ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ!ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.
Latest posts by ಬೊಳುಂಬು ಮಾವ°
(see all) ನಮ್ಮ ಬೈಲಿಂಗೆ ಅಂಬಗಂಬಗ ಬಂದೊಂಡು, ಶುದ್ದಿಗಳ ಓದಿ, ಅದಕ್ಕೆ ಒಪ್ಪ ಕೊಟ್ಟೊಂಡು ಇಪ್ಪ ಹಾಂಗಿಪ್ಪ ನಮ್ಮ ಬೈಲಿನ ಹೆಮ್ಮೆಯ ವಕೀಲರಾದ ಶ್ರೀಯುತ ಗಣೇಶ ಸುಂದರ್ ಹಾಂಗೂ ಶ್ರೀಮತಿ ಗೀತಾದೇವಿ ಅವರ ಇಬ್ರು ಪ್ರತಿಭಾನ್ವಿತರಾದ ಮಕ್ಕೊ ಕುಮಾರಿ ಅಪೂರ್ವ, ಕುಮಾರಿ ಅನನ್ಯ. ಮಂಗಳೂರಿಲ್ಲಿಪ್ಪ, ಜಯಲಕ್ಷ್ಮಿ ಆಳ್ವ, ಡಾ.ಆರತಿ ಹೆಚ್ ಶೆಟ್ಟಿಯವರ ಹತ್ರೆ ಭರತನಾಟ್ಯವ ಚೆಂದಕೆ ಕಲ್ತು,
ಇದೀಗ “ರಂಗಪ್ರವೇಶ” ಮಾಡ್ತಾ ಇದ್ದವು.
ಈ ಕಾರ್ಯಕ್ರಮ ದಿನಾಂಕ 12.01.2013ನೇ ಶನಿವಾರ ಹೊತ್ತೋಪ್ಪಗ 5.30ಕ್ಕೆ ಮಂಗಳೂರಿನ ಪುರಭವನಲ್ಲಿ ನೆಡವಲಿದ್ದು.
ಈ ಕಾರ್ಯಕ್ರಮಕ್ಕೆ ಬೈಲಿನವು ಎಲ್ಲೋರು ಬರೆಕು, ಮಕ್ಕಳ ಪ್ರತಿಭೆಯ ಕಂಡು, ಪ್ರೋತ್ಸಾಹಿಸಿ,ಅವರ ಹರಸೆಕು, ಯಥೋಚಿತ ಆದರಾತಿಥ್ಯವ ಸ್ವೀಕರಿಸೆಕು ಹೇಳಿ ವಿಶೇಷವಾಗಿ ಅವು ವಿನಂತಿಸಿಕೊಂಡಿದವು.
ಈ ಬಗ್ಗೆ ಆಮಂತ್ರಣ ಪತ್ರಿಕೆಯ ಬೈಲಿನ ನೆ೦ಟ್ರಿ೦ಗೆ ಕೊಟ್ಟಿದವು. ಕಾರ್ಯಕ್ರಮಕ್ಕೆ ಎಲ್ಲೋರು ಬನ್ನಿ. ಕಡೇಂಗೆವರಗೆ ನಿಂದು ಕಾರ್ಯಕ್ರಮವ ಆಸ್ವಾದಿಸಿ.
( ಭೋಜನದ ವ್ಯವಸ್ಥೆಯುದೆ ಅಲ್ಲಿ ಇದ್ದು)
ಬೋಚಭಾವ, ಮರೆಡ ಆತೊ ?
ಶುಭಾಶಯಗಳು, ವರ್ಧತಾಮ್ ಯಶಃ,
ಅಪೂರ್ವ ಮತ್ತೆ ಅನನ್ಯ೦ಗೆ ಗುರುದೇವರ ಅನುಗ್ರಹ ಸದಾ ಇರಳಿ.ಕಾರ್ಯಕ್ರಮ ಯಶಸ್ವಿಯಾಗಲಿ,ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಕೆಗೊ.
ಶುಭವಾಗಲಿ.
ಕಾರ್ಯಕ್ರಮ ಯಶಸ್ವಿಯಾಗಲಿ ಹೇಳುವ ಹಾರೈಕೆಗೊ.
ಒಳ್ಳೆ ಶುದ್ದಿಗೊಂದು ಒಪ್ಪ. ಶುದ್ದಿ ನೋಡಿ ಕೊಶಿ ಆತು. ಸಂತೋಷ. ಕಾರ್ಯಕ್ರಮಕ್ಕೆ ಶುಭಾಶಯಗಳು. ಅವಕ್ಕೆ ಒಳ್ಳೆ ಯಶಸ್ಸಾಗಲಿ.
ಹಾ° .. ಊಟವೂ ಇದ್ದೋ.. ಅಕ್ಕು.. ಅಂಬಗ ನಾವು ಒಂದನೇ ಹಂತಿಲಿ ಕಾಂಬೊ.
ಕಾರ್ಯಕ್ರಮಕ್ಕೆ ಯಶಸ್ಸು ಕೋರಿ, ಪ್ರತಿಭಾವಂತ ಸಹೋದರಿಯರಿಂಗೆ ಶುಭಾಶಯಂಗಳ ಹೇಳುತ್ತೆ.