Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ
” ಸೂರ್ಯೋದಯ”
ವ ಒಳ್ಳೆ ಹೋಲಿಕೆ ಕೊಟ್ಟು ಉಪಮೆ – ಅಲ೦ಕಾರ೦ಗಳ ಉಪಯೋಗ ಮಾಡಿ ಬರವ°,ಆಗದೋ?
ಛ೦ದಸ್ಸು ಯೇವದಾದರೂ ಅಕ್ಕು,ಚೆ೦ದ ಇರಳಿ,ಸೂರ್ಯೋದಯದ ದೃಶ್ಯ ಹೊಸ ಕಲ್ಪನೆಗಳ ಹೆರ ತರಲಿ,ಅಲ್ಲದೊ?.
ಶೈಲಕ್ಕ, ಪದ್ಯಲ್ಲೇ ಸೂರ್ಯೊದಯ ಕಾಣ್ತು. ಇನ್ನೊ ಒ೦ದು ಚರಣ ಸೇರುಸಿದರೆ ಆವುತಿತ್ತು ಹೇಳುವ ಒನ್ದು ಅಕ್ಶೆಪಣೆ ಇದ್ದ ಕಾರಣ ಆನು ಓದಿದರೂ ಬರದ್ದಿಲ್ಲೆ.ಆಕ್ಶೆಪಣೆ ಮಾದುವವು ಯಾವಗಳು ಹಿ೦ದೆ ಇದ್ದರೆ ಒೞೆದಿದಾ.
ಪೌರಾಣಿಕಲಿ ಮತ್ತು ರಥಮಾರೂಢ ಹೇಳುದು ಸಾಧು ರೂಪವೋ?
ಪುರಾಣಲ್ಲಿ ಅಥವಾ ಪ್ರಾಕಿಲಿ ಹೇಳುದು ಕೇಳಿ ಗೊನ್ತಿದ್ದು. ಇದು ಎರಡುದೆ ಗೊ೦ತಿಲ್ಲೆ.
ಭಾಗ್ಯಕ್ಕನ ವಿಮರ್ಶೆಗೆ
ಪೌರಾಣಿಕ ಹೇಳಿರೆ ಪುರಾಣಕ್ಕೆ ಸಂಬಂಧಿಸಿದ್ದು ಹೇಳುವ ಅರ್ಥಲ್ಲೇ ಆನುದೆ ಬರದ್ದು … ಪೌರಾಣಿಕದಿ ಮಾಡಿರೆ ಕನ್ನಡ ಆವುತ್ತೊ ಹೇಳಿ ಪೌರಾಣಿಕಲಿ ಮಾಡಿದೆ…
ರಥಂ +ಆರೂಢಂ =ರಥಮಾರೂಢಂ (ಸಂಸ್ಕೃತ )ಶಬ್ದ ಅದು ಎನಗೆ ‘ಸೂರ್ಯಾಷ್ಟಕಂ’ ದ ಸಿಕ್ಕಿದ್ದು .
ಸರಿ ಬಲ್ಲವರು ತಿಳುಶಿರೆ ಒಳ್ಳೆದು….
ಆಹಾ! ಅಗರಿ ಭಾಗವತರ ಮೋಹನ ರಾಗದ powere!
*೩ ನೆ ಸಾಲಿನ ‘ಹೊದದು ಒರಗಿದ ರವಿಯು ಮೂಡಣ ‘ ಹೇಳಿ ಮಾಡಿರೆ ಹೆಚ್ಚು ಅರ್ಥಪೂರ್ಣ ಅಕ್ಕೋ …
ಏಳು ಕುದುರೆಗಳೆಳವಗಳೆ ಕೆ೦
ಧೂಳಿಯೆದ್ದದೊ ನೋಡದಾ ಹಿ
ಮ್ಮೇಳವಿದ್ದಾಕಾಶ ರ೦ಗದ ಸುತ್ತ ಹಕ್ಕಿಗಳಾ|
ನಾಳೆ ಮಾಡುವೆ ಹೇಳಿ ಸಮಯವ
ಹಾಳು ಮಾಡಿದೆ ನಿನ್ನೆ ಇನ್ನಾ
ರೇಳು ಬಾ ಮಗ ಹಲ್ಲುತಿಕ್ಕುಲೆ ಬೇಗ ಸುರು ಮಾಡು||
ಮುಳಿಯದಣ್ಣಾ,ರೈಸಿತ್ತು!
