Oppanna.com

ಸಮಸ್ಯೆ 84 : ರವಿಕಿರಣಕೆ ಚಳಿ ಸೇರಿದ್ದೊ?

ಬರದೋರು :   ಸಂಪಾದಕ°    on   17/01/2015    20 ಒಪ್ಪಂಗೊ

ಈ ಸರ್ತಿ ಚಳಿಗಾಲ “ಆನು ಇನ್ನೂ ಇದ್ದೆ” ಹೇಳಿ ನೆನಪ್ಪು ಮಾಡುತ್ತಾ ಇದ್ದು ! ಈ ವಾರ ’ಚಳಿ’ಯನ್ನೇ ಸಮಸ್ಯೆ ಮಾಡಿ ಕಾರಣ ಹುಡುಕ್ಕಿ ಪೂರಣ ಬರವ,ಬನ್ನಿ.
ಶರಷಟ್ಪದಿ:

“ರವಿಕಿರಣಕೆ ಚಳಿ ಸೇರಿದ್ದೊ?”

 

20 thoughts on “ಸಮಸ್ಯೆ 84 : ರವಿಕಿರಣಕೆ ಚಳಿ ಸೇರಿದ್ದೊ?

  1. ಕವಿಯುವ ಮೋಡಕೆ
    ನವಿಲುಗೊ ಕೊಣಿವಗ
    ಕವಿ ತನುಮನ ನವಿರೆದ್ದತ್ತೊ?
    ಡವಗುಟ್ಟುವ ಮರು
    ತವು ಬೀಸುವಗಳೆ
    ರವಿಕಿರಣಕೆ ಚಳಿ ಸೇರಿತ್ತೊ?

  2. ಬೆವರಿನ ಸುರಿಸುತ
    ಸವರಿದ ಸೆಸಿಗಳ
    ಹವೆ ಬದಲೊಗ ನೀನೋಡಿಲ್ಲಿ I
    ಲವಲವಿಕೆಂದಲೆ
    ಕವಲಿನೊಡದ ಭಾ-
    ರವಿ ಕಿರಣಕೆ ಚಳಿ ಸೇರಿದ್ದೋ?
    ಭಾರವಿ =ತೊಳಶಿ . ಕಿರಣ =ಕದಿರು
    ಒಂದು ದೊಡ್ಡ ತೊಳಶಿ ತೋಟಲ್ಲಿ ಸೆಸಿಗಳ ಮೇಲೆ ಮೈಂದು ಕೂದಪ್ಪಗ ಒಬ್ಬ ಕವಿ ಇನ್ನೊಬ್ಬಂಗೆ ಹೇಳುವ ಕಲ್ಪನೆ

    1. ಭಾಗ್ಯಕ್ಕ ,
      ಭಾರವಿ = ತೊಳಶಿ ! ಭಾರವಿಯ ಗೊಂತಿತ್ತು , ಆ ಶಬ್ದಾರ್ಥ ಗೊಂತಿತ್ತಿಲ್ಲೆ ! ಒಳ್ಳೆ ಪೂರಣ .

    2. ಭಾರವಿ ಕಿರಣಕೆ …..ಪೂರಣ ಒಳ್ಳೆ ಕಲ್ಪನೆ.
      ಭಾರವಿ ಹೇಳಿರೆ ತೊಳಶಿ ಹೇಳ್ತಾ ಅರ್ಥ ಇಪ್ಪದು ಗೊಂತಿತ್ತಿಲೆ.

    3. ಮುಳಿಯದಣ್ಣ ಮತ್ತು ತೆ .ಮಾವಂಗೆ ಧನ್ಯವಾದ . ಎನಗೂ ಹೆಸರು ಮಾತ್ರ ಗೊಂತಿತ್ತು . ಬರವಲೆ ಬೇಕಾಗಿ ಅರ್ಥ ನೋಡಿದ್ದು .ಅಷ್ಟಪ್ಪಗಳೇ ಗೊಂತಾದ್ದು .

  3. ಎವುರಿಲಿ ಬೆಶಿಬೆಶಿ
    ಸವಿಸವಿ ತಿಂಡಿ ತ
    ಡವಲೆಡಿಯದ್ದೆ ಸೊರುಗಿ ತಿಂದ
    ನವಗಿದ ಮನುಗಿರೆ
    ತಿವಿದರು ಏಳೆಯೊ
    ರವಿಕಿರಣಕೆ ಚಳಿ ಸೇರಿದ್ದೊ? 🙂

    1. ಅದು ಏವುರ ಅಲ್ಲದೋ ಶೈಲಜಕ್ಕಾ .. ತೊಂದರೆ ಇಲ್ಲೆ, ಲಾಯಕ ಆಯಿದು ಸೀವು ಮುಕ್ಕಿದ್ದು !

  4. ಮೈಂದಿಲಿ ರವಿಕರಣಕ್ಕೆ ಚಳಿ ಸೇರಿದ ಕಲ್ಪನೆ ಸೂಪರ್.

