Oppanna.com

ಸಮಸ್ಯೆ : 42 ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   10/08/2013    27 ಒಪ್ಪಂಗೊ

ಒ೦ದು ಅಪರೂಪದ ಚಿತ್ರ ಸಿಕ್ಕಿತ್ತು ಪವನಜಮಾವನ ಸ೦ಚಿ೦ದ. ಇದನ್ನೇ ವಸ್ತುವಾಗಿ ಮಡಿಕ್ಕೊ೦ಡು ಒ೦ದು ಕವನ ಬರವನೋ?

ಬೀಜ ಕುಟ್ಟಾಟ
ಬೀಜ ಕುಟ್ಟಾಟ

27 thoughts on “ಸಮಸ್ಯೆ : 42 ಚಿತ್ರಕ್ಕೆ ಪದ್ಯ

  1. ಈ ಮಕ್ಕೊಗೆ ಬೇರೆ ಕೆಲಸ ಇಲ್ಲೆ
    ಇವರತ್ತರೆ ಕ೦ಪ್ಯೂಟರು ಟಿವಿ ಇಲ್ಲೆ
    ಅಲ್ಲಲ್ಲ…ಹೋದ ಕರೆ೦ಟೇ ಬಯಿ೦ದಿಲ್ಲೆ
    ಇದ್ದರೆ ಹೀ೦ಗೆ ನೆಲಲ್ಲಿ ಕೂರ್ತಿತ್ತವಿಲ್ಲೆ
    ಬವುಶ್ಶ ಮನೇಲಿ ಅಮ್ಮ ಇಲ್ಲೆ
    ಇದ್ದರೆ ಈ ಡ್ರೆಸ್ಸಿ೦ಗೆ ಕುರೆ ಮಾಡ್ಲೆ ಬಿಡ್ತಿತ್ತವಿಲ್ಲೆ
    ಹೆಚ್ಚಿನ೦ಶ ಅಪ್ಪನೂ ಒಳ ಇಲ್ಲೆ
    ಇದ್ದರೆ ಹೋ೦ ವರ್ಕ್ ಮಾಡದ್ದೆ
    ಹೀ೦ಗೆ ಆಡ್ಲೆ ಬಿಡ್ತಿತ್ತಾ°ಯಿಲ್ಲೆ
    ಹರೇ ರಾಮ…… ಕುಶಾಲಿ೦ಗೆ

  2. ಪವನಜನ ಚೆಂದದ ಫಟಕ್ಕೆ ಮೂಡಿಬಂದ ಕವನಂಗೊ ಒಂದರಿಂದೊಂದು ರೈಸಿದ್ದು.

  3. ಚೆನ್ನೆಮಣೆ ಕಲ್ಲಾಟ
    ಮೊನ್ನೆ ನಾವಾಡಿದ್ದು
    ನಿನ್ನೆ ಹೋಯ್ದೆಯ ಬೀಜ ಹೆಕ್ಕುಲೆಂಗ
    ಬಣ್ಣದಂಗಿಯ ಹಾಕಿ
    ಸಣ್ಣ ಕೋಣೆಲಿ ಸೇರಿ
    ಚಿಣ್ಣರೆಂಗಾಡುದರ ನೋಡಿನಿಂಗ

    1. ಪದ್ಯ ಲಾಯಕ ಆಯಿದು ಅದಿತಿ ಅಕ್ಕಾ(ಚೆನ್ನೆ ಮಣೆ, ಕಲ್ಲಾಟ, ಮುಟ್ಟಾಟ,ಒತ್ತೆ- ತಲೆಮ,ಬೆರ್ಚೆಂಡು,ಕಳ್ ಳ-
      ಪೋಲೀಸು,ಹುಗ್ಗಾಟ, ಕಂಬಾಟ ಹೀಂಗಿರ್ಸು ತುಂಬಾ ಇದ್ದತ್ತು.ಎಲ್ಲಿ ಹೋತೋ!)

