Latest posts by ಕಲ್ಪನಾ ಅರುಣ್ (see all)
- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಅಜ್ಜಿ ಅಜ್ಜಯಿದ್ರೆ ಮನೇಲಿ
ಮೊಮ್ಮಕ್ಕೊಗೆಲ್ಲಾ ಕುಶಿಯು ಜೋತೆಲಿ
ಕತೆ ಹೇಳ್ತೊ ಮುದ್ದು ಮಾಡ್ತೊ
ಮೊಮ್ಮಕ್ಳ ಜೀವ್ನಾ ಚಂದಾಗ್ ನೋಡ್ತೊ!!
ನೀತಿಪಾಟಾ ಜೊತೆಗೆ ಆಟಾ
ತಿಂಡಿ ತೀರ್ತ ಪ್ರೀತಿ ನೋಟಾ
ಕೊರ್ತೆಯಿಲ್ದಾಂಗ್ ವಡನಾಟಾ
ಅಜ್ಜಿ ಅಜ್ಜ ಜೊತೆ ಊಟಾ!!
ಜೀವ್ನ ಅನುಭವಾ ಹಿರೀದು ಅವ್ಕೆ
ಬುದ್ದಿ ತಿದ್ದಿ ತೀಡೋ ಬಯ್ಕೆ
ಹಾರಿಬಿಟ್ಟಾ ಮಕ್ಳ ಮನ್ಸು
ಹಿಡ್ಕಂಡ್ ಇರ್ತು ದೊಡ್ಡೊರ್ತನಕೆ!!
ಅಜ್ಜಿ ಅಜ್ಜ ಹೇಳ್ಕತ್ತಿದ್ರೆ
ಮೊಮ್ಮಕ್ಕೊಯೆಲ್ಲಾ ಪ್ರೀತಿ ಕದ್ರೆ
ಕದ್ರಲ್ಲೆಲ್ಲಾ ಹಾಲಿದ್ದಾಂಗೆ
ಅಕ್ಕಿ ಕಾಳ್ನ ಬಲ ಅಪ್ಪಾಂಗೆ!!
ಅಪ್ಪು ಅಕ್ಕಾ ..
ಕದ್ರಲ್ಲೆಲ್ಲಾ ಹಾಲಿದ್ದಾಂಗೆ
ಅಕ್ಕಿ ಕಾಳ್ನ ಬಲ ಅಪ್ಪಾಂಗೆ!
ಆಹಾ .. ಎಂಥಾ ಹೋಲಿಕೆ ,ಒಳ್ಳೆ ಕವಿತೆ .
ಅಪ್ಪು … ಅಜ್ಜ° ಅಜ್ಜಿ° ಹೇಳ್ವದು ಮನೆಯ ಸೊತ್ತು. ಸೊತ್ತಿನ ಉಳಿಶಿಗೊಳ್ಳೆಕ್ಕಾದ್ದು ನಮ್ಮ ಕರ್ತವ್ಯ.