Oppanna.com

ಸಮಸ್ಯೆ : 41 " ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ"

ಬರದೋರು :   ಸಂಪಾದಕ°    on   03/08/2013    31 ಒಪ್ಪಂಗೊ

ಈ ವಾರ “ಮಣಿಗಣ” ಹೇಳ್ತ ಛ೦ದಸ್ಸಿನ ಪರಿಚಯ ಮಾಡುವ°.
ಪ್ರತಿ ಸಾಲಿಲಿ 15 ಅಕ್ಷರ೦ಗೊ ಬಪ್ಪ ಈ ಅಕ್ಷರವೃತ್ತಲ್ಲಿ ಸುರುವಾಣ ಹದಿನಾಲ್ಕು ಅಕ್ಷರ೦ಗೊ ಲಘು, ಕಡೇಯಾಣದ್ದು ಗುರು.
ಉದಾಹರಣೆಗೆ “ವೃಷಭೇ೦ದ್ರ ವಿಜಯ” ಕಾವ್ಯದ ಒ೦ದು ಚರಣ ಹೀ೦ಗಿದ್ದು

ಹರಿವಿಧಿಸುರಪತಿನತಪದವನಜೇ
ಕರತಲಜಲದಸಿಹೃತಖಲದನುಜೇ
ವರವಿತರಣಜಿತದಿವಿಷದವನಿಜೇ
ಪೊರೆ ಶರಣಜನವನಗವರತನುಜೇ ॥

ಮನುಲಘುವಿರೆ ಗುರು ಮಣಿಗಣವೆನಿಕು೦ ಹೇಳಿ ಕನ್ನಡ ಪ೦ಡಿತರು ಹೇಳಿಕೊಡುಗಡ.

ನಮ್ಮ ಸಮಸ್ಯೆ ಃ  ” ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ”

ಬರದು ಕೊಶಿಪಡುವ° , ಬನ್ನಿ.

31 thoughts on “ಸಮಸ್ಯೆ : 41 " ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ"

  1. ಅಗಸೆಯ ಬೆಳಿಸುಮ ಬೊಗಸೆಲಿ ಹಿಡುದೂ
    ಮುಗುದೆಯು ಭಕುತಿಲಿ ಬೆನಕಗೆ ಮಣಿದೂ
    ನಿಗದಿತ ಸಮಯಲೆ ಕಲಿವಲೆ ಹೆರಟಾ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ

  2. ಅಗಲದ ಹಣೆಯರಳಿದ ಕಮಲದ ಹೂ
    ನೆಗೆಮೊಗದರಸುಕುವರಿಯಿದು ನಿಜವೇ
    ಹೊಗಳೊದು ಬಿಡಿ ಪಡುಜೆಗಿಲಿಯ ಕರೆಲೇ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ ॥

  3. ಅಗಣಿತ ಚೆಲುವಿನ ಕಸವಿನ ತಲೆಯೇ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ
    ತಿಗುರುಸಿ ಹೆಣವದು ಕುಸುರಿಯ ಕಲೆಯೇ
    ಮಗಳಿನ ಕರಿಜೆಡೆ ಚೆಲುವಿನ ಗಣಿಯೇ
    (ಕಸವು=ಕೂದಲು,ತಿಗುರುಸಿ=ಸುಗಂಧದ್ರವ್ಯವ ಲೇಪಿಸಿ)
    ————-
    ನಗರದ ಕುವರಿಯ ಸೊಗಡಿನ ಕುರುಳೇ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ
    ಸೊಗಸಿನ ಕುಸುರಿಯ ಕೆಲಸದ ಹೆರಳೇ
    ಅಗಣಿತ ಚೆಲುವಿನ ಕರಿಜೆಡೆ ಕುಲುಕೂ

    1. ಲಾಯ್ಕ ಆಯಿದು ಮಾವ.
      ಸುರುವಾಣ ಪೂರಣಲ್ಲಿ ಮಗಳು ಪುನರಾವರ್ತಿ ಆದ್ದದು ಪ್ರೀತಿ ಹೆಚ್ಚಾಗಿಯೋ ?
      ಎರಡನೆ ಪೂರಣದ ಸೊಗಡಿನ – ಸುಗುಡು ಹೇಳಿ ಓದಿದೆ !
      ನಗರದ ಕುವರಿಯ ತಲೆ ಬಿಡುಮುಡಿಯೇ !!

