Oppanna.com

ಸಮಸ್ಯಾ ಪೂರಣ – 02: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”

ಬರದೋರು :   ಸಂಪಾದಕ°    on   12/07/2012    53 ಒಪ್ಪಂಗೊ

ಕಳುದವಾರ ಗುರುವಂದನೆ ಒಟ್ಟಿಂಗೆ ಸುರುಮಾಡಿದ ಸಮಸ್ಯಾಪೂರಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ!
ಎಷ್ಟು ಒಪ್ಪಂಗೊ, ಎಷ್ಟು ಪರಿಹಾರಂಗೊ, ಎಷ್ಟು ಹೊಸ-ಹೊಸ ವಿಶಯಂಗೊ!?
ಕೆಕ್ಕಾರು ರಾಮಚಂದ್ರಣ್ಣನ ಹಾಂಗಿಪ್ಪ ಹೆರಿಯೋರಿಂದ ತೊಡಗಿ, ಹೊಸ ಹೊಸ ಪ್ರಯತ್ನದ ಬಾವಯ್ಯಂದ್ರೂ ಒಪ್ಪ ಕೊಡ್ತವು; ಅದೇ ಕೊಶಿ!

ಇದಾ, ಈ ವಾರ ಇನ್ನೊಂದು ಸಮಸ್ಯೆ.

“ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°”

ರಜ ತಿಳಿಹಾಸ್ಯ, ಕುಶಾಲು, ತಮಾಶೆ, ಜೆಂಬ್ರದ ಸನ್ನಿವೇಶವ ತೆಕ್ಕೊಂಬಲಕ್ಕು.

ಭೋಗ ಷಟ್ಪದಿ : ಲಕ್ಷಣಂಗೊ

~

ಸೂ:

  • ಈ ಸಮಸ್ಯೆ ಭೋಗಷಟ್ಪದಿಲಿ ಇದ್ದು.
  • ಭೋಗಷಟ್ಪದಿಗೆ ಉದಾಹರಣೆ:
    ತಿರುಕನೋರ್ವನೂರ ಮುಂದೆ
    ಮುರುಕು ಧರ್ಮ ಶಾಲೆಯಲ್ಲಿ
    ಒರಗಿರುತ್ತಲೊಂದು ಕನಸ ಕಂಡನಂತೆನೆ ||
  • ಆದಿಪ್ರಾಸಕ್ಕೆ ಸಲಹೆಗೊ:
    ಸುರುವಾಣದ್ದು ಗುರು,
    ಎರಡ್ಣೇದು “ಕ”ಕಾರ.
    ಬೇಕು, ನಾಕು, ಸಾಕು, ನೂಕು, ಪಾಕ, ಶಾಕ, ಲೋಕ, ಕೇಕೆ ಇತ್ಯಾದಿ.
  • ಹೆಚ್ಚಿನ ವಿವರಂಗೊ: http://padyapaana.com

53 thoughts on “ಸಮಸ್ಯಾ ಪೂರಣ – 02: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”

  1. ಓಯ್ ನಾವು ತಿರುಗಾಟದೊಟ್ಟಿಂಗೆ ಜೆಂಬ್ರಂಗಳನ್ನೂ ಸುದಾರ್ಸಿಯೊಂಡು ಬೈಲಿಂಗಿಳುದಪ್ಪಗ ಲಾಡು ಬಾರೀ ರೈಸುತ್ತಿತ್ತಯ್ಯಾ..
    ನಾವು ಒಂದು ಕೈ ನೋಡುವ ಹೇದು ಮುಳಿಯ ಬಾವಂಗೆ ಪೋನಾಯಿಸಿ ಪಾಠ ಹೇಳ್ಸಿಯೊಂಡು ಬರದತ್ತು..
    ಹೇಂಗೆ ಅಕ್ಕೋ?

    ಬಕ್ಕು ನಮ್ಮ ಬೋಸ ಭಾವ
    ದಿಕ್ಕು ನೋಡಿ ದಿಬ್ಬಣಲ್ಲಿ
    ಚೊಕ್ಕ ಅಂಗಿ ಚೆಡ್ಡಿ ಶಾಲು ಹಾಕಿ ಗತ್ತಿಲಿ
    ಬೊಕ್ಕು ಬಾಯಿ ಕಿಸುದು ರಜ್ಜ
    ಸೊಕ್ಕು ಮಾಡಿ ಹ೦ತಿಯೆಡೆಲಿ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ

