Latest posts by ಶ್ಯಾಮಣ್ಣ (see all)
- ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? - September 28, 2017
- ನೆಗೆ ಚಿತ್ರಂಗೊ - September 19, 2015
- ಹಸುರು ದಿನಿಗಿತ್ತೆನ್ನ ಮತ್ತೊಂದರಿ - July 13, 2015
ಕಾರ್ಗಾಂಡ ಕಸ್ತಲೆಲಿ
ಕೊಡಿ ದೀಪ ಬೆಣ್ಚಿಗೆ
ಹುಡುಕುದೆಂತಕೆ ಕನಸು?
ಮಿಡುಕುದೆಂತಕೆ ಮನಸು?
ಕಾರ್ಗಾಂಡ ಕಸ್ತಲೆಲಿ
ಕಲ್ಲು ಕಾಲಿಂಗೆ ಡಂಕಿ
ಎಲ್ಲಿ ಕೊಡಿ ಬೆರಳಿಂಗೆ
ನೆತ್ತರಿನ ಲೇಪ?
ಅಲ್ಲ, ಮನಸಿನ ಒಳವೆ
ನಿಲ್ಲದ್ದ ಕೋಪ?
ಸಲ್ಲದ್ದ ತಾಪ?
ಕಾರ್ಗಾಂಡ ಕಸ್ತಲೆಲಿ
ಅಸಬಡಿವ ಜೀವಕ್ಕೆ
ಏವಾಗ ಹಗಲು?
ಕರಿಗಪ್ಪು ಮುಗಿಲು?
ತೇವ ಇಲ್ಲದ್ದ ಭೂಮಿ
ಯಾವಾಗ ತಂಪು?
ಯಾವಾಗ ಸೊಂಪು?
ಕಾರ್ಗಾಂಡ ಕಸ್ತಲೆಲಿ
ಕುರುಡು ಕಣ್ಣಿಂಗೆಂತ
ಕೆಲಸ? ಬರಡು
ಮಣ್ಣಿಂಗೆಂತ ಸೊಗಡು?
ಬೆಗುಡುತನ ತೋರುಸುವ
ಬುದ್ದಿಗೇಡು?
ಬರಿ ಕಾಡು?
ಕಾರ್ಗಾಂಡ ಕಸ್ತಲೆಲಿ
ಬೆಳ್ಳಿ ನೀರಾಂಜನದ
ಎಣ್ಣೆ ಮುಗುದರೆ ಇನ್ನು
ಬತ್ತಿ ಹೊತ್ತುಸುದೇಂಗೆ?
ಹರುದ ವಸ್ತ್ರದ
ಕೊಡಿಗೆ ಕಿಚ್ಚು
ಹೊತ್ತುಗಾ? ಹೇಂಗೆ?
ಚಿತ್ರಕ್ಕೆ ಕವನವೋ ಅಲ್ಲ ಕವನಕ್ಕೆ ಚಿತ್ರವೊ..? ಒಂದಕ್ಕೊಂದು ಪೂರಕವಾಗಿ ತುಂಬ ಲಾಯಕ ಆಯಿದು.
ಶ್ಯಾಮಣ್ಣ ಲಾಯ್ಕ ಆಯಿದು ಇದು
ಕಾರ್ಗಾ೦ಡ ಕಸ್ತೆಲಿಲಿ,
——- ದೂರ೦ದ ಕೇಳಿತ್ತು,
ಒಟ್ರ್ ಟ್ರೀ ಟೀ……………
ಕಾರ್ಗಾಂಡ(ಕರ್ಗೂಡಿ)ಕಸ್ತಲೆಲಿಯೂ ಅಂತರ್ಗತವಾದ ಬೆಣಚ್ಚು ಇದ್ದು ಹೇಳುವುದರ ಮನೋಜ್ಞ ಚಿತ್ರ,ಚಿತ್ರಣ.ಅಭಿನಂದನೆಗೊ ಶ್ಯಾಮಣ್ಣ.
ರವಿ ಕಾಣದ್ದನ್ನೂ ಕವಿ ಕಾಣ್ತ-
ಕಾರ್ಗಾಂಡ ಕಸ್ತಲೆಲೂ
ಶ್ಯಾಮಣ್ಣ ಕಂಡ
ಹೊಳಪಿನಾ ಚಿತ್ರಂಗೊ
ಎಷ್ಟೊಂದು ಚಂದ!
ಹ್ಹು° ಕಾರ್ಗಾಂಡ ಕಸ್ತಲೆ ಹೇದು ಮೇಗಂದ ಮೇಗೆ ನೋಡಿರೆ ವಿಷ್ಯ ಎಂತದೂ ಇಲ್ಲೆ. ಬರೇ ಕಸ್ತಲೆ ವಿಷ್ಯ. ಆದರೆ ಪ್ರತಿಸಾಲಿಲ್ಲಿ ಅಡಕವಾಗಿಪ್ಪ ಸಾಹಿತ್ಯ ನಿಜವಾಗಿ ಉತ್ಕೃಷ್ಟ. ಅಪರೂಪದ ಈ ಕೃತಿಗೊಂದು ನಮೋ ನಮಃ ಶ್ಯಾಮಣ್ಣ. ಕರೇಲಿ ಇಪ್ಪ ಚಕ್ಕುಲಿ ಕಾರದ ಕಡ್ಡಿಯೂ ಪಷ್ಟಾಯ್ದು.