ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ?
ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು.
ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ!
ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.
ನಮ್ಮ ಆಚಕರೆ ಮಾಣಿಯೂ ಪುಟ್ಟಕ್ಕನೂ ಪೃಛ್ಛಕರಾಗಿ ಭಾಗವಹಿಸುತ್ತವಡಾ… ಒಂದಾರಿ ನೋಡೆಡದಾ… ಆನಂತೂ ತಪ್ಸುಲಿಲ್ಲೆ….
ಓಯ್…’ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್’ – ಇದಕ್ಕೆ ಪರಿಹಾರ ಕೊಡೆಕ್ಕಡ.ಬೀಡಿ ಸಿಗರೇಟು ಎರಡೂ ಎಳೆಯದ್ದೆ ಪರಿಹಾರ ಸಿಕ್ಕುಗೋ ..? ಕಂದ ಪದ್ಯ ಕಷ್ಟ ಇದ್ದಪ್ಪ..
ಅಷ್ಟಾವಧಾನ ಒಂದೆರಡು ಸರ್ತಿ ನೋಡಿದ್ದೆ. ಶತಾವಧಾನದ ಬಗ್ಗೆ ಬರೀ ಕೇಳಿದ್ದು ಮಾತ್ರ, ಈಗ ನೋಡುವ ಅವಕಾಶ. ಆನಂತೂ ಕಾದು ಕೂಯ್ದೆ ಮುಳಿಯ ಭಾವ.
ಪರವೂರಿನವಕ್ಕೆ ನೇರ ಪ್ರಸಾರದ ವ್ಯವಸ್ಥೆಯೂ ಇದ್ದು.
ಏ ಚೆನ್ನಬೆಟ್ಟಣ್ಣೋ… ಇದಾ ಅಲ್ಲಿ ಸುರುವಪ್ಪಗ ಇತ್ಲಾಗಿ ಒಂದರಿ ಕಿಣಿಕಿಣಿ ಮಾಡಿಕ್ಕಿ ಆತೋ. ನಾವಿಲ್ಲಿಂದ ನೇರಪ್ರಸಾರ ನೋಡೆಕ್ಕಿದಾ..
ಆನು ಶುಕ್ರವಾರ ಅರ್ಧ ದಿನ ರಜೆ ಹಾಕಿ ನಾಕು ಘಂಟೆಗೆ ಅಲ್ಲಿ ಹಾಜರು. ಬತೆಯೋ ಒಟ್ಟಿಂಗೆ ಚೆನ್ನಬೆಟ್ಟಣ್ಣ..?
http://new.livestream.com/accounts/1646169/events/1600941 one can see the webcast of shathaavadhaana live in the above link. it starts at 430 PM on 30th Nov.
ಹರೇ ರಾಮ; ಬಾಳ ಒಳ್ಳೆ ಶುದ್ಧಿ. ಬರೆಕು ಹೇದು ಕೊದಿ ಆವುತ್ತು. ಆದರೆ ಅ೦ದೇ ಮನೆಲಿ ತಪ್ಸಲೆಡಿಯದ್ದ ಕಾರ್ಯಕ್ರಮ! ನಿ೦ಗಳ ಹೇಳಿಕಗೆ ಧನ್ಯವಾದ.ಕಾರ್ಯಕ್ರಮಕ್ಕೆ ಶುಭಾಶಯ೦ಗೊ. ನಮಸ್ತೇ…
ತುಂಬ ಸಂತೋಷ. ಶುದ್ದಿಗೆ ಧನ್ಯವಾದ. ಕಾರ್ಯಕ್ರಮ ಒಳ್ಳೆ ರೈಸಲಿ.
ಓಹ್, ಸುರೂವಾಣ ತುಂಬುಗನ್ನಡದ ಶತಾವಧಾನ ಕಾರ್ಯಕ್ರಮ. ನೋಡೆಕು ಹೇಳಿ ಮೂಗಿನ ಮೇಗೆ ಆಸೆ ಇದ್ದು, ಬೆಂಗ್ಳೂರಿನ ವರೇಗೆ ಹೋಯೆಕಾನೆ. ಎಂತೇ ಆಗಲಿ, ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತೆ. ಮುಳಿಯ ಭಾವಯ್ಯ, ಕಾರ್ಯಕ್ರಮದ ಸಂಪೂರ್ಣ ವರದಿ ಬೈಲಿಂಗೆ ಬಪ್ಪಲೇ ಬೇಕು.