ಇವು ಬಂಡಾಡಿ ಅಜ್ಜಿಯ ಮುದ್ದಿನ ಪುಳ್ಳಿ!
ಬೈಲಿನ ಹೆರಿಯೋರಲ್ಲಿ ಒಬ್ಬರಾದ ಬಂಡಾಡಿಅಜ್ಜಿಯ ಅರಡಿಗಲ್ಲದೋ ನಿಂಗೊಗೆ?
ಗೊಂತಿಪ್ಪಲೇ ಬೇಕು! ಪ್ರಾಯ ಆಗಿ ಬಂಙ ಆವುತ್ತರೂ, ಎಡಕ್ಕೆಡಕ್ಕಿಲಿ ಬೈಲಿಂಗೆ ಬಂದು, ಪುಳ್ಳರುಗಳ ಕ್ಷೇಮಸಮಾಚಾರ ವಿಚಾರುಸಿಗೊಂಡು ಹೋವುತ್ತದು ಇದ್ದೇ ಇದ್ದು!
ಕೊಶಿ ಆದವರ ಬೆನ್ನು ತಟ್ಟಿ, ಬಿಂಗಿಮಾಡಿದವರ ಬೆನ್ನಿಂಗೆ ತಟ್ಟಿ, ನಮ್ಮ ಸಂಸ್ಕೃತಿ, ಹಳೆ ಕ್ರಮಂಗೊ, ಅಡಿಗೆಗೊ, ಹೂಗುಕಟ್ಟುದು, ಹೂಗು ಕೊಯಿತ್ತದು – ಹೀಂಗೆ ನಾನಾ ವಿಧದ ವಿಶೇಷತೆಗೊ ಬಂಡಾಡಿ ಅಜ್ಜಿದು!
ಅಜ್ಜಿಯೇ ಅಷ್ಟು ಉಮೇದಿಲಿ ಬರೇಕಾರೆ ಪುಳ್ಳಿಗೆ ಎಷ್ಟಿರೆಡ!!
ಅಪ್ಪು, ಪುಳ್ಳಿಯೂ ಬರೆಯಲಿ ಹೇಳ್ತ ಆಶೆ ಬೈಲಿನೋರದ್ದು. ಈ ಪುಳ್ಳಿಯ ಹೆಸರು ಅನುಶ್ರೀ!
ಪ್ರಸ್ತುತ ಕೊಡೆಯಾಲದ ವಿಶ್ವವಿದ್ಯಾಲಯಲ್ಲಿ ಕಂಪ್ಲೀಟರು ಯಮ್ಮೆಸ್ಸಿ ಕಲ್ತುಗೊಂಡು ಉಶಾರಿ ಕೂಸು ಆಗೆಂಡು ಇದ್ದು!
ಕಂಪ್ಲೀಟರೇ ಕಲಿತ್ತ ಕಾರಣ ಅದರ ಒಳ-ಹೆರ ಎಲ್ಲ ಅರಡಿಗು. ಇಂಟರುನೆಟ್ಟುದೇ ಅರಡಿಗು, ಇನ್ನೊಬ್ಬಂಗೆ ಹೇಳಿಕೊಡ್ತಷ್ಟುದೇ!
ಈ ಕೂಸು ಬರೇ ಓದಲೆ ಮಾಂತ್ರ ಉಶಾರಿ ಹೇಳಿ ಗ್ರೇಶಿಕ್ಕೆಡಿ – ಭಾಷಣ, ಪ್ರಬಂಧ, ರಸಪ್ರಶ್ನೆ, ಬರವಣಿಗೆ, ಸಾಹಿತ್ಯ, ಆಕಾಶವಾಣಿಲಿ ಕಾರ್ಯಕ್ರಮ ನಿರೂಪಣೆ, ಮಾಷ್ಟ್ರುಮಾವನ ಚೋಕಿನ ಡಬ್ಬಿಂದ ಚೋಕು ತೆಗದು ಗೊಂಬೆ ಮಾಡ್ತದು, ಚೆಂದಚೆಂದದ ಗ್ರೀಟಿಂಗು ಮಾಡ್ತದು
– ಹೀಂಗೆ ನಾನಾ ನಮುನೆಯ ಆಸಗ್ತಿಯ ಕ್ಷೇತ್ರಂಗೊ ಇದ್ದು ಈ ಕೂಸಿಂಗೆ.
ನವಗೆ ಕೊಶೀ ಅಪ್ಪದು ಅದರ ಬಹುರೂಪತೆ ಕಂಡು.
ಅಜ್ಜಿ ಒಂದೊಂದರಿ ಪರಂಚುಲಿದ್ದು ಈ ಕೂಸಿನ ಹರಗಾಣ ಕಂಡು;
- ಅಜ್ಜಿ ಪರಂಚುದು ಪ್ರೀತಿಲಿ ಅಲ್ಲದೋ! 😉
ಕಲಿತ್ತದರ ಎಡಕ್ಕಿಲಿ ಅಷ್ಟು ಅಂಬೆರ್ಪು ಇದ್ದರೂ, ಬೈಲಿನ ಮೇಗೆ ಒಳ್ಳೆತ ಪ್ರೀತಿ, ಅಭಿಮಾನ.
ಹಾಂಗಾಗಿ ನಿತ್ಯ ಬೈಲಿಂಗೆ ಬಕ್ಕು, ಹೂಗು ಕೊಯಿವಲೆ ಆದರೂ!
ಶುದ್ದಿ ಹೇಳುವಿರಾ ಅಕ್ಕಾ- ಹೇಳಿ ಕೇಳಿದೆ. ಸಂತೋಷಲ್ಲಿ ಒಪ್ಪಿಗೊಂಡವು.
ಅನುಶ್ರೀ ಬೈಲಿಲಿ ಶುದ್ದಿ ಹೇಳ್ತವು.
ಅವಕ್ಕೆ ಕಂಡ ಸಾಮಾಜಿಕ ವಿಚಾರಂಗೊ, ಚಿಂತನೆಗೊ ಅದರ್ಲಿ ಇಕ್ಕು.
ಎಲ್ಲೋರುದೇ ಓದಿ, ಶುದ್ದಿಗೆ ಒಪ್ಪಕೊಡಿ!
ಓದುತ್ತ ಉಶಾರಿಕೂಸು ಇನ್ನುದೇ ಉಶಾರಿ ಅಪ್ಪ ಹಾಂಗೆ ಮಾಡುವೊ.
ಮಕ್ಕಳ ಮೇಳದ ಯಕ್ಷಗಾನ ಹೇಳಿ ಶುದ್ದಿ ಕೇಳುವಾಗಲೇ ಖುಷಿ ಆತು… ಅಷ್ಟು ದೂರ ಬಪ್ಪಲೆ ಎಡಿಗಾಯಿದಿಲ್ಲೇ… ಫೋಟೋ ಇದ್ದರೆ ಇಲ್ಲಿ ಹಾಕಿ… ನೋಡಿ ಖುಷಿ ಪಡುತ್ತೆಯ…
ಭಾಗವತಿಗೆ, ಹಿಮ್ಮೇಳ, ಮುಮ್ಮೇಳ ಇತ್ಯಾದಿ ಪಟ್ಟಿ ಇದ್ದೋ ಅಕ್ಕ° ಕೈಲಿ. ಬರದಿಕ್ಕಿ ಇದ್ದರೆ ಒಂದಾರಿ. ನೋಡಿ ಖುಶೀ ಪಟ್ಟೋಂಬೊ ಇಲ್ಲಿಂದ.