ಲಾಯಕ ಆಯಿದು ಪದ್ಯ ರಘುವಣ್ಣ
ಧನ್ಯವಾದ೦ಗೋ. ನಿ೦ಗಳೆಲ್ಲರ ಪ್ರೋತ್ಸಾಹ ಸದಾ ಇರಲಿ
ರಘು ಮುಳಿಯದಣ್ಣ., ಭಾರೀ ಶೋಕು ಆಯ್ದು ಸೂರ್ಯೋದಯ ವರ್ಣನೆಯ ಷಟ್ಪದಿ . ಶುಭಾಶಯಂಗೊ
ತೊಳದು ತೆಗವಲೆ ಹಳೆಯ ಬಚ್ಚಲು
ಹೆಳೆಯ ಹಾಂಗೆಯೆ ಬಂತುಯಿರುಳಿದ
ಕಳುದು ತಂತದ ಹೊಸವುದಿ ದಿನಕರನ ದಿನಚರಿಂದ
ಛಳಿಯ ಹೆದರಿಸಿ ಬಾನಕೋಪಿಲಿ
ದಳಿಯ ಗೀಟಿನ ಬರದು ಕೆಂಪಿಲಿ
ಹೊಳವ ರಶ್ಮಿಯ ನೋಡಿ ಹುರುಪಿಲಿಯೆದ್ದು ಜೀವಕುಲಾ ||
ಸೇರಿ ಮೈಂದಿನ ಮಣಿಯ ಮಾಲೆಗೊ
ಸೀರೆ ಸೆರಗದು ಹಸಿರು ಬಾದಿಲಿ
ಕೋರಿ ಮಡುಗಿದ ಸಿರಿಲಿ ಮಿಂದಾಗೆದ್ದ ರವಿತೇಜಾ
ಜಾರಿ ನಾಕದ ಬಣ್ಣ ತೋರಣ
ಸೋರಿ ಬಿದ್ದದೊ ಬಾನ ಜೆಗಿಲಿಲಿ
ಭಾರಿ ಚೆಂದಲಿ ಹೇಳ್ವ ರೀತಿಲೆ ಬಣ್ಣದೋಕುಳಿಗೋ ||
ರೆಕ್ಕೆ ಬಂತದ ಜಡದ ಚೇತನ
ಮುಕ್ಕಿ ಮಣ್ಣಿಲಿ ನಿತ್ಯ ಮೂಡಣ
ದಿಕ್ಕು ಹೊತ್ತಿನ ತಿಳುಶಿ ಹೇಳುವ ಸೂರ್ಯ ಕಣ್ತೆರೆಯೆ
ಎಕ್ಕಸಕ್ಕಲಿ ಮನಸ ಕೆಮಿಗದ
ಬಕ್ಕು ತೋಡಿನ ನೀರ ಜುಳು ಜುಳು
ಹಕ್ಕಿ ಚಿಲಿಪಿಲಿ ಸೇರಿ ಸಂಗೀತ ಮುದವಪ್ಪಗಳೆ ||
ಒಂದು ಚೆಂಡಿದು ಹೇದು ಹೆರ್ಕುಲೆ
ಕಂದ ಹನುಮನೆ ಹಾರಿ ಸೋತದು
ಚಂದದುಂಡೆಯ ತೀಕ್ಷ್ಣ ಕಿಚ್ಚಿನ ಭುವಿಯ ನಕ್ಷತ್ರ
ಸ್ಕಂದನಾದಿತ್ಯ ರವಿ ದಿವಾಕರ
ಬಂದ ಭಾಸ್ಕರ ಕಶ್ಯಪಾತ್ಮಜ
ಹಿಂದೆ ಪೌರಾಣಿಕಲಿ ಸಪ್ತಾಶ್ವ ರಥಮಾರೂಢ ||
ಎರಡು ಮತ್ತೆ ಮೂರನೆ ಚರಣ೦ಗೊ ಭಾರೀ ಲಾಯ್ಕಿದ್ದು ಶೈಲಜಕ್ಕ.
ಶೈಲಕ್ಕಾ, ಮುಳಿಯದಣ್ಣ ನ ಅಭಿಪ್ರಾಯಕ್ಕೆ ನಮ್ಮದೂ ಓಟು ಹಾಕಿತ್ತು .
