Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ”ಅನುಷ್ಟುಪ್’‘ ಹೇಳುವ ಛ೦ದಸ್ಸಿನ ಪ್ರಯತ್ನ ಮಾಡುವ°.
ಸುಮಾರು ದಿನ ಹಿ೦ದೆ ಒಪ್ಪಣ್ಣ ಬೈಲಿ೦ಗೆ ಈ ಛ೦ದಸ್ಸಿನ ಪರಿಚಯ ಮಾಡಿದ್ದದು ನೆ೦ಪಿದ್ದೊ ? ಇದಾ ಆ ಶುದ್ದಿ ಇಲ್ಲಿದ್ದು
ನೆಗೆಚಿತ್ರದ ಗೀಟಿ೦ಗೆ
ಹಗೆಯಿಪ್ಪವ° ಸಿಕ್ಕರೇ
ಬಿಗು ಮೋರೆಲಿದೇ ರಜ್ಜ
ನೆಗೆ ಬಪ್ಪದು ಖ೦ಡಿತಾ ||
ಜೊಗುಳಿಂದಲಿಡೀ ಬಾಯಿ
ಹಗಲಾ ಬಾಬೆ ಕೀಟ್ಳೆಲೀ
ಬಗೆ ಸ್ವರ ಹೆರಡ್ಸೂದೆ
ನೆಗೆ ಬಪ್ಪದು ಖಂಡಿತಾ ||
ಆಹಾ!ಬೈಲಿಲಿ ಈ ಸರ್ತಿ ಕೊಟ್ಟ ಸಮಸ್ಯೆ ಓದಿಯೇ|
ಪರಿಹಾರ೦ಗೊ ಬಾರದ್ರೂ ನೆಗೆ ಬಪ್ಪದು ಖಂಡಿತಾ ||
ಪರಿಹಾರ ಬಾರದ್ರೆ, ನಿಂಗೊ ಬರೆರಿ ಭಾಗ್ಯಕ್ಕ.
ಇದಕ್ಕೆ ಆದಿ ಪ್ರಾಸದ ನಿಯಮ ಖಡ್ಡಾಯ ಇದ್ದೋ ?
ನಿಂಗೊ ಸಂಸ್ಕೃತಲ್ಲಿ ಬರತ್ತರೆ ಆದಿಪ್ರಾಸ ನಿಯಮ ಇಲ್ಲೆ
ಬಗೆ ಚಿತ್ರ ವಿಕಾರಂದ
ಸೊಗಸಿಲ್ಲೇಳ್ವ ಸೀರಿಯಲ್
ಜಗಳಂಗ ದಿನಾ ನೋಡಿ
ನೆಗೆ ಬಪ್ಪದು ಖಂಡಿತಾ ||
ಸೊಗಸಿಲ್ಲೇಳ್ವ -> ಇಲ್ಲಿ ಮಾಡಿದ ಸಂಧಿ ವ್ಯಾಕರಣ ಶುದ್ಧವಾಗಿ ಇದ್ದೋ ಹೇಳ್ವದು ಸಂಶಯ.
ಮಾವ
ಸೊಗಸಿಲ್ಲಿ +ಏಳ್ವ = ಸೊಗಸಿಲ್ಲೇಳ್ವ ‘ಇ ‘ಕಾರ ಲೋಪ ಸಂಧಿ ಆವುತ್ತಿಲ್ಲೆಯೋ…
ಹೊಗೆ ಭಾವನ ಕಂಡಲ್ಲಿ
ನೆಗೆ ಬಪ್ಪದು ಖಂಡಿತಾ
ಧಗೆ ಭಾವನ ಕಂಡಲ್ಲಿ
ಬಗೆ ಭಾವನೆ ಬಕ್ಕದಾ
———–
ಹೊಗೆಯಿಪ್ಪಲ್ಲಿ ಕಿಚ್ಚಿಕ್ಕು
ಮುಗಿಲಿದ್ದರೆ ವರ್ಷವೂ
ನೆಗೆ ಬಾಬೆಯ ಕಂಡಲ್ಲಿ
ನೆಗೆ ಬಪ್ಪದು ಖಂಡಿತಾ
(ವರ್ಷ=ಮಳೆ)
ಎರಡ್ನೆ ಪದ್ಯ ಎನಗೆ ತುಂಬಾ ಇಷ್ಟ ಆತು ಮಾವ.
ಗೋಳಿಸೋಡ ಹೊಟ್ಟುಸುತ್ತಾಂಗಿಪ್ಪೆಲ್ಲ ನೆಗೆ ಬಕ್ಕೋ ಕೇಟನಡ° ಅಡಿಗೆ ಸತ್ಯಣ್ಣ
ನಮ್ಮ ಮಂತ್ರಿ ಮಹೋದಯರ ಬಗ್ಗೆ
=================
ಹಗೆ ಹೊತ್ತ ದಿವಾನಂಗ
ಮುಗಿ ಬಿದ್ದು ಲಡಾಯಿ ಮಾ-
ಡೊಗ ದುಃಖ ವಿಷಾದಲ್ಲಿ
ನೆಗೆ ಬಪ್ಪದು ಖಂಡಿತಾ
ಅಪ್ಪಪ್ಪು.