Oppanna.com

ಸಮಸ್ಯೆ 71: ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ

ಬರದೋರು :   ಸಂಪಾದಕ°    on   31/05/2014    13 ಒಪ್ಪಂಗೊ

ಈ ವಾರ ದೊಡ್ಡರಜೆ ಮುಗುದು ಮತ್ತೆ ಶಾಲೆ ಶುರುವಪ್ಪ ಗೌಜಿ. ಕೆಲವು ಜೆನಕ್ಕೆ ಸ೦ತೋಷ,ದೋಸ್ತಿಗಳ ಮತ್ತೆ ಕಾ೦ಬ ಉತ್ಸಾಹ.ಇನ್ನು ಕೆಲವು ಜೆನಕ್ಕೆ ಅಯ್ಯೋ.. ರಜೆ ಮುಗುತ್ತನ್ನೇ ಹೇಳ್ತ ಸ೦ಕಟ.

ನೋಡುವ ನಮ್ಮ ಬೈಲಿನ ನೆ೦ಟ್ರು ಎ೦ತ ಹೇಳುತ್ತವು?
ಸಮಸ್ಯೆ :

ರಜೆಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ !

13 thoughts on “ಸಮಸ್ಯೆ 71: ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ

  1. ರಜೆ ಮುಗುದ್ದದು ಹೇಂಗೆ ಹೇದೇ
    ಮಜದೆಡೆಲಿ ಗೊಂತಾಯಿದಿಲ್ಲೇ+
    ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ
    ಗಜದ ಗಾತ್ರದ ಚೀಲ ಹೊತ್ತೊಂ-
    ಡು ಜೆತೆ ಹಿಡಿಯೆಕ್ಕು ಹೊಸ ಮಕ್ಕಳ
    ಗೆಜಳಿದ ಹುಳುಗೊ ಪುಂಡೆಲಾಗಿಯೆ ಹೋಪ ರೀತಿಲಿಯೇ

    1. ಮಾವಾ..ರೈಸಿದ್ದು..ರಜೆ – ಆದಿಪ್ರಾಸದ ಪುನರೋಕ್ತಿ ಬದಲ್ಸಿರೆ ಇನ್ನೂ ಲಾಯ್ಕಕ್ಕು.

  2. ರೈಸಿತ್ತದ ಭಾಗ್ಯಕ್ಕ….
    ಭುಜಲಿ ನೇಲುಸಿ ಚೀಲ ಭಾರಲಿ
    ರಜೆಯ ಮಜವದ ನೆನಪ ಭಿತ್ತಿಲಿ
    ದಜಬಜನೆ ಕೊಡೆಯಡಿಲಿ ನೀರಿನ ತಲಗು ಹಾರ್ಸೊಂಡೆ
    ಪ್ರಜೆಗೊ ಮುಂದೆಲಿ ಇಂದು ಕಲ್ತರೆ
    ನಿಜವೆ ಹುರುಪದು ಬಂದು ಬೇಸಗೆ
    ರಜೆ ಮುಗುದ ಮರದಿನವೆ ಶಾಲಗೆ ಹೆರಡುಲಿದ್ದನ್ನೆ //

    1. ಲಾಯ್ಕ ಆಯಿದು ಶೈಲಜಕ್ಕಾ.. ರಜೆ ಶಬ್ದ ಆದಿಪ್ರಾಸಲ್ಲಿ ಎರಡು ಸರ್ತಿ ಬಯಿ೦ದು, ದೋಷ ಅಲ್ಲದ್ದರೂ ಬದಲ್ಸಿರೆ ತೂಕ ಹೆಚ್ಚಕ್ಕು.

      1. ಮಜದ ನೆಂಪುಗೊ ಮನಸ ಬುತ್ತಿಲಿ
        ಹೇಳಿ ಮಾಡಿರೆ ?

  3. ಶಾಲಗೆ ಹೆರಡುವಾಗ ; ಮಧೂರಿಲಿ ಎರಡು ತಿಂಗಳ ರಜೆಲಿ ವಿಜಯ ಭಾವನ ಒಟ್ಟಿ೦ಗೆ ಮ೦ತ್ರ ಕಲ್ತ ಮಾಣಿಯ ಯೋಚನೆ –
    ಗಜಮುಖನ ಬೇಡಿಕ್ಕಿ ಬಲದಿಕೆ
    ಭುಜಲಿ ಚೀಲವ ನೇಲ್ಸಿ ಬೇಸಗೆ
    ರಜೆ ಮುಗುದ ಮರದಿನವೆ ಶಾಲಗೆ ಹೆರಡುಲಿದ್ದನ್ನೇ I
    ಗಜವದನನೆದುರೆರಡು ತಿಂಗಳು
    ವಿಜಯನ ಜತೆಲಿ ಕಲ್ತ ಮಂತ್ರದ
    ಮಜವದೆಂತು ಮರೆಯಲಿ ?ಶಾಲೆಲಿ ಹೋಗಿ ಹೇಳೆಕ್ಕು II

