- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ದೇವ್ರೇ ದೇವ್ರೇ
ಏಂತಕೆ ಹೀಂಗೆ ಕಣ್ಮುಚ್ಕಂಡ್ದೆ?
ಹವ್ಯಕ್ರೆಲ್ಲ ಹಾಳಪ್ಪಂಗೆ ಶಾಪ ಕೊಟ್ಟಿದ್ದೆ?
ಹೆಣ್ಮಕ್ಕೊ ಎಲ್ಲ ಬೇರೆ ಜಾತೀನ ಇಷ್ಟಪಡ್ತಿದ್ದೊ
ಗಂಡ್ಮಕ್ಕೊ ಎಲ್ಲ ಹೆಣ್ಣಿಲ್ದೆ ಪರದಾಡ್ತಿದ್ದೊ||
ಎಲ್ಲ ಕಡೆಗೂ ಪ್ರೀತ್ಸಿದ್ ಮದ್ವೆ ಬಂದೊಯ್ದು ಈಗ
ಅಪ್ಪ ಆಯಿ ಕೇಳ್ವರಿಲ್ದೆ ಬೇಜಾರು ದಿನ
ಸೊಸೆಯಕ್ಕೋಗೆ ಅತ್ತೆ ಮಾವ ಬೇಕಾಯ್ದಿಲ್ಲೆ
ಕೊಟ್ಗೆ ತೋಟ ಹಳ್ಳಿಮನೆ ಕೇಳ್ವರೇ ಇಲ್ಲೆ
ನೌಕ್ರಿಯೊಂದೇ ಬಾಳಿನಲ್ಲಿ ಗಟ್ಟಿ ಎಂದೆ||
ಎಲ್ರೂ ಪಟ್ಣ, ನೌಕರಿ ಜೀವ್ನ ಬಯ್ಸರೆದೋ
ಪಟ್ಟಕ್ಕೆ ಶಿಸ್ತಾಗಿ ಇರೋ ಹೇಳಿ ನಿರ್ಧಾರ ಮಾಡಿದ್ದೊ
ಗೋಜ್ಲು ಗೊಂದ್ಲ ಎಲ್ಲ ಹಳ್ಳಿ ಮುದ್ಕ ಮುದ್ಕಿರೇಗೆ (ಮುದ್ಕೀಗೆ)
ಆಚೀಚೆ ಹಚ್ಕಂಡ್ ನೆಂಟ್ರ ಹಿಡ್ಕಂಡ್ ಬದ್ಕಿ ಬಾಳ್ದವ್ಕೆ
ಈಗ್ನವೆಲ್ಲ ಶಹರ ಸುತ್ತಿ ಶೋಕಿಗೀಕಿಗೆ||
ಎಂತಕ್ ದೇವ್ರೆ ಇಂತದ್ನೆಲ್ಲ ಖಂಡಿಸ್ತಿಲ್ಲೆ?
ಸಮಾಧಾನ ಮಾಡಿ ಹವ್ಯಕ್ರನೆಲ್ಲ ಉಳಿಸ್ತೀಲ್ಲೆ
ಕಮ್ಮಿ ಜನಾನೇ ಇದ್ರೂ ಈ ಜಗತ್ನಲ್ಲಿ
ಬುದ್ಧಿ ಕೊಟ್ಟು ಸಲಹೀದ್ದೆ ಮೊದ್ಲಣ ಕಾಲ್ದಲ್ಲಿ
ಜಾತಿ ಮತ ಅಭಿಮಾನ ಅವರ ಕೈಯಲ್ಲಿ||
ಈಗ್ನ ಹವ್ಯಕ್ರಲ್ಲಿ ಜಾತಿ ಮತ ಹೇಳೋ ಅಭಿಮಾನ ಬೆಳ್ಸು
ತಂತಮ್ಮಲ್ಲೇ ಸಂಬಂಧ ಮಾಡೋ ಒಗ್ಗಟ್ ಮೂಡ್ಸು
ದೇವ್ರೇ ನಿಂಗೆ ನಿತ್ಯ ಪೂಜೆಗೆ ಜನಾ ಬೇಡ್ದಾ?
ಭಟ್ಟ ಭಡ್ತೀರ್ ಶಾಸ್ತ್ರ ಮಾಡಿ ಮಂತ್ರ ಬೆಳೂದ್ ಬೇಡ್ದಾ?
