Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರದ ಸಮಸ್ಯೆ ಪ್ರಪ೦ಚದ ಎಲ್ಲಾ ಹೊಡೆಲಿ ನೆಡೆತ್ತಾ ಇಪ್ಪ ಸಮಸ್ಯೆ.
” ನೆತ್ತರಿನೋಕುಳಿ ಹರುದತ್ತು”
ಶರಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ನಮ್ಮ ಬೈಲಿಲಿ ಖ೦ಡಿತಾ ಸಿಕ್ಕುಗು,ಅಲ್ಲದೋ?
ಕತ್ತಿಲಿ ಮನುಜರ
ಕೊತ್ತುಲೆ ಹೆರಟರೆ
ನೆತ್ತರಿನೋಕುಳಿ ಹರುದತ್ತು
ಹತ್ತರೆ ಬಂದರೆ
ಕುತ್ತುವ ಬುದ್ಧಿಗೆ
ಕತ್ತರಿ ಖಂಡಿತ ಹಾಕೆಕ್ಕು
(ಕೊತ್ತುಲೆ=ಕೊಚ್ಚುಲೆ)
ತಾನು ಒಳ್ಳೆದರ ಮಾಡಿ ತೋರುಸಿ ಬೇರೆಯವರಿಂಗೆ ಭೋಧಿಸಿದ ಮಹಾತ್ಮ -ಗಾಂಧಿಗೆ
ಮುತ್ತಿದ ಭಾವವ
ಬಿತ್ತೊಗ ಬಾನಿಲಿ
ನೆತ್ತರಿನೋಕುಳಿ ಹರುದತ್ತು
ಗೀತೆಯ ತತ್ವಲಿ
ಎತ್ತರಕೇರಿದ
ಸಂತ೦ಗಿದುವೇ ನುಡಿನಮನ
ಬಿತ್ತೊಗ =ಬರವಗ
===========
ಚಿತ್ತದ ಮತ್ತಿಲಿ
ಒತ್ತಿರೆ ವೋಟಿನ
ಒತ್ತರೆಯಕ್ಕದ ಎಲ್ಲೋರು
ಬತ್ತಿದ ಬುದ್ದಿಲಿ
ಕತ್ತಿಯ ಕೊಟ್ಟೂ
ನೆತ್ತರಿನೋಕುಳಿ ಹರುದತ್ತು
”ಕಣ್ಣಿಂಗೆ ಕಣ್ಣು ತೆಗದರೆ ಲೋಕವೇ ಕುರುಡಕ್ಕು”– ಗಾಂಧಿಯ ಸಂದೇಶದೊಟ್ಟಿಂಗೆ
ಗಾಂಧೀಜಿಯ ಸಂದೇಶದೊಟ್ಟಿಂಗೆ ನುಡಿ ನಮನ ಸಲ್ಲುಸಿದ್ದದು ಲಾಯ್ಕಾಯಿದು ಅಕ್ಕ.
ಧನ್ಯವಾದ ನರಸಿ೦ಹಣ್ಣ.
ಕೊತ್ತಳಿಗೆಯ ತಲೆ
ಕತ್ತರುಸುಲೆ ಹೆರ
ಟತ್ತೆಯ ಕೈ ರಜ ತಪ್ಪಿತ್ತು।
ಹತ್ತಿ ಮುಲಾಮಿನ
ಒತ್ತಿ ಮಡುಗಿದರು
ನೆತ್ತರಿನೋಕುಳಿ ಹರುದತ್ತು।।
ಕತ್ತಲೆ ಖ೦ಡವ
ಮುತ್ತಿದಧರ್ಮದ
ಮತ್ತಿನ ಬೆಡಿ ಹೊಗೆ ಕಾರಿತ್ತು।
ಗುತ್ತಿಗೆ ಬದುಕಿನ
ಸುತ್ತು ಮುಗುದ್ದದೊ?
ನೆತ್ತರಿನೋಕುಳಿ ಹರುದತ್ತು।।
ಅಣ್ಣನ ಹೊಸ ಕಲ್ಪನೆ ಲಾಯಿಕಾಯಿದು.
ಆಹಾ! ,ಬೈಲಿನ ಕೃಷಿಯ ಬಗ್ಗೆ ಪ್ರತಿಕ್ರಿಯಿಸಿದ ಕ್ರಮವೇ! ಸೂರ್ಯಂಗೆ ಸೂರ್ಯನೇ ಸಾಟಿ!
ಉದ್ಯಮದೆಡೆಲಿಯೆ
ಸದ್ಯವೆ ಬ೦ದರೆ
ಗದ್ಯದ ಶುದ್ದಿಗೊ ತು೦ಬಿತ್ತು।
ಹೃದ್ಯವೆ ಬೈಲಿಲಿ
ಮದ್ಯದ ನಶೆಯಾ
ಪದ್ಯಗಳೋಕುಳಿ ಹರುದತ್ತು॥
ಪತ್ತೆ ಕೊಡದ್ದೆ ಜ-
ಗತ್ತಿನ ಕೆಲವೆಡೆ
ಮುತ್ತಿದವುಗ್ರರು ಬೆಡಿ ಹಿಡುದು
ಸುತ್ತುದೆ ಹೊಡೆ,ಬಡಿ
ಸತ್ತವು ಮುಗ್ಧರು
ನೆತ್ತರಿನೋಕುಳಿ ಹರುದತ್ತು
ಪದಜೋಡಣೆ ಲಾಯ್ಕ ಆಯಿದು ಮಾವ.
೧.
