Latest posts by ಶೇಡಿಗುಮ್ಮೆ ಪುಳ್ಳಿ (see all)
- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಹಳೆಮನೆ ಅಣ್ಣ ತೆಗದ ಅಬ್ಬಿ ಪಟಕ್ಕೆ ಅಂದು ವಿಷು ವಿಶೇಷ ಸ್ಪರ್ಧ ಸಮಯಲ್ಲಿ ಆನು ಬರದ್ದದು..
ಚಿತ್ರ(ಕ್ಕೆ) ಗೀತೆ
ಬೇರಿನ ಜೆಡೆಯೋ
ನಾರಿನ ಹಿಡಿಯೋ
ನೀರಿದು ಹರಿವದು ಬರಿ ಹೊಳೆಯೋ
ಸಾರಡಿ ತೋಡಿನ
ದಾರಿಯ ಕರೆಯೋ
ಹಾರೀ ಬೀಳುವ ಜಲನಿಧಿಯೋ
ಲಾಗವ ಹೊಡವದು
ಬೇಗೆಗೆ ಪುಳ್ಳರು
ಕಾಗೆಗೊ ಮೀವಾರೀತಿಲಿಯೋ
ಸಾಗುವ ನೀರಿನ
ಬಾಗುವ ಜಾಗೆಲಿ
ತಾಗುವ ಕಲ್ಲಿನ ಹೊಡಿಯೆಡೆಲೇ
ಮೇಗಿನ ನೀರಿದು
ಬೇಗನೆ ಬೀಳುಗು
ಬಾಗಿದ ಪುಳ್ಳಿಯ ನೆತ್ತಿಲಿಯೂ
ಬೇಗಿನ ಹುಗ್ಗುಸಿ
ಬೀಗುವವಾಜೆನ
ಹಾಂಗೇ ಬಿಸಿಲು ತಣಿವವರೆಗೂ
ಕಾರಿಲಿ ಹೊರಟವು
ನೀರಿಲಿ ಹಾರುದು
ತೋರುವ ಚೆಂದದ ಚಿತ್ರ ಪಟ
ಬೇರೆಯ ದಾರಿಲಿ
ಹಾರುವ ನೀರಿನ
ಕೇರಿಲಿ ಚೆಂದಕೆ ಸೆರೆ ಹಿಡುದಾ
~*~
ಚೆಂದದ ಪಟಕ್ಕೆ ಹಳೆಮನೆ ಅಣ್ಣಂಗೆ ಅಭಿನಂದನೆಗೋ
(ಕೇರಿಲಿ – ಹೇಳಿರೆ ಜಾಗೃತೆಲಿ ಹೇಳುವ ಅರ್ಥ (care) )
ಪದ್ಯ ಸೂಪರ್ ಆಯಿದು. ಪುಳ್ಳಿ ಬೈಲಿಂಗೆ ಅಪರೂಪ ಆಯಿದಾನೆ. ಪದ್ಯ ಓದಿ ಅಪ್ಪಗ ರಾಜಕುಮಾರನ ಪದ್ಯ ನೆಂಪಾವ್ತು ನಿಜ. ಅಂಬಗ ಜೇನಿನ ಹೊಳೆಯೋ ಹಾಡುದೆ ಶರ ಷಟ್ಪದಿಲಿ ಇದ್ದೊ ?
ಪುಳ್ಳಿಯ ಪದ್ಯ ಒಳ್ಳೆದಿದ್ದು
ಲಾಯಕ ಆಯ್ದು. ನಿಂಗಳ ಉತ್ಸಾಹ ನಿರಂತರವಾಗಿರಲಿ. ಯಶಸ್ಸಾಗಲಿ.
“ಅಬ್ಬಿ” ಕವನ ಲಾಯಿಕ ಆಯಿದು.
ಇದರ ಓದುವಾಗ ಹಳೆ ಸಿನೆಮ ಪದ್ಯ ನೆಂಪಾವುತ್ತು – “ಜೇನಿನ ಮಳೆಯೋ, ಹಾಲಿನ ಹೊಳೆಯೋ, ಸುಧೆಯೋ ಕನ್ನಡ ಸವಿನುಡಿಯು”
ಪದ್ಯ ಲಾಯಕ ಇದ್ದು.