    1. ಒಳ್ಳೆ ಕಲ್ಪನೆ ಭಾಗ್ಯಕ್ಕ. ಗಜಮುಖ ,ಗಜವದನ ಎರಡೂ ಪುನರೋಕ್ತಿ ಅಪ್ಪ ಕಾರಣ ಬದಲ್ಸಿರೆ ಇನ್ನೂ ಒಳ್ಳೆದು.

      1. ”ಗಜ ನಯನನೆದುರೆರಡು ತಿಂಗಳು” ಹೇಳಿ ಅಕ್ಕಾ? ಗಣಪತಿಗೆ ಇಲ್ಲಿ ಸೇರಿ ಬಪ್ಪ ಹೆಸರು ಬೇರೆ ಯಾವದುದೆ ಎನಗೆ ಗೊ೦ತಾವುತ್ತಿಲ್ಲೆ . ಆ ಗಣೇಶನೇ ಆಶೀರ್ವಾದ ಮಾಡೆಕ್ಕಷ್ಟೆ.
        ಮೊದಲ ಅಕ್ಷರ ಹೃಸ್ವ ಆಗಿ ಪ್ರಾಸ ”ಜ ” ಕಾರಲ್ಲಿ ಬಂದು, ಮಾತ್ರಾ ಗಣ ಆದಕಾರಣ ನಿಷೇದಾಕ್ಷರಿ ಕೊಟ್ಟ ಹಾಂಗೆ ಆವುತ್ತು !!

  4. ಮೊನ್ನೆ ಮಜಲುಗುಡ್ಡೆ ಇಳುದು ಮಾಷ್ಟ್ರುಮಾವನಲ್ಲಿಗೆ ಹೋಪಗ ಹೀಂಗೆ ಬರದು ಕೊಟ್ಟವು:
    ಭಜನೆ ಭಾಗವತಿಕೆಯ ಕಲಿವದೊ,
    ಅಜನೆ ಮಂತ್ರವ ಕಲಿವದೋ, ರವಿ-
    ಕುಜನ ಜನ್ಮದ ರಾಶಿ ಮಡಗುವ ಕವಡೆ ಕಲ್ತಕ್ಕೋ?
    ಮಜಲಗುಡ್ಡೆಲಿ ತಿರುಗಿ ದಿನಗಳ
    ನಿಜಕು ಕೊಲ್ಲುದು ಬೇಡ ಮಕ್ಕಳೆ,
    ರಜೆ ಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ || 🙂 ||

    1. ಯಬ ಯಬ .. ನೆಗೆಮಾಣಿಗೂ ದೊಡ್ದರಜೆಯೋ ಬೈಲಿಂಗೆ ಬಪ್ಪಲೇ ಹೇಳಿ ಗ್ರೇಶಿದ್ದು..
      ನೆಗೆಯಮಾಣಿಯ ಕವನವೋ? ಎಲೆ
      ಜಗಿವ ನಮ್ಮಯ ಮಾಷ್ಟ್ರುಮಾವನ
      ಜಗದ ಅನುಭವ ಕಥನವೋ ? ಗೊಂತಿಲ್ಲೆ ಏ ಮಾಣಿ !!

    2. ನೆಗೆ ಮಾಣಿ ಈಗ ಇಂಗ್ಲೀಷು ಕಲಿವದು ಬಿಟ್ಟು ಚಂದಸ್ಸು ಕಲಿವಲೆ ಶುರು ಮಾಡಿದನೋ..? ಇಂಗ್ಲೀಷು ಸಾಕಾತೋ..? ಏಂ…

  5. ಅಜಯನೊಟ್ಟಿ೦ಗಾಟವಾಡುವ
    ಭಜನೆ ಮಾಡೆಡ ಹೋಗು ಬೇಗನೆ
    ಕುಜುವೆ ತಾಳಿನ ಕೂಡಿ ಉ೦ಬಲೆ ಬೇಗ ಸುರು ಮಾಡು I
    ಮುಜುಡು ಬುದ್ಧಿಯೆ,ಪಾಠಪುಸ್ತಕ
    ರಜವು ಮುಟ್ಟಿದ್ದಿಲ್ಲೆ ಬೇಸಗೆ
    ರಜೆಮುಗುದ ಮರದಿನವೆ ಶಾಲೆಗೆ ಹೆರಡುಲಿದ್ದನ್ನೇ II

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×