    2. ಸಣ್ನ ಕೋಣೆಲಿ ಸೇರಿ ಆಡಿದ್ದು ಗಮ್ಮತ್ತಾಯಿದು.

  4. ಆಹಾ….! ಮತ್ತಲ್ಲ , ಹೊಸಾ ಬೆಳೀ ಚೂಡಿದಾರ ಹಾಕ್ಯೋಂಡು ಜಾಲಿಲಿ ಆಟ ಆಡಲೆ ಹೋದರೆ ಅಬ್ಬೆ ಖಂಡಿತಾ ಬೈಗು,ಆದ ಕಾರಣ ಮನೆ ಜೆಗುಲಿಲಿ ಕೂದಂಡು ಆಟ ಆಡುದೇ ಸರಿ …. ಮುಳಿಯದಣ್ಣಾ.. ಚೆಂದ ಆಯಿದು.

  5. ಅಣ್ಣ ಪುಳ್ಳರ ಸೇರ್ಸಿ ಬೀಜದ
    ಹಣ್ಣು ಪೀ೦ಟುಸಿ ಕೊತ್ತಳಿ೦ಕೆಲಿ
    ಸಣ್ಣ ತೋಡಿನ ಕರೆಲಿ ಚೆ೦ಡಿನ ಬೀಸಿ ಜೆಪ್ಪುವಗಾ।
    ಬಣ್ಣಬಣ್ಣದ ವಸ್ತ್ರದ೦ಗಿಯ
    ಮಣ್ಣು ಮಾಡಿರೆ ಮೋಸ ಹೇಳುತ
    ಹೆಣ್ಣು ಮಕ್ಕಳ ಕೂಟ ಜೆಗುಲಿಲಿಯೊಟ್ಟು ಸೇರಿತ್ತು।।
    ಕ೦ಬದಾಟವನಾಡುಲೀ ಹೊಡೆ
    ಶ೦ಭು ಮಾವನು ಬಿಡವು ‘ಹೋಗಿ ಪೆ
    ದ೦ಬುಗಳೆ ಜಾಲಿ೦ಗೆ’ ಹೇಳುಗು ಬೇಡ ವೈವಾಟು।
    ಬೊ೦ಬೆಗಳ ಹಾ೦ಗಿಲ್ಲಿ ಕೂದರೆ
    ನ೦ಬುಗೋ ದೊಡ್ಡಮ್ಮ ಕೂಡಲೆ
    ತ೦ಬುಳಿಗೆ ಕೊಡಿ ಕೊಯ್ದು ತನ್ನಿರೊ° ಹೇಳುಗನ್ನೆಪ್ಪಾ।।
    ಹೊತ್ತು ಹೋದರೆ ಹೋತು ತಿರುಗುತ
    ಮತ್ತೆ ಬಾರನ್ನೆಪ್ಪ ಬೇಗನೆ
    ಹತ್ತು ಬೀಜವ ಹೆರ್ಕಿ ತ೦ದವು ತೊಳಶಿಕಟ್ಟೆ೦ದಾ।
    ಒತ್ತರೆಯ ಮಾಡಿಪ್ಪ ಜೆಗುಲಿಲಿ
    ಸುತ್ತ ಕೂದವು ನೆಡುಕೆ ಕಳ ಕ
    ಟ್ಟಿತ್ತು ಕುಟ್ಟಿದವೆಲ್ಲ ಹೊಸಬಗೆಲಾಟ ರೈಸಿತ್ತು ।।

  6. ಆಹಾ.. ಪವನಜ ಮಾವ ತೆಗದ ಫೋಟೊದೇ, ಈ ಚಿತ್ರಕ್ಕೆ ಎಲ್ಲೋರು ಬರದ ಪದ್ಯಂಗಳುದೇ ಭಾರೀ ಲಾಯಿಕಾಯಿದು. …ಗಮ್ಮತ್ತಾವ್ತು ಪದ್ಯಂಗಳ ಓದುಲೆ…

  7. ತಂಪಾದ ಕೆಂಪು ಸಾರಣೆ ನೆಲಕ್ಕ, ತಂಪು ಹೊತ್ತು ..ನೆಂಪಿಲಿ ಒಳಿವಲೆ ಪವನಜ ಮಾವ ತೆಗದ ಪಟ ..ಆಹಾ ಪದ್ಯದ ಚೆಂದವೇ!
    ಇಂದಿರಕ್ಕಾ…ಲಾಯಕ್ಕಾಯಿದು.