    2. ಎರಡೂ ಪೂರಣಂಗೊ ಲಾಲಿತ್ಯಪೂರ್ಣವಾಗಿದ್ದು ಮಾವ. ಸರ್ವ ಲಘು ಇಪ್ಪ ಪದ್ಯ ಬರೆಯೆಕ್ಕಾರೆ ತುಂಬ ಕಷ್ಟ, ನಿಂಗೊಗಿಪ್ಪ ಹಾಂಗೆ ಶಬ್ಧ ಭಂಡಾರ ಇರೆಕ್ಕು.

  4. ಅಗಣಿತ ಗುಣಗಳ ದಶರಥ ಸುತನಾ
    ಸುಗುಣದ ಸುರವಧು ಮಿಥಿಲೆಯ ಸುತೆಯೂ
    ಸೊಗಸಿನ ‘ಮಣಿಗಣ’ ಸರ ಧರಿಸಿದ ಮ
    ದ್ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ
    ಇದು ಸೀತೆಯ ಅಲಂಕಾರ ಮಾಡಿದ ಹಿರಿಯ ಹೆಮ್ಮಕ್ಕೊ ಹೀಂಗೆ ಹೇಳುಗು ಹೇಳುವ ಕಲ್ಪನೆ . ಮಣಿಗಣ =ನಿರ್ದಿಷ್ಟ ಅಂತರಲ್ಲಿ ೨ ಬಣ್ಣಗಳ ಪೋಣಿಸಿದ ಹೇಳುವ ಅರ್ಥಲ್ಲಿ . ೩,೪,೩,೪ ಮಣಿಗೊ ಹೇಳಿಯೇ ಮಡಿಕೊ೦ಬಲಕ್ಕು …

    1. ಭಾಗ್ಯಕ್ಕನ ಈ ವಿನೂತನ ಕಲ್ಪನೆ ಭಾರೀ ಲಾಯ್ಕ ಆಯಿದು.

  5. ಹಗಲಿಡಿ ಜಗಳವ ತೆಗವಗಳದ ಕಾ
    ಳಗ ಬಿಡುಸುಲೆ ಉಸುರಿದೆ ‘ಬಿಡುಜೆಡೆ ‘ ಹೇ
    ನುಗಳುದುರುಗು ಜಿಗಿಜಿಗಿ ನೆಗಗದ ಬಾ
    ಬಿಗಿವ°ದಕೆರಡು ಬರೆಯಲಿ ಬಿಡದರಾ
    ಹೊಗಳಿರೆ ಮೆರಗುವ ಕಿರಿಮಗಳಿದರಾ
    ಹಗೆಗಳೆ ನೆಗವ ತಲೆಕಸವಿಲಿದ ಜ೦
    ತುಗಳುದುರಿಸಿ ಮಿರಿ ಮಿರಿ ಮಿರುಗೊಗಳೀ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ
    ಜ೦ತು , ಹಗೆ = ಹೇನು
    ಮೆರಗುವ=ಕುಶಿಲಿಪ್ಪ

  6. ಅಗಳ ಕರೆಲಿ ಗೆಣಮೆಣಸಿನ ಕರೆಯಾ
    ಮುಗುಳುನೆಗೆಲಿ ಮಗ° ಕುರುವೆಗಿಳುಶೊಗಾ
    ನೊಗಹಿಡುದಳಿಯನು ಕೃಷಿಗೆ ಹೆರಡೊಗಾ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ ॥

  7. ಹೊಗೆಯೊಲೆಯೆದುರಿಲಿ ಮಸಿಹಿಡುದೆನಗೇ
    ಹೆಗಲಿನ ಸರಿಸಮ ಬೆಳದಿದು ಹಿತವೇ
    ಹಗಲಿರುಳುಗಳಲಿ ಹಠ ಹಿಡುದರುದೇ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ॥

  8. ರಘುವಿನ ಮಡದಿಗೆ ಕೊದಿ ಹಿಡಿಗಡ ಮ
    ಲ್ಲಿಗೆ ಗೆಡುವಿಲಿ ಅರಳಿದ ಬೆಳಿ ಸುಮ ನೋ
    ಡೊಗ, ಕೊಯಿದ ಮುಗುಟಿನ ನೆಯಿದು ಕೊಡುಗೂ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಲೀ ॥

    1. ಇದು ಪಷ್ಟಾಯಿದು ಅತ್ತೆ. ಮಲ್ಲಿಗೆಯನ್ನೂ ಕೊಡುಗು, ಸಂಪಗೆಯನ್ನೂ ಕೊಡುಗು.

      1. ಸ೦ಪಗೆ ಕೊಯ್ವಲೆ ದೋ೦ಟಿ ಬೇಕನ್ನೇ !