  5. ಎಲ್ಲೋರ ಪೂರಣಂಗ ಲಾಯ್ಕಾಯಿದು…
    ಭವಗುರಿ ಸಮಯವ
    ನವಗುದಿಯಿರುಳಿನ
    ವಿವರವ ಹೇಳುವ ದಿನಕರನ
    ಕವುಚಿದ ಮಾಘಲಿ
    ಹವೆಲಿಯೆ ಮೈಂದಿಲಿ
    ರವಿಕಿರಣಕೆ ಚಳಿ ಸೇರಿದ್ದೊ?

  6. ಎಲ್ಲೋರ ಪೂರಣ ಲಾಯಕ ಆಯಿದು ಕೊಶಿ ಆತು, ಓದಿ

  7. ವಾಲ್ಮೀಕಿಯ ಆಶ್ರಮಲ್ಲಿ ರಾಮ :

    ಲವಕುಶರಿ೦ದಭಿ
    ನವ ರೋಷಕ್ಕೀ
    ಶವಸಾಗರವೇ ತೇಲಿದ್ದೊ?
    ಅವನಿಯ ಪಾಲುಸು
    ಲವತರುಸಿದ್ದರು
    ರವಿಕಿರಣಕೆ ಚಳಿ ಸೇರಿದ್ದೊ?

  8. ಭುವನದೊಳುತ್ತರ
    ಹವೆಗದು ತತ್ತರ
    ರವಿಕಿರಣಕೆ ಚಳಿ ಸೇರಿದ್ದೋ?
    ಪವನವು ಬೀಸೊಗ
    ಭವನದೊಳೊಳದಿಕೆ
    ಕವುದಿಯ ಹೊದದರೆ ಸಾಕಕ್ಕೋ?

    1. ಸ೦ಕ್ರಾ೦ತಿ ಕಳುದತ್ತು,ಚಳಿ ಬಿಟ್ಟಿದಿಲ್ಲೆ..ಇ೦ದಿರತ್ತೆಯ ಪೂರಣ ಕ೦ಡು ಕೊಶಿಯಾತು.

    2. ಇಂದಿರತ್ತೆಯ ಕಾಣದ್ದೆ ಸುಮಾರು ಸಮಯ ಆತನ್ನೇ . …
      ಮೊದಲಿ೦ಗೆ ಹಳೆ ಸೀರೆಗಳ ಸೇರುಸಿ ‘ಹಚ್ಚಡ’ ಹೇಳಿ ಮಾಡಿಗೊಂಡಿತ್ತು . ಕವುದಿ ಹೇಳುದು ಅದಕ್ಕೆಯೋ ಅತ್ತೆ ?

    3. ಚಳಿಗೆ ಎಷ್ಟು ಕವುದಿಯೂ ಸಾಕಾವುತ್ತಿಲೆ ಅತ್ತೆ.
      ಭುವನ, ಪವನ, ಭವನ -> ಶಬ್ದ ಪ್ರಯೋಗ ಚೆಂದ ಆಯಿದು.

  9. ರವಿ ಕಾಣದ್ದರ ಕವಿಗೊ ಕಂಡದು !!

    ರವಿ ಕಾಣದ್ದರ
    ಕವಿಗಳೆ ಕಾ೦ಬಗ
    ರವಿಕಿರಣಕೆ ಚಳಿ ಸೇರಿದ್ದೊ?
    ಹವಿಕರ ಕನ್ನಡ
    ಕವನದ ಹವನಲಿ
    ಹವಿಸಿನ ಕಿಚ್ಚಿನ ಕೆಚ್ಚಿದ್ದೊ?

    ಪದ್ಯ ಅರ್ಥ ಆಯೆಕ್ಕಾರೆ ಈ ಸಂಕೋಲೆಲಿ ಇಪ್ಪ ಪದ್ಯಂಗಳ ಓದಿ https://oppanna.com/chodyango/samasye-chodyango/kanda-padya-beedige-sigaretu-saati .

    ನಮ್ಮ ‘ಕೇಂದ್ರ’ದ ಸಾಮಾಜಿಕ ಸ೦ಕಷ್ಟ ಕವಿಗೊಕ್ಕೆ ಅಂದೇ ಗೊಂತಾಯಿದು !!!

    1. ಹಳೆ “ಕ೦ದ” ನ ನೆನಪಿಸಿದ ಭಾಗ್ಯಕ್ಕನ ಪೂರಣ ಲಾಯ್ಕ ಆಯಿದು.

  10. ಕವಿ-ಚಳಿ
    ಸವಿ ಮನಸಿನ ಕವಿ
    ಹವಿಗನ್ನಡ ವನೆ
    ಬುವಿಲಿಡಿ ಹಸರುಸಿ ಮಡುಗಿದ್ದೋ?
    ಕವಿತನೆ ಮಾಡಿದ
    ಅವಿಲಿನ ಹಾಂಗೆಯೆ
    ರವಿಕಿರಣಕೆ ಚಳಿ ಸೇರಿದ್ದೋ?

    1. ಯೇತಡ್ಕ ಮಾವನ ಪೂರಣ ಕೊಶಿ ಕೊಟ್ಟತ್ತು.ಅಭಿನ೦ದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×