೆ ನೀ ಈ ಹೊತ್ತಿಗೆ
ಮೆಟ್ಟಿದರೆ ಕೊಯ್ಯುವೆ ಈ ಕಾಲಿಗೆ
ವಸಂತದಲ್ಲಿ ಚೆಲುವೆ ನೀ ಈ ಬೇಲಿಗೆ!!
ತುತ್ತು ಹೀರುವ ನೆಪಲಿ ದುಂಬಿಯು
ಮುತ್ತು ಮಳೆಯ ಸುರಿಸಿ ಬಿಟ್ಟರು
ಗತ್ತು ತೋರಿಸಿ ಸರ್ತ ನಿಂದಿದು ಹೂಗು ಬಗ್ಗದ್ದೆ
ದುತ್ತನೆರಗಿದ ನಲ್ಲನಪ್ಪುಗೆ
ಮತ್ತು ತಂದತು ಹಸುರಿನೆಲೆಗೊಕೆ
ಕುತ್ತಿಗೆಯ ಕೆಳ ಮಾಡಿ ಮುದುಡಿದವೆಲ್ಲ ನಾಚಿಕೆಲಿ
ಅದಿತಿಯಕ್ಕ ಮತ್ತೆ ಇ೦ದಿರತ್ತೆಯ ಮತ್ತೆ ನೋಡಿ ಖೊಶಿಯಾತು..
೨ನೆ ಸಾಲ್ಲಿ ಮಾತ್ರೆ ಕಮ್ಮಿ ಬ೦ತ ಹೇಳಿ…..
ಓ, ಅಪ್ಪನ್ನೇ ಃ-)
ಅ೦ಬಗ ಪದ್ಯವ ಹೀ೦ಗೆ ಬದಲಿಸುತ್ತೆಃ
ತುತ್ತು ಹೀರುವ ನೆಪಲಿ ದುಂಬಿಯು
ಮುತ್ತು ಮಳೆಯನೆ ಸುರಿಸಿ ಬಿಟ್ಟರು
ಗತ್ತು ತೋರಿಸಿ ಸರ್ತ ನಿಂದಿದು ಹೂಗು ಬಗ್ಗದ್ದೆ
ದುತ್ತನೆರಗಿದ ನಲ್ಲನಪ್ಪುಗೆ
ಮತ್ತು ತಂದತು ಹಸುರಿನೆಲೆಗೊಕೆ
ಕುತ್ತಿಗೆಯ ಕೆಳ ಮಾಡಿ ಮುದುಡಿದವೆಲ್ಲ ನಾಚಿಕೆಲಿ
ಇ೦ದಿರತ್ತೆ ಪದ್ಯಲ್ಲಿ ಮದ್ದು ಮಾಡುದ ರೀತಿ ನೋಡಿರೆ, ನಾಚಿಕೆ ಮುಳ್ಉ ಹುಡುಕಿಯೊ೦ಡು ಹೋದಾ೦ಗಿದ್ದು. ಃ-) ಅತ್ತೆಯ ಕ೦ಡು ಕೊಶಿ ಆತು.
ಎಂತತ್ತೆ, ರಜೆಲಿತ್ತಿದ್ದಿರೋ..ಅಲ್ಲ ಪರೀಕ್ಷೆಯ ಗೌಜಿ ಇತ್ತಿದ್ದೊ.?
ಶುರುವಾಣ ಅರ್ಧಲ್ಲಿ ಚಿತ್ರಲ್ಲಿಪ್ಪದರ ವರ್ಣನೆ, ಮತ್ತಾಣದ್ದರಲ್ಲಿ ಚಿತ್ರಲ್ಲಿ ಇಲ್ಲದ್ದರ ವರ್ಣನೆ ಕೊಶಿ ಆತು ಅತ್ತೆ.