  8. ಗುಂಪುಗೂಡುಗು ಮನೆಯ ಕೂಸುಗೊ
    ತಂಪು ಹೊತ್ತಿಲಿ ಬಂದು ಕೂರುಗು
    ಕೆಂಪು ಸಾರಣೆ ನೆಲದ ಮೇಗೆಯೆ ಬೀಜದಾಟಕ್ಕೇ ।
    ನೊಂಪು ಜಾಗೆಲಿ ಬೀಜ ರಟ್ಟಿರೆ
    ಚಂಪಿ ಮೋರೆಲಿ ನೆಗೆಯು ಪೀಂಕುಗು
    ನೆಂಪಿಲುಳಿವಲೆ ಪಟವ ತೆಗೆಗಡ ಮಾವ ಕೆಮರಲ್ಲೀ ॥

    1. ಅತ್ತೆ, ನೆಗೆ ಪೀ೦ಕಿದ್ದು ಗಮ್ಮತ್ತಾತು.ಲಾಯ್ಕ ಆಯಿದು.

  9. ಒಂದಾಟ ಆಡುವನೊ
    ಬಾ ಪಮ್ಮಿ,ಕೂಚಕ್ಕ
    ಬೀಜದೊಡ್ಡಿ ತೈಂದೆ ಚಾವುಡಿಲಿ ಕೂಪೊ೦/
    ಇದ ಎನ್ನ ಮೊದಲಾಟ
    ಕೞಾಟ ಇಲ್ಲೆಡಿಯ
    ನೆಂಪಿರಲಿ ಬಪ್ಪಲಾಗಾರಿಂಗು ಕೋಪ /೧/
    ಬೀಜ ಹಾರುಸಿ ಚೊಟ್ಟಿ
    ಗೇಣು ಹಾಕೊಗ ಬೆರಳು
    ತಾಗಿದರೆ ಹೋತು ,ಒಂದೂಪು ಊಪಲಕ್ಕು /
    ಅಜ್ಜಿ ದೆನಿಗೋಳುವಗ
    ಆಟ ಮುಗಿಯೆಕು ನವಗೆ
    ನಾವೊಟ್ಟು ಕೂದಂಡು ಉಂಬಲಕ್ಕು /೨/ /

  10. ಜಾಜಿ ಹೂಗಿನ ಸೂಡಿ
    ಬಾಜಿ ಕಟ್ಟಿಯಾಡುಗು
    ಬೀಜದಾಟವ ಮಕ್ಕೊ ಚೆಂದಂದಲೇ
    ಅಜ್ಜಿ ಬೊಕ್ಕು ಬಾಯಿಲಿ
    ಸೋಜಿಗಂದ ನೋಡುಗು
    ಬಾಜರಲ್ಲಿ ಕೂದೂ ದೂರಂದಲೇ
    ———–
    ಆಟೋಟ ಆಯೆಕ್ಕು ಪಠ್ಯದಾ ಅಂಗ
    ಬಾಜನೆಯ ಜೆತೆಲಿರಳಿ ಭಜನೆ,ಸತ್ಸಂಗ
    ಆಟಕ್ಕೆ ಎರಡೊಡ್ಡಿ ಬೀಜವೇ ಸಾಕು
    ಕೂಸುಗಳ ನೆಗೆ,ಬೊಬ್ಬೆ ಧಾರಾಳ ಬೇಕು
    (ಬಾಜನೆ=ಓದುವಿಕೆ)

