- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಖುಶಿ ಖುಶಿ ಈ ಜೀವ್ನಾ ಖುಶಿ
ಯೆಲ್ಲಾ ಛಲೋ ರೀತಿಲಿದ್ರೆ ಖುಶಿ ಖುಶಿ
ಚಂದಣಿ ಮನೆಯಿದ್ರೆ ಒಂಥರಾ ಖುಶಿ
ಮಕ್ಕೊಯೆಲ್ಲಾ ಚಂದಾಗಿದ್ರೆ ಮತ್ತೊಂದ್ ಥರಾ ಖುಶಿ
ದೇವ್ರು ದಿಂಡ್ರು ಪೂಜೆ ಅಂದ್ರೆ ಏನೋ ಖುಶಿ
ಅಂದ್ಕಂಡದ್ದೆಲ್ಲಾ ನಡದ್ರೆ ಮನ್ಸಿಗೆಲ್ಲಾ ಖುಶಿ
ರಾಶಿ ಖುಶಿ ರಾಶಿ ಖುಶಿ ಈ ಜೀವ್ನಾ ಅಂದ್ರೆ ರಾಶಿ ಖುಶಿ
ವಳ್ಳೆ ಸಂಬ್ಳಾ ವಳ್ಳೆ ಜೀವ್ನಾ ವಳ್ಳೆ ಸಂಸಾರ ಇದ್ರೆ ರಾಶಿ ಖುಶಿ
ಖುಶಿಯಿರೊ ಅಂದ್ರೆ ಜೀವಕ್ ತಾಳ್ಮೆ ಸಖಿ
ಅನ್ಬವ್ಸದ್ದಾ ಹಂಚ್ಕ ತಿಂದ್ರೆ ರಾಶಿ ಖುಶಿ
ಭವಿಶ್ಯಕ್ಕಿರ್ಲಿ ಮನ್ಸೆಲ್ಲಾ ತುಂಬಿ ಖುಶಿ
ಸಾಯೂವರೆಗೂ ತುಂಬಿರ್ಲಿ ಖುಶಿ ಖುಶಿ
ದೇವ್ರೆ ಈ ಪ್ರಪಂಚಕ್ಕೆಲ್ಲಾ ನೀಡು ಖುಶಿ
ರಕ್ತದೋಕುಳಿಯೆಲ್ಲಾ ಇಲ್ದಾಂಗ್ ಖುಶಿ
ದುಃಖಾ ನೋವು ಮರೆವಾಂಗಾಗ್ಲಿ ನೆನ್ಕಂಡ್ ಖುಶಿ
ಯೆಲ್ಲೆಲ್ಲೂ ತುಂಬ್ಕಂಡಿರ್ಲಿ ಜೀವಕ್ ಖುಶಿ
ಒಳ್ಗೂ ಹೊರ್ಗೂ ಪ್ರಭಾವ ಬೀರ್ಲಿ ಖುಶಿಯೇ ಖುಶಿ!!
ನಿ೦ಗ್ಳ ಕುಷಿಗೆ ಧನ್ಯವಾದ
” ದೇವ್ರೆ ಈ ಪ್ರಪಂಚಕ್ಕೆಲ್ಲಾ ನೀಡು ಖುಶಿ” -ಒಳ್ಳೆ ಆಶಯ ಅಕ್ಕ . ಖುಶಿಯಾತು .
ನಿಂ ಗ್ಳ ಕವ್ನ ಓದಿ ರಾಶಿ ಖುಶಿ ಆತು.
ರಾಶಿ ರಾಶಿ ಕುಶಿ ಈಗ, ಬೈಲಿನ ನೆಂಟರಿಗೆ ಎಲ್ಲಾವ್ರಿಗೂ
ನನ್ನ ಮಗಳಮದ್ವೆ ಆಗದ್ದು ಇನ್ನೂ ಕುಶಿ ಚನ್ನೈಬಾವಾ
ನಿಂಗಳ ಖುಶಿ ಬೈಲಿಂಗೂ ಖುಶಿ