Oppanna.com

ಸಮಸ್ಯೆ:64 ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

ಬರದೋರು :   ಸಂಪಾದಕ°    on   29/03/2014    11 ಒಪ್ಪಂಗೊ

ಶ್ಶೊ.. ಈ ಸಮಸ್ಯಾಪೂರಣ ಅ೦ಕಣವೂ ಬಟ್ಯನ ಹಾ೦ಗೆಯೇ ಬ೦ದರೆ ಬ೦ತು ಇಲ್ಲದ್ದರೆ ಇಲ್ಲೆ ಹೇಳಿ ಆತನ್ನೆಪ್ಪಾ..
ಈ ವಾರದ ಸಮಸ್ಯೆ ಮಲೇಶ್ಯಾ -ಚೀನಾ ದೇಶ೦ಗಳ ಪ್ರಜೆಗೊ ವಿಮಾನ ಹತ್ತಿ ನಾಪತ್ತೆ ಆದ ಪ್ರಸ೦ಗದ್ದು. ”ಮಲ್ಲಿಕಾಮಾಲೆ”ಲಿ ಉತ್ತರ ಹುಡುಕ್ಕುವನೋ?

ಸಮಸ್ಯೆ : ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

 

11 thoughts on “ಸಮಸ್ಯೆ:64 ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

  1. ನೂರು ದಾಂಟಿದ ಯಾನಿ ಹತ್ತಿದ ದೊಡ್ಡ ಕಂಪೆನಿ ಪುಷ್ಪಕಾ
    ಜಾರಿ ಬಿದ್ದಿದೊ ಹೋಪ ದಾರಿ ಮಲೇಶಿಯಂದಲೆ ಚೀನಕೇ
    ಹಾರಿ ಹೋದ ವಿಮಾನ ಚಂದ್ರನ ಮೇಲಿಳುದ್ದದು ಸತ್ಯವೋ?
    ಸೋರಿ ಹೋತದ ಕೋಟಿಗಟ್ಟಳೆ ಪೈಸ ಹುಡ್ಕುವ ಗೌಜಿಗೇ ||

  2. ಆಹಾ..ಭಾರೀ ಲಾಯ್ಕಾಯಿದು ಮಾವ.
    ಈ ಪ್ರಶ್ನೆಗೊಕ್ಕೆ ಉತ್ತರ ಹುಡುಕ್ಕುತ್ತಾ ಇದ್ದವಷ್ಟೆ.

  3. ಹಾರಿ ಹೋದ ವಿಮಾನ ಚಂದ್ರನ ಮೇಲಿಳುದ್ದದು ಸತ್ಯವೋ?
    ಬೇರೆ ದೇಶದ ಕಳ್ಳ ಯಾನಿಯೆ ಮಾಯ ಮಾಡಿದ ಕೃತ್ಯವೋ?
    ದಾರಿ ತಪ್ಪಿಯದೀ ಸಮುದ್ರದ ಮೇಗೆ ಬಿದ್ದದು ಲೊಟ್ಟೆಯೋ?
    ಭಾರಿ ಯಂತ್ರದ ತಜ್ಞರಿದ್ದರು ತಂತ್ರಗಾರಿಕೆ ಕಾಣೆಯೋ?

    1. ಆಹ..!!! ಭಾರಿ ಲಾಯಿಕದ ಪೂರಣ ಮಾವ.

  4. ಮೂರು ವಾರದ ಹಿ೦ದೆ ಊರಿನ ಜೆ೦ಬ್ರದೂಟದ ಹ೦ತಿಲೀ
    ಸಾರು ಹೋಳಿಗೆ ಕಾಯಿ ಹಾಲಿನ ಉ೦ಬ ಗೌಜಿಯೆಡಕ್ಕಿಲೀ
    ಜೋರು ಮಾತಿನ ಮಾವ ಕೇಳಿದವೊ೦ದು ಚೋದ್ಯವ ಗತ್ತಿಲೀ
    ಹಾರಿ ಹೋದ ವಿಮಾನ ಚ೦ದ್ರನ ಮೇಲಿಳುದ್ದದು ಸತ್ಯವೋ?

  5. ಭಾಗ್ಯಕ್ಕಾ,ಭಾರೀ ಲಾಯ್ಕ ಆಯಿದು.

  6. ಈಗ ಚುನಾವಣೆ ಸಮಯ ಆದ ಕಾರಣ ಎಲ್ಲಾ ಪಕ್ಷದೋರಿ೦ಗೂ ಬಟ್ಯನ ಸೇವೆ ಸಲ್ಲುತ್ತಾ ಇದ್ದು—ಎಲ್ಲಾ ಪಕ್ಷದೊರಿಂಗೂ ಬಟ್ಯ ಹೇಳಿದರೆ ಭಾರೀ ಪ್ರ್ರೀತಿ
    ಭಾರಿಯಬ್ಬರದೋಟು ಬಪ್ಪಗಯೆಲ್ಲ ಪಕ್ಷಕು ಸೇವೆಯೇ
    ದಾರಿ ಖರ್ಚಿಗೆ ಕೊಟ್ಟ ಕುಪ್ಪಿಯ ಕೌಂಚಿ ಹೆಟ್ಟುತ ಬಟ್ಯನೂ
    ಜೋರು ಗೌಜಿಲಿ ಬಿದ್ದುಯೇಳುತ ಬಂದು ಕೇಳಿದ ಸುದ್ದಿಯೇ
    ಹಾರಿ ಹೋದ ವಿಮಾನ ಚಂದ್ರನ ಮೇಲಿಳುದ್ದದು ಸತ್ಯವೋ ?
    ಅಬ್ಬರದ +ವೋಟು =ಅಬ್ಬರದೋಟು ,ಕೌಂಚಿ ಹೆಟ್ಟುದು =ಖಾಲಿ ಮಾಡುದು

    1. ಅಬ್ಬರದ +ವೋಟು =ಅಬ್ಬರದೋಟು, – > ಇದು ಹೇಂಗೆ ಸಂಧಿ ಅಪ್ಪದು ಹೇಳಿ ಗೊಂತಾಯಿದಿಲೆನ್ನೆ.

      1. ಅಬ್ಬರದ ಓಟು ಹೇಳಿರೆ ಸರಿ ಅಕ್ಕು.

      2. ಮುಳಿಯದಣ್ಣ ಅ೦ದಾಜ ಮಾಡಿದ್ದು ಸರಿ ಆಯಿದು.ಹಾ೦ಗೆ ಆಯೆಕಾತು. ಬರವಗ ತಪ್ಪಿದ್ದು. ಕ್ಷಮಿಸಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×