  2. ಅಕ್ಕನಲ್ಲಿಗಂದು ಹೋದೆ
    ಮಕ್ಕಳನ್ನು ಕೂಡಿಯೊಂಡು
    ಪಕ್ಕದಲ್ಲಿ ಕೂದು ಭಾವ ಏನು ಕೇಳಿದಾ° ।
    ಸಕ್ಕರೆಯಾ ತಿಂಡಿ ಇಷ್ಟ
    ಎಕ್ಕ ಸಕ್ಕ ಎನಗೆ ಭಾವ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ॥

    ಅಲ್ಲಿಗೇ ಮುಗುದ್ದಿಲ್ಲೆ. ಹತ್ರೆ ಇಪ್ಪ ಹೆಂಡತಿ ಎಂತ ಹೇಳ್ತು ಕೇಳಿ

    ಸಾಕು ಸಾಕು ತಿಂದದಿಂದು
    ಬೇಕು ಮತ್ತೆ ಸೂಜಿ ಮದ್ದು
    ಸಿಕ್ಕಬಟ್ಟೆ ತಿಂಬದೊಂದೆ ಗೊಂತು ನಿಂಗೊಗೆ।
    ಅಕ್ಕರೆಯಾ ಮಾತು ಚೆಂದ
    ಪಕ್ಕಕಿಪ್ಪ ತೋಟ ಚೆಂದ
    ಬಕ್ಕು ಬೇಗ ಮಳೆಯು ಒಂದು ಸುತ್ತು ಬಪ್ಪನಾ ॥

  3. ತೆಕ್ಕುಂಜ ಬಾವಾ, ಒಟ್ಟಾರೆ ನಾಕು ಲಾಡು ಇನೂ ಒಳುದ್ಡು ಹೇಳಿ ಕಾಣುತ್ತು .ಅದಿರಲಿ,ಶ್ರಿಶಣ್ಣಾ ಎನ್ನ” ಅಬ್ಬಿ” ಪದ್ಯವ ಚೆಂದಕ್ಕೆ ಹಾಡಿದ್ದ
    ವು ,ಬೈಲಿಂಗೆ ಕಳುಸಲೆ ಎನಗೆ ಗೊಂತಿಲ್ಲೆ. ಶ್ರಿಶಣ್ಣಾ ಕಳುಸುತ್ತಿರೊ ಹೇಂಗೆ ?ಒಪ್ಪಣ್ಣಂಗೊ ಒಪ್ಪಕ್ಕಂಗೊ ಕೇಳಲಿ ಆಗದೊ?

  4. “ಬೇಕು ಎನಗೆ ಹಸರ ಪಾಚ

    ಏಕೊ ಬಾವ ಬತ್ತೆ ಇಲ್ಲೆ

    ಪೋಕು ಮುಟ್ಟಿ ಹೋತೊ ,ಅಲ್ಲ ಪಾತ್ರ ಕಾಲಿಯೋ?

    ಹಾಕು ಬಾವ ಎರಡು ಕೈಲು,

    ಸಾಕು ಹೇಳಿದವಕು ಬೆಲಕಿ

    ತೋಕಿ ಬಡುಸಿ ಮುಗಿದು ಹೋತು ಎಂತ ಮಾಡುದು?

    ನಾಕು ಮದುವೆ ಮಾಡಿ ಎನಗೆ

    ತೇಕು ಮುಳುಕು ಆತು ಬಾವ

    ಬಾಕಿ ಎಂತು ಇಲ್ಲೆ ಕಿಸೆಲಿ,ಕಾಲಿ ಆಯಿದು

    ಹೋಕೊ ಮಾನ ಸಬೆಲಿ?ದಾರಿ-

    ಹೋಕರಿಂಗು ಬಡುಸಿ ಒಳುದ

    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ

    (ಈಗ ಸರಿ ಆತೊ ಹೇಳಿ ಬಾವ, ತಪ್ಪಾದರೆ ತಿಳುಸಿ)

    1. ತುಂಬಾ ತುಂಬಾ ಲಾಯಿಕ್ಕಾತು, ಈಗ.

  5. ನಾಕು ನಾಕು ಜೆಂಬ್ರದೂಟ
    ಪೋಕು ಮುಟ್ಟಿ ಹೋದರಂತು
    ಪಾಕ ಶಾಲೆ ಒಳದಿಕಿದ್ದ ಬೋಸ ಭಾವನೂ
    ನೂಕಿ ಜೆನರ ನಡುಕೆ ಬಂದು
    ಚೊಕ್ಕದಾದ ಕೈಲಿ ನಮಿಸಿ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°

    1. ಪದ ಲಾಯಿಕಿದ್ದು, ಹಾಡಿ ಬೈಲಿಲಿ ಹಾಕುತ್ತಿರೋ..?

  6. ಅಪ್ಪಚ್ಚಿಯ ಸಣ್ಣ ಪ್ರಯತ್ನಲ್ಲಿ ದೊಡ್ಡ ತಪ್ಪೇನೂ ಇಲ್ಲೆ. ಲಾಯಿಕಿದ್ದು.