ಭಾರಿ ಲಾಯಕ ಆಯಿದು ಶೈಲಜಕ್ಕ
ಕೇಕಣಾಜೆ ಶೈಲಕ್ಕೋ ., ನಿಂಗಳ ಸೂರ್ಯೋದಯಲ್ಲಿ ಹೊಸವಿಚಾರಂಗಳ ಉದಯ ಆಯ್ದು. ಶುಭಾಶಯಂಗೊ . ಮುಂದುವರುಸಿ
ಉದಯರಾಗದ ಅಗರಿ ಭಾಗವ
ತದುರು ಕೊರಳಿಲಿ ಮೋಹನವ ಹೇ
ಳಿದರೆ ಕೇಳಿದವೆಲ್ಲ ಮೈ ಮನಸೆರಡು ಕೆಮಿಯಾಗಿ
ಹೊದದು ಒರಗಿದ ರವಿಯು ಮೂಡದ
ಬೆದುರ ಗುಡ್ಡೆಯ ಕೊಡಿಲಿ ಮೂಡಿದ
ರಿದುವೆ ರಾಗಕ್ಕಿಪ್ಪ ಮಹಿಮೆಯೊ ಚೆನ್ನಬೆಟ್ಟಣ್ಣಾ?
ಇರುಳು ಕಳುದರು ಕನಸು ಮುಗಿಯದ್ದೆ ನೆಡದತ್ತು
ಸರಸಸಲ್ಲಾಪಲ್ಲಿ ಮು೦ಗಿ ತೇಲದ್ದೇI
ಒರಗಿದ್ದವನ ಮೋರೆಗೊ೦ದು ಬೆಶಿಲಿನ ಕಿರಣ
ಹರಿತವಾಗಿಯೆ ನಾಟಿ ಉದಯವಾತುI
ನದಿಗಳಿನಿಧನಿಯ ಗಾನಕ್ಕೆ ಹಕ್ಕಿಗಳ ಸಿರಿ
ವದನ೦ದ ಹೆರಟ ವಾದ್ಯ೦ಗೊಕ್ಕೆ ತಂಗಾಳಿ
ಮುದಗೊಂಡು ಹಬ್ಬುಸುವ ತರತರದ ಪರಿಮಳದವೋಕುಳಿಗೆ ಭೂದೇವಿಯು I
ಕದ ತೆಗದು ದಿನದಿನವು ಫಲ ಪುಷ್ಪ ಕಾಣಿಕೆಯ
ವಿಧವಿಧಲಿವೊಡ್ಡುವಗ ದಿನಮಣಿಯು ಮನಸೋತು
ಹದಗೊ೦ಡ ಹೊಳಪಿಲಿ ಸ್ವಾಗತಕ್ಕಣಿಯಾಗಿ ವಸುಮತಿಯ ಮನಗೆತ್ತುದೋ ?II
ಭೂಮಿಯ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗಿ ತೀಕ್ಷ್ಣ ಉರಿಯ ತಗ್ಗುಸಿ ಸೂರ್ಯನೇ ಭೂಮಿಯ ಹತ್ತರೆ ಬಪ್ಪದು= ಸೂರ್ಯೋದಯ ಹೇಳಿ ಕವಿ ಕಲ್ಪನೆ .
ಕದ ತೆಗವದು =ಉದಿಯಪ್ಪಗ ಎದ್ದ ಕೂಡ್ಲೇ ಚಾವಡಿ ಬಾಗಿಲು ತೆಗವ ಕ್ರಮ ನಮ್ಮಲ್ಲಿ ಎಲ್ಲೋರಲ್ಲಿಯೂ ಇತ್ತು. ಹಾಂಗೆ ಭೂದೇವಿ ಮನೆ ಬಾಗಿಲು ತೆಗವದು ಹೇಳುವ ಕಲ್ಪನೆ.
ನದಿಗಳ ಇನಿ ದನಿಯ ಗಾನಕ್ಕೆ.. ರೈಸಿದ್ದು ವಾರ್ಧಕ..
ಪರಿಮಳದ ಓಕುಳಿಗೆ ,ವಿಧವಿಧಲಿ ಒಡ್ಡುವಗ ಹೇಳಿರೆ ತೊ೦ದರೆ ಇಲ್ಲೆ.ನಮ್ಮ ಭಾಷೆಲಿ ಸ್ವರಕ್ಕೊ೦ದು ಜಾಗೆ ಇರಳಿ.