    1. ಮಾವಾ,
      ಎರಡ್ನೆದು ಭಾರೀ ಲಾಯ್ಕ ಆಯಿದು.ಸುರುವಾಣದ್ದು ಷಟ್ಪದಿಯ ಮಾತ್ರಾಬ೦ಧ೦ದ ಅಲ್ಲಲ್ಲಿ ಹೆರ ರಟ್ಟಿದ್ದು.
      ಒಟ್ಟಾರೆ ಆಟ ರೈಸಿದ್ದು.

    2. ಮಾವ, ಲಾಯ್ಕದ ಕವನಂಗೊ- ಅಭಿನಂದನೆಗೊ.

  11. ಅಡ್ಡಿಲ್ಲೆ ಬಾಲ್ಯಲ್ಲಿ
    ಒಡ್ಯೊಡ್ಡಿ ಬೀಜಲ್ಲಿ
    ಈಡೇರುಗಾಶಗನುಕರಣೆಯಿಲ್ಲೆ
    ಕಡ್ಯಾಟವೆಡಿಗಿಲ್ಲಿ
    ಮಡ್ಲೊಂದು ಮುಷ್ಟಿಲೇ
    ಹಿಡ್ಕೊ೦ಡರಾಡ್ಲಕ್ಕೊಳಾ೦ಗಣಲ್ಲೇ
    ೧ ಒಡ್ಡಿ=೪ ಬೀಜ,
    ಒಡ್ಯೊಡ್ಡಿ =ಒ೦ದು ಒಡ್ಡಿಗಿ೦ತ ಹೆಚ್ಹು ಬೀಜ೦ಗೊ

      1. ಹೇಳದ್ಹಾಂಗೆ ಆಂಡ್ರೋಯಿಡ್ ಫೋನಿಲಿ ಹಾಂಗಿಪ್ಪ ಒಂದು ಆಟ ಇದ್ದು. ಎರಡು ವರ್ಷಗಳ ಹಿಂದೆ ಆಡಿತ್ತಿದ್ದೆ. ಈಗ ನೆಂಪಾಗುತ್ತಿಲ್ಲೆ

      2. ಬೈಲಿನವರ ಸೇರ್ಸಿ ಒ೦ದು ದಿನ ಗ್ರಾಮೀಣ ಒಳಾ೦ಗಣ ಮತ್ತೆ ಹೊರಾ೦ಗಣ ಕ್ರೀಡೆಗಳ ನಡೆಶಿದರಾತು.ಪವನಜ ಮಾವ೦ಗೆ ಬೇಕಾದಷ್ಟು ಫೋಟೋ ಸೆರೆ ಹಿಡಿವಲಕ್ಕು ಃ-)

        1. ಬೈಲಿನೋರೆಲ್ಲ ಸಪ್ಟಂಬರ್ ೧೪ಕ್ಕೆ ಪುತ್ತೂರು ಮಾಣಿಮಠಲ್ಲಿ ಸೇರಲಿದ್ದನ್ನೆ, ಆವಾಗ ಮಾಡುಲಕ್ಕು.

    1. ಓದುವಗ ಸಂತೋಷವ ತಂದೊಡ್ಡಿದ್ದು ಖಂಡಿತ.

  12. ಹಸಿರುಸಿರಿನ ಕುಡಿ
    ಬಸರಿನ ಬೀಜವ
    ಪಸರಿಸೆ ಕೊಶಿಮುಖ ಕೂಸುಗೊಕೇ
    ತುಸು ದೂಡಿರೆ ಮೃದು
    ಹಸಿ ಬೆರಳಿಲಿ ಗುರಿ
    ನಸುನೇರಲಿ ಸೇರುಗು ಗಳಿಗೇ ॥

    1. ಶೈಲಜಕ್ಕ ಲಾಯ್ಕಾಯಿದು-ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×