  7. ಈ ಪೂರಣ ಕೊಟ್ಟರೆ ಎಂತ ಮಾಡೆಕ್ಕು ಹೇಳಿ ತಲೆ ಓಡುತ್ತಿಲ್ಲೆ.
    ಹೂರಣ ಕೊಟ್ಟರೆ ತಿಂದು ಹೋಕು. ಆದರೂ ಒಂದು ಸಣ್ಣ ಪ್ರಯತ್ನ. ತಪ್ಪಿದ್ದರೆ ಸರಿ ಮಾಡ್ಲೆ ಭಾವಂದಿರು ಮಾವಂದಿರು ಇದ್ದವು ಹೇಳ್ತ ಧೈರ್ಯಲ್ಲಿ.
    ಸಾಕು ಬೇಕು ಹೇಳಲಿಲ್ಲೆ
    ಪಾಕವಂತು ಗೊಂತೆ ಇಲ್ಲೆ
    ಪೋಕ ಮಾಣಿ ಕೂದ ಅಂದು ಉಂಬಲೇಳಿಯೇ
    ಲೆಕ್ಕ ಆರಡಿಯದ್ದ ಭಾವ
    ಪಕ್ಕ ನಿಂದು ಕೈಲಿ ತೆಗದು
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ ॥

    1. ಓ, ಲಾಯಕಾಯಿದಪ್ಪಚ್ಚೀ. ಪ್ರಯತ್ನ ಪಟ್ಟರೆ ಫಲ ಗ್ಯಾರಂಟಿ ಎಂತ ಹೇಳ್ತಿ.

  8. ಬಾಲಣ್ಣ ಗಡಿಬಿಡಿಲಿ
    ಬೈಲಿಂಗೆ ಬಂದರುದೆ
    ಹೇಳಿದವು ಭಾಮಿನಿಲಿ ಒಪ್ಪಂಗಳ
    ಬೈಲ ಭಾವಂದಿರುಗೊ
    ಕೇಳಿಯೇ ಕೊಶಿಪಟ್ಟು
    ಹಾಲುಬಾಯಿಯ ತಿಂದು ತೇಗುಗನ್ನೆ॥

  9. ತಪ್ಪಿ ಬರದಾ ಎಲ್ಲ ಗೆರೆಗಳ

    ಒಪ್ಪ ಮಾಡಿಯೆ ಬರದು ಅದ ತಂ-

    ದೊಪ್ಪುಸುವೆ ಬೈಲಿಂಗೆ ಬೇಗನೆ ಸುದ್ದಿ ಬಿಡಿ ಅದರ

    ತಪ್ಪಿ ನೆಡದರೆ ಆನೆಯೂ ಅಡಿ

    ತಪ್ಪುಗಡ! ನೆಂಪಾತು ಹಳೆನುಡಿ

    ಒಪ್ಪುವೇ ತಪ್ಪುಗಳ, ತಿದ್ದುವೆ ಬರದು ಬಾವಯ್ಯ

    (ನಿಂಗೊ ಹೇಳಿದ್ದರಲ್ಲಿ ಬೇಜಾರೇನೂ ಇಲ್ಲೆ ,ಎನ್ನ ಗಡಿಬಿಡಿಲಿ ತಪ್ಪು ಬಂತು ಬಾವಯ್ಯ)

    1. ತು೦ಬಿದಾ ಕೊಡಪಾನ ತುಳುಕದು
      ಯೆ೦ಬ ಗಾದೆಯ ಮಾತು ನಿಜ ಮನ
      ತು೦ಬಿ ಬ೦ದತ್ತೆನಗೆ ಮಾವನ ಭಾವನೆಯ ನೋಡಿ|
      ನ೦ಬಿ ಅನುಸರುಸಿದರೆ ನವಗಾ
      ಡ೦ಬರದ ಮಾತಲ್ಲ ನಿ೦ಗಳ
      ಹೊ೦ಬೆಳಕು ತೋರುಸುಗು ಬದುಕಿಲಿ ನೆಡವ ಸರಿದಾರಿ||

  10. ಬಾಲಣ್ಣ,
    {ಅಂದಾಜು ತಪ್ಪಿತ್ತೊ?”} +{ಹೇಳೀದವಕ್ಕು ಬೆಲಕ್ಕಿ}+{‘ಊಕುಜೆನ ‘ಕ್ಕೆ ಬಡುಸಿ ಒಳುದ}
    – ಇಲ್ಲಿ ಮಾತ್ರೆಗೊ ತಪ್ಪಿದ್ದನ್ನೆ .
    ಆರು ಪಾದದ ಬದಲು ಒಂಬತ್ತು ಪಾದ ಆತು.
    ಬರೆ ತಪ್ಪುಗಳ ಮಾಂತ್ರ ಎತ್ತಿ ತೋರ್ಸುದಕ್ಕೆ ಬೇಜಾರು ಮಾಡಿಕ್ಕೆಡಿ. ನಿಂಗಳ ಹಾಂಗಿಪ್ಪ ಹೆರಿಯೊರು ಬೈಲಿಲಿ ಬರವದು ಎಲ್ಲೊರಿಂಗೆ ಪ್ರೇರಣೆ.