  9. ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ
    ಬಗುತಲೆ ತೆಗದು ಜನನಿಯು ಜೆಡೆಯ ಮಾ
    ಡೊಗ ತಲೆಲಿ ಮಿಜುಳಿದರೆ ಮಣಿಮಣಿ ಹೇ
    ನುಗೊ, ತಲೆಕಸವಿನ ಬೆಳೆಶುಲೆ ಬಿಡುಗೋ ॥
    ಸುಗುಣನ ತುರುಬಿನ ಸಿರಿ ಸೊಬಗಿನ ಕಾಂ
    ಬಗ ಹರುಷದೆ ಮನಸದು ಪುಳಕಿತವ
    ಬ್ಬೆಗೆ, ಮುಕುರವ ಮುಖದೆದುರಿಲಿ ಹಿಡುದೂ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ ॥

    1. ಅತ್ತೇ..
      ಕನ್ನಾಟಿ ಲಿ ಸುಗುಣನ ಜೆಡೆ ಸೂಪರ್ ಆಗಿ ಬಯಿಂದು..

    2. ಬಗುತಲೆ – ಸರಿಯೋ, ಬಗತ್ತಲೆ ಹೇಳಿ ಅಲ್ಲದೋ ಅತ್ತೆ ಇಪ್ಪದು.

      1. ಬಗತ್ತಲೆ ಹೇಳಿ ಅಪ್ಪು- ಆದರೆ ಇಲ್ಲಿ ಗುರುವಿಂಗೆ ಪ್ರವೇಶ ಇಲ್ಲೆನ್ನೆ- ಅದಕ್ಕೆ ಬೇಕಾಗಿ ಹಾಂಗೆ ಬರದ್ದದು. ಎನ್ನ ಅಪ್ಪನ ಮನೆಲಿ ಮಾತಾಡುವ ಭಾಷೆ ಕನ್ನಡ [ಪಂಜ ಸೀಮೆಯ ಕನ್ನಡ] , ಅದರಂದಾಗಿ ಹವ್ಯಕಭಾಷೆಯ ಹಲವಾರು ಮೋಡಿ ಶಬ್ದಂಗ ಅಷ್ಟಾಗಿ ಗೊಂತಿಲ್ಲೆ ಎನಗೆ. ತಪ್ಪಾಗಿದ್ದರೆ ಕ್ಷಮಿಸಿ.

  10. ಭಾಗ್ಯಕ್ಕಾ…
    ಸುರುವಾಣ ಗೆರೆ ತೆಗವಗಳೆದ ಬದಲ್ಸೆಕ್ಕಾವುತ್ತಾ ಹೇಳಿ…
    ತಲೆ ತೊರುಸಿಗೊಂಡೆ ಆನಿದ ಬರದೇ….
    ಸೊಗಸಿಲಿ ಹೆರಟರೆ ಮದುವೆಗೆ ರಜೆಲೀ
    ಜಗಮಗ ಉಡುಗೆ ಯ ಭರದಲಿ ಸುರುದೂ
    ತೆಗದಿದ ನಡುಕೆಲಿ ಎರಡೆಳೆ ತಲೆಲೀ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ ॥

    1. ಲಾಯ್ಕ ಆಯಿದು ಶೈಲಜಕ್ಕಾ.
      ನಿ೦ಗೊ ಮಗನ ತಲೆ ಕ್ರೋಪು ಮಾಡೊದಲ್ಲದೋ!

      1. ಅದು ಮಗಳ ತಲೆಯೇ ಗ್ರೇಶಿ ಬರದ್ದದಾಗಿಕ್ಕು ರಘು. ಹಾಂಗಾಗಿ ತುಂಬ ಲಾಯ್ಕ ಆದ್ದದಾಗಿಕ್ಕು.

      2. ಮಗಂಗೆ ಹೀಂಗೆ ಮಾಡ್ಸಿರೆ ಅಕ್ಕಲ್ಲದಾ….
        ನೆಗೆ ನೆಗೆ ಮುಗುಳುಗೊ ಹಸುರಿಲಿ ಮಸರೂ
        ಜೊಗುಳಿಯ ಅರಿಶಿದ ಸೊಬಗವ ಸವಿದೀ
        ರಗಳೆಗೆ ಉದುರಿಯ ಮಡಗಿಯೆ ತಲೆಲೀ
        ಮಗನಿಗೆ ಫಣಿಜೆಡೆ ಹೆಣವಲೆ ಕೊಶಿಯೇ ॥

        1. ಉದುರಿ ಉದುರುಗದ ನೆಡವಗ ಮನೆಲೇ !
          ಎಡಿಯಪ್ಪ…

    2. ಶೈಲಜಕ್ಕಾ, ಭಾರೀ ಸುಲಲಿತವಾಗಿ ಸೊಗಸಾಗಿ ಬಯಿಂದು ಮಗಳ ಜೆಡೆ ಮಾಡಿದ್ದು- ಮುಂದೆ ಆಗಲಿ ಹಾಂಗೆ.

