ಬರದೋರು :   ಕಲ್ಪನಾ ಅರುಣ್    on   18/05/2014    1 ಒಪ್ಪಂಗೊ

ಕೂಸೇ ನೀ ಹಳ್ಳಿಲಿದ್ದಾಗ ಯೆಷ್ಟ ಚಂದಾ ಅಗಿದ್ದೆ
ಹಾಡು ಶೇಡಿ ಕಲ್ತಕಂಡಿ ಲಕ್ಷಣಾಗಿ ಇರ್ತಿದ್ದೆ
ಹಣೆಗ್ ಕುಂಕ್ಮಾ ಕೈಗ್ ಬಳೆ ಕಾಲಿಗ್ ಗಜ್ಜೆ ಹಾಯ್ಕಂಡು
ಲಂಗಾ ಪಲ್ಕಿ ಉಟ್ಟಕಂಡು ರಾಣಿ ಹಾಂಗೆ ಮೆರೆತಿದ್ದೆ!!
ಪೇಟೆಗ್ ಓದೂಲ್ ಹೋಗದ್ದೆ ಪೂರಾ ಬದ್ಲು ಆಗ್ಬುಟ್ಟೆ
ಬಣ್ಣಾ ಗಿಣ್ಣಾ ಹಚ್ಹಕಂಡಿ ತುಂಡ್ ವಸ್ತ್ರಾ ಉಟ್ಟಬುಟ್ಟೆ
ತೋಳಿಲ್ದ ಅಂಗಿ ಕುಂಕ್ಮಾ ಇಲ್ದಾ ಹಣೆ
ನೋಡ್ತಾ ಇದ್ರೆ ನಂಗೆ ಹೊಟ್ಟುರಿ ಕೂಸೇ!!
ಗಾಗಲ್ ಗೀಗಲ್ ಹಾಯ್ಕಂಡ್ ಬತ್ತಾ ಇದ್ದದ್ದ ನೋಡ್ತಾ ಇದ್ರೆ
ಸೀನೆಮಾ ನಟಿ ಬಂದಾಂಗೆ ಆಗ್ತಲೆ ಕೂಸೇ
ಬೇಡಾ ನಿಂಗೆ ಪೇಟೆ ವೇಷಾ ಮೊದ್ಲಿನ್ ಉಡ್ಪೆ ಸಾಕೇ
ಸಿಂಪಲ್ಲಾಗಿ ಜಡೆ ಹೊಯ್ಕಂಡ್ ಹೂ ಸೂಡ್ದ್ರೆ ಯೇನಾತೆ?!!
ಮೈತುಂಬಾ ವಸ್ತ್ರಾ ಹಾಯ್ಕೊ ಮೊಖಕ್ಕೆ ಕುಂಕ್ಮಾ ಇಡೇ
ಹಳ್ಳಿ ಮಾತು ಕತೆನೆಲ್ಲಾ ಬಾಯ್ತುಂಬಾ ಆಡೇ
ಪೇಟೆಲಿಪ್ಪೊ ಹೆಣ್ಣಮಕ್ಕೂಗೂ ಅದ್ರ ಸವಿಯಾ ಉಣ್ಸೇ
ನಗ್ತಾ ನಗ್ತಾ ಹಳ್ಳಿ ಜೀವ್ನಾ ಪೇಟೆಲಿಪ್ಪಾಂಗ್ ಮಾಡೇ ಕೂಸೇ!!

One thought on “ಓ ಕೂಸೇ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×