  11. “ಬೇಕು ಎನಗೆ ಹಸರ ಪಾಚ

    ಏಕೊ ಬಾವ ಬತ್ತೆ ಇಲ್ಲೆ

    ಪೋಕುಮುಟ್ಟಿ ಹೋತೊ ? ಅಂದಾಜು ತಪ್ಪಿತ್ತೊ?”

    “ಹಾಕು ಬಾವ ಎರಡು ಕೈಲು

    ಸಾಕು ಹೇಳೀದವಕ್ಕು ಬೆಲಕ್ಕಿ

    ತೋಕಿ ಬಡುಸಿ ಮುಗಿದು ಹೋತು ಎಂತ ಮಾಡಲಿ?”

    ಹೋಕು ಎನ್ನ ಮಾನ ಸಬೆಲಿ

    ‘ಊಕುಜೆನ ‘ಕ್ಕೆ ಬಡುಸಿ ಒಳುದ

    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದ..

  12. ಶ್ಲೋಕ ಹೇಳಿಗೊಂಡೆ ಆನು
    ಬಾಕಿಯಾಗಿ ಕೂದಹೊತ್ತು
    ನೂಕಿಗೊಂಡು ಶೇಪುಭಾವ ಬಂದು ನಿಂದಿದ° |
    ಪಾಕ ಹೊರುದ ಬೀಜಬೊಂಡು
    ಲಾಯ್ಕ ಇದ್ದು ಹೇಳಿಗೊಂಡು
    ನಾಕುಲಾಡು ಬಳುಸಿ ಎನ್ನ ಮೋರೆ ನೋಡಿದ° ||

    (ಓ ಮೊನ್ನೆ ಬೈಲಕರೆ ಸಟ್ಟುಮುಡಿಲಿ ಆದ ಸಂಗತಿ)

    1. ಶ್ಲೋಕ ಹೇಳಿಗೊಂಡಿಪ್ಪಗ ಊಟಕ್ಷಿಣೆ ನಿನಗೆ ತಪ್ಪಿ ಹೋತಡ, ಹಾಂಗೆ ಶೇಪು ಭಾವ ಹೇಳಿತ್ತಿದ್ದ್ದ. ಬೇಜಾರು ಮಾಡುದು ಬೇಡ ಹೇಳಿ ನಿನಗೆ ನಾಕು ಲಾಡು ಬಳುಸಿದ್ದೋ..?
      ಎಂತದೆ ಆಗಲಿ, ಪದ ಲಾಯಿಕಾಯಿದು.

  13. ಪಾಕ ಲಾಯ್ಕ ಆದ ಮತ್ತೆ
    ಶೋಕು ಉಂಡರದುವೆ ಚೆಂದ
    ಬೇಕು ಬೇಕು ಹೇಳಿ ರಾವು ಕಟ್ಟಲಿದ್ದೊ ನೀ ।

    ಸಾಕು ಸಾಕು ಹೇಳಿರೂದೆ
    ಬೇಕೊ ಮಾವ ಹೇಳಿ ಅಳಿಯ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°||

    1. ಆಳಿಯ ಬಳಸಿದ್ದರೆ ಹಾಂಗೆ ಬಿಡ್ಲೆ ಗೊಂತಿಲ್ಲೆ ಅಲ್ಲದೋ ..?

  14. ಮೋಕೆಲೆನ್ನ ಕು೦ಞಮಾಣಿ
    ಚಾಕಲೇಟು ಕೇಳಿಯಪ್ಪ
    ಗೇಕೆ ಮಗನೆ ಹಲ್ಲು ಒಟ್ಟೆಯಕ್ಕು ಹೇದರೆ |
    ಪೋಕ° ಬಾಳೆಯೆಲೆಯ ಮಡಗಿ
    ಏಕದ೦ತನಾ೦ಗೆ ಕೂದು
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°||

    1. ಚಾಕಲೇಟಿಂದ ಜೆಂಬಾರದ ಲಾಡು ಒಳ್ಳೆದೇ ಅಲ್ದೊ ಭಾವಯ್ಯ, ಲಾಯಕಾಯಿದು.