ನಿಂಗೆ ನಂಗೋ ಪೂಜೆ ಮಾಡೂದ್ ಸಾಕಾಯ್ದಿಲ್ಯಾ?||
ನಂಗಂತೂ ಹವ್ಯಕ್ರ ಜೀವ್ನ ಮುಂದೂ ಇರೋ
ಮಕ್ಳ ಮರೀಗೆಲ್ಲ ಅದ್ರ ಅರಿವು ಉಳಿಯೋ
ಅದ್ಕಾಗಿ ನಾನು ನಿನ್ನತ್ರ ವರವ ಕೇಳ್ತೆ
ಹವ್ಯಕ್ರ ಹೆಣ್ಣು ಗಂಡೀಗೆಲ್ಲ ಬುದ್ಧಿ ಕೊಡೊ
ನಂಗ್ಳತನ ಉಳ್ಸೊ ಬೆಳ್ಸೊ ಮನಸ ಕೊಡೋ||
ಅಪ್ಪ ಆಯಿ ಮಾತ್ ಕೇಳೋ ಶಕ್ತಿ ತಾರೋ
ಮುಂದಿನ ಜನ್ಮದವರೆಗೂ ಹವ್ಯಕ್ರ ಬಾಳ ನೋಡೋ
ನಂಗ್ಳ ಕುಲ ಗೋತ್ರ ಛಲೋ ಇಪ್ಪಂಗ್ ಮಾಡೋ
ದೇವ್ರು ಅಂದ್ರೆ ನೀನೇ ಹೇಳೋ ಛಲವ ನೀಡೋ
ನಿನ್ನ ತನಾನೂ ನಂಗ್ಳ ಸಂತೀಗೆ ಉಳ್ಸಿಕಂಡ್ ಬಾರೋ||
ನಿಂಗ್ಳ ಆಶಯನೇ ನಮ್ಮ ಆಶಯ..ಅದು ನೆರವೇರಲಿ..
ಹವ್ಯಕ ಸಮಾಜಲ್ಲಿಪ್ಪ ಸಮಸ್ಯೆಗಳ ಎತ್ತಿ ತೋರುಸಿದ ಕವನ ಚಲೋ ಇದ್ದು. ದೇವರೇ, ನಮ್ಮತನ ಉಳಿತ್ತ ಹಾಂಗೆ ಆಗಲಿ. ಕಲ್ಪನಕ್ಕನ ಕವನಂಗೊ ಬೈಲಿಂಗೆ ಬತ್ತಾ ಇರಳಿ.
“ನಂಗ್ಳತನ ಉಳ್ಸೊ ಬೆಳ್ಸೊ ಮನಸ ಕೊಡೋ||”
ಇದೇ ನಮ್ಮೆಲ್ಲೋರ ಪ್ರಾರ್ಥನೆ ಕೂಡ. ಬೈಲಿಂಗೆ ಬರ್ತಾ ಇರಿ,ಕವನ ಬರೀತಾ ಇರಿ.
ನಿಂಗೊ ಮೂರು ಮಂದಿಗೊ ನನ್ನ ಕ್ರತಜ್ಣತೆಗಳು.ಗೊಟಾವಳಿ ಮಾಡು ಜನ ಕಂಡು ದೇವ್ರ ಮೊರೆ ಹೋದೆ . ನನ್ನ ಕೈಲಿ ಆಗದ್ದ ನಾ ಮಾಡೋ ಹೇಳಿ ಮನಸಲ್ಲಿ.
ಕವನದ ಆಶಯ ತು೦ಬಾ ಛಲೋ ಇದ್ದು.ಕಲ್ಪನಕ್ಕಾ ಹೀ೦ಗೇ ಬರೆತ್ತಾ ಇರಿ.ಅಭಿನ೦ದನೆಗೊ.
ಇನ್ನಷ್ಟು ಕವನ ಬರೀತಾ ಇರಿ..
ಚೆನ್ನಾಗಿದ್ದು.
ಶಮ್ಮಿಯ ಕತೆ ನೋಡಿ ಪದ್ಯ ಬಂತೋ!
ಲಾಯಕ ಆಯ್ದು