ಹಗಲಿರುಳು ಎಡೆಬಿಡದ್ದೆ
ಎನ್ನೊಳವೆ ಆನಾಗಿ
ಹರಿವ ಜೀವದ ವಾಹ ನೀನೆಂದಿಂಗೂ ||
ಮಣ್ಣ ಹೊಡಿ ಕಣಂದಲುದೆ
ಸ್ಫುರಿಸಿ ನಿಜ ಭವವಾಗಿ
ಅರಳ್ವ ಜೀವದ ವಾಹ ನೀನೆಂದಿಂಗೂ
ಅಳವಿರದಾಕಾಶಂದಲು
ನಿತ್ಯಾ ಹೊಳೆ-ಝರಿಯಾಗಿ
ಸುರಿವ ಜೀವದ ವಾಹ ನೀನೆಂದಿಂಗೂ||
ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟಸುವ ವಾಹ ನೀನೆಂದಿಂಗೂ ||
ಕ್ಷಣಕ್ಷಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನೆಂದಿಂಗೂ||
Latest posts by ಬೊಳುಂಬು ಕೃಷ್ಣಭಾವ° (see all)
- ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು - March 17, 2014
- ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು - March 10, 2014
- ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು - March 3, 2014
ತೆಕ್ಕುಂಜದ ಅಣ್ಣಂಗೆ,
’ಪ್ರಕಾರ’ ಹೇಳ್ತ ಹಾಂಗೆ ಎಂತ ಇಲ್ಲೆ ಅಣ್ಣ. ’ತೋಚಿದ್ದು ಗೀಚಿದ್ದು’ ಹೇಳ್ತ ಹಾಂಗೆ ಬರಕ್ಕಂಡು ಹೋದ್ದದಷ್ಟೆ. 🙂 ನಿಂಗೊ ’ಅಂತರಾತ್ಮ’ ಕವಿತೆಯ ಒಂದನೆಯ ಮತ್ತೆ ಎರಡನೆಯ ಭಾಗ ಓದಿದ್ದರೆ ಪದ್ಯದ ಹುರುಳು ಗೊಂತಕ್ಕು. ನಿರಾಕಾರ ಪರಬ್ರಹ್ಮದ ಬಗ್ಗೆ ಇಪ್ಪದಿದು.
ಒಪ್ಪ ಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ ಮಾರೊಪ್ಪಂಗೊ.
-ಕೊರೆಂಗು ಭಾವ°
ಸಣ್ಣ ಸಣ್ಣ ಪದ್ಯಂಗೊ..ಲಾಯಕ್ಕಾಯ್ದು.
ಈ ಕವನ ಪ್ರಕಾರದ ಬಗ್ಗೆ ವಿವರ ಕೊಡ್ತಿರೋ..?
ಲಾಯಕ ಕವಿತೆ ಬರೆತ್ತಿ ನಿಂಗೆ೦ದಿಂಗೂ. ಲಾಯಕ ಆಯ್ದು ಭಾವ.
ಬರದ್ದಕ್ಕೆ ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಚೆನ್ನೈ ಭಾವಂಗೆ ಮಾರೊಪ್ಪಂಗೊ.