  15. ಯೇ ಬೊಳುಂಬುಮಾವಾ, ಎಲ್ಲೋರ ಒಟ್ಟಿಂಗೆ ಸೇರಿ ಗೌಜಿಲಿ ಸಮಕ್ಕೆ ಹೊಡವೊ° ಹೇಳಿ ಎನಗೂ ಆಶೆ ಇದ್ದತ್ತು. ಎನ್ನ ಗ್ರಾಚಾರಕ್ಕೆ ಮನೆದೇವರು ಹಂತಿಲಿ ಹತ್ತರೆಯೇ ಕೂರೆಕ್ಕೊ! ಆನು ಬೇಕು ಹೇಳಿದ್ದಕ್ಕೆಲ್ಲ ಬ್ರೇಕು ಹಾಕುವ ಅಭ್ಯಾಸ ಅದಕ್ಕೆ.

    ‘ತೂಕ ಹೆಚ್ಚಿಗಾಗಿ ಹೋಕು,
    ಸೀಕು ಹಿಡಿಗು ಬೀಪಿ-ಶುಗರು
    ಸಾಕು ಮಾಡಿ! ರಜವು ಕೂಡ ಬೋಧ ಬೇಡದಾ?’
    ‘ದಾಕುದಾರ ಆನೆ ಇದ್ದೆ
    ಶೋಕ ಬಿಟ್ಟು ತಿನ್ನಿ ಭಾವ..’
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ

    ಪುಣ್ಯಕ್ಕೆ ಈಸರ್ತಿ ಬಳುಸಲೆ ಡಾಕ್ಟ್ರುಭಾವನೇ ಬಂದಕಾರಣ ಇದರ ಹಿಕ್ಮತ್ತು ಏನೂ ಹಿಡುದ್ದಿಲ್ಲೆ!

    1. ಓಹ್, ಸುಭಗ ಭಾವನ ಪದ್ಯ ಭಾರೀ ರೈಸಿತ್ತು. ಅವರವರ ಭಾವಕ್ಕೆ ತಕ್ಕ ಹಾಂಗೆ ಹೇಳುತ್ಸು ಇದಕ್ಕೇ ಇದ. ಭಾವನ ಭಾವನೆಗೆ ಭಾವಪೂರ್ಣ ನಮನ.

  16. ರಂಗಸ್ಥಳಲ್ಲ್ಲಿ ಒಂದೊಂದೇ ಬಣ್ಣದ ವೇಷ ಬಂದಿಕ್ಕಿ ಕಡೇಂಗೆ ಬಟ್ಳು ಕಿರೀಟದ ವೇಷ ಬಂದಾಂಗಾತದಾ. ಮುಳಿಯ ಬಾವನ, ಪಾಕ ಹೇಳಿರೆ ಪಾಕ, ಸಕ್ಕರೆ, ತುಪ್ಪ ಎಲ್ಲವುದೆ ಸರಿಯಾಗಿಯೇ ಬಿದ್ದಿದು.

  17. ಪಾಕ ಲಾಯಿಕಾಯಿದಯ್ಯ
    ಹಾಕು ಎರಡು ಸೌಟು ಮೂರು
    ಲೋಕವನ್ನೆ ಮರದು ಸುರಿವೆ ಹಸರ ಪಾಚವಾ।
    ತೇಕ ಮುಳ್ಕವಾತು ಹೊಟ್ಟೆ
    ಬಾಕನಾ೦ಗೆ ಗಮ್ಸುವೆಡೆಲಿ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ||

  18. ಏ ಭಾವ.., ಇದಕ್ಕೇನಾರು ಮಾರ್ಕು ಸಿಕ್ಕುಗೋ

    ಬೇಕು ಬೇಡ ನೋಡುಲಿಲ್ಲೆ
    ಪಾಕ ಶಾಕ ಹೇಳುಲಿಲ್ಲೆ
    ಪೋಕ ಭಾವ° ಸೀದ ಬಂದು ಪಾಚ ಸೊರುಗಿದಾ° ।

    ಬೈಕು ಭಾವ° ಎದ್ದು ಹೋಗಿ
    ಲಾಯ್ಕ ಇದ್ದು ಬಾವ ಹೇಳಿ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ॥

    1. ಅದಾ.ಚೆನ್ನೈಭಾವನೂ ಸುರುಮಾಡಿದವು.ಬೈಕು ಭಾವನ ಹೆಲ್ಮೆಟು ಬಾಕಿ ಆತೊ ಬಳುಸುವ ಗೌಜಿಲಿ?
      ರೈಸಿತ್ತು ಪೂರಣ.

