- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಬಾರೋ ತಮ್ಮಾ ನಾನು ನೀನು ಹೋಪೋ ಹಳ್ಳೀಗೆ
ಜಮೀನು ಮನೆ ಮಾಡ್ಕಂಡಿ ಖುಶಿಯಾಗ್ ಇಪ್ಪೂಲೇ||
ಅಡ್ಕೆ ತೆಂಗು ಬಾಳೆ ನೆಟ್ಕಂಡ್ ಬೆಳ್ಯಾ ಬೆಳೆವೊ
ಭತ್ತ ಶೇಂಗಾ ಹೆಸ್ರು ಉದ್ದು ಬಿತ್ತಿ ಬೆಳೆವೊ||
ತೋಟದಲ್ಲಂತೂ ಎಲೆ ಬಳ್ಳಿ ಉದ್ದಕ್ ಹಬ್ಬಿರ್ಲಿ
ಕಾಳಮೆಣ್ಸು ಯಾಲಕ್ಕಿ ಅಲ್ಲಲ್ಲಿ ಬೆಳೆದಿರ್ಲಿ||
ಬೆಳೆ ಬೆಳ್ದಾಂಗ್ ಪೇಟೆಗೆ ತಗೊಂಡೋಪ್ಲೆ ಜೀಪ್ ವಂದಿರ್ಲಿ
ಚೊಕ್ಕಾದ್ ಚೆಂದಾದ್ ಮನೇಲಿಪ್ಪೊ ಯೋಗಾ ನಂಗಿರ್ಲಿ||
ಹಳ್ಳೀ ಅಂದ್ರೆ ಪ್ರಶಾಂತತೆ ನೆಮ್ಮದಿ ಜಾಗಾ
ತೋಟಾ ಗದ್ದೆ ಇದ್ದಬುಟ್ರೆ ತಂಪೀಂದೇ ಗಾನಾ||
ಆರಾಮಾಗಿ ಉಸ್ರಾಡುಲೇ ವಳ್ಳೆ ಗಾಳಿ ಇರೋ
ನೀರು, ಹಾಲು, ಮೊಸರು, ಮಜ್ಜಿಗೆ ರುಚಿಯಾಗಿರೊ||
ಹಳ್ಳೀಲಂದ್ರೆ ಇರ್ತು ಯೆಲ್ಲಾ ಮನೇವಳ್ಗೆ
ಚಾಕ್ರಿಗೀಕ್ರೀಗ್ ಆಳಿದ್ರೆ ಸಹಾಯದಂಗೆ||
ಹಳ್ಳೀ ಜೀವ್ನ ಕಂದಾಚಾರ ಸಂಭ್ರಮಕ್ಕಿದ್ದಾಂಗೆ
ಹಬ್ಬಾ ಹುಣ್ಮೆ ಶ್ರಾದ್ಧ ತಿಥಿವರ್ಷಕ್ಕೊಂದಸಾರೆ||
ಹೋಪು ಬಪ್ಪು ಸಂಸ್ಕಾರ ನೆಂಟರಿಷ್ಟ್ರಿಗೆ
ಪೇಟೆಲಿಪ್ಪ ಒಂಟಿತನಾ ದೂರಾ ಆದಾಂಗೆ||
ನೆಮ್ಮದಿ ಖುಶಿ ಆಶಾ ಪಾಶಾ ಹಳ್ಳೀವಳ್ಗೆಯಾ
ಜನಾಯೆಲ್ಲಾ ಕೂಡ್ದಾಗ ಮಳ್ಳ ಹರೊದೆಯಾ||
ಹಳ್ಳೀಗೋದ್ರೆ ಕಳ್ಕಂಡಾಂಗೆ ಶೀಕು ಸಂಕ್ಟವಾ
ರುಮಾಲಾ ಕಟ್ಕಂಡ್ ತೋಟಾ ತಿರಗ್ದ್ರೆ ವ್ಯಾಯಾಮದಾಂಗೆಯಾ|
ಹಳ್ಳೀಲಿಪ್ಪೊ ತಮ್ಮಾ ಬಾರೋ ನನ್ನ ಸಂಗ್ತಿಗೆ
ನಾನು ನೀನು ಮನೆ ಕಟ್ಟೊ ಸಂಪ್ರದಾಯದಾಂಗೆ||
ನನ್ನ ನಿನ್ನ ಸಂಸಾರ ನಡೆಸುಲಪ್ಪಂಗೆ
ವಯಸ್ಸಾದ ಮನ್ಸಿಗೆಲ್ಲಾ ಶಾಂತಿ ಸಿಗ್ವಾಂಗೆ||
ಹಳ್ಳಿಜೀವನದ ಮನಶ್ಶಾಂತಿ ಸೊಗಸಾಗಿ ಮೂಡಿಬೈಂದು ಹೇದು ಒಪ್ಪ