ಅಣ್ಣ ,ತಡವಾಗಿ ಆದರೂ ಸ್ಪಷ್ಟವಾಗಿ ಹೇಳಿದ್ದು ಒಳ್ಳೆದಾತು . ನಿಜವಾಗಿಯೂ ಸ್ವರಾಕ್ಷರವ ವಿಕಾರಗೊಳ್ಸಿ ವ್ಯಂಜನಾಕ್ಷರಲ್ಲಿ ಬರವಲೆ ಎನಗೆ ತುಂಬಾ ಹಿಂಸೆ ಆಗಿಯೊಂಡಿತ್ತು .
ಒಳ್ಳೆಯ ಕಲ್ಪನೆ ಭಾಗ್ಯಕ್ಕಾ.
ಎರಡನೆ ಸಾಲಿಲಿ (ಬಾನಕೆ ನೆಗೆತ್ತಿಲ್ಲೇ I) ಒ೦ದು ಮಾತ್ರೆ ಹೆಚ್ಚು ಕಾಣುತ್ತು.
ದಪ್ಪದ/ ಚೆಂಡದು/ ವೆ ಬಾನ/ಕೆ ನೆಗೆ/ತ್ತಿಲ್ಲೇ II
ಇದು ಸರಿ ಇದ್ದನ್ನೆ .
ಅಪ್ಪನ್ನೆ.ಸರಿ ಇದ್ದು ಅಕ್ಕ.
ಅಪ್ಪನು ತಂದಾ ಹಳದಿಯ
ದಪ್ಪದ ಚೆಂಡದುವೆ ಬಾನಕೆ ನೆಗೆತ್ತಿಲ್ಲೇ I
ಒಪ್ಪದ ಕೆಂಪಿನ ಚೆಂಡಿದು
ಸೊಪ್ಪಿನ ಕಾಡಿ೦ದ ಹಿಡಿವಲಿ೦ದಾವ್ತಿಲ್ಲೇ II
ಸೂರ್ಯೋದಯ ನೋಡುವ ಕಂದನ ಯೋಚನೆ —ಅಪ್ಪ ತಂದ ಚೆಂಡು ಅದರಷ್ಟಕ್ಕೆ ಆಕಾಶಕ್ಕೆ ಹಾರ್ತಿಲ್ಲೆ . ಸೊಪ್ಪಿನ ಕಾಡಿಲಿ ಇಪ್ಪ ಚೆಂದದ ಚೆಂಡು ಕೈಗೆ ಸಿಕ್ಕುತ್ತಿಲ್ಲೇ ಹೇಳುವ ಚಿಂತೆ ಈ ಕಂದ೦ಗೆ
(”ವಿಪಕ್ಷ’ದವು ಅಧಿವೇಶನಕ್ಕೆ ಬಯಿಂದವೇ ಇಲ್ಲೇ ಹೇಳಿ ಆಡಳಿತ ಪಕ್ಷದವು ಕಂಪ್ಲೇಂಟು ಮಾಡದ್ದ ಹಾಂಗೆ ಈ ಪದ್ಯ ಃ-) )
ಬಾಲವಟು ಮೂಡು ದಿಕ್ಕಿಲಿ ಬಪ್ಪ ದೃಶ್ಯದ ಹಾ೦ಗೆ ಏತಡ್ಕ ಮಾವನ ‘ಕ೦ದ’ ರೈಸಿತ್ತು.
‘ಮಿಂಚಿನ’ ಪ್ರತಿಕ್ರಿಯೆಗೆ ಧನ್ಯವಾದಂಗೊ.
ಪಡುಗಡಲಿಲಿ ಮಿಂದಿಕ್ಕೀ
ಕಡುಗೆಂಪಿನ ಮಡಿಯ ಸುತ್ತಿ ಮೂಡಹೊಡೆಲಿಯೇ
ತಡೆಹಿಡುದ ರಶ್ಮಿಯ ಬುವಿಗೆ
ಬಿಡುಗಡೆ ಮಾಡಿರೆ ಜೆನಂಗೊ ತೋಷವ ಪಡಗೂ
ವನ೦ಧ ಮತ್ತೆ ರನನ್ನೆ – ಈ ಎರಡು ಜಾಗೆಲಿ ಜಗಣ ಕಾಣುತ್ತು ಮಾವ.