ಇಬ್ಬರದ್ದು ಆದ ಮೇಲೆ ಇನ್ನೊಂದು ಬೇಡದಾ ಭಾಗ್ಯಕ್ಕಾ…
ಮುಟ್ತಿಬಿಟ್ಟರೆ ನಾಚಿ ನಿಲ್ಲುಗು
ಮೆಟ್ಟಿ ನಿಂದರೆ ಮುಳ್ಲು ಕುತ್ತುಗು
ಗಟ್ಟಿಯಾಗಿಯೆ ಕೂದು ನೆಲದೊಳ ಹೂಗಿನರಳುಸುಗು ।
ಕುಟ್ಟಿ ಸೊಪ್ಪಿನ ಹುಣ್ಣುಗಾಯಕೆ
ಕಟ್ಟಿಬಿಟ್ಟರೆ ಶಮನವಕ್ಕದ
ಪಟ್ಟಿ ಬೆಳೆಗಿದ ಮನೆಯಮದ್ದಿನ ಬಳಸಿಕೊಂಬಲ್ಲಿ ॥
ಮಂದಹಾಸವ ಬೀರುತ್ತ
ಚೆಂದ ಸೂಸುವ ಕೋಮಲೇ I
ಬ೦ದ ಚೈತ್ರೋತ್ಸವಕ್ಕಿಲ್ಲಿ
ವಂದನಾರ್ಪಣೆ ನಿನ್ನದೋ ? II
ಬೀರುತ್ತ =ಬೀರುವ
ಈಗ ಚೈತ್ರ ಮಾಸ . ಗಿಡ ಮರ೦ಗೊ ಚಿಗುರಿ ಹೂಗು,ಕಾಯಿ ಬಿಟ್ಟುಗೊಂಡಿಪ್ಪ ಕಾಲ . ಮೇಲಾಣ ಚಿತ್ತ್ರಲ್ಲಿ ಚಿಗುರು ಮತ್ತು ಹೂಗು ಕಾಂಬದು ನೋಡಿ ಈ ಕಲ್ಪನೆ
ಇದು ಪಷ್ಟಾಯಿದು ಭಾಗ್ಯಕ್ಕ.
ಜಯಶ್ರೀಯಕ್ಕ೦ದು,ಏತಡ್ಕ ಮಾವ೦ದೂ ಒ೦ದೇ ನಮೂನೆ ಆದಿ ಪ್ರಾಸ !!
ಅಪ್ಪು, ಎರಡೂ ಪೂರಣಂಗೊ ಲಾಯಿಕಿದ್ದು ಅಲ್ಲದೋ..?
ಮುಟ್ಟಿದರೇ ನಾಚಿಕೆಯೋ?
ಮುಟ್ಟೆಡ ಹೇಳುತ್ತೆಯೋ ಸೆಸಿಯೆ ನಿನ್ನನ್ನೇ
ದಿಟ್ಟಿಯೆ ತಾಗದ್ದಿರಳೀ
ದಿಟ್ಟೆಗೆ ಹೇದು ಬೆಳಿ ಹೂಗಿನೆಡೆ ಕೆಂಪನ್ನೇ
(ದಿಟ್ಟಿ=ದೃಷ್ಟಿ,ದಿಟ್ಟೆ=ಧೈರ್ಯವಂತೆ)
ಬಿಟ್ಟು ನಾಚಿಕೆಯರಳಿ ನಿಂದರು
ತಟ್ಟನೆರಗುವ ಸಣ್ಣ ಪೆಟ್ಟಿಗು
ಮುಟ್ಟಿ ನೋಡುತ ಮುತ್ತು ಕೊಟ್ಟರು ಮತ್ತೆ ನಾಚುವೆ ನಾ |
ಗುಟ್ಟು ಗುಟ್ಟಿಲಿ ಮೊಗ್ಗು ಬೆಳೆಸಿದೆ
ಪಟ್ಟು ಹಿಡಿಯುತಲರಳಿ ನಿಂದಿದು
ಕೊಟ್ಟ ದೇವನು ಮುದ್ದು ಕಂದನ ಹೊತ್ತು ಬೆಳೆಸೆನುತಾ ||
ಎಷ್ಟೇ ಅರಳಿ ನಿಂಬಲೆ ಪ್ರಯತ್ನಿಸಿರೂ ತಮ್ಮದೇ ಆದ ನಾಚಿಕೆ ಸ್ವಭಾವಂದ ಮತ್ತೆ ಮುದುಡಿ ಕೂರುವ ಹೆಮ್ಮಕ್ಕ, ಮಕ್ಕಳ ಬೆಳೆಸಿ ಸಾರ್ಥಕ್ಯ ಕಾಂಬ ಸನ್ನಿವೇಶದ ನೆನಪಾತು…
ತುಂಬ ಸಮಯದ ನಂತ್ರ ಬಂದು ಒಳ್ಳೆ ಪೂರಣ ಕೊಟ್ಟಿದಿ ಜಯಕ್ಕ.
ಹೀಂಗೆ ಅಪರೂಪ ಆಗೆಡಿ ಬಂದುಗೊಂಡಿರಿ.