ಎತ್ತರ ಹಿಮಗಿರಿ
ಹತ್ತಿದೆ ಬಂದವೊ
ಮುತ್ತುಲೆ ಭಾರತ ಪಾಕ್ ಗಡಿಯ
ಹೊತ್ತಬ್ಬೆ ಘನತೆ
ಗೊತ್ತೆಲಿ ಪ್ರಾಣಕೆ
ನೆತ್ತರಿನೋಕುಳಿ ಹರುದತ್ತು ॥
೨.
ಬಿತ್ತಿರೆ ಜಗಳವ
ಮೆತ್ತಿದ ಸೇಡಿಲಿ
ಹತ್ತುಗು ನೆತ್ತಿಗೆ ಪಿಸುರೇರಿ
ಮತ್ತಿನ ಮರ್ಕಟ
ಕುತ್ತಿರೆ ಕತ್ತಿಲಿ
ನೆತ್ತರಿನೋಕುಳಿ ಹರುದತ್ತು ॥
ಲಾಯ್ಕ ಆಯಿದು ಶೈಲಜಕ್ಕ.
ಸುತ್ತಲು ಬಾನಿಲಿ
ಕತ್ತಲು ಮುತ್ತುವ
ಹೊತ್ತಿಲಿ ನೇಸರ ಕಂತಿದನೊ ।
ಹೊತ್ತುವ ಸೂರ್ಯನ
ನೆತ್ತಿಯು ಕಾಣುಗು
ನೆತ್ತರಿನೋಕುಳಿಯೆರದಂತೆ ।।
ಕಿತ್ತಳೆ ನಾಡಿನ
ಹುತ್ತರಿ ಹಬ್ಬಲಿ
ಮತ್ತುದೆ ಸೇರಿರೆ ಕಡುಗಲಿಗೆ ।
ಬತ್ತದ ಹುರುಪಿಲಿ
ಯೆತ್ತಿರೆ ಹಂದಿಯ
ನೆತ್ತರಿನೋಕುಳಿ ಹರುದತ್ತು ।।
ಒಳ್ಳೆ ಕಲ್ಪನೆ ಅತ್ತೆ..
ಪುತ್ತೂರಿನ ಪು
ಟ್ತತ್ತಿಗೆ ಬಂತೂ
ಕೆತ್ತುಲೆ ಬೊಂಡವ ಹೆರಟತ್ತು ।
ಗತ್ತಿಲಿ ಮಾಡೊಗ
ಕತ್ತಿಯು ತಾಗಿತು
ನೆತ್ತರಿನೋಕುಳಿ ಹರುದತ್ತು ॥
ಪುಟ್ಟಕ್ಕ ಅಲ್ಲ, ಇದು ಪುಟ್ಟತ್ತಿಗೆ ಆತಾ.
ಅತ್ತೇ ಸುರುವಾಣ ಗೆರೆ ಆದಿಪ್ರಾಸ ಬಿಟ್ಟರೆ ಬಾಕಿ ಒಳುದ ಅತ್ತಿಗೆದು ಕಾರ್ಬಾರೇ…
ಕುತ್ತಿದ ಬೆಡಿಲಿಯೆ
ಉತ್ತರ ಕೊಟ್ಟರೆ
ನೆತ್ತರಿನೋಕುಳಿ ಹರುದತ್ತು
ಪಿತ್ತವು ನೆತ್ತಿಗೆ
ಹತ್ತಿದ ಹೊತ್ತಿಗೆ
ಚಿತ್ತದ ಪಾಠವೆ ಮರದತ್ತು
ಭಾರೀ ಲಾಯ್ಕಾಯಿದು ಗೋಪಾಲಣ್ಣ.ನಿಜಕ್ಕೂ ಆ ದ್ರೋಹಿಗಳ ಹೋಲುಸಿದರೆ ಕತ್ತೆಗೆ ಅವಮರ್ಯಾದೆಯೇ ..
ಕತ್ತೆ ಹೇಳಿರೆ ಇಲ್ಲಿ ಬರೇ ಬೈಗಳು;ಕತ್ತೆಯ ಸಹನೆ ಮತ್ತೆ ಶ್ರಮಜೀವನ ಆ ಪ್ರಾಣಿಗೊಕ್ಕೆ ಇಲ್ಲೆ;ಅವು ನಿಜವಾಗಿ ಕತ್ತೆಗೂ ಕಡೆ.
ಉತ್ತರ ಭಾರತ
ದೆತ್ತರ ಬೆಟ್ಟದ
ಹತ್ತರೆ ಸೇನಾಠಾಣ್ಯಲ್ಲಿ
ಒತ್ತಿನ ದೇಶದ
ಕತ್ತೆಗೊ ಮುತ್ತಲು
ನೆತ್ತರಿನೋಕುಳಿ ಹರಿದತ್ತು
ಲಾಯ್ಕಾಯಿದು ಗೋಪಾಲಣ್ಣಾ ಶರಪ್ರಯೋಗ.
{ಒತ್ತಿನ ದೇಶದ} – ಪದ ಪುಂಜ ಕೊಶಿ ಆತು.
ಅಪ್ಪು ಎನಗುದೆ…. ಗೋಪಾಲಣ್ಣ ಪಷ್ಟಾಯಿದು…..
ಒತ್ತಿನ ದೇಶ-ನೆರೆ ರಾಷ್ಟ್ರ.ಅದು ಈಗ ಮಗ್ಗುಲ ಮುಳ್ಳು ಹೇಳುತ್ತ ಹಾಂಗೆ ಆಯಿದಲ್ಲದೊ? ಅದಕ್ಕೆ ಈ ಶಬ್ದವೇ ಸರಿ ಹೇಳಿ ಗ್ರೇಶುತ್ತೆ.