    2. ಶ್ಯೆಲಾ…. , ಈ ಪೊಕನ ಪೀಕಲಾಟ ಜೋರಿದ್ದನ್ನೆ. ಎತ್ತ ಹೋದ ಮಾಣಿ..?
      ಚೆನ್ನೈ ಭಾವನ ಪೂರಣ ಲಾಯಿಕಿದ್ದು.

  19. ಸಾಕು ಎನಗೆ ನಾಕು ಲಾಡು

    ಪಾಕ ಕಿಲ್ಲೆ ಎನ್ನ ಕೇಡು

    ಬೇಕು ಎನಗೆ ಖೆರಿಶಿ ಲಾಡು ಭಾವ ತತ್ತರೆ

    ಬೇಗ ಪಾಕ ಶಾಲ ಗೋಗಿ

    ತಿ೦ದ ಕೈಲಿ ತ೦ದ ಭಾವ

    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°

    ತಪ್ಪಿದ್ದರೆ ಹೇಳಿಕೊಡಿ

    1. ತಪ್ಪಿಲ್ಲೆ. ಪೂರಣ ಲಾಯಿಕಿದ್ದು.

    2. ಭಾವಯ್ಯನ ಮೇಲೆ ಇಪ್ಪ ಅಕ್ಕನ ಪ್ರೀತಿ ಕಂಡು ಭಾರೀ ಕೊಶಿ ಆತು. ಒಳ್ಳೆ ಮಧುರ ಕ್ಷಣಂಗಳ ನೆಂಪು ಮಾಡಿದ ಹಾಂಗಾತು.

      “ಪಾಕ ಶಾಲ ಗೋಗಿ ಬೇಗ
      ಹಾಕಿ ತುಂಬ ತಂದ ಭಾವ” ಹೇಳಿ ಪ್ರಾಸ ಹೊಂದುತ್ತ ಹಾಂಗೆ ಮಾಡ್ಳಕ್ಕು. ಭಾವ, ಎಂಜಲು ಕೈಲಿ ಬಡುಸಿದ ವಿಷಯ ಹೀಂಗೆ ಮಾಡಿರೆ ಬಾರ !

    3. ಆದಿಪ್ರಾಸದ ” ಕ’ ಎರಡು ಜಾಗೆಲಿ ಬರೆಕ್ಕಾತನ್ನೆ ಅಕ್ಕಾ..
      {ಬೇಗ} ಪಾಕ ಶಾಲ ಗೋಗಿ

      {ತಿ೦ದ} ಕೈಲಿ ತ೦ದ ಭಾವ

      1. ಕೆಲವು ದಿನ೦ದ ಬೈಲಿನ್ಗೆ ಬಪ್ಪಲೆ ಆಯಿದಿಲ್ಲೆ.

        ಸಾಕು ಎನಗೆ ನಾಕು ಲಾಡು

        ಪಾಕ ಕಿಲ್ಲೆ ಎನ್ನ ಕೇಡು

        ಬೇಕು ಎನಗೆ ಖೆರಿಶಿ ಲಾಡು ಭಾವ ತತ್ತರ

        ಪಾಕ ಶಾಲ ಗೋಗಿ ಬೇಗ

        ಸಾಕ ಕೂಸೆ ನಿನಗೆ? ಹೇಳಿ

        ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ°

        ಈಗ ಸರಿ ಆತು ಅಲ್ಲದಾ?

  20. ನೂಕು ನುಗ್ಗಲಿದ್ದು ಬಾವ

    ಏಕೆ ಬಫೆಲಿ ಬೇಡಿ ತಿಂತೆ

    ಬಾಕಿ ವಿಶಯ ಹೇಳಲಿದ್ದು ಹಂತಿ ಹಿಡಿಯುವಾ !

    ಪೋಕ ಬಾವ ಸ್ವೀಟು ತಂದ

    ಸಾಕು ಹೇಳುವಶ್ಟ್ರರಲ್ಲಿ

    ನಾಕು ಲಾದು ಬಳುಸಿ ಎನ್ನ ಮೊರೆ ನೋಡಿದ

    1. ಹ್ಹ. ಹ್ಹ.. ಹ್ಹಾ.. !
      ಎಡಿಯಪ್ಪ ಈ ಪೋಕನ ದಿಸೆಲಿ .

