Oppanna.com

ಮಗ್ಳಿಗೆ

ಬರದೋರು :   ಕಲ್ಪನಾ ಅರುಣ್    on   20/04/2014    2 ಒಪ್ಪಂಗೊ

ನಿನ ಮನ್ಸ ಬಿಚ್ಚಿಡು
ನೋವೆಲ್ಲ ಮರ್ತಬುಡು
ಬೂತಕಾಲ್ದ ಪಾಪ ತೊಳ್ದಬುಡು
ವರ್ತಮಾನ್ದ ಹೊದ್ಕೆ ಹೊದ್ದಬುಡು
ಬವಿಷ್ಕಾಲಾನೆ ಮುಖ್ಯ
ಕೊಶಿಯ ಜೀವನ ಸ್ತುತ್ಯ
ಕನಸ ಗೋಪುರವಿಲ್ಲಿ ಅಯ್ಕ್ಯ
ನಿನ ನಡೆನುಡಿಗಿರಲಿ ಅಪ್ಪಟಾಸತ್ಯ
ಮನ್ಸಲ್ಲಿ ಕೊರಗಡಾ
ಬಾವನೆಯ ಮರೆಯಡಾ
ತಪ್ಪು ಒಪ್ಪುಗಳಾಲೋಚನೆಯ ತೊರ್ಯಡಾ
ಜೀವ್ನ ಹಾಳಪ್ಲೆ ಯೆಂದೂ ಬಿಟ್ಟಿಕ್ಕಡಾ
ಯೆಲ್ಲಾರಿಗೂ ಇಪ್ಪಾಂಗೆ ನಿಂಗೂ ಆಶೆಯಿದ್ದು
ಕಾಲ್ಜಾರಿ ಬೀಳ್ದೆ ನೀ ಗಟ್ಟಿ ಊರು
ಪಾಶಕ್ಕೆ ಬೆಳೆಸ್ದೋರ ಹಿರಿಯಾಶೆಯಾ
ಚಿಗ್ರಾಗಿ ಚಿಗ್ರಿ ಪೂರಾ ಮಾಡು
ದುಷ್ಟ್ರ ದೂರಾ ಇಟ್ಕೊ
ಶಿಷ್ಟ್ರ ಗೆಳೆತನಾ ಮಾಡ್ಕೊ
ಸುವಿಶಾಲ ಹ್ರದಯವಾ ಬೆಳೆಸ್ಕೊ
ನೀಯೆಂದೂ ಉತ್ತಮರ ಸಾಲಲ್ಲಿ ನಿಂತ್ಕೊ
ಬಾಳ್ವೆಯಾ ಗುರಿಯು
ನಿನ್ನಿಷ್ಟದಾ ಪರಿಯು
ನೀ ನಡೆಸ್ಕಂಡಾಂಗೆ ಗರಿಯು
ಹೆತ್ತವ್ಕೆ ಗೊತ್ತುಗುರಿಯಿಲ್ದಾಂಗೆ ಸಿರಿಯು

2 thoughts on “ಮಗ್ಳಿಗೆ

  1. ಮಗ್ಳಿಗೆ ಅಬ್ಬೆಯ ಕಿವಿಮಾತು ಛಲೋ ಆಯಿದು.

  2. ಮಗ್ಳಿಗೆ ಉಪ್ದೇಶದ ಸುಂದರ ಕಲ್ಪನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×