  11. ಹಗಲಿಡಿ ಜಗಳವ ತೆಗವಗಳೆದ ಕಾ
    ಳಗ ಬಿಡುಸುಲೆ ಉಸುರಿದೆ ‘ಬಿಡುಜೆಡೆ ‘ ಹೇ
    ನುಗಳುದುರುಗು ಜಿಗಿಜಿಗಿ ನೆಗಗದ ‘ಬಾ
    ಬಿಗಿವ°ದಕೆರಡು ಬರೆಯಲಿ ಬಿಡದರಾ
    ಹೊಗಳಿರೆ ಮೆರಗುವ ಕಿರಿಮಗಳಿದರಾ
    ಹಗೆಗಳೆ ನೆಗವ ತಲೆಕಸವಿಲಿದ ಜ೦
    ತುಗಳುದುರಿಸಿ ಮಿರಿ ಮಿರಿ ಮಿರುಗೊಗಳೀ
    ಮಗಳಿನ ಫಣಿಜೆಡೆ ಹೆಣವಲೆ ಕೊಶಿಯೇ
    ಜ೦ತು , ಹಗೆ = ಹೇನು
    ಮೆರಗುವ=ಕುಶಿಲಿಪ್ಪ

    1. ತೆಗವಗಳೆದ = ತೆಗವಗಳೆ + ಅದ , ತಪ್ಪು ಹೇಳಿ ಕಾಣುತ್ತಿಲ್ಲೆ.ತೆಗವ ಸಮಯ ಹೇಳಿರೂ ಆವುತ್ತು.ಸಮಸ್ಯೆಯ ಪರಿಹಾರ ಜೆಡೆ ಹೆಣೆದಷ್ಟೇ ಸುಲಾಭಲ್ಲಿ ಆಯಿದು ಅಕ್ಕ.

      1. ಅಣ್ಣಾ… ತೆಗವಗಳೆ + ಅದ = ತೆಗವಗಳದ ಆವುತ್ತಿಲ್ಲೆಯೋ
        ಹಗಲಿಡಿ ಜಗಳ ತೆಗವಗ ಎಳೆದ ಕಾ ಹೇಳಿಯೂ ಅಕ್ಕಲ್ಲದಾ..

        1. ಹೊ,ಅಪ್ಪು,ತೆಗವಗಳೆ+ಅದ=ತೆಗವಗಳದ ಆಯೆಕ್ಕು.
          ಶೈಲಜಕ್ಕನ ಬದಲಾವಣೆಯೂ ಸರಿ.

          1. ಅಪ್ಪು ಶೈಲಜಕ್ಕನ ಸೂಚನೆ ಲಾಯ್ಕ ಒಪ್ಪುತ್ತು. – ತೆಗವಗಳದ.
            ಇನ್ನೊಂದು ಸಲಹೆ ಎಲ್ಲ ಅಕ್ಕಂದ್ರಿಂಗೆ – ಸಮಸ್ಯೆ ಪರಿಹಾರವ ಒಂದೇ ಪದ್ಯಲ್ಲಿ ಮುಗುಶುವ ಪ್ರಯತ್ನ ಮಾಡಿ. ಎರಡು ಪದ್ಯ ಬರೆತ್ತರೆ, ಆ ಎರಡು ಬೇರೆ ಬೇರೆ ಪರಿಹಾರ ಆಗಿರಲಿ. ಅಷ್ಟಪ್ಪಗ ಪೂರಣಂಗೊ ತುಂಬ ಲಾಯ್ಕ ಅಕ್ಕು ಹೇಳಿ ಎನ್ನ ಅಭಿಪ್ರಾಯ. ಇಷ್ಟು ಸಮಯ ನಿಂಗೊ ಇಲ್ಲಿ ತೋರ್ಸಿದ ಜಾಣ್ಮೆ ಇನ್ನೂ ಬೆಳಯಲಿ ಹೇಳ್ತ ಉದ್ದೇಶ.

        2. ಶೈಲಕ್ಕಾ,
          ತಿದ್ದಿದ್ದಕ್ಕೆ ಧನ್ಯವಾದ.

    2. ಭಾಗ್ಯಕ್ಕ, ಬೋಣಿಯ ಕವನ ರೈಸಿದ್ದನ್ನೆ – ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×