    2. ಬಾಲಣ್ಣನ ಪದ್ಯ ಬಂದಪ್ಪಗ ಬೈಲಿಂಗೆ ಒಂದು ಕಳೆಯೇ ಬೇರೆ. ಬೈಲಿಲ್ಲಿ ಸಮಸ್ಯಾಪೂರಣ ಸುರು ಆದ್ದು ನಿಂಗೊಗೆ ಗೊಂತಾಯಿದಿಲ್ಲೆಯೋ ಹೇಳಿ ಗ್ರೇಶಿಯೊಂಡಿಪ್ಪಗ ಬಂತದ ಪದ್ಯ. ಬಫೆ ಬೇಡ ನವಗೆ ಹೇಳ್ತ ಸಂದೇಶವನ್ನು ಕೊಟ್ಟು ಒಳ್ಳೆ ಪದಂಗಳ ಪ್ರಯೋಗಿಸಿ ಕವನವ “ಸುರು”ದ್ದದು ಲಾಯಕಾಯಿದು.

    3. ಬಾಲಣ್ಣನ ಪೂರಣ ಹೋಳಿಗೆಯ ಹೂರಣದ ಹಾ೦ಗೆ!

  21. ಜಯಕ್ಕನ ಬದ್ದದ ದಿನದ ನೆಂಪು ಮಧುರವಾಗಿದ್ದು. ಹಾಂಗೆ ನಿಂಗಳ ಪೂರಣವೂ.
    ಕೆಲವು ದಿಕ್ಕೆ “ಲಗಂ’ ಇಪ್ಪದರ ತಿದ್ದಿರೆ ಚೆಂದಕ್ಕೆ ರಾಗಲ್ಲಿ ಹಾಡುಲಕ್ಕು.
    ( ಒಂದನೇ ಪಾದ – ನದಾ, ಮೂರನೆ ಪಾದ – ಸಿಯೊಂ , ಐದನೇ ಪಾದ – ದೆಯೇ.)

    1. ಓಹೋ…ಅಪ್ಪನ್ನೇ!!! ಮಧುರವಾದ ನೆನಪಿನ ಮೆಲುಕು ಹಾಕುವಗ ಈ ವ್ಯಾಕರಣದ ನೆನಪೇ ಬಯಿಂದಿಲ್ಲೇ ಮಾವ… ಸರಿ ಮಾಡುತ್ತೆ…

      1. ಬದ್ದದ ದಿನದ ನೆನಪು…

        ಲೋಕವೆಲ್ಲ ಖುಷಿಲಿ ಇರಲು
        ಮೂಕಳಾಗಿ ಅವನ ನೋಡಿ
        ಬಾಕಿಯಾದೆ ನಾಚಿ ತಲೆಯ ಬಾಗಿಸುತಲಿಯೆ |
        ಹಾಕು ಹಾಕು ಹೇಳಿದವದ
        ಸಾಕೊ ಬೇಕೊ ವಿಚಾರುಸದೆ
        ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ||

  22. ಬೊಳುಂಬು ಮಾವ,ಮಹೇಶಣ್ಣ, ಕುಮಾರ ಮಾವ ನ ಪೂರಣ೦ಗಳ ಓದಿ ಖುಷಿ ಆತು…

    ಬದ್ದದ ದಿನದ ನೆನಪು…

    ಪ್ರಾಕಿನಾದಿನದಾ ನೆನಪು
    ಮೂಕಳಾಗಿ ಅವನ ನೋಡಿ
    ಬಾಕಿಯಾದೆ ನಾಚಿ ತಲೆಯ ತಗ್ಗುಸಿಯೊಂಡೆ|
    ಹಾಕು ಹಾಕು ಹೇಳಿದವದ
    ಸಾಕೊ ಬೇಕೊ ಕೇಳದೆಯೇ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ||

    1. ಜಯಶ್ರೀಗೆ ಬದ್ದದ ದಿನ ಪ್ರವೀಣ ಲಾಡು ಬಡುಸಿದ್ದದು ನೈಜವಾಗಿ ಬಯಿಂದು.
      ಕಲ್ಪನೆ ಹೇಳಿ ಹೇಳ್ಲೇ ಎಡಿಯ. ಒಂದೆರಡು ಕಡೆ ರಜಾ ಓದಲೆ ಕಷ್ಟ ಆವ್ತು ಬಿಟ್ರೆ, ತುಂಬಾ ಲಾಯಕಾತು. ಈಗ ತಿದ್ದಿ ಬರದ್ದದು ಸರಿಯಾತು.