(ನೇಸ/ರನೆ ನಿಜ/ ,ನಿಜಕಿ/ವನಂಧ-*
ಕಾಸು/ರನನ್ನೆ ಸೋಲುಸುಗಿವನೆ)
ಮೂಸು (moosu)ಬೆಣಚಿನ ಚೆಂದ ಕಣ್ಣಿಲೆ
ಮಾಸುವಾ ಮೊದಲದರ ಮನಸಿಲೆ
ಹಾಸು, ದೇವರ ನಿತ್ಯದಾಟವ ನೋಡೊ ಮನ ಮಾಡು/
ನೇಸರನೆ ಜಗಕಿಡಿಯ ಬೆಣಚಿನ
ಸೂಸುವನೆ ,ತನು ಮನದ ಮೂಲನೆ (moolane)
ಭಾಸುರನೆ ಶತ ಕಿರಣ ಜಗದೀಶ ಬೆಳಗು ಬಾ ಜಗವ /೨/
ಕಾಕೆ ಗಿಳಿ ಕೋಗಿಲೆಗೊ ಮತ್ತಾ
ಸಾಕು ಹಕ್ಕಿಗೊ ಹಾಡಿದವು ಅದ!
ನಾಕು ಜೆನ ಕೆಮಿಗೊಟ್ತು ಕೇಳಿರೊ! ಚೆಂದಕುದಿಯಾತು/
ನೂಕಿ ಹೆರ ಹಾಕುಗದು ಮನಸಿನ
ಶೋಕವೆಲ್ಲವ ದೂರ ಮಾಡುಗು
ತಾಕಿದರೆ ರವಿಕಿರಣ ಬೆಳಗಿನ ಹೊತ್ತು ಏವತ್ತೂ/
(ಮುಳಿಯದಣ್ಣನ ಪದ್ಯದೊಪ್ಪಕ್ಕೆ ಕಾಯುತ್ತಾ…..)
ಬಾಲಣ್ಣ ಮಾವಾ,
ಅಮೋಘ ಸೂರ್ಯೋದಯ.
” ಚೆ೦ದಕುದಿಯಾತು” ಹೇಳಿ ಅರ್ಧಲ್ಲೇ ನಿಲ್ಸಿದ್ದೆ೦ತಕೆ? ಸೂರ್ಯಾಸ್ತದ ವರೆಗೆ ಸಾಗಲಿ ಹೀ೦ಗೇ..
ಹೂಗರಳಿ ಬಂಗಾರ ಬಣ್ಣದ ,
ಆಗಸದ ಹಣೆಲೆಸೆವ ಕುಂಕುಮ
ರಾಗವೋ! ಇದು ಶಿವನ ನೊಸಲಿನ ಮೂರನೆಯ ಕಣ್ಣೋ!/
ಮಾಗಿದಾ ಫಲವಿದುವೊ!ಕೊಯ್ವಲೆ
ಆಗದೋ,ಇದು ದೇವ ಲೋಕದ
ಹೂಗೊ!,ಅಮಮಾ!ಎಂಥ ಬೆರಗಿದು ಆರ ಚಿತ್ರವಿದೋ!//
ಮೂಸು ಬೆಣಚಿನ ಚೆಂದ ಕಣ್ಣಿಲೆ
ಮಾಸುವಾ ಮೊದಲದರ ಮನಸಿಲೆ
ಹಾಸು,ದೇವರ ನಿತ್ಯದಾಟವ ನೋಡೊ ಮನ ಮಾಡು/
ನೇಸರನೆ ನಿಜ ,ನಿಜಕಿವನಂಧ-*
ಕಾಸುರನನ್ನೆ ಸೋಲುಸುಗಿವನೆ
ಭಾಸುರ ಶತಕಿರಣ ಜಗದೊಡೆಯ- ಬೆಳಗು ಬಾ ಜಗವ //
ಕಾಕೆ ಗಿಳಿ ಕೋಗಿಲೆಗೊ ಮತ್ತಾ
ಸಾಕು ಹಕ್ಕಿಗೊಹಾಡಿದವು ಅದ!
ನಾಕು ಜೆನ ಕೆಮಿ ಕೊಟ್ಟು ಕೇಳಿರೊ,ಚೆಂದಕುದಿಯಾತು/
…. …. …. ….. …
…. … ……. ……. …..
…. … .. ….. …. ….. …… …. ..//
(ಅಂಧಕಾಸುರ ಪುರಾಣಲ್ಲಿ ಬತ್ತ ಜೆನ ಅಲ್ಲ , ಇಲ್ಲಿ ಬರೀ ಕತ್ತಲೆ ಮಾಂತ್ರ)