  23. ಯೇ ಬೊಳುಂಬು ಮಾವ,
    ನಿಂಗೊ ಎರಡ್ನೆ ಹಂತಿಲಿ ಕೂದು ಉಂಡದು ಗೊಂತಾಯಿದು. ಮನೆಕೆಲಸದ ಆಳಿಂಗೆ ಆರು ಬಳುಸುದು..?
    ನೀಕ ತೆಗವ ಸುಂದರಂಗೆ
    ಕೂಕಿಳಾಕಿ ಕೂರ್ಸಿ ಎಲೆಲಿ
    ತೋಕಿಗೊಂಡು ಅಶನ ಸಾರು ತುಂಬ ಉಣುಸಿದ
    ಸಾಕು ಸಾಕು ಹೇಳಿದಾಂಗೆ
    ಪೋಕ ಹೋಗಿ ಒಳದಿಕಂದ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದ ॥

    ( ಪೋಕ = ಲೂಟಿ ಮಾಣಿ, ನಮ್ಮ ನೆಗೆಮಾಣಿಯ ಹಾಂಗೆ)

    1. ನಿಜ ಮಾವಾ, ಕೆಲಸದ ಸುಂದರನ ಉಂಬಲೆ ದಿನಿಗೇಳಲೆ ಬಿಟ್ಟೇ ಹೋಗಿತ್ತು.
      ನೆಂಪಾದ್ದು ಒಳ್ಳೆದಾತು. ಸುಂದರನ ಸೇರುಸಿದ ಸುಂದರ ಕವನ ಚೆಂದ ಆತು.

  24. ಹೀಂಗುದೆ ಆವ್ತಿಲ್ಲೆಯೋ ?

    ಎಕ್ಕಸಕ್ಕ ತಿಂಬಲಾಗ
    ಏಕೆ ಹೇಳಿ ತಿಳಿವು ಇದ್ದು,
    `ಬೇಕು ಬೇಕು’ ಮನಸು ಹೇಳ್ತು, ಎದುರು ನಾಚಿಕೆ ।

    `ಸಾಕು ಬೇಡ’ ಮಾಡ್ತು ನೋಡಿ
    ಬಾಕಿ ಬಿಡೆಡ ಹೇಳಿ ಭಾವ°
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ॥

    1. ಮಹೇಶಣ್ಣನ ಪೂರಣವೂ ಪಷ್ಟಾಯಿದು. ಶುರುವಾಣ ಪಾದಲ್ಲಿ ಪ್ರಾಸ ದೋಷ ರಜ್ಜ ಸರಿ ಮಾಡಿರೆ ತುಪ್ಪ ಜೇನ ಸೇರ್ಸಿ ನಾಕು ಲಾಡು ತೀಂದ ಹಾಂಗಕ್ಕು.
      “ಎಕ್ಕಸಕ್ಕ” ದ ಬದಲು “ಮೂಕು ಮುಟ್ಟ” ( ಮೂಗಿನ ವರೆಗೆ ಹೇಳ್ತ ಅರ್ಥಲ್ಲಿ) ಹೇಳಿಯೂ ಸರಿ ಮಾಡ್ಲಕ್ಕು.

    2. ಮನಸ್ಸಿನ ದ್ವಂದ್ವವ ಚೆಂದಕೆ ವರ್ಣಿಸಿದ್ದೆ ಮಹೇಶಾ. ಕುಮಾರ ಮಾವ ಹೇಳಿದ ಹಾಂಗೆ ಮಾಡಿ ಅಪ್ಪಗ ಲಾಯಕಾತು.

  25. ಕೇಕೆ ಹಾಕಿ ಜೋಕು ಮಾಡಿ
    ಕಾಕೆ ಹಾಂಗೆ ಎಡೆಲಿ ಬಂದು
    ಬೇಕೊ ಭಾವ ಹೇಳಿ ಎಲಗೆ ಪಾಚ ಸೊರುಗಿದಾ° |
    ಸಾಕು ಸಾಕು ಹೇಳಿ ದರುದೆ
    ನೋಕ ಹಾಕಿ ಕೈಯ ದೂಡಿ
    ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ° ||

    1. ಬೊಳುಂಬು ಮಾವ ಶುರುವಾಣ ಚೆಂಡಿಂಗೆ ಸಿಕ್ಸರ್ ಬಾರ್ಸಿದವು. ನಾಕು ಲಾಡು ಹೇಂಗೂ ಎಲೆಲಿ ಇದ್ದನ್ನೆ, ಅದರ ಮೇಗೆ ಎರಡು ಚಮಚೆ ತುಪ್ಪ ಬಳುಸುತ್ತೆ ಆ ಲೆಕ್ಕಲ್ಲಿ, ಆಗದೋ..?

    2. ಊಟ ಗಮ್ಮತ್ತಾತು ಬೊಳು೦ಬು ಮಾವ.ರಸಭರಿತ ಪೂರಣ.

  26. ಹಾ° ಹಾ°… ಲಾಯಕ ಆಯ್ದಿದು ಕೊಟ್ಟ ವಿಷಯ. ನೋಡೆಕು., ನೋಡೆಕದು ಆರು ಆರಿಂಗೆ ಲಾಡು ಬಳುಸಿ ಗೌಜಿ ಮಾಡಿದ್ದೇದು!!.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×